ರಾಮಾಚಾರಿ: ಸಿದ್ಧಿಮಂಗಲ ದಟ್ಟ ಕಾಡಲ್ಲಿ ಚಾರು, ಮಾನ್ಯತಾ ರಾಮಾಚಾರಿ ಕಾಲು ಹಿಡಿಯೋದೊಂದು ಬಾಕಿ!

Published : Oct 20, 2022, 03:00 PM IST
ರಾಮಾಚಾರಿ: ಸಿದ್ಧಿಮಂಗಲ ದಟ್ಟ ಕಾಡಲ್ಲಿ ಚಾರು, ಮಾನ್ಯತಾ ರಾಮಾಚಾರಿ ಕಾಲು ಹಿಡಿಯೋದೊಂದು ಬಾಕಿ!

ಸಾರಾಂಶ

ರಾಮಾಚಾರಿ ಸೀರಿಯಲ್‌ನಲ್ಲಿ ಸಿನಿಮಾ ರೀತಿಯ ಪ್ರಯೋಗಗಳು ಜಾಸ್ತಿ. ಆದರೆ ಅದು ಕೆಲವೊಮ್ಮೆ ವಿಪರೀತಕ್ಕೆ ಹೋಗಿ ನಗೆ ಪಾಟಲಿಗೆ ಗುರಿಯಾಗೋದೂ ಇದೆ. ಈ ವಿಚಾರದಲ್ಲಿ ನಿರ್ದೇಶಕ ರಾಮ್‌ಜೀ ಅವರನ್ನು ಬುದ್ಧಿವಂತ ವೀಕ್ಷಕರು ಚೆನ್ನಾಗಿಯೇ ಕಾಲೆಳೆಯುತ್ತಾರೆ. ಇದೀಗ ಮತ್ತೆ ಇಂಥದ್ದೊಂದು ಸಾಹಸಕ್ಕೆ ರಾಮ್‌ ಜಿ ಮುಂದಾದ ಹಾಗಿದೆ. ಚಾರು ಸಿದ್ದಿಮಂಗಲ ಅನ್ನೋ ಹುಲಿಗಳಿರುವ ಕಾಡಲ್ಲಿ ಸಿಕ್ಕಿಬಿದ್ದಿದ್ದಾಳೆ. ಮಾನ್ಯತಾ ತನ್ನ ತಪ್ಪಿಗೆ ರಾಮಾಚಾರಿ ಕಾಲು ಹಿಡಿಯೋದೊಂದು ಬಾಕಿ ಇದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕಲರ್‌ಫುಲ್‌ ಸೀರಿಯಲ್‌ 'ರಾಮಾಚಾರಿ'. ಸೋಮವಾರದಿಂದ ಶುಕ್ರವಾರ ಪ್ರತೀ ರಾತ್ರಿ ಒಂಭತ್ತು ಕಂಡೆಗೆ ಪ್ರಸಾರವಾಗುತ್ತಿರುವ ಸೀರಿಯಲ್‌ ಇದು. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಒಳ್ಳೇ ಹುಡುಗ ರಾಮಾಚಾರಿ ಇದರ ಹೀರೋ. ಎಲ್ಲ ಸೀರಿಯಲ್‌ಗಳಲ್ಲಿ ಹೀರೋಯಿನ್‌ ಸಿಕ್ಕಾಪಟ್ಟೆ ಒಳ್ಳೆಯವಳು, ಸುಸಂಸ್ಕೃತಳಾದ್ರೆ ಇದರಲ್ಲಿ ರಾಮಾಚಾರಿಗೂ ಅಂಥಾ ಒಳ್ಳೆಯ ಗುಣಗಳಿವೆ. ತನ್ನ ಲೈಫನ್ನೇ ಹಾಳುಮಾಡುತ್ತಿರುವ, ಎಲ್ಲ ರೀತಿ ತುಳಿಯಲು ಕಾಯುತ್ತಿರುವ ದರ್ಪದ ಹುಡುಗಿ ಚಾರುವನ್ನೂ ರಕ್ಷಿಸುವಷ್ಟು, ಕಾಪಾಡುವಷ್ಟು ಒಳ್ಳೆ ಮನಸು ಆತನದು. ಸದ್ಯಕ್ಕೆ ರಾಮಾಚಾರಿ ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದೆ. ಈತನ ಅತ್ತಿಗೆಗೆ ಕ್ಯಾನ್ಸರ್ ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ರಾಮಾಚಾರಿ ಒಂದು ಕಡೆ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ಚಾರು ಅಮ್ಮ ಮಾನ್ಯತಾ, ತನ್ನ ಸವತಿ ಶರ್ಮಿಳಾನನ್ನು ಕೊಲ್ಲಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಮಾನ್ಯತಾ ತನ್ನ ಮಗಳನ್ನು ಉಳಿಸಿಕೊಳ್ಳಲು ರಾಮಾಚಾರಿ ಮನೆಗೆ ಹೋಗಿ ಅವರ ಮುಂದೆ ಕೈ ಮುಗಿದು ನಿಂತಿದ್ದಾಳೆ. ಇಷ್ಟೆಲ್ಲ ಅವಾಂತರ ಮಾಡಿರುವ ಚಾರುವನ್ನು ರಾಮಾಚಾರಿ ಈಗಲೂ ಕಾಪಾಡ್ತಾನಾ?

