ಲಕ್ಷ್ಮೀ ನಿವಾಸ ಸೀರಿಯಲ್ ನೋಡಿ ಜನಪ್ರಿಯ ನಟಿ, ಕನ್ನಡತಿ ಅಮ್ಮಮ್ಮ ಖ್ಯಾತಿ ಚಿತ್ಕಳಾ ಬಿರಾದಾರ್ ಪ್ರತಿಕ್ರಿಯಿಸಿದ್ದು ಸಖತ್ ಮೆಚ್ಚುಗೆ ಪಡೀತಿದೆ. ಅಷ್ಟಕ್ಕೂ ಅವರಿಗೆ ಆ ಲೆವೆಲ್‌ಗೆ ಇಷ್ಟ ಆಗಿದ್ದೇನು?
ಲಕ್ಷ್ಮೀ ನಿವಾಸ ಟಿಆರ್‌ಪಿಯಲ್ಲಿ ಯಾವತ್ತೂ ಟಾಪ್ 5ರ ಒಳಗೆ ಇರುವ ಸೀರಿಯಲ್. ಇದರಲ್ಲಿ ಎರಡು ಫ್ಯಾಮಿಲಿ ಕಥೆ ಇದೆ. ಜೊತೆಗೆ ವೀಕ್ಷಕರ ಬಾಯಲ್ಲಿ 'ಸೈಕೋ' ಅಂತ ಉಗಿಸಿಕೊಳ್ಳೋ ಜಯಂತ್ ಪಾತ್ರದ ಕಥೆ ಇದೆ. ತನ್ನ ವಿಶಿಷ್ಟತೆಯಿಂದಲೇ ಗಮನ ಸೆಳೀತಿರೋ ಈ ಸೀರಿಯಲ್‌ನಲ್ಲಿ ಇತ್ತೀಚೆಗೆ ಪಾತ್ರವೊಂದು ಗಂಡನಿಗೆ ಹೇಳಿರೋ ಬುದ್ಧಿಮಾತು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಈ ಪಾತ್ರ ನೋಡಿ ಜನಪ್ರಿಯ ನಟಿ, ಕನ್ನಡತಿಯ ಅಮ್ಮಮ್ಮ ಅಂತಲೇ ಖ್ಯಾತಿ ಪಡೆದಿರೋ ಚಿತ್ಕಲಾ ಬಿರಾದಾರ್ ಪ್ರತಿಕ್ರಿಯೆ ನೀಡಿದ್ದು ಹಲವು ಮಂದಿಗೆ ಇಷ್ಟವಾಗಿದೆ. ಸೀರಿಯಲ್ ಕಲಾವಿದರು ಹಮ್ಮು ಬಿಮ್ಮು ಬಿಟ್ಟು ಈ ರೀತಿ ತಮಗೆ ಸಂಬಂಧ ಪಟ್ಟಿರದ ಸೀರಿಯಲ್ ಪ್ರೋಮೋಗೆ ಪ್ರತಿಕ್ರಿಯೆ ನೀಡೋದು ಬಹಳ ಅಪರೂಪ. ಆದರೆ ಚಿತ್ಕಲಾ ಇದಕ್ಕೆ ಅಪವಾದದ ಹಾಗೆ ತನಗೆ ಅನಿಸಿದ್ದನ್ನು ನೇರ ಮಾತುಗಳಿಂದ ತಿಳಿಸಿದ್ದಾರೆ.
ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ನ ಪ್ರೋಮೋಗೆ ನೇರವಾಗಿ ಕಾಮೆಂಟ್ ಮಾಡುವ ಮೂಲಕ ಈ ಸಂಭಾಷಣೆ, ಆ ಪಾತ್ರ ತನಗೆ ಹೇಗೆ ಕನೆಕ್ಟ್ ಆಯ್ತು ಅನ್ನೋದನ್ನು ವಿವರಿಸಿದ್ದಾರೆ. ಅವರ ಈ ಸರಳತೆ ಈ ಸೀರಿಯಲ್ ವೀಕ್ಷಕರಿಗೆ ಸಖತ್ ಇಷ್ಟವಾಗಿದೆ. ಹಾಗೆ ನೋಡಿದರೆ ಇಂಗ್ಲೀಷ್ ಪ್ರೊಫೆಸರ್ ಸಹ ಆಗಿರೋ ಚಿತ್ಕಲಾ ಇದೀಗ ಸೀರಿಯಲ್‌ನಲ್ಲಿ ನಟಿಸದೇ ಸಿನಿಮಾಗಳಲ್ಲೇ ಬ್ಯುಸಿ ಆಗಿದ್ದಾರೆ. ಅವರಿಗೆ ಸಿನಿಮಾಗಳಲ್ಲಿ ಸಾಕಷ್ಟು ಆಫರ್‌ಗಳು ಬರ್ತಿವೆ.
