ಇದೇ 16ರಂದು ಬಿಡುಗಡೆಯಾಗಲಿರುವ ಆದಿಪುರುಷ್ ಚಿತ್ರ ವೀಕ್ಷಣೆಗೆ 10 ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಎಲ್ಲಿದು?
ಓಂ ರಾವತ್ ಅವರ ಆದಿಪುರುಷ್ (Adipurush) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ 16ರಂದು ಚಿತ್ರ ಬಿಡುಗಡೆಯಾಗಲಿದ್ದು, ನಟ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ VFXನಿಂದ ಸಾಕಷ್ಟು ಟೀಕೆ ಎದುರಿಸಿತ್ತು. 2022 ಅಕ್ಟೋಬರ್ 2ರಂದು ಟೀಸರ್ ರಿಲೀಸ್ ಆದಾಗ ಜನರು ಟ್ರೋಲ್ ಮಾಡಿದ್ದರು. ಇದರ ಹೊರತಾಗಿಯೂ ಈ ಚಿತ್ರ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟಿ ಸಿರೀಸ್ ಪ್ರಾಜೆಕ್ಟ್ನ ಪ್ರೇಕ್ಷಕರಿಂದ ಭಾರೀ ಟೀಕೆ ಎದುರಿಸಿದ ನಂತರ ಚಿತ್ರತಂಡ ಗ್ರಾಫಿಕ್ಸ್ (Graphics) ಬದಲಾಯಿಸಿ ಸಿನಿಮಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಚಿತ್ರದ ನಾಯಕ-ನಾಯಕಿಯ ಲುಕ್ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸಿನಿಮಾ ಈಗಾಗಲೇ ತನ್ನ ಬಜೆಟ್ನ ಮುಕ್ಕಾಲು ಭಾಗವನ್ನು ರಿಕವರಿ ಮಾಡಿಕೊಂಡಿದ್ದು, ಸಿನಿಮಾ ಈಗಾಗಲೇ ಭರ್ಜರಿಯಾಗಿ ಲಾಭ ಮಾಡಿದೆ ಎನ್ನುವ ಸುದ್ದಿ ಕೆಲ ದಿನಗಳಿಂದ ಓಡಾಡುತ್ತಿದೆ.
ಇದರ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ಹೊರಗಡೆ ಬಂದಿದೆ. ಅದೇನೆಂದರೆ,ಈ ಚಿತ್ರದ 10 ಸಾವಿರ ಟಿಕೆಟ್‌ಗಳನ್ನು ಉಚಿತವಾಗಿ ಹಂಚಲು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ಮುಂದಾಗಿದ್ದಾರೆ ಎನ್ನುವ ಸುದ್ದಿ ಇದು. ‘ದಿ ಕಾಶ್ಮೀರ್ ಫೈಲ್ಸ್’ ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅಭಿಷೇಕ್ ಅವರು ಈಗ 10 ಸಾವಿರ ಉಚಿತ ಟಿಕೆಟ್ ವಿತರಣೆಗೆ ಮುಂದಾಗಿದ್ದಅರೆ. 3ಡಿಯಲ್ಲೂ ರಿಲೀಸ್ ಆಗಲಿರುವ ಈ ಚಿತ್ರಕ್ಕೆ ಈ ರೀತಿ ಭರ್ಜರಿ ಆಫರ್ ಕೊಟ್ಟಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಈ ವರ್ಷವೇ ಅಪ್ಪ-ಅಮ್ಮ ಆಗ್ತಿರೋ ಐವರು ಬಾಲಿವುಡ್ ತಾರೆಯರು!
