Kannadathi: ಕೋಮಾದಲ್ಲಿ ಅಮ್ಮಮ್ಮ, ರತ್ನಮಾಲಾ ಕಥೆ ಇಲ್ಲಿಗೆ ಮುಕ್ತಾಯವಾ?

Published : Oct 26, 2022, 03:58 PM IST
Kannadathi: ಕೋಮಾದಲ್ಲಿ ಅಮ್ಮಮ್ಮ, ರತ್ನಮಾಲಾ ಕಥೆ ಇಲ್ಲಿಗೆ ಮುಕ್ತಾಯವಾ?

ಸಾರಾಂಶ

ಕನ್ನಡತಿ ಸೀರಿಯಲ್‌ನಲ್ಲಿ ಅಮ್ಮಮ್ಮನ ಪಾತ್ರ ಕೊನೆಗೂ ಮುಕ್ತಾಯದತ್ತ ಹೋಗ್ತಿದೆ. ಮಾಲಾ ಕೆಫೆಯ ಒಡತಿ ಕೋಮಾಗೆ ಹೋಗಿದ್ದಾಳೆ. ಹಾಗೆ ಹೋಗೋದಕ್ಕೂ ಮೊದಲೇ ತನ್ನ ಕರ್ತವ್ಯ ಪೂರೈಸಿದ್ದಾಳೆ. ಅಮ್ಮಮ್ಮ ಇಲ್ಲದ ಕನ್ನಡತಿಯನ್ನು ವೀಕ್ಷಕರು ಬೆಂಬಲಿಸ್ತಾರ?

ಕನ್ನಡತಿ ಸೀರಿಯಲ್‌ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಇದರಲ್ಲಿ ರತ್ನಮಾಲಾ ಅವರದು ಮಹತ್ವದ ಪಾತ್ರ. ಈಕೆ ಮಾಲಾ ಕೆಫೆಯ ಒಡತಿ. ಯಶಸ್ವೀ ಉದ್ಯಮಿ. ಅಕ್ಕರೆಯ ಅಮ್ಮ, ಪ್ರೀತಿಯ ಅತ್ತೆ, ಸಂಸಾರವನ್ನು ಕಣ್ಣಿನಷ್ಟೇ ಜೋಪಾನವಾಗಿ ಕಾಯ್ದುಕೊಂಡು ಬಂದಿರುವ ಹೆಣ್ಣುಮಗಳು. ಇದೀಗ ಈ ಪಾತ್ರವೇ ಮರೆಯಾಗೋದ್ರಲ್ಲಿದೆ. ರತ್ನಮಾಲಾ ಪಾತ್ರ ಹಿಂದೊಮ್ಮೆ ನಿಂತೇ ಹೋಗುತ್ತೆ ಅನ್ನೋ ಲೆವೆಲ್‌ಗೆ ಹೋಗಿತ್ತು. ಈ ಪಾತ್ರ ಮಾಡ್ತಿದ್ದ ನಟಿ ಚಿತ್ಕಳಾ ಬಿರಾದಾರ್‌ ಅಮೆರಿಕಾ ಪ್ರವಾಸಕ್ಕೆ ಹೋಗಬೇಕಿತ್ತು. ಸುಮಾರು ಮೂರು ತಿಂಗಳ ಅವಧಿಗೆ ಅವರ ಪಾತ್ರವನ್ನು ಮೊಟಕು ಮಾಡಬೇಕಿತ್ತು. ಈ ವೇಳೆ ಅಮ್ಮಮ್ಮನ ಪಾತ್ರವೇ ಮುಗಿದುಹೋಗುತ್ತೆ ಅನ್ನೋ ಮಾತು ಕೇಳಿಬಂದಿತ್ತು. ಇದನ್ನು ಕನ್ನಡತಿ ಫ್ಯಾನ್ಸ್ ಎಲ್ಲ ವಿರೋಧಿಸಿದರು.

