Jothe jotheyali : ಪತ್ನಿಯನ್ನೇ ಮರೆಯಲು ಹೇಗೆ ಸಾಧ್ಯ? ಅನುಮಾನದ ಸುಳಿಯಲ್ಲಿ ಸಂಜು

Published : Oct 27, 2022, 03:10 PM IST
Jothe jotheyali : ಪತ್ನಿಯನ್ನೇ ಮರೆಯಲು ಹೇಗೆ ಸಾಧ್ಯ? ಅನುಮಾನದ ಸುಳಿಯಲ್ಲಿ ಸಂಜು

ಸಾರಾಂಶ

ಮುಖಕ್ಕೆ ಸ್ಕಿನ್‌ ಟ್ರಾನ್ಸ್‌ಪ್ಲಾಂಟೇಶನ್ ಮಾಡಿಸಿಕೊಂಡು ಬಂದ ಆರ್ಯವರ್ಧನ್‌ ಹಳೆಯ ನೆನಪುಗಳನ್ನು ಮರಳಿ ಗಳಿಸಲು ಒದ್ದಾಡುತ್ತಿದ್ದಾನೆ. ಆದರೆ ಆತನನ್ನು ಎಲ್ಲರೂ ವಿಶ್ವಾಸ್ ದೇಸಾಯಿ ಎಂದೇ ನಂಬಿದ್ದಾರೆ. ಅನು ಆತನಿಗೆ ಪತ್ನಿಯ ನೆನಪು ಮಾಡಿಕೊಳ್ಳಲು ಹೇಳುತ್ತಿದ್ದಾಳೆ. ಆದರೆ ತನ್ನ ಪತ್ನಿಯ ಒಂದು ನೆನಪೂ ಸಂಜುವಿಗಿಲ್ಲ. ಹೆಂಡತಿಯನ್ನೇ ಮರೆಯಲು ಹೇಗೆ ಸಾಧ್ಯ ಅಂತ ಗೊಂದಲದಲ್ಲಿದ್ದಾನೆ ಸಂಜು.  

ಜೀ ಕನ್ನಡದ ಸೀರಿಯಲ್‌ 'ಜೊತೆ ಜೊತೆಯಲಿ' ಪ್ರಸಾರದ ಸಮಯ ಬದಲಾಗಿದೆ. ಈ ಸೀರಿಯಲ್‌ ಈಗ ಒಂಭತ್ತೂವರೆಗೆ ಪ್ರಸಾರವಾಗ್ತಿದೆ. ಸಾಮಾನ್ಯವಾಗಿ ಸೀರಿಯಲ್‌ ಅನ್ನು ನಿರಂತರವಾಗಿ ನೋಡುತ್ತಿದ್ದವರಿಗೆ ಕಥೆ ಹೀಗೆ ಹೋಗಬಹುದು ಅನ್ನೋ ಐಡಿಯಾ ಇರುತ್ತೆ. ಆದರೆ ಜೊತೆ ಜೊತೆಯಲಿ ಸೀರಿಯಲ್ ತನ್ನ ಅನ್‌ ಪ್ರೆಡಿಕ್ಟೆಬಲ್‌ ಐಡಿಯಾಗಳಿಂದಲೂ ಗಮನ ಸೆಳೆಯುತ್ತಿದೆ. ಹಾಗೆ ನೋಡಿದರೆ ಹೊಸ ಆರ್ಯವರ್ಧನ್ ಆ ಬಗೆಯ ಎಂಟ್ರಿಯನ್ನು ಯಾರೂ ಊಹಿಸಿರಲಿಲ್ಲ. ಆದರೆ ಯಾಕೋ ಅನಿರುದ್ಧ ಅವರಷ್ಟು ಹರೀಶ್‌ ರಾಜ್‌ ವೀಕ್ಷಕರಿಗೆ ಹತ್ತಿರವಾದ ಹಾಗಿಲ್ಲ. ಕಥೆ ಬೇರೆ ಬಗೆಯಲ್ಲಿ ಸಾಗುತ್ತಿದೆ. ಮುಖ್ಯವಾಗಿ ಸಂಜು ನೆನಪು, ಮರೆವುಗಳ ಮಧ್ಯೆ ಎಪಿಸೋಡ್ ಇದೆ. ಇತ್ತ ಅನು ಕೂಡ ಸಂಜು ವರ್ತನೆ ಮಾತುಗಳಲ್ಲಿ ಆರ್ಯನ ಛಾಯೆ ಕಂಡಿದ್ದಾಳೆ. ಆದರೆ ಅವಳಿಗೆ ಸಂಜುವನ್ನು ಆರ್ಯ ಅಂತ ಕಲ್ಪಿಸಿಕೊಳ್ಳೋದಕ್ಕೂ ಸಾಧ್ಯವಾಗ್ತಿಲ್ಲ. ಅವಳು ಅದನ್ನೆಲ್ಲ ಕಾಕತಾಳೀಯ ಅಂದುಕೊಂಡಿದ್ದಾಳೆ. ಆರಂಭದಲ್ಲಿ ಸಂಜು ಕಂಡರೆ ಸಿಡಿಮಿಡಿ ಮಾಡುತ್ತಿದ್ದವಳು ಈಗ ಸ್ಪಲ್ಪ ಸುಧಾರಿಸಿದ್ದಾಳೆ. ಆತನ ಜೊತೆಗೆ ಪಾನಿಪುರಿ ತಿನ್ನೋದಕ್ಕೂ ಹೋಗ್ತಿದ್ದಾಳೆ.

