
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದ್ದು, ನಾಳೆಯವರಿಗೂ ಇರಲಿದೆ. ಇದರಲ್ಲಿ ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಧಾರಾವಾಹಿಗಳ ನಟ-ನಟಿಯರಿಗೆ ಭರಪೂರ ಅವಾರ್ಡ್ಗಳನ್ನು ಕೊಡಲಾಗುತ್ತಿದೆ. ಇದಕ್ಕಾಗಿ ನಾಮಿನೇಷನ್ ಆದವರೆಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಬರುತ್ತಿದೆ. ಅವಾರ್ಡ್ ಕಾರ್ಯಕ್ರಮದ ಇನ್ನೊಂದು ಬದಿಯಲ್ಲಿ ಸೀರಿಯಲ್ ನಟ-ನಟಿಯರ ಸಂದರ್ಶನದ ಜೊತೆಗೆ ಒಳ್ಳೊಳ್ಳೆ ಆಟವೂ ನಡೆಯುತ್ತಿದೆ. ಅದೇ ರೀತಿ ಹಿಟ್ಲರ್ ಕಲ್ಯಾಣದ ಹೀರೋ ಅಭಿನವ್ ಜಯಶಂಕರ್ ಅಲಿಯಾಸ್ ಎಜೆಯ ಸಂದರ್ಶನ ಮಾಡಲಾಗಿದ್ದು, ಅವರಿಗೆ ಆಟವನ್ನೂ ನಡೆಸಲಾಗಿದೆ. ಎಜೆ ಅವರ ಅಸಲಿ ಹೆಸರು ದಿಲೀಪ್ ರಾಜ್.
ಈ ಅವಾರ್ಡ್ ಫಂಕ್ಷನ್ ನಿಮಗೆ ಎಷ್ಟರಮಟ್ಟಿಗೆ ಒಳ್ಳೆಯದು ಎನ್ನಿಸುತ್ತದೆ ಎನ್ನುವ ಪ್ರಶ್ನೆ ದಿಲೀಪ್ ಅವರು, ಸೀರಿಯಲ್ನಲ್ಲಿ ಎಷ್ಟೋ ಮಂದಿ ಕೆಲಸ ಮಾಡುತ್ತಿರುತ್ತಾರೆ. ಕೆಲವರಿಗೆ ಗುರುತಿಸುವಿಕೆಯೇ ಇರುವುದಿಲ್ಲ. ಆದರೆ ಇಂಥ ಅವಾರ್ಡ್ ಬಂದಾಗ ಅವರನ್ನು ಎಲ್ಲರೂ ಗುರುತಿಸುತ್ತಾರೆ. ಒಂದು ವೇಳೆ ಅವಾರ್ಡ್ ಸಿಗದೇ ಹೋದರೆ ಮುಂದಿನ ಸಲ ಇದನ್ನು ಗೆಲ್ಲಬೇಕು ಎನ್ನುವ ಛಲ ಬರುತ್ತದೆ. ಆದ್ದರಿಂದ ಇಂಥ ಅವಾರ್ಡ್ಗಳು ತುಂಬಾ ಮುಖ್ಯ ಎಂದಿದ್ದಾರೆ. ಇದೇ ವೇಳೆ ತಮಗೆ ಸಿಕ್ಕಿರುವ ಮೊದಲ ಅವಾರ್ಡ್ ಕುರಿತು ಮಾತನಾಡಿದ ಅವರು, ಕಾಲೇಜಿನ ದಿನಗಳಲ್ಲಿ ಅಕಸ್ಮಾತ್ತಾಗಿ ನಾಟಕ ಪ್ರದರ್ಶನವೊಂದಕ್ಕೆ ಹೋಗಬೇಕಾಗಿ ಬಂತು. ಇದು ಅಚಾನಕ್ ಆಗಿ ಆಗಿದ್ದಾದರೂ ನನಗೆ ಆಗ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಸಿಕ್ಕಿತು ಎಂದಿದ್ದಾರೆ.
ಕಿಡ್ನಾಪ್ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!
