ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ತಾಂಡವ್‌ನ ಹೇಡಿತನಕ್ಕೆ ಶ್ರೇಷ್ಠಾ ರೋಸಿ ಹೋಗಿದ್ದಾಳೆ. ಬಾಯಿ ಬಂದ ಹಾಗೆ ಉಗಿದು, ಮದ್ಯದ ನಿಶೆಯಲ್ಲಿದ್ದ ಅವನನ್ನು ಅಲ್ಲೇ ಬಿಟ್ಟು ಹೋಗಿದ್ದಾಳೆ. ವೀಕ್ಷಕರೂ ಬೇಜವಾಬ್ದಾರಿಯ ತಾಂಡವ್‌ಗೆ ಬಾಯಿಗೆ ಬಂದಂಗೆ ಉಗೀತಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಸಖತ್ ಪಾಪ್ಯುಲರ್ ಅಗ್ತಿರೋ ಸೀರಿಯಲ್ ಭಾಗ್ಯಲಕ್ಷ್ಮೀ. ಹಳೇ ಕಾಲದ ಮನಸ್ಥಿತಿಯ ಸತಿ ಸಾವಿತ್ರಿಯಂಥಾ ಭಾಗ್ಯ, ಹದ್ದು ಮೀರಿ ವರ್ತಿಸುತ್ತಿರುವ ಗಂಡ ತಾಂಡವ್ ನಡುವಿನ ವೈಮನಸ್ಸು, ವಿರಸ, ಜೊತೆಗೆ ಶ್ರೇಷ್ಠಾ ಅನ್ನೋ ಆಫೀಸ್ ಹುಡುಗಿ ಬಗೆಗಿನ ತಾಂಡವ್ ಅಟ್ರಾಕ್ಷನ್ ಸುತ್ತ ಈ ಸೀರಿಯಲ್ ಕಥೆ ಸಾಗುತ್ತೆ. ಈ ನಡುವೆ ಈ ಸೀರಿಯಲ್ ಸಡನ್ ಟ್ವಿಸ್ಟ್ ಎದುರಾಗಿದೆ. ಭಾಗ್ಯಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಸುವ ಬಗ್ಗೆ ಮನೆಯಲ್ಲಿ ಗೊಂದಲ, ಶೀತಲ ಸಮರ ಶುರುವಾಗಿದೆ. ಸೊಸೆ ಭಾಗ್ಯಳನ್ನ ಓದಿಸಲೇಬೇಕು ಎಂಬ ತೀರ್ಮಾನಕ್ಕೆ ಅತ್ತೆ-ಮಾವ ಬಂದುಬಿಟ್ಟಿದ್ದಾರೆ. ಆದರೆ ಭಾಗ್ಯ ವಿದ್ಯಾಭ್ಯಾಸ ಮುಂದುವರೆಸುವುದು ಪತಿ ತಾಂಡವ್‌ಗೆ ಸುತರಾಂ ಇಷ್ಟವಿಲ್ಲ. ಪರಿಸ್ಥಿತಿ ಹೀಗಿರುವಾಗಲೇ ಅತ್ತೆ ಕುಸುಮಾ ಮತ್ತು ಮಾವ ದಿಢೀರ್ ಅಂತ ಪ್ರವಾಸಕ್ಕೆ ಹೊರಟಿದ್ದಾರೆ. ಭಾಗ್ಯ ವಿರುದ್ಧ ತಾಂಡವ್ ಕೆಂಡಕಾರುತ್ತಿದ್ದಾನೆ ಅಂತ ಗೊತ್ತಿದ್ದರೂ, ಕುಸುಮಾ ಮತ್ತು ಪತಿ ದಿಢೀರ್ ಅಂತ ಪ್ರವಾಸಕ್ಕೆ ಬಸ್ ಹತ್ತಿದ್ದಾರೆ.
