ಸೀರೆಯಲ್ಲಿ ಶ್ರೀರಸ್ತು ಶುಭಮಸ್ತು ದೀಪಿಕಾ ಮಾದಕ ಡಾನ್ಸ್​: ಅತ್ತೆಯಂಗೆ ನೀನೂ ಮಗು ಮಾಡ್ಕೋ ಅಂತಿರೋ ಫ್ಯಾನ್ಸ್​!

Published : Apr 08, 2025, 05:43 PM ISTUpdated : Apr 08, 2025, 05:49 PM IST
ಸೀರೆಯಲ್ಲಿ ಶ್ರೀರಸ್ತು ಶುಭಮಸ್ತು ದೀಪಿಕಾ ಮಾದಕ ಡಾನ್ಸ್​: ಅತ್ತೆಯಂಗೆ ನೀನೂ ಮಗು ಮಾಡ್ಕೋ ಅಂತಿರೋ ಫ್ಯಾನ್ಸ್​!

ಸಾರಾಂಶ

"ಶ್ರೀರಸ್ತು ಶುಭಮಸ್ತು" ಧಾರಾವಾಹಿಯಲ್ಲಿ ವಿಲನ್ ದೀಪಿಕಾ ಪಾತ್ರದಿಂದ ಗುರುತಿಸಿಕೊಂಡ ದರ್ಶಿನಿ ಡೆಲ್ಟಾ, ನಿಜ ಜೀವನದಲ್ಲಿ ನೃತ್ಯ ಸಂಯೋಜಕಿ. ಮಾಡೆಲ್ ಆಗಿಯೂ ಕೆಲಸ ಮಾಡಿದ ಇವರು, ಪ್ರಭುದೇವ ಸೇರಿದಂತೆ ಹಲವು ಖ್ಯಾತನಾಮರಿಗೆ ಸಹಾಯಕ ನೃತ್ಯ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದ ಉಪಾಧ್ಯಕ್ಷ ಚಿತ್ರಕ್ಕೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಒಡನಾಟವನ್ನು ಅವರು ನೆನಪಿಸಿಕೊಳ್ಳುತ್ತಾರೆ.

ವಿಲನ್​ ದೀಪಿಕಾ ಎಂದಾಕ್ಷಣ ಸೀರಿಯಲ್​ ಪ್ರೇಮಿಗಳ ಕಣ್ಣೆದುರು ಬರುವುದು ಶ್ರೀರಸ್ತು ಶುಭಮಸ್ತುವಿನ ಸೊಸೆ. ತೀರಾ ಕೆಟ್ಟವಳು ಎಂದೇ ಬಿಂಬಿತವಾಗಿದ್ದವಳು ದೀಪಿಕಾ.  ಈ ಸೀರಿಯಲ್​ನಲ್ಲಿ ಒಂದೇ ಮನೆಯ ಸೊಸೆಯಂದಿರಾಗಿರುವವರು ಪೂರ್ಣಿ ಮತ್ತು ದೀಪಿಕಾ.  ಅಣ್ಣ ತಮ್ಮಂದಿರ ಪತ್ನಿಯರಾದ ಇವರಿಬ್ಬರದ್ದೂ ಸೀರಿಯಲ್​ನಲ್ಲಿ ಭಿನ್ನ ಕ್ಯಾರೆಕ್ಟರ್​. ಒಬ್ಬಳು ಅತೀ ಒಳ್ಳೆಯವಳು, ಇನ್ನೊಬ್ಬಳು ಅಗತ್ಯಕ್ಕಿಂತ ಹೆಚ್ಚು ಕೆಟ್ಟವಳು ಅಂದ್ರೆ ವಿಲನ್​. ದೊಡ್ಡ ಸೊಸೆ ಪೂರ್ಣಿಗೆ ಇನ್ನಿಲ್ಲದ ಕಾಟ ಕೊಡುವುದು ಎಂದರೆ ದೀಪಿಕಾಗೆ ಇನ್ನಿಲ್ಲದ ಖುಷಿ. ಅದರಲ್ಲಿಯೂ ಪೂರ್ಣಿ ಅನಾಥೆ ಎನ್ನುವ ಕಾರಣಕ್ಕೆ, ಅವಳನ್ನು ಹೆಜ್ಜೆ ಹೆಜ್ಜೆಗೂ ಹಂಗಿಸಿ, ಟೀಕಿಸುತ್ತಾಳೆ. ಅದೇ ಪೂರ್ಣಿ ತುಂಬಾ ಒಳ್ಳೆಯವಳು. ಎಲ್ಲವನ್ನೂ ಸಹಿಸಿಕೊಂಡು ಹೋಗುವವಳು.  ಆದರೆ ಈಗ ಇಡೀ ಚಿತ್ರಣವೇ ಬದಲಾಗಿದೆ. ಅತ್ತೆ ತುಳಸಿಗೆ ಮಗು ಹುಟ್ಟಿದೆ. ಅದೇ ಇನ್ನೊಂದೆಡೆ, ತಾನು ಇಷ್ಟು ದಿನ ಮಾಡ್ತಿದ್ದದ್ದು ತಪ್ಪು ಎಂಬ ಅರಿವು ದೀಪಿಕಾಗೆ ಆಗಿದೆ. ಎಲ್ಲರ ಕ್ಷಮೆ ಕೋರಿದ್ದಾಳೆ. ಅತ್ತೆ ತುಳಸಿ, ತಂಗಿ ಪೂರ್ಣಿಯನ್ನು ಪ್ರೀತಿಸುತ್ತಿದ್ದಾಳೆ.

