
ಕನ್ನಡತಿ ಸೀರಿಯಲ್ ಸದಾ ಏರಿಳಿತಕ್ಕೆ ಫೇಮಸ್. ಒಮ್ಮೆ ನಕ್ಕರೆ ಮರುಕ್ಷಣ ಏನೋ ಒಂದು ಗಂಡಾಂತರ ಇದೆ. ಸೀರಿಯಲ್ ನೋಡ್ತಾ ರಿಲ್ಯಾಕ್ಸ್ ಆಗೋ ಹಾಗೇ ಇಲ್ಲ. ಅಲ್ಲೊಂದು ಟೆನ್ಶನ್, ಗಲಿಬಿಲಿ ಒದ್ದಾಟ, ಇರಲೇಬೇಕು. ಹರ್ಷ ಭುವಿ ಪರಿಚಯ, ಸ್ನೇಹ, ಪ್ರೇಮದಲ್ಲಿ ಮುಳುಗಿಹೋಗಿದ್ದ ಪ್ರೇಕ್ಷಕರು ಇದೀಗ ಅವರ ಡಿವೋರ್ಸ್ ಅನ್ನೂ ಕಣ್ಣು ತುಂಬಿಸಿಕೊಳ್ಳಲೇ ಬೇಕಾಗಿದೆ. ಕಲರ್ಸ್ ಕನ್ನಡದಲ್ಲಿ ಅತೀ ಹೆಚ್ಚು ಜನಪ್ರಿಯತೆ ಹೊಂದಿರುವ ಸೀರಿಯಲ್ ಯಾವುದು ಅಂತ ಕೇಳಿದ್ರೆ ಎಲ್ಲರೂ ಹೇಳೋದು ಕನ್ನಡತಿ ಹೆಸರು. ಆ ಮಟ್ಟಿನ ಜನಪ್ರಿಯತೆ ಇದಕ್ಕಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರೆಲ್ಲ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಇದರಲ್ಲಿ ದಿನಕ್ಕೊಂದು ತಿರುವು ಕೆಲವರಿಗೆ ಮಜಾ ಕೊಟ್ಟರೆ ಇನ್ನೂ ಕೆಲವರಿಗೆ ಸಿಟ್ಟು ತರಿಸೋದುಂಟು. ಸದ್ಯಕ್ಕೀಗ ಹರ್ಷ ಭುವಿ ಡಿವೋರ್ಸ್ ಪರ್ವ ಶುರುವಾಗಿದೆ.
ವರೂಧಿನಿ ಭುವಿಯ ಗೆಳತಿ. ಹರ್ಷನ ಪ್ರೇಮಿ. ಭುವಿ ಬರೋಕೂ ಮುಂಚೆ ಇವರಿಬ್ಬರ ನಡುವೆ ಕ್ರಶ್ ಇತ್ತು. ಅವಳು ಬಂದ ಮೇಲೆ ಹರ್ಷನಿಗೆ ಎಲ್ಲವೂ ಅವಳೇ ಆಗಿದ್ದಾಳೆ. ವರು ಮಾತ್ರ ಇದನ್ನು ಸಹಿಸುತ್ತಿಲ್ಲ. ಹರ್ಷ ಭುವಿ ಮದುವೆಯನ್ನು ತಡೆಯೋದಕ್ಕೇ ಸಾಕಷ್ಟು ಪ್ಲಾನ್ ಮಾಡಿದ್ದಳು. ಆತ್ಮಹತ್ಯೆ ಪ್ರಯತ್ನ ಮಾಡಿಯೂ ಬದುಕುಳಿದಿದ್ದಳು. ಹಾಗಂತ ಅವಳಿಗೆ ಭುವಿ ಬಗ್ಗೆ ದ್ವೇಷ (Enmity) ಇಲ್ಲ. ಪ್ರೀತಿ (Love) ಇದೆ. ಇಂದಿಗೂ ಭುವಿ ಅವಳ ಬೆಸ್ಟ್ ಫ್ರೆಂಡೇ. ಆದರೆ ಹರ್ಷನಿಗೆ ತಾನೇ ಕರೆಕ್ಟ್ ಪಾರ್ಟನರ್ ಅಂತ ಅವಳು ನಂಬಿದ್ದಾಳೆ. ಹೀಗಾಗಿ ಹರ್ಷ ಭುವಿ ಮದುವೆ ಆದರೂ ಅವಳು ಹರ್ಷನ ಹಿಂದೆ ಬೀಳೋದನ್ನು ನಿಲ್ಲಿಸಿಲ್ಲ.
ಸೊಂಟದ ವಿಸ್ಯ, ಬೇಡವೋ ಸಿಸ್ಯ ಅಂತಿದ್ದಾರೆ ಸಾರಾ ಅಣ್ಣಯ್ಯ!