ಪಾನಿಪುರಿ ಸಂಜುಗೆ ಹಳೆಯ ನೆನಪುಗಳನ್ನು ತಂದಿದೆ. ಆತ ತನ್ನ ಪ್ರೇಮ (Love) ಗಟ್ಟಿಯಾಗೋದಕ್ಕೆ ಪಾನಿಪುರಿ ಕಾರಣ ಅಂತಿದ್ದಾನೆ. ಆದರೆ ಸಂಜುವಿಗೆ ನೆನಪಾಗ್ತಿರೋದು ಅನು ಜೊತೆಗೆ ತಿಂದ ಪಾನಿಪುರಿ, ಆದರೆ ಆತನಿಗೆ ಅವಳ ಮುಖ ಸ್ಪಷ್ಟವಾಗಿ ನೆನಪಿಲ್ಲ. ಅನು ಆತನ ಪತ್ನಿಯ ಬಗ್ಗೆ ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾಳೆ. ಪತ್ನಿಯ ನೆನಪನ್ನು ತಂದುಕೊಳ್ಳಲು ಹೇಳುತ್ತಿದ್ದಾಳೆ. ಸಂಜು ತನ್ನ ಮನಸ್ಸಿಗೆ ಬಂದಿರುವ ಅನು ಕುರಿತ ನೆನಪಿಗೆ ಸ್ವಲ್ಪ ಕಥೆ ಕಟ್ಟಿ ಏನೇನೊ ಹೇಳ್ತಿದ್ದಾನೆ. ಅನು ಅದನ್ನು ಸತ್ಯವೆಂದು ನಂಬಿದ್ದಾಳೆ. ಅಲ್ಲಲ್ಲಿ ತನ್ನ ಕಥೆಗೆ ಕನೆಕ್ಟ್ ಆಗುತ್ತಿರುವುದು ಅವಳಿಗೆ ಶಾಕ್‌ ಆಗಿದೆ.

Kannadathi: ಕೋಮಾದಲ್ಲಿ ಅಮ್ಮಮ್ಮ, ರತ್ನಮಾಲಾ ಕಥೆ ಇಲ್ಲಿಗೆ ಮುಕ್ತಾಯವಾ?

ಮುಖ್ಯವಾಗಿ ಆತ ನಂಬಿಕೆಯ ಬಗ್ಗೆ ಆಡುವ ಮಾತುಗಳು ಅವಳಿಗೆ ಆರ್ಯ ಸಾರ್‌ನ ನೆನಪಿಸಿದೆ. ಈಗ ಅನುಗೆ ಸಂಜು ಮೇಲೆ ಯಾವುದೇ ಕೋಪವಿಲ್ಲ. ಆದರೆ ಸಂಜು, ಅನು ಮೇಲೆ ತೋರುವ ಕಾಳಜಿ (Caring) ಆಕೆಗೆ ಹಿಂಸೆಯಾಗುತ್ತದೆ. ಪದೇ ಪದೇ ಆರ್ಯನನ್ನು ನೆನೆಯುವಂತೆ ಮಾಡುತ್ತದೆ. ಹೀಗಾಗಿ ಅನು ಆದಷ್ಟು ಸಂಜುನಿಂದ ದೂರ ಇರಲು ಪ್ರಯತ್ನಿಸುತ್ತಾಳೆ. ಆಕೆ ದೂರ ಇರಲು ಪ್ರಯತ್ನಿಸಿದಷ್ಟೂ ಅವರು ಹತ್ತಿರವಾಗ್ತಿದ್ದಾರೆ. ಇನ್ನೊಂದೆಡೆ ಸಂಜುಗೆ ತಾನು ಆರ್ಯ ಎಂಬುದು ತನಗೆ ಗೊತ್ತಿಲ್ಲವಾದರೂ, ಆಗಾಗ ತನಗೆ ಅನು ತೀರಾ ಕ್ಲೋಸ್ ಅನಿಸುತ್ತದೆ. ಅನು ಬಗ್ಗೆ ಸಂಜುಗೆ ಒಲವಿದ್ದು, ಇದು ಯಾಕೆ ಎಂಬುದು ಇನ್ನೂ ಆತನಿಗೆ ಅರ್ಥವಾಗಿಲ್ಲ.

ಸಂಜುವಿಗೆ ಹರ್ಷ ಫೋನ್ ಕೊಡಿಸುತ್ತಾನೆ. ಅದರಲ್ಲೂ ಸಂಜು ಮೊದಲು ಕರೆ(Call) ಮಾಡೋದು ಅನುವಿಗೆ. ಅನು ಸಣ್ಣ ಸಿಡಿಮಿಡಿಯಲ್ಲಿ ಮೊದಲ ಫೋನ್ ಹೆಂಡತಿ(Wife)ಗೇ ಮಾಡಬಹುದಿತ್ತಲ್ವಾ ಅಂತ ಪ್ರಶ್ನೆ ಮಾಡ್ತಿದ್ದಾಳೆ. ಆದರೆ ಏನು ಮಾಡಿದರೂ ಸಂಜುವಿಗೆ ಹೆಂಡತಿ ನೆನಪಾಗ್ತಿಲ್ಲ. ಬದಲಿಗೆ ಅನು ಹೆಚ್ಚು ಆಪ್ತ ಅನಿಸುತ್ತಿದ್ದಾಳೆ. ಅನುವಿನ ಪ್ರಶ್ನೆಗೆ ಉತ್ತರಿಸಲಾದರೂ ತಾನು ಕಥೆ ಕಟ್ಟಬೇಕಿದೆ ಅಂದುಕೊಳ್ತಾನೆ ಸಂಜು. ಆ ಕಥೆ ಏನಾಗಿರುತ್ತೆ ಅನ್ನೋದು ಸದ್ಯದ ಕುತೂಹಲ.

Ramachari: ಚಾರು ಬದುಕೋದು ಕಷ್ಟ ಅಂದ ಡಾಕ್ಟರ್, ಕಂಗಾಲಾಗಿದ್ದಾನೆ ಚಾರಿ!

ಇತ್ತ ಸಂಜು ತಾಯಿ ಪ್ರಿಯದರ್ಶಿನಿಗೆ ಏನೇನೋ ಅಪಶಕುನಗಳು ಕಾಡುತ್ತಿವೆ. ಆಕೆಯ ಅಡುಗೆ ಸುಟ್ಟು ಅವರು ಬರಿಗೈನಲ್ಲಿ ಪಾತ್ರೆ ಮುಟ್ಟಿದಾಗ ಬೆರಳುಗಳು ಸುಡುತ್ತವೆ. ಆಗ ಪ್ರಭು ದೇಸಾಯಿ ಬರುತ್ತಾರೆ. ಆಗ ಇನ್ನು ನಾನು ಸತ್ಯ(Truth) ಮುಚ್ಚಿಡೋದಕ್ಕೆ ಆಗೋದಿಲ್ಲ. ನಾನು ಶಾರದಾ ದೇವಿ ಬಳಿ ಹೇಳುತ್ತೀನಿ ಎಂದು ಹೇಳುತ್ತಾರೆ.

ಇನ್ನೊಂದೆಡೆ ಝೇಂಡೆಗೆ ಆಫೀಸ್(Office) ಎಂಟ್ರಿ ಸಿಗಲ್ಲ. ಮೀರಾ ಝೇಂಡೆಯನ್ನು ಭೇಟಿ(Meet) ಬೇರೆ ಆಗ್ತಿದ್ದಾಳೆ. ಇದರಿಂದ ಏನಾಗಬಹುದು ಅನ್ನೋ ಕುತೂಹಲವೂ ಇದೆ. ಹರೀಶ್‌ ರಾಜ್‌, ಮೇಘಾ ಶೆಟ್ಟಿ ಮೊದಲಾದವರು ಈ ಸೀರಿಯಲ್‌ನಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?