ಇಂತಿಪ್ಪ ದೀಪಿಕಾಳ    ನಿಜವಾದ ಹೆಸರು ದರ್ಶಿನಿ ಡೆಲ್ಟಾ. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ನಟಿ, ಸೀರೆಯಲ್ಲಿಯೇ ಸಕತ್​ ಸೊಂಟ ಬಳುಕಿಸಿ ಚಿಂದಿ ಉಡಾಯಿಸಿದ್ದಾರೆ. ಇನ್ನು ದರ್ಶಿನಿ ಕುರಿತು ಹೇಳುವುದಾದರೆ, ಇವರು ನಟಿಯಾಗೋ ಮೊದಲು ಮಾಡೆಲ್ (Model),  ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

ಉಫ್​... ಲೈಕ್ಸ್​ಗಾಗಿ ಇದೆಂಥ ಹುಚ್ಚು? ಟವಲ್​ ಸುತ್ತಿಕೊಂಡು ಬಿಚ್ಚಿಬಿಚ್ಚಿ ತೋರಿಸಿದ ಯುವತಿಯರು!

ಅಪ್ಪನ ಕನಸಿನಂತೆ ಡ್ಯಾನ್ಸರ್ (dancer) ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ಮೊದಲಿಗೆ ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತಮಿಳಿನಲ್ಲಿ ಜಾನಿ ಮಾಸ್ಟರ್ (Jani Master) ಅವರಿಗೆ ಅಸಿಸ್ಟಂಟ್ ಆಗಿ ಪ್ರಭುದೇವ (Prabhudeva) ಅವರಿಗೆ ಕೊರಿಯೋಗ್ರಫಿ ಮಾಡಿದ ದರ್ಶಿನಿ  ಡೆಲ್ಟಾ ನಾಗರಾಜ್, ಸದ್ಯ ಕನ್ನಡದ ಮೊದಲ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.  

ಇವರು ಆಗಾಗ್ಗೆ ಪೂರ್ಣಿ ಅಂದ್ರೆ, ಲಾವಣ್ಯ ಭಾರಧ್ವಾಜ್​ ಜೊತೆಗೆ ರೀಲ್ಸ್​ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇವರು ಓಪನ್ ದ ಬಾಟಲ್ ಹಾಡಿಗೆ ಪುನೀತ್ ರಾಜ್ ಕುಮಾರ್ ಗೆ ಜಾನಿ ಮಾಸ್ಟರ್ ಗೆ ಅಸಿಸ್ಟಂಟ್ ಕೊರಿಯೋಗ್ರಫಿ ಮಾಡಿದ್ದರು. ನನ್ನ ಕೊರಿಯೋಗ್ರಫಿ ಮೇಲೆ ನನಗಿಂತ ಹೆಚ್ಚಿನ ನಂಬಿಕೆ ಇಟ್ಟಿದ್ದ ಪುನೀತ್ ರಾಜ್ ಕುಮಾರ್ (Punith Rajkumar) ಅವರ ಆಶೀರ್ವಾದದಿಂದಲೇ ನಾನು ಇವತ್ತು ಈ ಹಂತಕ್ಕೆ ಬಂದಿದ್ದೇನೆ ಎಂದು ಹೇಳ್ತಾರೆ. 

ಮದ್ವೆಯಾಗ್ದೇ ಸೀರಿಯಲ್​ಗೆ ಬಂದ್ರೆ ಹೀಗೇ ಆಗೋದು! ಹೆಂಡ್ತಿಗೆ ತುತ್ತು ನೀಡುವಷ್ಟ್ರಲ್ಲಿ ಲಕ್ಷ್ಮೀ ನಿವಾಸ ಸಿದ್ದೇಗೌಡ್ರು ಸುಸ್ತು...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