ಸಿನಿಮಾ ರಿಲೀಸ್ಗೆ (Release) ಮೊದಲೇ 432 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಸುಮಾರು 500 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ಸಿದ್ಧವಾಗಿದೆ. 2023ರ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿರುವ ಆದಿ ಪುರುಷ್ ರಿಲೀಸ್ ಮೊದಲೇ ಮುಕ್ಕಾಲು ಭಾಗ ಕಲೆಕ್ಷನ್ ಮಾಡಿದ್ದು ರಿಲೀಸ್ ಆಗಿ ಕೆಲವೇ ದಿನಕ್ಕೆ ಸಿನಿಮಾದ ಬಜೆಟ್ ರಿಕವರಿ ಆಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದು ನಿಜವಾದರೆ ಸಿನಿಮಾ ರಿಲೀಸ್ ಆದ ನಂತರ ಮತ್ತಷ್ಟು ಗಳಿಕೆ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಲಾಗುತ್ತಿರುವ ನಡುವೆಯೇ ಈ ಭರ್ಜರಿ ಆಫರ್ ನೀಡಲಾಗಿದೆ. ರಾಮನ ಬಗ್ಗೆ ಅಭಿಷೇಕ್ಗೆ ಅಪಾರವಾದ ಭಕ್ತಿ ಇದೆ. ಈಗ ರಾಮಾಯಣ ಆಧರಿಸಿ ಸಿನಿಮಾ ಬರುತ್ತಿದ್ದು, ಹೀಗಾಗಿ ಉಚಿತ ಟಿಕೆಟ್ ಹಂಚುವ ನಿರ್ಧಾರಕ್ಕೆ ಬಂದಿದ್ದಾರೆ.
Happy Birthday: ಮದುವೆಯಾಗದ್ದಕ್ಕೆ ಅಪ್ಪ ಜಿತೇಂದ್ರರನ್ನೇ ದೂಷಿಸಿದ ಏಕ್ತಾ ಕಪೂರ್!
ಈ ಕುರಿತು ಅಭಿಷೇಕ್ ಅಗರ್ವಾಲ್ (Abhishek Agarwal) ಟ್ವೀಟ್ ಮಾಡಿದ್ದು, ‘ಆದಿಪುರುಷ್ ಜೀವಮಾನದಲ್ಲಿ ಒಮ್ಮೆ ನೋಡಲೇಬೇಕಾದ ಸಿನಿಮಾ. ಇದನ್ನು ಎಲ್ಲರೂ ಸಂಭ್ರಮಿಸಲೇಬೇಕು. ಭಗವಾನ್ ಶ್ರೀರಾಮನ ಮೇಲಿನ ಅಪಾರ ಭಕ್ತಿಯಿಂದ ತೆಲಂಗಾಣದಾದ್ಯಂತ ಇರುವ ಸರ್ಕಾರಿ ಶಾಲೆಗಳು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ 10,000+ ಟಿಕೆಟ್‌ಗಳನ್ನು ಉಚಿತವಾಗಿ (Free) ನೀಡಲು ನಿರ್ಧರಿಸಿದ್ದೇನೆ. ಟಿಕೆಟ್‌ಗಳನ್ನು ಪಡೆಯಲು ನಿಮ್ಮ ವಿವರಗಳೊಂದಿಗೆ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಿ. ಜೈ ಶ್ರೀರಾಮ್ ಘೋಷಣೆಗಳು ಎಲ್ಲಾ ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಲಿ’ ಎಂದಿದ್ದಾರೆ. ಅರ್ಜಿಯ ಲಿಂಕ್ ಕೂಡ ಅವರು ಶೇರ್ ಮಾಡಿದ್ದಾರೆ. ಸದ್ಯ ಅಭಿಷೇಕ್ ಅಗರ್ವಾಲ್ ಅವರು ವೀರ ಸಾವರ್ಕರ್ ಕುರಿತ ಸಿನಿಮಾ ‘ದಿ ಇಂಡಿಯನ್ ಹೌಸ್’ (The Indian House) ಸಿನಿಮಾ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ರಾಮಾಯಣವನ್ನು ಆಧರಿಸಿದೆ. ಥಿಯೇಟರ್ ಹೊರತಾದ ಆದಾಯ, ಸ್ಯಾಟ್ಲೈಟ್ ಹಕ್ಕುಗಳ ಮಾರಾಟ, ಮ್ಯೂಸಿಕ್ ರೈಟ್ಸ್, ಡಿಜಿಟಲ್ ರೈ್ಟ್ಸ್ ಹಾಗೂ ಇತರ ಮೂಲಗಳಿಂದ 247 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಲಾಗಿದೆ.