ಕನ್ನಡಿಗರ ಮನ ಗೆದ್ದ ಡಾಲಿ ಧನಂಜಯ್ ಅವರ 'ವೀಕೆಂಡ್ ವಿತ್ ರಮೇಶ್' ಎಪಿಸೋಡ್‌ಗೆ ಟಿವಿಆರ್ ಎಷ್ಟು ಬಂದಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲಕ್ಕೆ ತೆರೆಬಿದ್ದಿದೆ.
ಸ್ಯಾಂಡಲ್‌ವುಡ್ ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ರಾಕ್ಷಸ ಧನಂಜಯ್ ಕಿರುತೆರೆಯ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ವೀಕೆಂಡ್‌ನ ಕೆಂಪು ಕುರ್ಚಿ ಏರಿದ್ದ ಧನಂಜಯ್ ಎಪಿಸೋಡ್ ಪ್ರೇಕ್ಷಕರ ಹೃದಯ ಗೆದ್ದಿತ್ತು. ಶನಿವಾರ ಮತ್ತು ಭಾನುವಾರ ಎರಡು ದಿನ ಧನಂಜಯ್ ಎಪಿಸೋಡ್ ಪ್ರಸಾರವಾಗಿತ್ತು. ಡಾಲಿ ಬೆಳೆದುಬಂದ ರೀತಿ, ಕಷ್ಟದ ಪಯಣ, ಸಾಲು ಸಾಲು ಸೋಲು, ಸಕ್ಸಸ್ , ಸ್ಟಾರ್ ಆಗಿ ಹೊರಹೊಮ್ಮಿದ ಬಗ್ಗೆ ಸೇರಿದಂತೆ ಅನೇಕ ವಿಚಾರಗಳನ್ನು ಡಾಲಿ ಬಹಿರಂಗ ಪಡಿಸಿದ್ದರು. ಡಾಲಿ ಸಂಚಕೆ ಅಭಿಮಾನಿಗಳ ಮನಗೆದ್ದಿತ್ತು. ವೀಕೆಂಡ್ ಕುರ್ಚಿಯಲ್ಲಿ ಧನಂಜಯ್ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದರು.
ವೀಕೆಂಡ್ ಕುರ್ಚಿಯಲ್ಲಿ ಕುಳಿತಿದ್ದ ಧನಂಜಯ್ ಹೆಚ್ಚು ಭಾವುಕರಾಗಿದ್ದರು ತನ್ನ ಕುಟುಂಬದವರನ್ನು ನೆನೆದು ಧನಂಜಯ್ ಭಾವುಕರಾಗಿದ್ದರು. ಅಷ್ಟೆಯಲ್ಲದೇ ಅಕ್ಕ ರಾಣಿ ಅವರನ್ನು ಕಾರ್ಯಕ್ರಮಕ್ಕೆ ಕರ್ಕೊಂಡು ಬರಲಾಗಿತ್ತು. ಕನ್ನಡಿಗರ ಮನ ಗೆದ್ದಿರುವ ಡಾಲಿ ಧನಂಜಯ್ ಎಪಿಸೋಡ್‌ಗೆ ಬಂದ ಟಿವಿಆರ್ ಎಷ್ಟಾಗಿರಬಹುದು ಎನ್ನುವ ಕುತೂಹಲ ಹೆಚ್ಚಾಗಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಈ ಸಂಚಿಕೆಯಲ್ಲಿ ಅತೀ ಹೆಚ್ಚು ಟಿವಿಆರ್ ಪಡೆದ ಎಪಿಸೋಡ್ ಧನಂಜಯ್ ಅವರದ್ದಾಗಿದೆ.
ಆಕೆಯನ್ನು ಜಗತ್ತಿಗೆ ತೋರಿಸಲು ಇಷ್ಟ ಇರ್ಲಿಲ್ಲ; ಅಕ್ಕನನ್ನು ನೋಡಿ ಕಣ್ಣೀರಿಟ್ಟ ಧನಂಜಯ್
ಹೌದು, ಡಾಲಿ ಧನಂಜಯ್ ಅವರ ಎಪಿಸೋಡ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಅದರಂತೆ ಈಗ ಟಿವಿಆರ್ ಕೂಡ ಅತೀ ಹೆಚ್ಚು ಬಂದಿದೆ. 6.2 ಟಿವಿಆರ್ ಬಂದಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. 'ಕನ್ನಡಿಗರ ಮನೆ ಮಗ ನಮ್ಮ ಡಾಲಿ ಧನಂಜಯ್, ಜನರು ಇವರ ಮೇಲೆ ಎಟ್ಟಿರುವ ಪ್ರೀತಿ ಯಾವತ್ತು ಕಮ್ಮಿ ಆಗಲ್ಲ' ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಡಾಲಿ ಅಭಿಮಾನಿಗಳು ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಹೆಂಡತಿ ಲಕ್ ತಂದುಕೊಡ್ತಾಳೆ; ಧನಂಜಯ್ ಮದುವೆ ಬಗ್ಗೆ ಶಿವಣ್ಣ ಹೇಳಿಕೆ ವೈರಲ್
ಧನಂಜಯ್ ಸದ್ಯ ನಟನೆ ಜೊತೆಗೆ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಡಾಲಿ ಕೊನೆಯದಾಗಿ ಹೊಯ್ಸಳ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಡಾಲಿ ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ವರ್ಷಗಳ ಬಳಿಕ ರಮ್ಯಾ ಈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಜೊತೆಗೆ ಧನಂಜಯ್ ಟಗರು ಪಲ್ಯಾ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.