ಅಮೃತಧಾರೆ : ಮದ್ವೆಗೂ ಮೊದ್ವೇ ವಾಂತಿ ಮಾಡ್ಕೊಂಡು ಬಿಟ್ಳಲ್ಲಾ ಗೌತಮ್‌ ತಂಗಿ ಮಹಿಮಾ! ಮುಂದ?

By Suvarna News  |  First Published Jul 11, 2023, 1:02 PM IST

ಅಮೃತಧಾರೆ ಸೀರೆಯಲ್‌ನಲ್ಲಿ ಟ್ವಿಸ್ಟೋ ಟ್ವಿಸ್ಟ್. ಜೀವನ್ ಜೊತೆ ಸಂಬಂಧ ಕಡಿದುಕೊಂಡ ಬೆನ್ನಲ್ಲೇ ಮಹಿಮಾ ಬಸ ಬಸ ವಾಂತಿ ಮಾಡ್ಕೊಂಬಿಟ್ಟಿದ್ದಾಳೆ. ಜೀವನ್ ಲೈಫು ಚಿತ್ರಾನ್ನ ಅಂತಿದ್ದಾರೆ ವೀಕ್ಷಕರು.


ಟ್ವಿಸ್ಟ್ ಮೇಲೆ ಟ್ವಿಸ್ಟ್ ಬಂದು ಅಮೃತಧಾರೆ ಸೀರಿಯಲ್‌ ಟಿಆರ್‌ಪಿಯಲ್ಲೂ ವೀಕ್ಷಕರ ಮನಸ್ಸು ಗೆಲ್ಲೋದರಲ್ಲೂ ಮೇಲೆ ಏರ್ತಾನೇ ಇದೆ. ​ಇದಕ್ಕೆ ಕಾರಣ ಸೀರಿಯಲ್ ನಾರ್ಮಲ್ ಸೀರಿಯಲ್‌ಗಿಂತ ಭಿನ್ನವಾಗಿರೋದು. ಕಥೆಯನ್ನ ಹೆಚ್ಚು ಎಳೆಯದೇ ಅಚ್ಚುಕಟ್ಟಾಗಿ ನರೇಟ್ ಮಾಡಿರೋದು. ಮೊದ ಮೊದಲು ಇದೊಂದು ಆಂಟಿ ಅಂಕಲ್ ಕಥೆ ಅಂತ ಮೂಗು ಮುರೀತಿದ್ದವರೂ ಈಗ ಬಾಯಿ ಮುಚ್ಚಿಕೊಂಡು ಸೀರಿಯಲ್ ನೋಡ್ತಿದ್ದಾರೆ ಅಂದರೆ ಅದಕ್ಕೆ ಈ ಸೀರಿಯಲ್‌ ಮಾಮೂಲಿ ಸೀರಿಯಲ್‌ಗಳಿಗಿಂತ ಭಿನ್ನವಾಗಿರೋದೇ ಕಾರಣ ಅನ್ನಬಹುದೇನೋ. 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್‌ಗೆ 45 ವರ್ಷ. ನಾಯಕಿ ಭೂಮಿಕಾಗೆ 35 ವರ್ಷ. ಗೌತಮ್‌ ತಂದೆ-ತಾಯಿ ಬದುಕಿಲ್ಲ, ಎದುರಿಂದ ಚೆನ್ನಾಗಿ ಮಾತಾಡಿ ಹಿಂದಿಂದ ಮಸಲತ್ತು ಮಾಡೋ ಮಲತಾಯಿಯ ಕುತಂತ್ರ ಆತನಿಗೆ ಅರ್ಥ ಆಗುತ್ತಿಲ್ಲ. ಹೀಗೆ ಬ್ಯುಸಿನೆಸ್‌ನಲ್ಲಿ ಸಮಯ ವ್ಯಯಿಸುತ್ತ, ಮನೆಯವರ ಖುಷಿಗಾಗಿ ಏನೂ ಬೇಕಿದ್ರೂ ಮಾಡುತ್ತಾ ಗೌತಮ್‌ ದಿನ ಕಳೆಯುತ್ತಿದ್ದಾನೆ.

