Latest Videos

ಅಮೃತಧಾರೆ: ಎಲ್ಲೆಲ್ಲೂ ಚಿಕನ್, ಭೂಮಿಕಾ ಸೇಡಿನ ಜ್ವಾಲೆಗೆ ತತ್ತರಿಸಿದ ಡುಮ್ಮ ಸರ್!

By Bhavani BhatFirst Published Jun 15, 2024, 2:13 PM IST
Highlights

ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಟಿಪಿಕಲ್ ಹೆಂಡ್ತಿ ಆಗಿಬಿಟ್ಟಿದ್ದಾಳೆ. ಗಂಡ ಗೌತಮ್ ಮೇಲಿನ ಸಿಟ್ಟಿಗೆ ಸರ್ವಂ ಚಿಕನ್ ಮಯಂ ಮಾಡಿ ಬಿಟ್ಟಿದ್ದಾಳೆ!

ಅಮೃತಧಾರೆ ಸೀರಿಯಲ್‌ನಲ್ಲಿ (Amruthadhare Serial of Zee Kannada) ಗೌತಮ್‌ ಮೇಲೆ ಭೂಮಿಕಾಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿದೆ. ಯಾವ ಲೆವೆಲ್‌ಗೆ ಅಂದರೆ ನಾವೆಲ್ಲ ಊಹಿಸಲಾಗದ ರೀತಿಯಲ್ಲಿ. ಪರಿಣಾಮ ಮಾತ್ರ ಭಯಂಕರವಾಗಿದೆ. ಡುಮ್ಮಾ ಸಾರ್ ಭೂಮಿಕಾ ಹೊಸ ವರಸೆ ಕಂಡು ಬೆಚ್ಚಿ ಬಿದ್ದಿದ್ದಾರೆ. ಶುರು ಶುರುವಿಗೆ ಇದೇನು ಅಂತ ಗೊತ್ತಾಗೋದಿಲ್ಲ. ಬೆಳ್ ಬೆಳಗ್ಗೆ ಯಾವತ್ತೂ ಟೀ ಕೊಡೋ ಭೂಮಿ ಆ ದಿನ ಕಾಲು ಸೂಪ್ ಕೊಡುತ್ತಾಳೆ. ಹೊಸ ಚೇಂಚ್‌ ಅನ್ನು ಡುಮ್ಮ ಸಾರ್ ಎನ್ ಜಾಯ್ ಮಾಡ್ತಾರೆ. ಮುಂದೈತೆ ಮಾರಿಹಬ್ಬ ಅಂತ ಪಾಪ ಆತನಿಗಾದ್ರೂ ಹೇಗೆ ಗೊತ್ತು? ಆದರೂ ಕೊಂಚ ಅನುಮಾನ ಬರೋದು ತಿಂಡಿಗೆ ಕೂತಾಗ. ಇಡ್ಲಿ ಜೊತೆಗೆ ಚಿಕನ್ ಗ್ರೇವಿ, ಚಿಕನ್ ಕಬಾಬ್, ಚಿಕನ್ ಫ್ರೈ ರೆಡಿ ಮಾಡಿರುತ್ತಾಳೆ ಭೂಮಿಕಾ. ಗೌತಮ್‌ಗೆ ನಾನ್ ವೆಜ್ ನೋಡಿ ಖುಷಿಯಾಗುತ್ತದೆ. ಇಷ್ಟಪಟ್ಟು ತಿನ್ನುತ್ತಾನೆ. ಅಷ್ಟೇ ಆಗಿದ್ರೆ ಪರವಾಗಿರ್ತಿರಲಿಲ್ಲ, 'ರಾಮಣ್ಣ ಮಾಡಿದ್ದಾ? ಸಖತ್ತಾಗಿದೆ' ಅಂದು ಬಿಡ್ತಾನೆ. ರಾಮಣ್ಣ ಅವರ ಮನೆ ಬಾಣಸಿಗ. ಭೂಮಿಕಾಳಿಗೆ ಮತ್ತೆ ಕೋಪ ಬರುತ್ತದೆ.

ತಾನು ಮಾಡಿದ ಅಡುಗೆಯ ರುಚಿ ಗೊತ್ತಾಗುವುದಿಲ್ಲ ಎಂದು ಅವಳ ಸಿಟ್ಟು ಹೆಚ್ಚಾಗುತ್ತದೆ. ಊಟವನ್ನು ಮನೆಯಿಂದಲೇ ಕಳಿಸುವುದಾಗಿ ಹೇಳುತ್ತಾಳೆ. ಪರಿಣಾಮ ಮಧ್ಯಾಹ್ನ ಊಟವನ್ನು ಕೂಡ ಚಿಕನ್‌ ಬಿರಿಯಾನಿ (Chiken Biriyani), ಚಿಕನ್ ಫ್ರೈ (Chiken Fry) ಸೇರಿ ಎಲ್ಲಾ ಚಿಕನ್‌ನಿಂದಲೇ ಮಾಡಿರೋ ಐಟಂಗಳು! ಇದನ್ನೆಲ್ಲ ನೋಡಿ ಗೌತಮ್‌ಗೆ ಶುರುವಿಗೆ ಖುಷಿಯಾದರೂ ಆಮೇಲೆ ತಲೆ ಬುಡ ಅರ್ಥ ಆಗಲ್ಲ. ಸ್ನೇಹಿತ ಆನಂದ್‌ಗೂ ಎಲ್ಲೋ ಎಡವಟ್ಟಾಗಿದೆ ಅನ್ನೋ ವಾಸನೆ ಹೊಡೆಯುತ್ತದೆ. ಅದನ್ನೇ ಗೌತಮ್‌ಗೂ ಹೇಳ್ತಾನೆ. ಇಬ್ಬರಿಗೂ ತಮ್ಮ ಟೇಬಲ್‌ ಮುಂದೆ ಕೋಳಿ ಫಾರಂ ಬಂದು ಕೂತಿರೋದರ ಮರ್ಮ ಗೊತ್ತಾಗೋದಿಲ್ಲ. ಕೊನೆಗೂ ಇದು ಹೊಳೆಯೋದು ಗೌತಮ್ ಗೆಳೆಯ ಆನಂದನಿಗೆ.

