Latest Videos

ರೇಪಿಸ್ಟ್ ಎನ್‌ಕೌಂಟರ್‌ಗೆ ಮುಂದಾದ 'ಸತ್ಯ', ಕಿಲ್ಲಿಂಗ್ ಸ್ಟಾರ್ ಕೇಸೂ ಇವ್ಳಿಗೇ ಕೊಡಿ ಅಂತಿರೋ ವೀಕ್ಷಕರು!

By Suchethana DFirst Published Jun 15, 2024, 12:04 PM IST
Highlights

ಸತ್ಯ ಸೀರಿಯಲ್​ನಲ್ಲಿ ರೇಪಿಸ್ಟ್​ ಎನ್​ಕೌಂಟರ್​ಗೆ ಸತ್ಯ ಮುಂದಾದರೆ ಕಿಲ್ಲಿಂಗ್ ಸ್ಟಾರ್ ಕೇಸೂ ಇವ್ಳಿಗೇ ಕೊಡಿ ಅನ್ನೋದಾ ಪ್ರೇಕ್ಷಕರು? ಅಷ್ಟಕ್ಕೂ ನೆಟ್ಟಿಗರು ಹೇಳ್ತಿರೋದೇನು?
 

ಈಗ ಎಲ್ಲೆಲ್ಲೂ ನಟ ದರ್ಶನ್​ ಕೊಲೆ ಕೇಸಿನದ್ದೇ ಮಾತು. ರೇಣುಕಾಸ್ವಾಮಿ ಅವರ ಹತ್ಯೆಯ ಕುರಿತಂತೆ ದರ್ಶನ್​ ಅವರ ಕೆಲವು ಅಭಿಮಾನಿಗಳು ಬಿಟ್ಟರೆ, ಉಳಿದ ಎಲ್ಲರೂ ನಟನ ವಿರೋಧದವಾಗಿಯೇ ಇದ್ದಾರೆ. ಈ ರೀತಿ ಮಹಾಪಾಪ ಮಾಡಿದ ನಟನನ್ನು ಸುಮ್ಮನೇ ಬಿಡಬಾರದು, ತಕ್ಕ ಶಿಕ್ಷೆ ಆಗಬೇಕು ಎನ್ನುವ ಕೂಗು ಜೋರಾಗಿ ಕೇಳಿಬರುತ್ತಿದೆ. ದರ್ಶನ್​ ಕುರಿತು ಇದಾಗಲೇ ಸೋಷಿಯಲ್​ ಮೀಡಿಯಾಗಳಲ್ಲಂತೂ ತಮ್ಮದೇ ಆದ ರೀತಿಯಲ್ಲಿ ಹೇಳಿಕೆಗಳು ಬರುತ್ತಿವೆ, ಜೊತೆಗೆ ಒಂದಿಷ್ಟು ಮೀಮ್ಸ್​ಗಳೂ ಹರಿದಾಡುತ್ತಿವೆ. ದರ್ಶನ್​ ಅವರ ಬಿಡುಗಡೆಗೆ ಹಾಗೂ ಈ ಕೇಸ್​ನಲ್ಲಿ ಅವರ ಪಾತ್ರ ಇಲ್ಲ ಎಂದು ಸಾಬೀತು ಮಾಡಲು ಭಾರಿ ಪ್ರಮಾಣದ ಲಂಚದ ಆಮಿಷ ಒಡ್ಡಲಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಬಂದಿರುವ ಹಿನ್ನೆಲೆಯಲ್ಲಿ, ಯಾವುದೇ ಆಮಿಷಕ್ಕೆ ಒಳಗಾಗದ ಸತ್ಯಳಿಗೆ ಈ ಕೇಸ್​ ಅನ್ನು ನೀಡುವಂತೆ ನೆಟ್ಟಿಗರ ಒತ್ತಾಯ ಹೆಚ್ಚಾಗುತ್ತಿದೆ.

