Jothe jotheyali: ನೀವ್ಯಾರು ನಂಗೆ? ನಮ್ಮಿಬ್ಬರ ಸಂಬಂಧ ಏನು? ಅನುಗೆ ಆರ್ಯನ ನೇರ ಪ್ರಶ್ನೆ!

Published : Oct 20, 2022, 04:26 PM IST
Jothe jotheyali: ನೀವ್ಯಾರು ನಂಗೆ? ನಮ್ಮಿಬ್ಬರ ಸಂಬಂಧ ಏನು? ಅನುಗೆ ಆರ್ಯನ ನೇರ ಪ್ರಶ್ನೆ!

ಸಾರಾಂಶ

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಆರ್ಯವರ್ಧನ್ ಆಗಿರುವ ಸಂಜು ಎಂದು ಕರೆಸಿಕೊಳ್ಳುವ ಆರ್ಯನಿಗೆ ಅರೆಬರೆ ನೆನಪು, ಅರೆಬರೆ ಮರೆವು. ಆದರೆ ಆತನ ದೈತ್ಯ ಸಾಮರ್ಥ್ಯ ಕಂಡು ಎಲ್ಲರೂ ಬೆರಗಾಗಿದ್ದಾರೆ. ಈ ನಡುವೆ ಆತನ ಬಳಿ ಅನು ಸಿಟ್ಟು ತೋರಿಸಿಕೊಳ್ಳುತ್ತಿದ್ದಾಳೆ. ಆದರೆ ಒಳಗೊಳಗೆ ನೋವ ಅನುಭವಿಸುತ್ತಿದ್ದಾಳೆ. ಈ ನಡುವೆ ಸಂಜು ಅನು ಬಳಿ ನೇರವಾಗಿ ಕೇಳಿದ್ದಾನೆ. ನಮ್ಮಿಬ್ಬರ ಸಂಬಂಧ ಏನು ಅಂತ.

ಜೊತೆ ಜೊತೆಯಲಿ ರಾತ್ರಿ ಎಂಟೂವರೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್‌. ಇದರಲ್ಲೀಗ ನೆನಪಿನ ಶಕ್ತಿ ಕಳೆದುಕೊಂಡ ಆರ್ಯ ಸಂಜು ಎಂದು ಕರೆಸಿಕೊಳ್ಳುತ್ತಾ ಗೊಂದಲದಲ್ಲೇ ಬದುಕುತ್ತಿದ್ದಾನೆ. ತನ್ನ ಗೊಂದಲಕ್ಕೆ ಉತ್ತರ ಕಂಡುಕೊಳ್ಳಲು ಒದ್ದಾಡುತ್ತಿದ್ದಾನೆ. ಮೊದಲು ಆರ್ಯ ಪಾತ್ರ ಮಾಡುತ್ತಿದ್ದ ಅನಿರುದ್ಧನ ಅವರ ಜಾಗಕ್ಕೆ ಹರೀಶ್‌ ರಾಜ್‌ ಅವರನ್ನು, ಆರ್ಯನಿಗೆ ಆಕ್ಸಿಡೆಂಟ್‌ ಆಗಿ ತೀರಿಕೊಂಡ ಆತನ ತಮ್ಮ ವಿಶ್ವಾಸನ ಸ್ಕಿನ್ ಸ್ಕಿನ್ ಟ್ರಾನ್ಸ್ ಪ್ಲಾಂಟ್‌ ಮಾಡಲಾಗಿದೆ ಎಂದು ಬಿಂಬಿಸಲಾಗಿದೆ. ಇದೀಗ ಅರೆಬರೆ ನೆನಪಲ್ಲಿರುವ ಆರ್ಯ ಆಫೀಸ್‌ ಕೆಲಸವನ್ನೆಲ್ಲ ಲೀಲಾಜಾಲವಾಗಿ ಎಲ್ಲವನ್ನ ತಿಳಿದಿರುವವನ ಹಾಗೆ ಮ್ಯಾನೇಜ್‌ಮಾಡ್ತಿದ್ದಾನೆ. ಮರೆವಿನ ಸಮಸ್ಯೆ ಇರುವ ವ್ಯಕ್ತಿಯೊಬ್ಬ ಹೀಗೆಲ್ಲ ಮಾಡಬಲ್ಲನಾ ಅಂತ ಎಲ್ಲರಿಗೂ ಆಶ್ಚರ್ಯ ಆಗಿದೆ. ಈ ನಡುವೆ ಆರ್ಯ ಅನುವಿನ ಬಳಿ ನೇರವಾಗಿ ತನ್ನ ಮನಸ್ಸಿನ ಅನುಮಾನ, ಗೊಂದಲಗಳನ್ನು ಹಂಚಿಕೊಂಡಿದ್ದಾನೆ. ಆದರೆ ಇದಕ್ಕೆ ಅನುವಿನಿಂದ ಬಂದ ರಿಯಾಕ್ಷನ್‌ ಕಂಡು ತಾನೆಲ್ಲಿ ತಪ್ಪಿ ಮಾತಾಡಿದೆನೋ ಅಂತ ಗಿಲ್ಟ್‌ನಲ್ಲಿ ಬಿದ್ದಿದ್ದಾನೆ.

