ನೀಲಿ ಸೀರೆಯ ಜಾರಿದ ಸೆರಗು, ಬ್ಲೂ ಸ್ಟಾರ್‌ ಉಡುಗೆಯಲ್ಲಿ ತಿಳಿ ನೀಲ ಕನಸು ಕಟ್ಟಿಕೊಟ್ಟ ಉರ್ಫಿ!

By Suvarna News  |  First Published Jul 8, 2023, 9:20 PM IST

ಉರ್ಫಿ ಜಾವೆದ್ ಚಿತ್ರ ವಿಚಿತ್ರ ಉಡುಗೆಯಲ್ಲಿ ಕಾಣಿಸಿಕೊಂಡ ಹಲವರ ನೆದ್ದಿಗೆಡಿಸಿದ್ದರೆ, ಬಹುತೇಕರ ಟೀಕೆಗೂ ಗುರಿಯಾಗಿದ್ದಾರೆ. ಆದರೆ ಉರ್ಫಿ ಫ್ಯಾಶನ್ ಫ್ರೀಕ್ ಕಡಿಮೆಯಾಗಿಲ್ಲ.ಇತ್ತೀಚೆಗೆ ಮೈತುಂಬ ಬಟ್ಟೆ ಹಾಕಿಕೊಂಡ ಅಚ್ಚರಿ ಮೂಡಿಸಿದ್ದ ಉರ್ಫಿ ಇದೀಗ ನೀಲಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಗಿಂತ ಬ್ಲೂ ಸ್ಟಾರ್ ಹೈಲೆಟ್ ಆಗಿದೆ.
 


ಮುಂಬೈ(ಜು.08) ಭಾರತದಲ್ಲಿ ಬ್ಲೂಟಿಕ್ ಚರ್ಚೆ ಮುಗಿದಿದೆ. ಇದೀಗ ಬ್ಲೂ ಸ್ಟಾರ್. ಇದು ಮಾಡೆಲ್ ಕಮ್ ನಟಿ ಉರ್ಫಿ ಜಾವೆದ್ ಹೊಸ ಅವತಾರ. ಉರ್ಫಿಯ ಬ್ಲೂ ಸ್ಟಾರ್ ಅವತಾರ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಪ್ರತಿ ಬಾರಿ ಹೊಸ ಹೊಸ ಫ್ಯಾಶನ್ ಡ್ರೆಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚುವ ಉರ್ಫಿ ಜಾವೆದ್ ಇದೀಗ ನೀಲಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಯ ಸೆರಗು ಕೈಯಲ್ಲಿದ್ದರೆ, ಟಾಪ್‌ಲೆಸ್ ಬ್ಯೂಟಿಗೆ ಬ್ಲೂ ಸ್ಟಾರ್ ಬ್ಲೌಸ್ ಹಲವರ ನಿದ್ದೆಗೆಡಿಸಿದೆ.

ಉರ್ಫಿಯ ಬಹುತೇಕ ಅವತಾರಗಳು ಟಾಪ್ ಲೆಸ್. ಈ ಬಾರಿಯೂ ಇದೇ ಟಾಪ್‌ಲೆಸ್ ಅವತಾರದಲ್ಲೇ ಕಾಣಿಸಿಕೊಂಡಿದ್ದಾರೆ. ಈ ಬಾರಿ ಉರ್ಫಿ ಜಾವೆದ್ ನೀಲಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಆದರೆ ಟಾಪ್‌ಲ್ಲಿ ಬ್ಲೂ ಸ್ಟಾರ್ ನೇತು ಹಾಕಿ ಮೈಮಾಟ ಪ್ರದರ್ಶಿಸಿದ್ದಾರೆ. ಮೈಯಲ್ಲಿ ಬ್ಲೌಸ್ ಇಲ್ಲದಿದ್ದರೂ ಕೈಗೆ ಗ್ಲೌಸ್ ಹಾಕಿ ಒಂದಷ್ಟು ಮ್ಯಾಚ್ ಮಾಡಿದ್ದಾರೆ.

Tap to resize

Latest Videos

ಮೈ ಪೂರ್ತಿ ಮುಚ್ಕೊಂಡ ಬಟ್ಟೆಯಲ್ಲಿ ಉರ್ಫಿ? ಸೂರ್ಯ ಯಾವ ಕಡೆ ಹುಟ್ಟಿದ್ದಾನೆಂದ ನೆಟ್ಟಿಗರು!