ಅಷ್ಟಕ್ಕೂ ಯಾರೀ ಸತ್ಯ?  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್​ ನಾಯಕಿ ಈಕೆ. ಇದೀಗ ರೇಪಿಸ್ಟ್​ ಒಬ್ಬನ ಎನ್​ಕೌಂಟರ್​ ಮಾಡಲು ಮುಂದಾಗಿರೋ ಸತ್ಯ ಸೀರಿಯಲ್​ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಇದಕ್ಕೂ ದರ್ಶನ್​ ಕೇಸ್​​ ಲಿಂಕ್​  ಮಾಡಿ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಸತ್ಯ ಸೀರಿಯಲ್​ನಲ್ಲಿ ನಾಯಕಿ ಸತ್ಯ ಎಲ್ಲಾ ಅಡೆತಡೆಗಳನ್ನು ಎದುರಿಸಿ, ಪೊಲೀಸ್ ಇನ್​ಸ್ಪೆಕ್ಟರ್​ ಆಗಿದ್ದಾಳೆ. ಗಂಡ, ಅತ್ತೆ ಸೇರಿದಂತೆ ಯಾರಿಗೂ ಈಕೆಯನ್ನು ಕಂಡರೆ ಆರಂಭದಲ್ಲಿ ಆಗುತ್ತಿರಲಿಲ್ಲ. ಆದರೆ ಈಗ ಎಲ್ಲರಿಗೂ ಸತ್ಯ ಎಂದರೆ ಪಂಚಪ್ರಾಣ. ಸೊಸೆಯನ್ನು ಕಂಡರೆ ಉರಿದು ಬೀಳುತ್ತಿದ್ದ ಅತ್ತೆ ಸೀತಾ ಕೂಡ ಸೊಸೆಯನ್ನು ಮಗಳಿಗಿಂತಲೂ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಾಳೆ. ಒಂದು ಹಂತದಲ್ಲಿ ಸತ್ಯ ಕುಟುಂಬದ ಒತ್ತಾಸೆಗಾಗಿ ಇನ್ಸ್​ಪೆಕ್ಟರ್​ ಹುದ್ದೆ ಬಿಡಲು ರೆಡಿಯಾದಾಗ ಅತ್ತೆಯೇ ಆಕೆಯ ಮನವೊಲಿಸಿ ಈ ಹುದ್ದೆಯಲ್ಲಿ ಮುಂದುವರೆಯುವಂತೆ ಹೇಳಿದ್ದಾಳೆ. ನಿನ್ನಂಥ ಇನ್ಸ್​ಪೆಕ್ಟರ್​ ಇದ್ದರೆ ಪೊಲೀಸ್​ ಇಲಾಖೆ ಗೌರವ ಹೆಚ್ಚುತ್ತದೆ ಎನ್ನುತ್ತಲೇ ಸೊಸೆಯನ್ನು ಹುರಿದುಂಬಿಸುತ್ತಿದ್ದಾಳೆ.