ತಾನೊಂದು ಬಗೆದರೆ ವಿಧಿಯೊಂದು ಬಗೆಯುತ್ತದೆ ಅನ್ನೋದು ಹಳೇ ಗಾದೆ. ಆದರೆ ಇದೀಗ ಮಾನ್ಯತಾ ಲೈಫಲ್ಲಿ ಆಗಿರೋದೂ ಅದೇ. ಈಕೆ ಉದ್ಯಮಿ ಜೈ ಶಂಕರ್ ಹಿರಿಯ ಹೆಂಡತಿ. ತನ್ನ ಕೆಟ್ಟತನದಿಂದಲೇ ಗಂಡನನ್ನು ದೂರ ಮಾಡಿಕೊಂಡಿದ್ದಾಳೆ. ಮಾನ್ಯತಾ ಮೋಸ ಮಾಡುವುದೆಲ್ಲಾ ಗೊತ್ತಾಗಿ ಜೈಶಂಕರ್, ಶರ್ಮಿಳಾಳನ್ನು ಹೆಚ್ಚು ಪ್ರೀತಿ ಮಾಡ್ತಾನೆ. ಎಲ್ಲಾ ಆಫೀಸ್ ಹಕ್ಕನ್ನು ಶರ್ಮಿಳಾಗೆ ಕೊಟ್ಟಿದ್ದಾನೆ. ಗಂಡ ತನ್ನ ಸವತಿ ಶರ್ಮಿಳಾ ಬಗ್ಗೆ ತೋರಿಸುತ್ತಿರುವ ಪ್ರೀತಿ, ಗೌರವದಿಂದ ಮಾನ್ಯತಾ ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗಾಗಿದೆ. ಆಕೆ ಶರ್ಮಿಳಾಳನ್ನು ಕೊಲೆ ಮಾಡಿಸಲು ಪ್ಲಾನ್ ಮಾಡ್ತಾಳೆ.

ದೇವಿಯ ಮಹಾನ್‌ ಭಕ್ತೆ ಆಗಿರುವ ಒಳ್ಳೆಯ ಗುಣ ನಡತೆಯ ಶರ್ಮಿಳಾ ದೇವಿ ಪೂಜೆಗೆ ಸಿದ್ಧಿಮಂಗಲ ಅರಣ್ಯಕ್ಕೆ ಮನೆ ಕಾರಲ್ಲೇ ಹೊರಡಲು ನಿಶ್ಚಯಿಸಿರೋದು ಮಾನ್ಯತಾಗೆ ತಿಳಿಯುತ್ತೆ. ಆ ಕಾರಿನ ಡ್ರೈವರ್‌(Driver)ನಿಂದಲೇ ಶರ್ಮಿಳಾ ಕೊಲೆಗೆ ಮಾನ್ಯತಾ ಸ್ಕೆಚ್ ಹಾಕುತ್ತಾಳೆ. ಆದರೆ ರೆಸಾರ್ಟ್(Resort) ಗೆ ಹೋಗಲು ಈ ಕಾರನ್ನೇ ಬಳಸೋ ಚಾರು ದರ್ಪದಲ್ಲಿ ಹೊರಟಿದ್ದಾಳೆ. ವಿಧಿಯಿಲ್ಲದೇ ಶರ್ಮಿಳಾ ಕ್ಯಾಬ್‌ನಲ್ಲಿ ಹೋಗಿದ್ದಾಳೆ. ಚಾರು ಹುಲಿಗಳಿರುವ ಕಾಡಲ್ಲಿ ಬಳಲಿ ಬೆಂಡಾಗಿ ಬಿದ್ದಿದ್ದಾಳೆ.