undefined
ಸತ್ಯ ಸೀರಿಯಲ್ ಮುಗಿದ ಬೆನ್ನಲ್ಲೇ ರಿಯಲ್ ಪತಿ ಜೊತೆ ಗೌತಮಿ ಜಾಲಿ ಮೂಡ್- ವಿಡಿಯೋ ವೈರಲ್
ಅಷ್ಟಕ್ಕೂ ಈ ಸೀರಿಯಲ್‌ನಲ್ಲಿ ಅಂಥಾ ಡೈಲಾಗ್ ಏನಿದೆ ಅನ್ನೋ ಪ್ರಶ್ನೆ ಬರಬಹುದು. ಮತ್ತೇನಿಲ್ಲ. ಹೆತ್ತವರ ಮಹತ್ವವನ್ನು ವಿವರಿಸಿ ಹೇಳಲಾಗಿದೆ. ತಮ್ಮನ್ನು ಹೆತ್ತವರ ಬಗ್ಗೆ ಗಂಡು ಮಕ್ಕಳು ತಾತ್ಸಾರದಿಂದ ಮಾತಾಡೋದಕ್ಕೆ ಸಣ್ಣ ಪುಟ್ಟ ಕಾರಣಗಳೂ ಸಾಕಾಗಿರುತ್ತೆ. ಅದರಲ್ಲೂ ತಂದೆ ತಾಯಿ ದುಡಿಮೆ ಇಲ್ಲದೇ ಇದ್ದಾಗ ಮಕ್ಕಳ ಕಣ್ಣಲ್ಲಿ ಮತ್ತಷ್ಟು ಹಗುರಾಗ್ತಾರೆ. ಅಂಥದ್ದೊಂದು ಸನ್ನಿವೇಶ 'ಲಕ್ಷ್ಮೀ ನಿವಾಸ' ಸೀರಿಯಲ್‌ನಲ್ಲಿ ಬಂದಿದೆ. ಇದರಲ್ಲಿ ಮನೆಯ ಯಜಮಾನ ಶ್ರೀನಿವಾಸ ಕೆಲಸ ಕಳ್ಕೊಂಡು ಆಟೋ ಓಡಿಸುವ ಸ್ಥಿತಿಗೆ ಬಂದಿದ್ದಾರೆ. ಇದು ಲಕ್ಷ್ಮೀ ಹಾಗೂ ಮನೆಯವರಿಗೆ ಗೊತ್ತಾಗಿದೆ. ಸದಾ ಬೇರೆಯವ್ರ ದುಡ್ಡಲ್ಲೇ ಬದುಕೋ ಅಡ್ಡ ಕಸುಬಿ ಸಂತೋಷ್ ತಂದೆ ಬಗ್ಗೆ ಹಗುರವಾಗಿ ಮಾತನಾಡುತ್ತಾನೆ. ಇದು ತಂದೆ ಶ್ರೀನಿವಾಸ್‌ಗೆ ಬಹಳ ನೋವು ತರುತ್ತದೆ. ಸಂತೋಷ್ ಪತ್ನಿ ವೀಣಾಳದ್ದು ಮಾಡೆಲ್ ಅನಿಸುವಂಥಾ ಪಾತ್ರ. ಪ್ರಬುದ್ಧ ಯೋಚನೆ ಇರುವ ಈಕೆ ತನ್ನ ಗಂಡನಿಗೆ ಮನಸ್ಸಿಗೆ ಮುಟ್ಟುವ ಹಾಗೆ ಬುದ್ಧಿ ಹೇಳ್ತಾಳೆ. ಈ ಸೀರಿಯಲ್‌ನಲ್ಲಿ ವೀಣಾ ಪಾತ್ರಕ್ಕೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಸದ್ಯ ಚಿತ್ಕಲಾ ಬಿರಾದಾರ್ ಅವರೂ ವೀಣಾ ಪಾತ್ರವನ್ನು ಮನಸಾರೆ ಹೊಗಳಿದ್ದಾರೆ.
ಇಷ್ಟಕ್ಕೂ ವೀಣಾ ಪಾತ್ರಧಾರಿ ತಂದೆ ತಾಯಿ ಸಂಬಂಧದ ಬಗ್ಗೆ ಅರ್ಥಪೂರ್ಣವಾಗಿ ಮಾತಾಡಿದ್ದಾರೆ.