ಕೆಲವು ದಿನ ವರೂಧಿನಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಕಾಶ್ಮೀರ, ಉತ್ತರ ಭಾರತ (North India) ಅಂತೆಲ್ಲ ಟೂರ್ ಹೋದ ಕಾರಣ ಧಾರಾವಾಹಿಯಿಂದ ದೂರ ಇದ್ದರು ವರೂ ಪಾತ್ರ ಮಾಡುತ್ತಿದ್ದ ಸಾರಾ ಅಣ್ಣಯ್ಯ. ಇದನ್ನು ಸೀರಿಯಲ್‌ನಲ್ಲೂ ವರು ಟೂರ್ ಹೋಗಿದ್ದಾಳೆ ಅಂತಲೇ ಬಿಂಬಿಸಲಾಗಿತ್ತು. ಇದೀಗ ಧಾರಾವಾಹಿಗೆ ವಾಪಸ್ ಆಗುತ್ತಿದ್ದಂತೆ, ತನ್ನ ಬುದ್ಧಿ ತೋರಿಸಿದ್ದಾಳೆ. ಭುವಿ-ಹರ್ಷ ಮದುವೆ ರಿಜಿಸ್ಟ್ರೇಶನ್ ನೆಪದಲ್ಲಿ, ಡಿವೋರ್ಸ್ ಪೇಪರ್ ಗೆ ಸೈನ್ ಹಾಕಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾಳೆ. ಹೀರೋ ಜೊತೆ ನಾನು ಇರಬೇಕು. ನನ್ನ ಬೆಸ್ಟ್ ಫ್ರೆಂಡ್ ಅಲ್ಲ ಎಂದು ಹೇಳಿಕೊಳ್ತಿದ್ದಾಳೆ.
ಡೆವಿಲ್ ಭಾರ್ಗವಿಯಾದ ಪ್ರಿಯಾ ಶಠಮರ್ಷಣ್ ರಿಯಲ್ ಲೈಫ್ ಬಗ್ಗೆ ಗೊತ್ತಾ?
ಒಂದು ಕಡೆ ಹರ್ಷ ಮತ್ತು ಭುವಿಯ ಪೋಸ್ಟ್ ವೆಡ್ಡಿಂಗ್ ಶೂಟ್(Post Wedding shoot) ಪ್ಲಾನ್ ಮಾಡಿದ್ದಾಳೆ. ಅದೇ ಖುಷಿಯಲ್ಲಿ ಅವರೆಲ್ಲ ಇರುವಾಗಲೇ ಅವರ ಮುಂದೆ ಮ್ಯಾರೇಜ್ ರಿಜಿಸ್ಟ್ರೇಶನ್ ಸರ್ಟಿಫಿಕೇಟ್(Certificate) ಅಂತ ಹೇಳಿ ಡಿವೋರ್ಸ್(Divorce) ಪೇಪರ್ ಮುಂದಿಟ್ಟಿದ್ದಾಳೆ. ಇಬ್ಬರೂ ನೋಡದೇ ಸೈನ್ ಮಾಡಿದ್ದಾರೆ. ಅಲ್ಲಿಗೆ ವರು ಪ್ಲಾನ್ ಒಂದು ಹಂತದವರೆಗೆ ಸಕ್ಸಸ್ ಆಗಿದೆ. ಆದರೆ ಎಂಥಾ ಡಿವೋರ್ಸ್ ಕೇಸ್ ಆದರೂ ಗಂಡ ಹೆಂಡತಿ ಫ್ಯಾಮಿಲಿ ಕೋರ್ಟ್ (Family Court) ಮುಂದೆ ಬರಲೇಬೇಕು, ಕೌನ್ಸಿಲಿಂಗ್ ಅಟೆಂಡ್ (Attend) ಆಗಲೇ ಬೇಕು. ಇದನ್ನೆಲ್ಲ ವರೂ ಹೇಗೆ ನಿಭಾಯಿಸುತ್ತಾಳೆ ಅನ್ನೋದು ಗೊತ್ತಿಲ್ಲ. ಅವರಿಬ್ಬರ ಡಿವೋರ್ಸ್ ಪೇಪರ್ಸ್ ನಲ್ಲಿ ಆದ ಮಾತ್ರಕ್ಕೆ ಅವರಿಬ್ಬರೂ ದೂರ ಇರಬೇಕು ಅಂತನೂ ಇಲ್ಲ.
ಸದ್ಯಕ್ಕಂತೂ ಮುಂದೇನು ಆಗುತ್ತೆ ಅಂತ ಊಹಿಸೋದು ಕಷ್ಟ. ಈ ವರೂಧಿನಿ ತಣ್ಣಗಿದ್ದು ಐಡಿಯಾ ವರ್ಕ್ ಔಟ್(Workout) ಮಾಡೋದ್ರಲ್ಲಿ ನಿಪುಣೆ. ಆದರೆ ಅವಳ ಪ್ಲಾನ್(Plan)ಗಳೆಲ್ಲ ಇನ್ನೊಬ್ಬರ ಬದುಕನ್ನು ಹಾಳು ಮಾಡೋ ಹಾಗಿರುವ ಕಾರಣ ಅದಕ್ಕೆ ವಿಧಿಯ ಬೆಂಬಲ ಇಲ್ಲ. ವೀಕ್ಷಕರ ಬೆಂಬಲವೂ ಇಲ್ಲ. ಆದರೂ ವರೂ ಮುಂದಿನ ನಡೆ ಸದ್ಯಕ್ಕೆ ಕುತೂಹಲ ತರಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.