ನಟಿಯರನ್ನು ಕಂಡು ಹುಣಸೆ ಮರ ಮುಪ್ಪಾದ್ರೆ, ಹುಳಿ ಮುಪ್ಪೆ ಎಂದ  ಹಿರಿಯ ನಟ ಶಂಕರ್ ಅಶ್ವಥ್

By Mahmad Rafik  |  First Published Aug 12, 2024, 3:22 PM IST

ರಾಮಾಚಾರಿಯ ತಂದೆ ನಾರಾಯಣ್ ಆಚಾರ್ಯರು, ಇಬ್ಬರು ನಟಿಯರನ್ನ ತೋರಿಸುತ್ತಾ ಅವರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. ದಶಕಗಳಿಂದಲೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರೋದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.


ಬೆಂಗಳೂರು: ಕನ್ನಡದ ಹಿರಿಯ ನಟ ಶಂಕರ್ ಅಶ್ವಥ್ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯ ರಾಮಾಚಾರಿ ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮಗಂಟು ಸೀರಿಯಲ್‌ನಲ್ಲಿಯೂ ಖ್ಯಾತ ಜ್ಯೋತಿಷಿಯಾಗಿ ನಟಿಸುತ್ತಿದ್ದಾರೆ. ಸದ್ಯ ರಾಮಾಚಾರಿ ಸೀರಿಯಲ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ರಾಮಾಚಾರಿ ಮತ್ತು ಚಾರು ಮದುವೆ ಅದ್ಧೂರಿಯಾಗಿ ನಡೆಯುತ್ತಿದ್ದು, ಎಲ್ಲಾ ಕಲಾವಿದರು ರಂಗು ರಂಗಿನ ಬಟ್ಟೆ ಧರಿಸಿ ಮಿಂಚುತ್ತಿದ್ದಾರೆ. ಇನ್ನು ಮದುವೆ ಸಂಭ್ರಮದ ಶೂಟಿಂಗ್ ಅಂದ್ರೆ ಮಹಿಳಾ ಕಲಾವಿದರಲ್ಲಿ ಕೊಂಚ ಹುಮ್ಮಸ್ಸು ಹೆಚ್ಚಾಗಿ ಕಂಡು ಬರುತ್ತದೆ. ಕಾರಣ ಮದುವೆ ಸೀನ್ ಅಂದ್ರೆ ಅದ್ಧೂರಿಯಾಗಿ ರೆಡಿಯಾಗಬಹುದು. ಇದೀಗ ಫುಲ್ ಗ್ರ್ಯಾಂಡ್‌ ಆಗಿ ರೆಡಿಯಾಗಿದ್ದ ರಾಮಾಚಾರಿ ಹಾಗೂ ಚಾರು ತಾಯಿಯನ್ನು ಕಂಡು ಹುಣಸೆ ಮರ ಮುಪ್ಪಾದ್ರೆ, ಹುಳಿ ಮುಪ್ಪೆ ಎಂದು ಹೇಳಿ ಶಂಕರ್ ಅಶ್ವಥ್ ವಿಡಿಯೋ ಮಾಡಿ, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ? 

Tap to resize

Latest Videos

ನಟಿಯರಿಬ್ಬರನ್ನು ತೋರಿಸುತ್ತಾ ಹುಣಸೆ ಮರಕ್ಕೆ ಮುಪ್ಪಾದ್ರೆ, ಹುಳಿ ಮುಪ್ಪೆ ಎಂದು ಶಂಕರ್ ಅಶ್ವಥ್ ಹೇಳುತ್ತಾರೆ. ಈ ಮಾತಿಗೆ ಚಾರು ತಾಯಿ ಮಾನ್ಯತಾ ಜೋರಾಗಿ ನಕ್ಕರೆ, ರಾಮಾಚಾರಿ ಅಮ್ಮ ಹಣೆಗೆ ಕೈ ಹಿಡಿದುಕೊಂಡು ಮುಗಳ್ನಗುತ್ತಾರೆ. ಹೆಣ್ಣು ಎಷ್ಟು ಆಕರ್ಷಣೀಯ ಅನ್ನೋದಕ್ಕೆ ಇದೇ ಸಾಕ್ಷಿ ನೋಡಿ. ಈ ಇಬ್ಬರು ಕಲಾವಿದರು ಚಿತ್ರರಂಗದಿಂದ ಕಿರುತೆರೆಗೆ ಬಂದು ದಶಕಗಳೇ ಆಗಿದೆ. ಆದ್ರೂ ಇವರು ತಮ್ಮ ಸೌಂದರ್ಯವನ್ನು ಹೀಗೆ ಮೇಂಟೇನ್ ಮಾಡ್ಕೊಂಡು ಬಂದಿರೋದನ್ನು ಮೆಚ್ಚಲೇಬೇಕು ಎಂದು ಹೇಳಿದಾಗ ಇಬ್ಬರು ನಟಿಯರು ಕೈ ಮುಗಿದು ನಮಸ್ಕಾರ ಮಾಡುತ್ತಾರೆ. ನಂತರ ಅದೇ ಧಾರಾವಾಹಿಯ ಇನ್ನಿಬ್ಬರು ಮಹಿಳಾ ಕಲಾವಿದರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಇದನ್ನು ತೋರಿಸುವ ಶಂಕರ್ ಅಶ್ವಥ್, ಇಲ್ಲಿ ಎರಡು ಚೋಟುಗಳಿವೆ ನೋಡಿ. ಎಷ್ಟು ಆಕರ್ಷಣೀಯ ಮತ್ತು ಸುಂದರವಾಗಿ ಕಾಣಿಸುತ್ತಾರೆ ಅಲ್ಲವೇ ಎಂದು ಹೇಳುತ್ತಾರೆ. 

ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ . ನಿಮ್ಮ ಸೊಸೆ ಎಲ್ಲಿ ಆಚಾರ್ಯರೇ? ವಿಡಿಯೋ ಎಷ್ಟು ಕ್ಲಾರಿಟಿ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಮೋಹನ್ ಕುಮಾರ್ ಎಂಬವರು ಶ್ರೀಗಂಧದ ಹೊಲಿಕೆಯಲಿ, ಬಳುಕುವ ಬಳ್ಳಿಯಾಗಿ, ಕೊಗಿಲೆಯ ದ್ವನಿಯಲಿ ಮಿಂದೆದ್ದು, ಹೆಜ್ಜೆನನು ತುಟಿಯಂಚಿನಲಿ ಬಚ್ಚಿಟ್ಟು ಚಿಗುರೆಲೆಯ ಮನಸಂತೆ ನಗುವಿನ ಹೂವು ಅರಳಿಸಿ ಮಿನುಗುವ ನಕ್ಷತ್ರಗಳ ಕಣ್ಣುಗಳಲ್ಲಿ.. ಬಿಳೊ ಮಳೆಹನಿಗಳಂತ ಕಣ್ಣಿರ ಒರೆಸುತ.. ಸೃಷ್ಠಿಯ ಸೌಂದರ್ಯವನ್ನೆ ಹೊತ್ತಿರುವ ಪ್ರತಿ ಹೆಣ್ಣು...! ಸೃಷ್ಠಿಯ_ರೂಪವೇ....!! ಎಂದು ಕವನವನ್ನೇ ಬರೆದು ಕಮೆಂಟ್ ಮಾಡಿದ್ದಾರೆ.

ನಗುವಿನಲಿ ಮನ ಸೆಳೆದ ಮಿಸಸ್ ರಾಮಾಚಾರಿ. ನಿಮ್ಮ ಹೆಸರು ಮುದ್ದಮ್ಮ ಅಂತಿರ್ಬೇಕಿತ್ತು ಎಂದ ಫ್ಯಾನ್ಸ್

ಚಾರು-ಚಾರಿಯ ಮದುವೆಗೆ ಎಲ್ಲಾ ಸೆಟ್ ಆಗಿದೆ. ಎರಡೂ ಕುಟುಂಬಗಳು ಕಲ್ಯಾಣಮಂಪಟದಲ್ಲಿ ಒಂದಾಗಿವ. ಆದರೆ ಮದುವೆಯಲ್ಲಿ ಚಾರು ತಾಯಿ ಮತ್ತೆ ಸ್ಕೆಚ್ ಮಾಡಿದ್ದು, ರಾಮಾಚಾರಿ ವಿರುದ್ಧ ರಣತಂತ್ರ ರೂಚಿಸಿದ್ದಾಳೆ. ಮತ್ತೊಂದೆಡೆ ಸತ್ತೇ ಹೋಗಿದ್ದಾನೆ ಎಂದು ತಿಳಿದಿರುವ ಕಿಟ್ಟಿ ಬದುಕಿಗಿರೋ ವಿಷಯ ಮಾನ್ಯತಾ ಹಾಗೂ ರಾಮಾಚಾರಿಯ ಅತ್ತಿಗೆಗೆ ಗೊತ್ತೇ ಇಲ್ಲ. ಮದುವೆ ಮನೆಗೆ ಕಿಟ್ಟಿ ಬರುತ್ತಾನಾ? ಮಾನ್ಯತಾಳ ಕುತಂತ್ರವನ್ನು ತಡೆಯುತ್ತಾನಾ ಅನ್ನೋದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ. 

ಶಂಕರ್ ಅಶ್ವಥ್ ಚಂದನವನದ ಹಿರಿಯ ನಟರಾಗಿದ್ದು, ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದಾಗ ಕಾರ್ ಚಾಲನೆ ಮಾಡ್ಕೊಂಡು ಜೀವನ ನಡೆಸುತ್ತಿದ್ದರು. ಪ್ರಯಾಣಿಕರೊಬ್ಬರು ಶಂಕರ್ ಅಶ್ವಥ್ ಅವರನ್ನು ಗುರುತಿಸಿ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಘಟನೆ ಬಳಿಕ ಶಂಕರ್ ಅಶ್ವಥ್ ಮತ್ತೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ.  

ಬರೀ ನೆಗೆಟಿವ್, ಯಾರಿಗ್ಬೇಕು: ಜನಪ್ರಿಯ ಸೀರಿಯಲ್ಸ್‌ಗೆ ಹಿಡಿಶಾಪ ಹಾಕ್ತಿರೋ ವೀಕ್ಷಕರು

click me!