ನಂತರ ಅವರಿಗೆ ಒಂದು ಗೇಮ್ ಆಡಿಸಲಾಯಿತು. ಜೀವನ ಚಕ್ರ ಎನ್ನುವ ಆಟ. ಅಲ್ಲಿರುವ ಚಕ್ರವನ್ನು ತಿರುಗಿಸಬೇಕು. ಅಲ್ಲಿ ಯಾವ ಪ್ರಶ್ನೆ ಕೇಳಲಾಗುತ್ತದೆಯೋ ಅದಕ್ಕೆ ಉತ್ತರಿಸಬೇಕು. ಆಗ ಅವರಿಗೆ ಬಂದದ್ದು 'ನಾನು ಹಾಗಿಲ್ಲ ಗುರು' ಎನ್ನುವುದು. ಇದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದಿಲೀಪ್ ಅವರು, ಮೊದಲನೆಯದ್ದಾಗಿ ನನಗೆ ವಯಸ್ಸಾಗಿಲ್ಲ ಅಂತ ತುಂಬಾ ಮಂದಿ ನೋಡಿದವರು ಹೇಳ್ತಾರೆ. ಆದರೆ ನಿಜ ಹೇಳಬೇಕು ಎಂದರೆ ನನಗೆ ವಯಸ್ಸಾಗಿದೆ. 45 ವರ್ಷ ನನಗೆ ಎಂದರು. ನಂತರ ನನ್ನನ್ನು ನೋಡಿದವರು ನಿಮಗೆ ಆ್ಯಟಿಟ್ಯೂಡ್ ಜಾಸ್ತಿ ಅಂತಾರೆ. ನಿಮ್ ಹತ್ರ ಮಾತನಾಡಲು ಭಯ, ತುಂಬಾ ಸ್ಟ್ರಿಕ್ಟ್ ಅಂತೆಲ್ಲಾ ಹೇಳ್ತಾರೆ. ಆದ್ರೆ ನಿಜವಾಗ್ಲೂ ಹೇಳ್ತೇನೆ ಕೇಳಿ, ನಾನು ತುಂಬಾ ಕೂಲ್, ಆ್ಯಟಿಟ್ಯೂಡ್ ಅಥವಾ ಸೊಕ್ಕು ಯಾವುದೂ ಇಲ್ಲ ಅಂದುಕೊಂಡಿದ್ದೇನೆ. ನಿಜವಾಗಿಯೂ ಹಾಗೆಲ್ಲಾ ಭಾವಿಸಬೇಡಿ. ಮಾತನಾಡುವಾಗ ಸೆಲೆಕ್ಟಿವ್, ಅಷ್ಟು ಬಿಟ್ರೆ ಮತ್ತೇನೂ ಇಲ್ಲ ಎಂದಿದ್ದಾರೆ.
ಅಂದಹಾಗೆ ದಿಲೀಪ್ ರಾಜ್ ಅವರು ಕುರಿತು ಹೇಳುವುದಾದರೆ, ಪೋಷಕ ನಟನಾಗಿ ಕಿರುತೆರೆಯ ಪಾತ್ರಗಳನ್ನು ನಿರ್ವಹಿಸುತ್ತಿದ್ದ ದಿಲೀಪ್ರಾಜ್'ಬಾಯ್ಫ್ರೆಂಡ್'ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದರು. ಬಳಿಕ ಪವರ್ಸ್ಟಾರ್ಪುನೀತ್ರಾಜ್ಕುಮಾರ್ಅಭಿನಯದ 'ಮಿಲನ', 'ಲವ್ಗುರು' 'ಯೂಟರ್ನ್'ಚಿತ್ರದಲ್ಲಿ ಪ್ರಮುಖ ಕಾಣಿಸಿಕೊಂಡಿಸಿದ್ದರು. ಮೊದಲಿನಿಂದಲೂ ಬೆಳ್ಳಿ ತೆರೆಯ ಸಂಪರ್ಕವಿರುವ ದಿಲೀಪ್ರಾಜ್ ಈಗ ಹಿಟ್ಲರ್ ಕಲ್ಯಾಣದಿಂದ ಫೇಮಸ್ ಆಗುತ್ತಿದ್ದಾರೆ. ನಟನೆ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ದಿಲೀಪ್ರಾಜ್, ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಿಗೆ ಬಂಡವಾಳ ಹಾಕಿದ್ದರು.
ದುಡ್ಡಿನ ಆಟದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್ನಲ್ಲಿ ಗೆದ್ದೋರು ಯಾರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.