'ತಂದೆ ತಾಯಿ ಬಿಟ್ಟ ಬಂದ ನಮಗೆ ಅತ್ತೆ ಮಾವನೇ ತಂದೆ ತಾಯಿ. ಅವ್ರು ಮಾಡಿದ್ದನ್ನು ನೀವ್ಯಾರೂ ಮಾಡಕ್ಕಾಗಲ್ಲ. ನಿಮ್ಗಿರೋದು ಒಬ್ಬನೇ ಮಗ. ಮಾವನಿಗೆ ಆರು ಜನ ಮಕ್ಕಳು. ಅವ್ರನ್ನು ಬೆಳೆಸಿ ಓದಿಸಿ ತಮ್ಮ ಕಾಲ ಮೇಲೆ ತಾವು ನಿಲ್ಲೋ ಹಾಗೆ ಮಾಡಿದ್ದಾರೆ. ಇಂಥಾ ತಂದೆ ತಾಯಿ ಹೊಟ್ಟೇಲಿ ಹುಟ್ಟೋಕೆ ಪುಣ್ಯ ಮಾಡ್ಬೇಕು. ಬರೀ ಮಗ ಅಂತ ಅನಿಸಿಕೊಂಡ್ರೆ ಸಾಲದು. ಮಗನ ಥರ ನಡ್ಕೊಳ್ಳಬೇಕು. ಮಾವ ಏನೂ ಅವ್ರಾಗವ್ರೇ ಇಷ್ಟಬಂದು ಕೆಲ್ಸ ಬಿಟ್ರಾ. ಕಂಪನಿಯವ್ರು ಕೆಲ್ಸದಿಂದ ತೆಗೆದು ಹಾಕಿದ್ರೆ ಅವ್ರೇನು ಮಾಡಲಿಕ್ಕಾಗುತ್ತೆ?
ಬ್ರಹ್ಮಗಂಟು ಸೀರಿಯಲ್‌ನಲ್ಲಿ ನರಸಿಂಹನೇ ಹೈಲೈಟ್, ಹೀರೋ ವೇಸ್ಟ್ ಅಂತಿದ್ದಾರೆ ಫ್ಯಾನ್ಸ್!
ತಾನು ಮಗ, ತನ್ನ ಹಕ್ಕು ಹಕ್ಕು ಅಂತ ಬಡ್ಕೊತಿದ್ದೀರಲ್ಲಾ.. ನಿಮಗೆ ತಂದೆ ಮೇಲೆ ಗೌರವ ಇದ್ರೆ, ಇಷ್ಟು ಸಮಯ ನಮ್ಮನ್ನೆಲ್ಲ ನೀವು ನೋಡ್ಕೊಂಡ್ರಿ. ಇನ್ಮೇಲೆ ಮನೆ ಜವಾಬ್ದಾರಿಯನ್ನೆಲ್ಲ ನಾನು ನೋಡ್ಕೋತೀನಿ ಅನ್ನೋ ಮಾತು ಹೇಳಬೇಕಿತ್ತಲ್ವಾ. ಮಕ್ಕಳು ಅನಿಸಿಕೊಂಡವರು ಇಬ್ರಿಬ್ರು ಇದ್ರಲ್ಲಾ, ನಿಮ್ಮ ಬಾಯಲ್ಲಿ ಆ ಮಾತು ಬಂತಾ? ನೀವು ಅಪ್ಪ ಅನ್ನೋ ಸಂಬಂಧಕ್ಕೆ ಅಲ್ಲ ಬೆಲೆ ಕೊಡೋದು ಅಪ್ಪನಿಂದ ಬರುವ ಹಣಕ್ಕೆ ಕೈಚಾಚೋದು. ನಾಳೆ ನಿಮಗೂ ಇದೇ ಸ್ಥಿತಿ ಬಂದ್ರೆ ಏನು ಮಾಡ್ತೀರಾ? ಅಂತ ವೀಣಾ ಕೇಳಿದ್ದಾಳೆ. ಇದು ಹಲವರಿಗೆ ಬಹಳ ಇಷ್ಟವಾಗಿದೆ.
ಈ ಪಾತ್ರವನ್ನು ನಟಿ ಲಕ್ಷ್ಮೀ ಹೆಗಡೆ ಬಹಳ ಸೊಗಸಾಗಿ ಅಭಿನಯಿಸುತ್ತಿದ್ದಾರೆ. ಅವರ ಪ್ರೌಢ ಅಭಿನಯವನ್ನು ಚಿತ್ಕಲಾ ಬಿರಾದಾರ್ ರಂಥಾ ಕಲಾವಿದರೂ ಮೆಚ್ಚಿಕೊಂಡಿದ್ದಾರೆ.