ಇನ್ನೊಂದು ಕಡೆ ಮಧ್ಯಮ ವರ್ಗದಲ್ಲಿ ಹುಟ್ಟಿದ ಕಾಲೇಜ್ ಹುಡುಗರಿಗೆ ಪಾಠ ಮಾಡೋ ಭೂಮಿಕಾ. ಅವಳ ತಮ್ಮ ಜೀವನ್, ತಂಗಿ ಅಪೇಕ್ಷಾ ಇನ್ನೂ ಅವರ ಕಾಲ ಮೇಲೆ ನಿಂತಿಲ್ಲ ಅನ್ನುವ ಚಿಂತೆಯಲ್ಲಿ ತನ್ನ ಕನಸುಗಳನ್ನು ಬದಿಗಿಟ್ಟು, ಮದುವೆಯನ್ನ ಮುಂದೂಡುತ್ತ ಬಂದಿದ್ದಾಳೆ. ಈ ಮಧ್ಯೆ ಗೌತಮ್ ತಂಗಿ ಮಹಿಮಾ, ಭೂಮಿಕಾ ತಮ್ಮ ಜೀವ ಪ್ರೀತಿ ಮಾಡುತ್ತಿದ್ದಾರೆ. ನಾನು ಮಹಿಮಾ ಜೊತೆ ಮದುವೆ ಆಗುವ ಮುನ್ನ ನನ್ನ ಅಕ್ಕನ ಮದುವೆಯಾಗಬೇಕು ಎನ್ನೋದು ಜೀವನ್‌ ಹಾಕಿರೋ ಕಂಡೀಷನ್. ಹೀಗಾಗಿ ಈಗ ಗೌತಮ್, ಭೂಮಿಕಾ ಮನೆಯವರ ಖುಷಿಗೋಸ್ಕರ ಮದುವೆ ಆಗಲು ರೆಡಿ ಆಗಿದ್ದಾರೆ. ಈ ನಡುವೆ ಇವರಿಬ್ಬರ ಎಂಗೇಜ್‌ಮೆಂಟ್‌ನಲ್ಲಿ ದೊಡ್ಡ ರಾದ್ಧಾಂತ ಆಗಿದೆ. ಒಂದು ಹಂತದಲ್ಲಿ ದುರಹಂಕಾರಿ ಮಹಿಮಾ ಮೇಲೆ ಜೀವನ್ ಕೈ ಮಾಡಿದ್ದಾನೆ. ಅವರಿಬ್ಬರ ನಡುವೆ ಬ್ರೇಕಪ್ ಆಗಿದೆ. ಆಯ್ತು, ತಾವಿಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿರೋದು ಮನೆಯವರ ಖುಷಿಗೆ ಅಂತಲೇ ಗೌತಮ್ ಮತ್ತು ಭೂಮಿಕಾ ಭಾವಿಸಿದ್ದಾರೆ. ಈಗ ಇವರಿಬ್ಬರ ಬ್ರೇಕಪ್ ಆಗಿರೋದು ಇವರ ಎಂಗೇಜ್‌ಮೆಂಟ್ ಮುರಿದು ಬೀಳಲು ಕಾರಣ ಆಗುತ್ತೆ ಅನ್ನೋ ಹೊತ್ತಿಗೇ ಮತ್ತೊಂದು ಘಟನೆ ಆಗಿದೆ.

Tap to resize

Latest Videos

ಲೇಡಿ ಬಾಸ್‌ ಆಗಿ ಜೊತೆಜೊತೆಯಲಿಯ ಮೀರಾ ಎಂಟ್ರಿ, ಒಲವಿನ ನಿಲ್ದಾಣ ಹುಡುಗ ಸಿದ್ಧಾಂತ್ ಗಡ ಗಡ!

ಗೌತಮ್ ತಂಗಿ ಮಹಿಮಾ ತಾಯಿ ಕಣ್ಮುಂದೆಯೇ ವಾಂತಿ ಮಾಡ್ಕೊಂಡಿದ್ದಾಳೆ. ತಾಯಿಗೆ ಡೌಟ್ ಬಂದು ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಹೇಳಿದ್ದಾಳೆ. ಅದನ್ನು ತೆಗೆದು ನೋಡಿದ್ರೆ ಎರಡು ರೆಡ್ ಮಾರ್ಕ್ ಇದೆ. ಅಲ್ಲಿಗೆ ಮಹಿಮಾ ಪ್ರೆಗ್ನೆಂಟ್ ಅನ್ನೋದು ಕನ್‌ಫರ್ಮ್. ಇಷ್ಟೆಲ್ಲ ಸೀನ್ ಆದ್ಮೇಲೆ ತನ್ನ ಮುಖ ಉಳಿಸಿಕೊಳ್ಳಲು ತಾನು ಜೀವನ್ ಜೊತೆ ರಿಲೇಶನ್‌ಶಿಪ್ ಮುಂದುವರಿಸ್ತೀನಿ ಅಂತಿದ್ದಾಳೆ ಮಹಿಮಾ. ಮನಸ್ಸು ಕಹಿ ಮಾಡ್ಕೊಂಡಿರೋ ಈ ಸಂಬಂಧ ಉಳಿಯುತ್ತಾ? ಜೇನಂಥಾ ಮನಸ್ಸಿಟ್ಟುಕೊಂಡು ಈ ಇಬ್ಬರಿಗಾಗಿ ತನ್ನ ಬದುಕಿನ ಖುಷಿ ಬಲಿಕೊಟ್ಟ ಗೌತಮ್, ಭೂಮಿ ಒಂದಾಗ್ತಾರ ಅನ್ನೋದು ಪ್ರಶ್ನೆ. ರಾಜೇಶ್ ನಟರಂಗ, ಛಾಯಾ ಸಿಂಗ್, ಚಿತ್ರಾ ಶೆಣೈ, ವನಿತಾ ವಾಸು, ಶಶಿ ಹೆಗಡೆ, ಸಾರಾ ಅಣ್ಣಯ್ಯ, ಅಮೃತಾ ನಾಯ್ಕ್, ಸಿಹಿ ಕಹಿ ಚಂದ್ರು ಮುಂತಾದವರು ನಟಿಸಿದ್ದಾರೆ. ಉತ್ತಮ್ ಮಧು ನಿರ್ದೇಶನದ 'ಅಮೃತಧಾರೆ' ಧಾರಾವಾಹಿ ಈ ಮೂಲಕ ಖುರ್ಚಿ ತುದೀಲಿ ಕೂರೋ ಹಾಗೆ ಮಾಡಿದೆ. ದಿನೇ ದಿನೇ ಸೀರಿಯಲ್ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕತೆ ನಿರೂಪಣೆ ಜೊತೆಗೆ ಸೂಪರ್ರಾಗಿ ಅಭಿನಯಿಸ್ತಿರೋ ಕಲಾವಿದರ ಬಗೆಗೂ ಒಳ್ಳೆ ಮಾತು ಕೇಳಿ ಬರುತ್ತಿದೆ.

 

ಗಟ್ಟಿಮೇಳದ ಬಾಯ್ ಬಡ್ಕಿ ಅಮೂಲ್ಯನಂತಹ ಹೆಂಡತಿಯ ಬಾಯಿ ಮುಚ್ತಾರೆ ಈ ಚಾಣಾಕ್ಷರು..!

click me!