ರತ್ನಮಾಲಾ ಪಾತ್ರವನ್ನು ವೈಯುಕ್ತಿಕವಾಗಿ ಕನೆಕ್ಟ್ ಮಾಡಿಕೊಂಡಿರುವ ಫ್ಯಾನ್ಸ್‌ಗೆ ಅವರ ಪಾತ್ರ ಬಿಟ್ಟು ಈ ಸೀರಿಯಲ್‌ ಅನ್ನು ಕಲ್ಪಿಸಿಕೊಳ್ಳೋದೋ ಸಾಧ್ಯವಿರಲಿಲ್ಲ. ಇದೀಗ ಮತ್ತೊಮ್ಮೆ ಸೀರಿಯಲ್ ಟೀಮ್ ಅಂಥದ್ದೇ ಸನ್ನಿವೇಶದಲ್ಲಿದೆ. ಅಮ್ಮಮ್ಮನಿಗೆ ಹುಷಾರಿಲ್ಲ ಅನ್ನೋದನ್ನು ತೋರಿಸುತ್ತಲೇ ಅವರಿಗೆ ಮರೆವಿನ ಕಾಯಿಲೆ ಬಂದಿದ್ದನ್ನೂ ಅದರ ಕಾರಣಕ್ಕೆ ಅವರು ಏನೇನೆಲ್ಲ ಸಂಕಷ್ಟ ಎದುರಿಸಬೇಕಾದ್ದನ್ನೂ ತೋರಿಸಲಾಗಿದೆ.

ಈ ನಡುವೆ ವರು ಹರ್ಷ ಮತ್ತು ಭುವಿಗಾಗಿ ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್‌ ಆಯೋಜಿಸಿದ್ದಾಳೆ. ಅದರಲ್ಲಿ ಹರ್ಷ ಮತ್ತು ಭುವಿ ಖುಷಿ ಖುಷಿಯಿಂದಲೇ ಪಾಲ್ಗೊಂಡಿದ್ದಾರೆ. ಅವರಿಬ್ಬರೂ ಖುಷಿಯಿಂದ ಮಾತಾಡೋದನ್ನು ಅಮ್ಮಮ್ಮ ಮರೆಯಲ್ಲಿ ಕದ್ದು ಕೇಳಿಸಿಕೊಂಡಿದ್ದಾರೆ. ಅವರಿಗೆ ತನ್ನ ಮಗ ಹರ್ಷ ಮತ್ತು ಭುವಿಯ ನಡುವಿನ ಸಂಬಂಧ ಸರಿ ಇದೆಯೋ ಇಲ್ಲವೋ ಅನ್ನೋ ಬಗ್ಗೆ ಸಣ್ಣ ಅನುಮಾನ ಇತ್ತು. ಇದೀಗ ಆ ಅನುಮಾನ ಕ್ಲಿಯರ್ ಆಗಿದೆ. ಅವರಿಬ್ಬರೂ ಸಂತೋಷದಿಂದ ಇರೋದನ್ನು ನೋಡಿ ಅಮ್ಮಮ್ಮನ ಮನಸ್ಸೂ ತುಂಬಿ ಬಂದಿದೆ. ಇಂಥಾ ಟೈಮಲ್ಲಿ ಇಡೀ ಕುಟುಂಬದ ಜೊತೆಗೆ ಫೋಟೋ ಶೂಟ್‌ನಲ್ಲಿ ಅಮ್ಮಮ್ಮನೂ ಭಾಗಿ ಆಗಿದ್ದಾರೆ.

ಚಂದನಾ- ವಾಸುಕಿ ದೀಪಾವಳಿ: ಅಯ್ಯೋ ಇದು ಎಂಗೇಜ್‌ಮೆಂಟ್‌ ಫೋಟೋ ಅಂದ್ಕೊಂಡೆ ಎಂದ ನಟಿ ರಮ್ಯಾ

ಎಲ್ಲರ ಮುಖದಲ್ಲಿ ನಗುವನ್ನು ನೋಡುತ್ತಾ ತನ್ನ ಮುದ್ದು ಸೊಸೆ ಭುವಿ ಮತ್ತು ಹರ್ಷನನ್ನು ತನ್ನ ಎರಡೂ ತೋಳುಗಳಿಂದ ತಬ್ಬಿಕೊಂಡು ಅಮ್ಮಮ್ಮ ಫೋಟೋಶೂಟ್ ಮಾಡಿಸಿದ್ದಾರೆ. ಒಂದು ಕಡೆ ಅಮ್ಮಮ್ಮ ತನ್ನ ಮಗ ಸೊಸೆ ಚೆನ್ನಾಗಿರಲಿ, ಅದನ್ನು ನೋಡುತ್ತಲೇ ತಾನು ಕಣ್ಮುಚ್ಚುತ್ತೇನೆ ಅನ್ನೋ ಮನಸ್ಥಿತಿಯಲ್ಲಿದ್ದರೆ ವರೂಧಿನಿ ಅವರಿಬ್ಬರನ್ನು ಬೇರೆ ಮಾಡಿಯೇ ಸಿದ್ಧ ಎಂದುಕೊಂಡಿದ್ದಾಳೆ. ಮದುವೆ ರಿಜಿಸ್ಟ್ರೇಶನ್ ನೆವದಲ್ಲಿ ಡಿವೋರ್ಸ್ ಪೇಪರ್ಸ್ ಗೆ ಸೈನ್ ಮಾಡಿಸಿದ್ದಾಳೆ.

