
ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ಸಂಜೆ ೭ ಗಂಟೆಗೆ ಪ್ರಸಾರ ಕಾಣ್ತಿರೋ ಸೀರಿಯಲ್ 'ಭಾಗ್ಯಲಕ್ಷ್ಮೀ'. ಮೊದಲು ಈ ಸೀರಿಯಲ್ ಒಂದೇ ಭಾಗವಾಗಿ ಪ್ರಸಾರವಾಗ್ತಿತ್ತು. ಈಗ ಅಕ್ಕನ ಕತೆ 'ಭಾಗ್ಯಲಕ್ಷ್ಮೀ' ಸೀರಿಯಲ್ ಆಗಿ ಪ್ರಸಾರವಾದರೆ ತಂಗಿ ಕತೆ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಆಗಿ ಪ್ರಸಾರ ಆಗ್ತಿದೆ. ಭಾಗ್ಯಲಕ್ಷ್ಮೀಯಲ್ಲಿ ಭಾಗ್ಯ ತುಂಬು ಸಂಸಾರ ಇರುವ ಗೃಹಿಣಿ. ಅವಳ ಗಂಡ ತಾಂಡವ್ ದಾರಿ ತಪ್ಪಿದ್ದಾನೆ. ಆರಂಭದಿಂದಲೂ ಭಾಗ್ಯಾಳ ಮೇಲೆ ಅವನ ದರ್ಪ, ಅಧಿಕಾರ ಚಲಾವಣೆ ನಡೆಯುತ್ತಲೇ ಇದೆ. ಹೆಂಡತಿಯನ್ನು ಮನೆ ಕೆಲಸದವಳ ನಡೆಸಿಕೊಳ್ಳೋ ಆತನ ರೀತಿಯಿಂದ ವೀಕ್ಷಕರ ಕಣ್ಣಲ್ಲಿ ವಿಲನ್ ಆಗಿದ್ದಾನೆ. ಇಷ್ಟು ಸಮಯ ವೀಕ್ಷಕರ ಕಣ್ಣಲ್ಲಿ ಮಾತ್ರ ವಿಲನ್ ಆಗಿದ್ದೋನು ಇದೀಗ ತನ್ನ ಸ್ವಂತ ತಾಯಿ ಕಣ್ಣಲ್ಲೂ ವಿಲನ್ ಆಗ್ತಿದ್ದಾನೆ. ಮಗ ದಾರಿ ತಪ್ಪಿರೋ ಸೂಚನೆ ಸಿಕ್ಕಿರೊ ಕುಸುಮ ಮಗನನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾಳೆ. ಅವಳ ಈ ರೀತಿ ವೀಕ್ಷಕರ ಮೆಚ್ಚುಗೆಯನ್ನೂ ಗಳಿಸಿದೆ.
ರಾತ್ರಿ ಇಡೀ ಶ್ರೇಷ್ಠಳ ಜೊತೆಗಿದ್ದು ಬೆಳಗ್ಗೆ ಮನೆಗೆ ಬಂದ ತಾಂಡವ್ ಗೆ ಶಾಕ್ ಮೇಲೆ ಶಾಕ್. 'ಅಪ್ಪನ ಕಷ್ಟಕ್ಕೆ ಇಲ್ಲದೇ ಇರೋನು ಎಂಥಾ ಮಗನೋ ನೀನು?' ಅಂತ ಅಮ್ಮ ಕುಸುಮಾ ತಾಂಡವನನ್ನು ತರಾಟೆಗೆ ತೆಗೆದುಕೊಳ್ತಾಳೆ. ತಾಂಡವ್‌ಗೆ ವಿಷಯ ಗೊತ್ತಿಲ್ಲ. ಕೊನೆಗೆ ಭಾಗ್ಯಳೇ ಹಿಂದಿನ ರಾತ್ರಿ ಅವನ ತಂದೆಗೆ ಎದೆನೋವು ಕಾಣಿಸಿಕೊಂಡಿರೋದು, ಅವರು ಕುಸಿದುಬಿದ್ದಿರೋದು, ಆಮೇಲೆ ಅವರನ್ನು ಆಸ್ಪತ್ರೆಗೆ ಸೇರಿಸಿರೋ ವಿಷಯ ತಿಳಿಸ್ತಾಳೆ. ತಂದೆಗೂ ತನ್ನ ಕಷ್ಟಕ್ಕಾಗದ ಮಗನ ಬಗ್ಗೆ ಸಿಟ್ಟಿದೆ. ಆದರೆ ಅವರು ತಾಯಿ ಕುಸುಮಳಂತೆ ತೀವ್ರವಾಗಿ ಆತನನ್ನು ಪ್ರಶ್ನಿಸಲಾರರು. ಕುಸುಮಾ, 'ರಾತ್ರಿ ನೀನು ಆಫೀಸಲ್ಲಿ ಇದ್ದೆ' ಅಂತ ಸುಳ್ಳು ಹೇಳಬೇಡ, ಆಫೀಸಲ್ಲಿ ವಿಚಾರಿಸಿದ್ದೀನಿ. ನೀನು ಅಲ್ಲಿಲ್ಲ ಅಂತ ಗೊತ್ತಾಗಿದೆ. ಈಗ ಸತ್ಯ ಹೇಳು, ರಾತ್ರಿ ಎಲ್ಲ ಎಲ್ಲಿದ್ದಿ?' ಅಂತ ಪ್ರಶ್ನೆ ಮಾಡ್ತಾಳೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಸ್ಸು ಎಂಬಂತೆ ತಾಂಡವ್ ಆ ಕ್ಷಣಕ್ಕೆ ತೋಚಿದ ಸುಳ್ಳು ಹೇಳುತ್ತಾನೆ.