ಆರ್ಯವರ್ಧನ್ ಬಾಸ್ ಆಗಿದ್ದ ಕಚೇರಿಗೆ ಸಂಜು ಕೆಲಸಕ್ಕೆ ಸೇರಿ ಇನ್ನೂ ವಾರವಾಗಿಲ್ಲ. ಆಗಲೇ ಆತನ ಅಗಾಧ ಸಾಮರ್ಥ್ಯ ಕಂಡು ಎಲ್ಲ ಬೆರಗಾಗಿದ್ದಾರೆ. ಸಂಜುವನ್ನು ಒಂದಷ್ಟು ನೆನಪುಗಳು ಬಹಳವಾಗಿ ಕಾಡುತ್ತಿವೆ. ಈ ಕಂಪನಿಯಲ್ಲಿ ಈ ಮೊದಲೇ ಕೆಲಸ ಮಾಡಿದಂತೆ, ಅಲ್ಲಿರುವ ಎಲ್ಲರೂ ಪರಿಚಯವಿದ್ದಂತೆ ಸಂಜುಗೆ ತೋರುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಜುಗೆ ಅನುನ ಕಂಡರೆ ಪ್ರೀತಿ (Love), ತನಗೇ ಗೊತ್ತಿಲ್ಲದ ಭಾವಗಳು. ಅನುವಿಗೂ ಹೀಗೇ ಆಗುತ್ತಿದೆ. ಅವಳ ಕನಸಲ್ಲೂ ಸಂಜು ಬರುತ್ತಿದ್ದಾನೆ. ಹೀಗೇಕೆ ಆಗುತ್ತಿದೆ ಎಂಬುದು ಇಬ್ಬರಿಗೂ ತಿಳಿಯುತ್ತಿಲ್ಲ.

'ಬಿಗ್ ಬಾಸ್' ವೀಕೆಂಡ್‌ಗೆ ಸುದೀಪ್ ಗೈರು; ಯಾರು ನಡಿಸಿಕೊಡ್ತಾರೆ ಎಪಿಸೋಡ್?

