
ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ರಾಮಾಚಾರಿ ಸೀರಿಯಲ್ ತೀವ್ರ ಕುತೂಹಲ ಕೆರಳಿಸುವಂತಿದೆ. ಸದ್ಯ ರಾಮಾಚಾರಿಯ ಅಪ್ಪನಿಗೆ ಹುಶಾರಿಲ್ಲ. ಈ ಕಾರಣಕ್ಕೆ ಚಾರು ಸೇರಿದಂತೆ ಮನೆಮಂದಿಯೆಲ್ಲರೂ ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ. ರಾಮಾಚಾರಿ ಜತೆ ದೇವಸ್ಥಾನಕ್ಕೆ ಬಂದಿರುವ ಚಾರು, ಮಾವನ ಯೋಗಕ್ಷೇಮಕ್ಕಾಗಿ ಹರಕೆ ಹೊತ್ತಿದ್ದಾಳೆ. ಪಾದವನ್ನು ಮೆಟ್ಟಿಲಿಗೆ ತಾಗಿಸದೇ ಮೊಣಕಾಲಿನಲ್ಲಿ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವ ಹರಕೆ ತೀರಸಲು ಬಂದಿದ್ದಾಳೆ ಚಾರು.
ರಾಮಾಚಾರಿ ಮನೆಯಲ್ಲಿ ಅವನ ಅಪ್ಪನಿಗೆ ಹುಶಾರಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರಾಮಾಚಾರಿ ಅಪ್ಪನಿಗೆ ಆಸ್ಪತ್ರೆ ಔಷಧೋಪಚಾರದ ಜತೆ ಹರಕೆ ಕೂಡ ಮಾಡಿಕೊಂಡಿದ್ದಾರೆ ಚಾರು. ರಾಮಾಚಾರಿ ಇರುವಾಗ ತನಗೆ ಯಾವುದೂ ಕಷ್ಟವಲ್ಲ ಎಂಬುದು ಚಾರು ಅನಿಸಿಕೆ. ಹೀಗಾಗಿ, ಅವಳು ತುಂಬಾ ಕಷ್ಟದ ಹರಕೆ ಹೊತ್ತಿದ್ದಾಳೆ. ದೇವಸ್ಥಾನದ ಮೆಟ್ಟಿಲನ್ನು ಮೊಣಕಾಲಿನ ಮೂಲಕ ಹತ್ತಿ ಹರಕೆ ತೀರಸಬೇಕು. ಅದನ್ನು ಚಾರು ಮಾಡಲು ರೆಡಿ ಆಗಿದ್ದಾಳೆ. ರಾಮಾಚಾರಿ ಬೆನ್ನಿಗಿರುವಾಗ ಚಾರುಗೆ ಯಾವುದೂ ಕಷ್ಟವಲ್ಲ.
ಬೆಂಕಿ ಜೊತೆ ಬಿರುಗಾಳಿಯ ಹೊಸ ಪ್ರೇಮ ಕಥೆ; ಬಲಗಾಲಿಟ್ಟು ಬರಲಿದೆ ಮನೆಮನೆಯಲ್ಲಿ ಗೌರಿಶಂಕರ!
ಚಾರು ಒಂದೊಂದೇ ಮೆಟ್ಟಿಲು ಹತ್ತುತ್ತಿದ್ದಂತೆ ರಾಮಾಚಾರಿ 'ಹರ ಮಹಾದೇವ' ಎಂದು ಹೇಳುತ್ತಾ ಅವಳಿಗೆ ಸಹಕಾರ ನೀಡುತ್ತಿದ್ದಾನೆ. ಎಷ್ಟೇ ಕಷ್ಟವಾದರೂ ಸರಿ, ದೇವಾಲಯದ ಮೆಟ್ಟಿಲು ಹತ್ತಿ ತಾನು ಕಟ್ಟಿರುವ ಹರಕೆಯನ್ನು ಪೂರೈಸಲು ಪಣತೊಟ್ಟಿರುವ ಚಾರು, ಒಂದೊಂದೇ ಮೆಟ್ಟಿಲು ಹತ್ತುವ ಮೂಲಕ ತನ್ನ ಹರಕೆ ತೀರಿಸುವ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಳೆ. ಆದರೆ, ಅವಳಿಗೆ ವಿಘ್ನ ನೀಡಲು ವೈಶಾಖ ಪ್ಲಾನ್ ಮಾಡುತ್ತಿದ್ದಾಳೆ. ಅದು ಗೊತ್ತಿಲ್ಲದ ರಾಮಾಚಾರಿ-ಚಾರು ತಮ್ಮ ಕೆಲಸ ತಾವು ಮಾಡುತ್ತಿದ್ದಾರೆ.
ವೈಷ್ಣವ್ ಓಡಿಸಿಕೊಂಡು ಹೋದ ಮಹಾಲಕ್ಷ್ಮೀ; ಕೀರ್ತಿ ಕಂಡು ಬೆಚ್ಚಿಬಿದ್ದರು ಯಾಕೆ?
ಇತ್ತ, ಚಾರು ಹರಕೆ ತೀರಿಸಿಬಿಟ್ಟರೆ, ಆ ಕಾರಣದಿಂದ ಅವಳ ಮಾವನ ಆರೋಗ್ಯ ಸರಿಹೋಗಿಬಿಟ್ಟರೆ ಚಾರು ಮೇಲೆ ಮನೆಯವರಿಗೆ ಗೌರವ ಹೆಚ್ಚಾಗಿಬಿಡುತ್ತದೆ. ಆಗ ತಾನು ಕಾಲ ಕಸದಂತೆ ಆಗಿಬಿಡುತ್ತೇನೆ ಎಂದು ಭಾವಿಸಿದ ವೈಶಾಖ, ಅದನ್ನು ತಡೆಯಲು ಮೆಟ್ಟಿಲಿನ ಮೇಲ್ಭಾಗಕ್ಕೆ ಹೋಗುತ್ತಾಳೆ. ಮುಂದೇನಾಗುತ್ತದೆ ಎಂಬುದನ್ನು ಸಂಚಿಕೆ ನೋಡಿ ತಿಳಿಯಬೇಕು. ಅಂದಹಾಗೆ, ರಾಮಾಚಾರಿ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರತಿ ರಾತ್ರಿ 9.00ಕ್ಕೆ ಪ್ರಸಾರವಾಗುತ್ತಿದೆ. ಈ ಮೊದಲು ರಾಮಾಚಾರಿಯನ್ನು ಕಂಡರೆ ಹೌಹಾರುತ್ತಿದ್ದ ಚಾರು ಈಗ ಪತಿಗೆ ತಕ್ಕ ಸತಿ ಎಂಬಂತಾಗಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.