ಮತ್ತೆ ದಪ್ಪಗಾಗಿರುವೆ ರಾಮಾಚಾರಿ; ನಟ ರಿತ್ವಿಕ್ ಲುಕ್ ಬಗ್ಗೆ ತಲೆ ಕೆಡಿಸಿಕೊಂಡ ಹೆಣ್ಣುಮಕ್ಕಳು!
ತನ್ನ ಸ್ನೇಹಿತ ಆತ್ಮಹತ್ಯೆ ಪ್ರಯತ್ನ ಮಾಡಿದ್ದ. ಆತನನ್ನು ಬದುಕಿಸೋ ಕೆಲಸ ಮಾಡಿದೆ. ಇಡೀ ರಾತ್ರಿ ಆತನ ಜೊತೆಗಿದ್ದೆ ಅಂತೆಲ್ಲ ಕಥೆ ಕಟ್ಟಿ ಹೇಳುತ್ತಾನೆ. ಆತನಿಗೆ ಸಾಲದ ಸಮಸ್ಯೆ, ತುಂಬ ಹಿಂದಿನಿಂದಲೂ ಆತ್ಮಹತ್ಯೆ ಮಾಡ್ತೀನಿ ಅನ್ನುತ್ತ ಇದ್ದ, ಆದರೆ ನಿನ್ನೆ ನಿಜಕ್ಕೂ ಆ ಪ್ರಯತ್ನ ಮಾಡಿದ್ದ. ಇದನ್ನೆಲ್ಲ ಮನೇಲಿ ಹೇಳಿದರೆ ಟೆನ್ಶನ್(Tension) ಆಗುತ್ತೆ ಅಂತ ತಾನು ಸುಳ್ಳು ಹೇಳಿದ್ದಾಗಿ ಮತ್ತೊಂದು ಸುಳ್ಳು ಹೇಳುತ್ತಾನೆ. ಇದನ್ನು ಮನೆಯವರೆಲ್ಲ ನಂಬಿದರೂ ಕುಸುಮ ಪ್ರಶ್ನೆ ಮಾಡುತ್ತಾಳೆ. 'ಆ ನಿನ್ನ ಫ್ರೆಂಡ್ ನಂಬರ್ ಕೊಡು, ನಾನು ಆತನ ಬಳಿ ಮಾತಾಡ್ತೀನಿ..' ಅನ್ನುತ್ತಾಳೆ. ಆಗ ತಾಂಡವ್ ಸರಿಯಾಗಿ ಸಿಕ್ಕಿಹಾಕಿಕೊಳ್ಳುತ್ತಾನೆ. ಈ ಕ್ಷಣವೇ ನಿನ್ನ ಆ ಫ್ರೆಂಡ್‌ಗೆ(Friend) ಡಯಲ್ ಮಾಡಿಕೊಡು ನಾನು ಮಾತಾಡಬೇಕು ಅಂತ ಕುಸುಮ ಪಟ್ಟು ಹಿಡಿಯುತ್ತಾಳೆ. ತಾಂಡವ್ ಏನು ಮಾತು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕುಸುಮ ಬಿಡೋದಿಲ್ಲ.
ಯಾವ ಮನೆಯಲ್ಲೇ ಆದರೂ ತಾಯಿ ಹೀಗೆ ಸ್ಟ್ರಾಂಗ್ ಆಗಿದ್ದರೆ ಗಂಡು ಮಕ್ಕಳು ತಪ್ಪು ದಾರಿ ಹಿಡಿಯೋದಿಲ್ಲ. ಆದರೆ ಹೆಚ್ಚಿನ ಕಡೆ ತಪ್ಪು ದಾರಿ(Wrong path) ಹಿಡಿದ ಗಂಡು ಮಕ್ಕಳನ್ನು ಪ್ರಶ್ನಿಸೋದು ಬಿಟ್ಟು ಸೊಸೆಯ ಮೇಲೆ ಎಲ್ಲ ತಪ್ಪುಗಳನ್ನೂ ಹಾಕ್ತಾರೆ. ಇದು ತಾಂಡವ್‌ನಂಥಾ ಗಂಡುಮಕ್ಕಳಿಗೆ ಟೇಕನ್ ಫಾರ್ ಗ್ರ್ಯಾಂಟೆಡ್ ನಂತೆ ಆಗುತ್ತೆ. ಅದರ ಬದಲು ತಾಯಂದಿರು ಮಕ್ಕಳ ತಪ್ಪುಗಳನ್ನು ಹೀಗೆ ಸ್ಟ್ರಾಂಗ್ ಆಗಿ ಪ್ರಶ್ನೆ ಮಾಡಬೇಕು, ಅವರನ್ನು ಸರಿದಾರಿಗೆ ತರಬೇಕು ಅಂತ ಈ ಸೀರಿಯಲ್ ನೊಡೋ ಅನೇಕ ವೀಕ್ಷಕರು ಕಮೆಂಟ್ ಮಾಡಿದ್ದಾರೆ.
Chandan gowda: ನೇಹಾ ಬಿಗ್‌ಬಾಸ್‌ನಲ್ಲಿದ್ದಾಗಲೇ, ಸೀರಿಯಲ್ ಹೀರೋ ಆಗ್ತೀಯಾ ಅಂತ ಕೇಳಿದ್ರು: ಚಂದನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.