ಇನ್ನೊಂದೆಡೆ ಸಂಜು ಕಚೇರಿಯಲ್ಲಿರುವ ಫೈಲ್(Files)​ಗಳನ್ನು ಪರಿಶೀಲಿಸುತ್ತಿದ್ದಾನೆ. 22 ವರ್ಷದ ಅಕೌಂಟ್​ (Account)ಅನ್ನು ಒಂದೇ ದಿನದಲ್ಲಿ ನೋಡಿ ಮುಗಿಸಿದ್ದಾನೆ ಸಂಜು. ಇದು ಕಚೇರಿಯಲ್ಲಿ ಕೆಲಸ ಮಾಡುವ ಪ್ರಮುಖರಿಗೆ ಅಚ್ಚರಿ ಮೂಡಿಸಿದೆ. ಸಂಜು ಬಳಿಯಿಂದ ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಸಂಜು ಕೆಲ ಫೈಲ್ ಹಿಡಿದು ಅನು ಇರುವ ಕಮಲಮ್ಮನ ವಠಾರಕ್ಕೆ ಬಂದಿದ್ದಾನೆ. ಆಗ ಅನುಗೆ ಲೇಡಿ ಆರ್ಯವರ್ಧನ್ ಎಂದು ಕರೆದಿದ್ದಾನೆ. ಆರ್ಯವರ್ಧನ್ ಕೂಡ ಅನುಗೆ ಲೇಡಿ(Lady) ಆರ್ಯವರ್ಧನ್ ಎಂದೇ ಕರೆಯುತ್ತಿದ್ದ. ಆ ಬಳಿಕ ಸಂಜು ಕಂಪನಿಯಲ್ಲಾದ ಮೋಸಗಳ ಬಗ್ಗೆ ಹೇಳಿದ್ದಾನೆ. ‘ಕಳೆದ 22 ವರ್ಷಗಳಿಂದ ಕಂಪನಿಯಲ್ಲಿ ಸಾಕಷ್ಟು ಮೋಸಗಳು ನಡೆದಿವೆ. ಲೆಕ್ಕದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದು ಗೊತ್ತಿದ್ದೂ ಎಲ್ಲರೂ ಸುಮ್ಮನಿದ್ದಿದ್ದು ಏಕೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಸಂಜು ಹೇಳುತ್ತಿದ್ದಂತೆ ಅನು ಸಿಟ್ಟಾಗಿದ್ದಾಳೆ(Anger). ಇನ್ಮುಂದೆ ಈ ವಿಚಾರ ಹೇಳದಂತೆ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾಳೆ. ಆತ ಹೊರ ಹೋಗುತ್ತಿದ್ದಂತೆ ಅನುಗೆ ಪುಷ್ಪಾ ಈ ಬಗ್ಗೆ ಪ್ರಶ್ನೆ(Question) ಮಾಡಿದ್ದಾಳೆ. ‘ಸಂಜು ಸತ್ಯವನ್ನೇ ಹೇಳಿದ್ದಾರೆ ಅಮ್ಮ. ಆರ್ಯ ಸರ್​ ಈ ಎಲ್ಲ ಮೋಸದ ಕೆಲಸಗಳನ್ನು ಮಾಡಿದ್ದರು. ಅವರ ಹಿಸ್ಟರಿ ನನಗೆ ಮಾತ್ರ ಗೊತ್ತು. ಅವರ ಒಳ್ಳೆಯ ಹಾಗೂ ಕೆಟ್ಟ ಮುಖ ಎರಡೂ ನನಗೆ ಗೊತ್ತು. ಇದನ್ನು ನಾನೇ ಹ್ಯಾಂಡಲ್​ ಮಾಡಬೇಕಿದೆ’ ಅಂತ ಅನು ಹೇಳಿದ್ದಾಳೆ.

BBK9 ನಾಯಿ ಪ್ರೀತಿ ಮುಂದೆ ಯಾವ ಹುಡ್ಗ-ಹುಡ್ಗಿ ಪ್ರೀತಿನೂ ನಿಲ್ಲಲ್ಲ: ಅನುಪಮಾ ಗೌಡ

ಕಂಪನಿ(Company)ಯ ವಿರುದ್ಧ ದನಿ ಎದ್ದಾಗ ಸಂಜು ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾನೆ. ಕೆಲಸಗಾರರನ್ನೆಲ್ಲ ಒಗ್ಗೂಡಿಸಿದ್ದಾನೆ. ಆತನ ಈ ವರ್ತನೆಗೆ ಎಲ್ಲರೂ ಬೆರಗಾಗಿದ್ದಾರೆ. ಅನೂ ಸಹ ಮೆಚ್ಚುಗೆ ತೋರಿಸಿದ್ದಾಳೆ. ಈ ವೇಳೆ ಆರ್ಯ ಅವಳ ಬಳಿ ತನ್ನ ಮನಸ್ಸಲ್ಲಿರುವ ಗೊಂದಲಗಳನ್ನು ತೋಡಿಕೊಂಡಿದ್ದಾನೆ. ತನಗೆ ಅವಳು ಬಹಳ ಪರಿಚಿತಗಳು, ಅವಳ ತನ್ನ ಮಧ್ಯೆ ಏನೋ ಕನೆಕ್ಷನ್(Connection) ಇದೆ ಅನಿಸುತ್ತೆ.. ಎನ್ನುತ್ತಲೇ, 'ನೀವ್ಯಾರು ನಂಗೆ? ನಮ್ಮಿಬ್ಬರ ಸಂಬಂಧ ಏನು?' ಅಂತ ನೇರವಾಗಿ ಪ್ರಾಮಾಣಿಕವಾಗಿ ಅನು ಬಳಿ ಕೇಳಿದ್ದಾನೆ. ಅನು ತಬ್ಬಿಬ್ಬಾಗಿ ಏನೂ ಹೇಳದೇ ಹೇಳಿದ್ದಾಳೆ. ತಾನು ಏನಾದರೂ ತಪ್ಪು ಹೇಳಿದೆನಾ ಅಂತ ಸಂಜು ಮತ್ತೆ ಗೊಂದಲದಲ್ಲಿ ಮುಳುಗಿದ್ದಾನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