ಇನ್ನೊಂದೆಡೆ ಇದನ್ನೇ ಯೂಸ್ ಮಾಡ್ಕೊಂಡು ಭಾಗ್ಯ ಗಂಡ ತಾಂಡವ್ ಪಬ್‌ಗೆ ಹೋಗಿದ್ದಾರೆ. ಅಲ್ಲಿಗೆ ಶ್ರೇಷ್ಠಾ ಮಾಡರ್ನ್ ಡ್ರೆಸ್ ಹಾಕಿಕೊಂಡು ಬಂದಿದ್ದಾಳೆ. ಅಲ್ಲಿ ತಾಂಡವ್, ಶ್ರೇಷ್ಠಾ ಇಬ್ಬರೂ ಸಿಕ್ಕಾಪಟ್ಟೆ ಕುಡಿದಿದ್ದಾರೆ. ಇನ್ನೊಂದು ಕಡೆ ಶ್ರೇಷ್ಠಾಳನ್ನು ಅಲ್ಲಿದ್ದ ಪೋಲಿ ಹುಡುಗರು ಆಡಿಕೊಂಡಿದ್ದಾರೆ. ಅದನ್ನು ನೋಡಿ ತಾಂಡವ್, ಶ್ರೇಷ್ಠಾಗೆ ಬೈದಿದ್ದಾನೆ. 'ನಿನ್ನ ಅವತಾರ ನೋಡಿಕೊಂಡಿದ್ಯಾ? ನೀನು ಈ ರೀತಿ ಡ್ರೆಸ್ ಹಾಕಿಕೊಂಡಿದ್ದಕ್ಕೆ ಹೀಗೆ ಆಗಿರೋದು. ನೀನು ನನ್ನ ಹುಡುಗಿ, ನನ್ನ ಮುಂದೆ ನೀನು ಚೆನ್ನಾಗಿ ಕಂಡ್ರೆ ಸಾಕು. ಭಾಗ್ಯ ಮೈತುಂಬ ಬಟ್ಟೆ ಹಾಕಿಕೊಳ್ಳೋದಿಕ್ಕೆ ಯಾರೂ ಅವಳನ್ನು ಕೆಟ್ಟದಾಗಿ ನೋಡಲ್ಲ. ಭಾಗ್ಯ ನೋಡಿ ಕಲಿತ್ಕೋ' ಎಂದು ಶ್ರೇಷ್ಠಾಗೆ ತಾಂಡವ್ ಕುಡಿದ ಅಮಲಿನಲ್ಲಿ ಬೈದಿದ್ದಾನೆ.
ಕೆಂಡಸಂಪಿಗೆ ಸುಮಾಗೆ ತಾಂಡವ್ ಸಹಾಯ; ಅಬ್ಬಾ ಜೀವನದಲ್ಲಿ ಒಳ್ಳೇ ಕೆಲ್ಸ ಮಾಡ್ದ ಅಂತ ನೆಟ್ಟಿಗರು!
ತಾಂಡವ್ ಮಾತು ಕೇಳಿ ಶ್ರೇಷ್ಠಾಗೆ ಸಿಟ್ಟು ಬಂದಿದೆ. 'ಭಾಗ್ಯ ನಿನ್ನ ಹೆಂಡ್ತಿ(Wife). ನೀನು ನನಗೆ ಹೇಳಲು ಬರಬೇಡ. ನಿನಗೆ ಯಾವ ಅಧಿಕಾರವೂ ಇಲ್ಲ. ನೀನು ನನ್ನ ಕುತ್ತಿಗೆಗೆ ತಾಳಿ ಕಟ್ಟಿದ್ರೆ ಮಾತ್ರ ಆ ಅಧಿಕಾರ ಸಿಗ್ತಿತ್ತು' ಎಂದಿದ್ದಾಳೆ. ಶ್ರೇಷ್ಠಾ ಮಾತು ಕೇಳಿ ತಾಂಡವ್, ನಾನು ನಿನ್ನನ್ನು ಮದುವೆ ಆಗ್ತೀನಿ ಎಂದಿದ್ದಾನೆ. ತಾಂಡವ್, ಶ್ರೇಷ್ಠಾ ಇಬ್ಬರೂ ಬೀದಿಯಲ್ಲಿ ಹೋಗುವಾಗ ದೇವಸ್ಥಾನವೊಂದು(Temple) ಕಂಡಿದೆ. ಅಲ್ಲಿ ಮರಕ್ಕೆ ಅರಿಷಿಣದ ದಾರ ಕಟ್ಟಿರೋದು ಕಂಡಿದೆ. ಅದನ್ನು ನೋಡಿ ತಾಂಡವ್ ಶ್ರೇಷ್ಠಾಗೆ ತಾಳಿ ಕಟ್ಟಲು ಮುಂದಾಗಿದ್ದಾನೆ.