'ನನಗೊಂದು ಲವ್‌ ಬ್ರೇಕಪ್‌ ಆಗಿದೆ, ಸದ್ಯಕ್ಕೆ ಲವ್‌ ಮಾಡಲ್ಲ..' ಬಾಯ್‌ಫ್ರೆಂಡ್‌ ಬಗ್ಗೆ ಸಪ್ತಮಿ ಗೌಡ ಮಾತು!

ಹಿಂದಿನ ದಿನ ಆನಂದ್‌ ಮನೆಯಲ್ಲಿ ಪಾರ್ಟಿ. ಅಲ್ಲಿ ಗೌತಮ್‌ಗೆ ಇಷ್ಟ ಅಂತ ಆನಂದ್ ಪತ್ನಿ ಅಪರ್ಣಾ ಬಳಿ ರೆಸಿಪಿಗಳನ್ನೆಲ್ಲ ಕೇಳಿ ಕೇಳಿ ತಾನೇ ಟ್ರೈ ಮಾಡ್ತಾಳೆ ಭೂಮಿಕಾ. ನಾನಾ ವೆರೈಟಿಯ ನಾನ್‌ವೆಜ್ (Non Veg) ಅಡುಗೆಗಳನ್ನು ಅಪರ್ಣಾ ಸಹಾಯದಿಂದ ರೆಡಿ ಮಾಡ್ತಾಳೆ. ಆದರೆ ಇದ್ಯಾವುದರ ಸುಳಿವೇ ಇಲ್ಲದ ತಿಂಡಿಪೋತ ಡುಮ್ಮ ಸಾರ್ ಅಪರ್ಣಾ ಅಡುಗೆಯನ್ನು ವಾಚಾಮಗೋಚರವಾಗಿ ಹೊಗಳಿ ಬಿಡ್ತಾರೆ. ತಾನು ಅಷ್ಟೆಲ್ಲ ಕಷ್ಟಪಟ್ಟು ಮಾಡಿದ ಅಡುಗೆ ಕ್ರೆಡಿಟ್ ಕಣ್ಮುಂದೆಯೇ ಬೇರೆಯವರ ಪಾಲಾದ್ರೆ ಎಂಥವರಿಗಾದ್ರೂ ಉರಿಯದೇ ಇರುತ್ತಾ? ಸ್ವಾಭಿಮಾನಿ ಭೂಮಿಗೂ ಮೈ ಎಲ್ಲ ಉರಿದಿದೆ. ಅದನ್ನು ಹೇಳೋಕೆ ಸ್ವಾಭಿಮಾನ ಬಿಟ್ಟಿಲ್ಲ. ಪರಿಣಾಮ ಮರುದಿನ ಡುಮ್ಮ ಸರ್‌ಗೆ ಕೋಳಿ ಹಬ್ಬ. 

'ಮೊದಲು ಹೋಗಿ ಕ್ಷಮೆ ಕೇಳು ಇಲ್ಲದೇ ಹೋದರೆ, ಈ ಶಿಕ್ಷೆಯನ್ನು ಇನ್ನೂ ಹೆಚ್ಚಾಗಿ ಅನುಭವಿಸಬೇಕಾಗುತ್ತದೆ' ಅಂತ ಗೆಳೆಯ ಆನಂದ ಎಂದು ಹೇಳುತ್ತಾನೆ. ಆನಂದ್ ಮಾತನ್ನು ಕೇಳಿದ ಗೌತಮ್‌ಗೆ ಆತಂಕವಾಗುತ್ತದೆ. ಹೀಗೆ ಮಾಮೂಲಿಯಾದ ಏಕತಾನತೆಯ ಸ್ಟೋರಿ ಬಿಟ್ಟು ಬಹಳ ಲವಲವಿಕೆಯ ಟ್ರ್ಯಾಕ್‌ನಲ್ಲಿ ಅಮೃತಧಾರೆ ಸೀರಿಯಲ್ ಮುಂದೆ ಹೋಗ್ತಿದೆ. ಅತಿಯಾದ ಡ್ರಾಮ ಇಲ್ಲದ ಬಹಳ ಲವಲವಿಕೆಯ ಕಾರಣಕ್ಕೆ ಬಹಳ ಮಂದಿ ಈ ಸೀರಿಯಲ್‌ ಅನ್ನು ಇಷ್ಟ ಪಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದೇ ಡೈರೆಕ್ಟರ್‌ ಮಾಮೂಲಿ ಸೀರಿಯಲ್ ರೇಂಜ್‌ಗೆ ಇದನ್ನು ತಂದು ನಿಲ್ಲಿಸಿದರೆ ಈ ಚಂದವೇ ಹೋಗಿ ಬಿಡುತ್ತದೆ. 

ದರ್ಶನ್-ಪವಿತ್ರಾ ಪರಿಚಯ ಆಗಿದ್ದೆಲ್ಲಿ? ಸಂಜಯ್ ಸಿಂಗ್ ಜತೆ ಡಿವೋರ್ಸ್‌ಗೆ ನಟಿ ಕೊಟ್ಟ ಕಾರಣವೇನು?
 

click me!