ಬಹುಶಃ ಅಮ್ಮಮ್ಮನಿಗೆ ತನ್ನ ಕೊನೆ ಸಮೀಪಿಸುತ್ತಿದೆ ಅನ್ನೋದರ ಅರಿವಾಗಿದೆಯೋ ಏನೋ, ಅವರೀಗ ಎಲ್ಲವನ್ನೂ ರಿಕಾಲ್ ಮಾಡಿಕೊಳ್ಳುತ್ತಿದ್ದಾರೆ. ಭುವಿ ಸಿಕ್ಕಿದ್ದು, ಅವಳು ತನ್ನನ್ನು ಕಾಳಜಿಯಿಂದ ನೋಡಿಕೊಂಡಿದ್ದು, ತಾನು ಅವಳ ಹೆಸರಿಗೆ ಆಸ್ತಿ ಬರೆದಿದ್ದು, ತನ್ನ ಸೊಸೆ ಆಗಿದ್ದು ಇವೆಲ್ಲವನ್ನೂ ನೆನಪಿಸಿಕೊಂಡಿದ್ದಾರೆ. ಹಾಗೆ ನೆನಪಿಸುತ್ತಲೇ ತಲೆ ಸುತ್ತಿ ಕೆಳಗೆ ಬಿದ್ದಿದ್ದಾರೆ. ಎಷ್ಟು ಎಚ್ಚರಿಸಿದ್ರೂ ಎಚ್ಚರ ಆಗ್ತಾ ಇಲ್ಲ ಅದನ್ನು ನೋಡಿ ಮನೆಯವರು ಗಾಬರಿ ಆಗಿದ್ದಾರೆ.

ಕನ್ನಡ ಧಾರಾವಾಹಿ ಮುಗಿಸಿ ತೆಲುಗಿಗೆ ಹಾರಿದ 'ಕನ್ಯಾಕುಮಾರಿ' ಹೀರೋ ಯಶವಂತ್ ಗೌಡ

ಅಮ್ಮಮ್ಮನನ್ನು ಡಾ.ದೇವ್ ಚೆಕ್(Check) ಮಾಡಿದ್ದಾನೆ. ಅಮ್ಮಮ್ಮನ ಸ್ಥಿತಿ ಕಂಡು ಹರ್ಷ ಗಾಬರಿ ಆಗಿದ್ದಾನೆ. ಕಳೆದ ಬಾರಿಯ ಹಾಗೇ ಮಲಗಿಕೊಂಡಿದ್ದಾರೆ. ಲೇಟ್(Late) ಆಗಿ ಎಚ್ಚರ ಆಗಬಹುದು ಎಂದು ಮನೆಯವರು ಅಂದುಕೊಳ್ತಾರೆ. ಆದ್ರೆ ರತ್ನಮಾಲಾ ಅವರು ಕೋಮಾ(Coma)ಗೆ ಹೋಗಿದ್ದಾರೆ ಎಂದು ಡಾಕ್ಟರ್ ಆಗಿರುವ ದೇವ್ ಹೇಳಿದ್ದಾನೆ.

ಅಮ್ಮಮ್ಮ ಇನ್ನು ಎಚ್ಚರಗೊಳ್ಳಲ್ಲ ಎನ್ನುವುದನ್ನು ಹರ್ಷನಿಗೆ ಭುವಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರಿಬ್ಬರೂ ಅಮ್ಮಮ್ಮನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅಮ್ಮಮ್ಮ ಕೋಮಾಗೆ ಹೋಗಿರುವುದನ್ನು ನೋಡಿದರೆ ಇನ್ನು ಎಚ್ಚರಗೊಳ್ಳೋದು ಡೌಟು. ಇನ್ನುಮುಂದೆ ಅವರ ಪಾತ್ರ ಇರೋದಿಲ್ವಾ? ಅಮ್ಮಮ್ಮನ ಅನುಪಸ್ಥಿತಿಯಲ್ಲಿ ಭುವಿ ಅವರ ಉತ್ತರಾಧಿಕಾರಿಯಾಗಿ ಕಂಪನಿ(Company) ಮುನ್ನಡೆಸುತ್ತಾಳಾ ಅನ್ನೋದನ್ನೆಲ್ಲ ಕಾದು ನೋಡಬೇಕಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