ಇತ್ತ ಮನೆಯಲ್ಲಿ ಭಾಗ್ಯ ಲಲಿತಾ ಸಹಸ್ರನಾಮ ಓದುತ್ತಿದ್ದಾಳೆ. ಅತ್ತ ದೇವಿಯ ಮುಂದಿರುವ ಅರಿಶಿನ ದಾರವನ್ನೇ ತೆಗೆದುಕೊಂಡು ತಾಂಡವ್ ಶ್ರೇಷ್ಠಾಗೆ ಕಟ್ಟೋಕೆ ಮುಂದಾಗಿದ್ದಾನೆ. ಅದನ್ನು ಶ್ರೇಷ್ಠಾ ಮೊಬೈಲಲ್ಲಿ ರೆಕಾರ್ಡ್(Record) ಮಾಡೋದಕ್ಕೂ ಮುಂದಾಗಿದ್ದಾಳೆ. ದುರಾದೃಷ್ಟವಶಾತ್ ಅಷ್ಟೊತ್ತಿಗೆ ಫೋನ್ ರಿಂಗಾಗಿದೆ. ತಾಂಡವ್‌ಗೆ ಅಮ್ಮನ ನೆನಪಾಗಿದೆ. ಅಮ್ಮ ನನ್ನ ಸಾಯಿಸ್ತಾಳೆ, ನಾನು ಮನೆಗೆ ಹೋಗ್ತೀನಿ ಅಂತ ತಾಳಿಯನ್ನ ಅಲ್ಲೇ ಬಿಸಾಕಿ ಹೊರಡ್ತಾನೆ. ಇದು ಶ್ರೇಷ್ಠಾಗೆ ಎಲ್ಲಿಲ್ಲದ ಸಿಟ್ಟು ತರಿಸಿದೆ.
ದಾಂಪತ್ಯ ಮುರೀತು, ಪ್ರೀತಿ ಇರುತ್ತೆ: ನೋಟ್ ಬರೆದು ನಟಿ ಚಾರುಗೆ ಡಿವೋರ್ಸ್ ಕೊಟ್ಟ ಸುಷ್ಮಿತಾ ಸೇನ್ ತಮ್ಮ
'ನೀನು ಅಮ್ಮನ ಬಾಲ, ಹೇಡಿ, ಕನ್ನಡೀಲಿ ಮುಖ ನೋಡ್ಕೋ, ತಾಳಿ ಕಟ್ಟೋಕೂ ಧೈರ್ಯ ಬೇಕು. ನಲವತ್ತು ವರ್ಷ ಆದ್ರೂ ಇನ್ನೂ ಅಮ್ಮನ ಸೆರಗು ಹಿಂದೆ ಸುತ್ತುತ್ತಿರೋ ನೀನೂ ಒಬ್ಬ ಗಂಡಸಾ, ಮದ್ವೆ ಆಗಿ ಎರಡು ಮಕ್ಕಳಾದ ಮೇಲೂ ನನ್ನನ್ಯಾಕೆ ಲವ್(Love) ಮಾಡ್ತಿದ್ದೀಯಾ' ಅಂತೆಲ್ಲ ಬಾಯಿಗೆ ಬಂದಂಗೆ ಬೈದು, ಇನ್ಯಾವತ್ತೂ ನಿನ್ನ ಮುಖ ನೋಡಲ್ಲ' ಅಂದು ಆಟೋ ಹತ್ತಿ ಹೋಗಿದ್ದಾಳೆ.
ಈಗ ಶ್ರೇಷ್ಠಾ ಮತ್ತು ತಾಂಡವ್ ನಡುವೆ ಬ್ರೇಕಪ್ (Breakup) ಆಗೋಯ್ತಾ ಅನ್ನೋ ಪ್ರಶ್ನೆ ಬಂದಿದೆ. ಆದರೆ ಈ ಥರ ಸಾಕಷ್ಟು ಸಲ ಈ ಇಬ್ಬರ ನಡುವೆ ಜಗಳ ಆಗಿರೋ ಕಾರಣ ಮತ್ತೆ ಇಬ್ಬರೂ ಲವ್ ಟ್ರಾಕಿಗೆ ಬರಬಹುದು ಅನ್ನೋ ಅನುಮಾನವೂ ಇದೆ.
ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್, ಶ್ರೇಷ್ಠಾ ಪಾತ್ರದಲ್ಲಿ ಕಾವ್ಯ ಗೌಡ, ಭಾಗ್ಯಾ ಪಾತ್ರದಲ್ಲಿ ಸುಷ್ಮಾ ಕೆ ರಾವ್ ನಟಿಸಿದ್ದಾರೆ.