ಉರ್ಫಿಯ ಹೊಸ ಅವತಾರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪ್ರತಿ ಬಾರಿಯಂತೆ ಈ ಆವತಾರಕ್ಕೂ ಮೆಚ್ಚುಗೆ ಟೀಕೆಗಳು ಕೇಳಿಬಂದಿದೆ. ಇದೀಗ ಉರ್ಫಿಯ ಹೊಸ ಅವತಾರವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಹಲವು ಬಾರಿ ಉರ್ಫಿ ಡ್ರೆಸ್ ಟೀಕಿಸಿದ್ದೇನೆ. ಈ ಬಾರಿ ಉರ್ಫಿ ಸೀರೆಯಲ್ಲಿ ಚೆನ್ನಾಗಿ ಕಾಣಿಸುತ್ತಿದ್ದಾರೆ. ಆದರೆ ಬ್ಲೂ ಸ್ಟಾರ್ ಬದಲು ಸೆರಗು ಹಾಕಿಕೊಳ್ಳಬಹುದಿತ್ತು ಎಂದು ಕೆಲವರು ಸಲಹೆ ನೀಡಿದ್ದಾರೆ.ಇದು ಉರ್ಫಿಯ ನೀಲಿ ಅವತಾರ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಇದೇ ವೇಳೆ ಉರ್ಫಿ ನಿಮ್ಮ ಟೈಲರ್ ಯಾರು? ನನಗೂ ಕೆಲ ಡ್ರೆಸ್ ಹೊಲಿಸಬೇಕಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಬ್ಲೂ ಸ್ಟಾರ್, ಟು ಪೀಸ್ ಅಂತಾ ಯಾಕೆ ಖರ್ಚು ಮಾಡುತ್ತಿಯಾ, ಮೈಯಲ್ಲಿ ಡ್ರೆಸ್ ಇರಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಉರ್ಫಿ ಹೊಸ ನೀಲಿ ಅವತಾರ ಪರ ವಿರೋಧಗಳು ವ್ಯಕ್ತವಾಗಿದೆ.

ಉರ್ಫಿ ಜಾವೆದ್‌ಗೆ ಟೀಕೆ ಹೊಸದಲ್ಲ. ಪ್ರತಿ ಭಾರಿ ಹೊಸ ಹೊಸ ಡ್ರೆಸ್‌ನಲ್ಲಿ ಕಾಣಿಸಿಕೊಂಡಾಗ ಟೀಕೆಗಳು ವ್ಯಕ್ತವಾಗಿದೆ. ಟ್ರೋಲ್, ಮೀಮ್ಸ್‌ ಸಂಖ್ಯೆ ಹೇಳತೀರದು. ಉರ್ಫಿಯ ಉರಿಸುವ ಟ್ರೋಲ್‌ಗಳು ಸಾಕಷ್ಟಿದೆ. ಉರ್ಫಿ ಜಾವೆದ್ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಜಗತ್ತಿಗೆ ತೋರಿಸಲು ಇನ್ನೇನು ಉಳಿದಿಲ್ಲ. ಹೀಗಾಗಿ ಡ್ರೆಸ್ ಹಾಕದೆ ಪೋಸ್ ನೀಡಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಉರ್ಫಿಗೆ ಸವಾಲು ಹಾಕಿದ್ದಾರೆ.

ಜನಪ್ರಿಯತೆ ಇದೆ ಆದರೆ ಕೆಲಸವಿಲ್ಲ, ನನಗೆ ಯಾರು ಗೌರವ ಕೊಡಲ್ಲ: ಉರ್ಫಿ ಜಾವೇದ್ ಮನದಾಳ

ಇತ್ತೀಚೆಗೆ ಉರ್ಫಿ ಎಲ್ಲರಿಗೂ ಅಚ್ಚರಿ ನೀಡಿದ್ದರೂ. ಕುರ್ತಾ ಹಾಗೂ ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದರು. ಉರ್ಫಿ ಪ್ರಚಾರಕ್ಕೆ ಬಂದ ಬಳಿಕ ಫುಲ್ ಡ್ರೆಸ್‌ನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಮೈತುಂಬ ಬಟ್ಟೆ ಹಾಕಿಕೊಂಡು ಕಾಣಿಸಿಕೊಂಡ ಉರ್ಫಿ ಒಂದು ಬಾರಿ ಎಲ್ಲರಿಗೂ ಕನ್ಫ್ಯೂಸ್ ಮಾಡಿದ್ದರು. ನಿಜಕ್ಕೂ ಇದು ಉರ್ಫಿಯೇ ಎಂದು ಹಲವರು ಕೆಮೆಂಟ್ ಮಾಡಿದ್ದರು. 

ಉರ್ಫಿ ಫುಲ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೆ ಟ್ರೋಲ್ ಶುರುವಾಗಿದೆ. ಅರೇ ಉರ್ಫಿಗೇ ಏನಾಗಿದೆ. ಸೂರ್ಯ ಯಾವ ಕಡೆ ಹುಟ್ಟಿದ್ದಾನೆ. ಉರ್ಫಿ ತುಂಡುಗೆ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

click me!