ಕನ್ನಡತಿ: ಕೊಲೆ ಯತ್ನ ಕೇಸ್‌ ಹಾಕಿ ಹರ್ಷನ್ನ ಜೈಲಿಗಟ್ಟೇ ಬಿಟ್ಲು ಸಾನ್ಯಾ, ಸೀರಿಯಲ್‌ ದಿಕ್ಕುತಪ್ತಿದೆ ಅಂತಿದ್ದಾರೆ ಫ್ಯಾನ್ಸ್!

ಇತ್ತ ಶರ್ಮಿಳಾ ಕ್ಯಾಬ್‌(Cab)ನಲ್ಲಿ ವಾಪಾಸ್ ಬಂದಿರುವುದು ನೋಡಿ ಮಾನ್ಯತಾಗೆ ಅನುಮಾನ(Doubt) ಬಂದಿದೆ. ವಿಚಾರಿಸಿದಾಗ ಆ ಕಾರಲ್ಲಿ ಚಾರು ಹೋಗಿರೋದು ತಿಳಿಯುತ್ತೆ. ಮಾನ್ಯತಾ ಭಯ(Fear)ದಲ್ಲಿ ಮೂರ್ಛೆ ಹೋಗೋದು ಬಾಕಿ!

ಇತ್ತ ಬೇರೆ ದಾರಿ ಕಾಣದೇ ಮಾನ್ಯತಾ ಮನೆಯವರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಇಂಥಾ ಸನ್ನಿವೇಷದಲ್ಲಿ ತನ್ನ ಮಗಳನ್ನು ರಕ್ಷಿಸಲು ಸಾಧ್ಯ ಇರುವುದು ರಾಮಾಚಾರಿ ಒಬ್ಬನಿಗೇ ಅಂತ ಅವಳಿಗೆ ಗೊತ್ತಾಗಿದೆ. ಹೀಗಾಗಿ ರಾಮಾಚಾರಿ ಮನೆಯವರ ಮುಂದೆ ಕೈ ಮುಗಿದು ನಿಂತಿದ್ದಾಳೆ. ನನ್ನ ಮಗಳನ್ನು ಹೇಗಾದ್ರೂ ಬದುಕಿಸಿ ಕೊಡಿ ಎಂದು ಬೇಡಿ ಕೊಳ್ಳುತ್ತಿದ್ದಾಳೆ.

ರಾಮಾಚಾರಿಯೇ ಹೇಳಿದಂತೆ ಆತನಿಗೆ ಈ ಸಿದ್ಧಿಮಂಗಲ ಕಾಡಿನ ಇಂಚಿಂಚೂ ಗೊತ್ತು. ಆತ ಚಾರುವನ್ನು ಕಾಪಾಡ್ತಾನಾ ಗೊತ್ತಿಲ್ಲ. ಯಾಕೆಂದರೆ ಮೊಂಡು ಹಠದ ಹುಡುಗಿ ಚಾರು ಈಗಾಗಲೇ ರಾಮಾಚಾರಿಯೇ ತನ್ನನ್ನು ಈ ರೀತಿ ಕಷ್ಟಕ್ಕೆ ಸಿಕ್ಕಿಸಿದ್ದು ಎಂದು ನಂಬಿದ್ದಾಳೆ. ಅವನು ರಕ್ಷಿಸಲು ಹೋದರೂ ಅವಳು ಅವನ ಮೇಲೆ ಹಾರಿ ಬೀಳಬಹುದು. ಹಾಗಾದರೆ ಚಾರು ಗತಿ ಏನು? ಸತ್ಯ ತಿಳಿದ ಮೇಲೆ ಚಾರು ಏನು ಮಾಡುತ್ತಾಳೆ, ರಾಮಾಚಾರಿಯಲ್ಲಿ ತಪ್ಪನ್ನು ಒಪ್ಪಿಕೊಳ್ತಾಳಾ ನೋಡಬೇಕು.

ಹೊಂಗನಸು: ವಸುವನ್ನು ತೋಳುಗಳಿಂದ ಹಿಡಿದೆತ್ತಿದ ರಿಷಿ, ಗೌತಮ್‌ಗಾದ ಶಾಕ್ ನೋಡಿ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