ಆಮೀರ್​ ಖಾನ್​ ಪುತ್ರನ ಮೊದಲ ಚಿತ್ರಕ್ಕೇ ವಿಘ್ನ! 'ಮಹಾರಾಜ್​' ​ಸಿನಿಮಾಕ್ಕೆ ಹೈಕೋರ್ಟ್​ ತಡೆ

ಇದೀಗ ಸತ್ಯ ಸಿರೀಯಲ್​ ಕುತೂಹಲದ ಘಟ್ಟಕ್ಕೆ ಬಂದು ತಲುಪಿದೆ. ಸತ್ಯಳ ಮಾವನ ಅತ್ಯಂತ ಆತ್ಮೀಯ ಸ್ನೇಹಿತನ ಮಗ ಯುವತಿಯೊಬ್ಬಳ ಅತ್ಯಾಚಾರ ಮಾಡಿದ್ದಾನೆ. ಆಕೆ ಪೊಲೀಸ್ ಕಾನ್ಸ್​ಟೆಬಲ್​ ಮಗಳು. ಅವಳಿಗೆ ನ್ಯಾಯ ಕೊಡಿಸಲು ಸತ್ಯ ಮುಂದಾಗಿದ್ದಾಳೆ. ಭಾರಿ ಶ್ರೀಮಂತನಾಗಿರುವ ಆರೋಪಿಯ ಅಪ್ಪ, ತನ್ನದೇ ಪ್ರಭಾವ ಬಳಸಿ ಬೇರೆ ಬೇರೆ ರೀತಿಯಲ್ಲಿ ಕೇಸ್​  ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾನೆ. ಸತ್ಯಳಿಗೂ ಹಲವಾರು ರೀತಿಯ ಆಮಿಷ, ಬೆದರಿಕೆ ಎಲ್ಲವನ್ನೂ ಹಾಕಲಾಗಿದೆ. ಸಾಲದು ಎಂಬುದಕ್ಕೆ ಈಕೆ ತನ್ನ ಸ್ನೇಹಿತನ ಸೊಸೆ ಎನ್ನುವ ಕಾರಣಕ್ಕೆ ಹೇಗಾದರೂ ಈ ಕೇಸ್​ ಮುಚ್ಚಿಹಾಕಬಹುದು, ದುಡ್ಡು ಇದ್ದರೆ ಎಲ್ಲವೂ ಸಾಧ್ಯ ಎನ್ನುವುದು ಆರೋಪಿ ಅಪ್ಪನ ಅನಿಸಿಕೆ. ಆದರೆ ಯಾವುದಕ್ಕೂ ಬಗ್ಗದವಳು ಈ ಸತ್ಯ. ಖುದ್ದು ಪತಿಯ ಮೇಲೆ ಆರೋಪ ಬಂದಾಗಲೂ, ಆತ ನಿರಪರಾಧಿ ಎಂದು ಗೊತ್ತಿದ್ದರೂ  ಆತನನ್ನು ಜೈಲಿಗೆ ಹಾಕಿದ್ದಳು ಸತ್ಯ.

ಇದೀಗ ರೇಪಿಸ್ಟ್​ನನ್ನು ಬಂಧಿಸಿದ್ದಾಳೆ. ಆದರೆ ಆತ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಸತ್ಯ ಆತನ ಮೇಲೆ ಬಂದೂಕಿನ ಗುರಿಯಿಟ್ಟಿದ್ದಾಳೆ. ತನಗೆ ಏನೂ ಮಾಡಬೇಡ ಎಂದು ಆರೋಪಿ ಗೋಗರೆದಿದ್ದಾನೆ. ಆ ಯುವತಿ ಕೂಡ ಅತ್ಯಾಚಾರ ಮಾಡುವ ಸಂದರ್ಭದಲ್ಲಿ ಹೀಗೆಯೇ ಗೋಗರೆದಿದ್ದಳಲ್ವಾ ಎಂದೆಲ್ಲಾ ಕೇಳಿರುವ ಸತ್ಯ ಆತನ ಶೂಟೌಟ್​ಗೆ ಮುಂದಾಗಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ಇಂಥ ದಕ್ಷ ಅಧಿಕಾರಿಗಳು ನಮಗೆ ಬೇಕು ಅಂತಿರೋ ನೆಟ್ಟಿಗರು, ', ಕಿಲ್ಲಿಂಗ್ ಸ್ಟಾರ್ ಕೇಸೂ ಇವ್ಳಿಗೇ ಕೊಡಿ ಎನ್ನುತ್ತಿದ್ದಾರೆ. ಇದೊಂದು ಸೀರಿಯಲ್​ ಎನ್ನುವುದನ್ನೂ ಮರೆತು ಹಲವು ಮಂದಿ ಕಮೆಂಟ್​ ಮೂಲಕ ಇವಳಿಗೇ ನಟನ ಕೇಸ್​ ಕೊಡಬೇಕು ಎನ್ನುತ್ತಿದ್ದಾರೆ. 

ಬೆತ್ತಲಾದರೂ ಬರಲ್ಲ ಇಷ್ಟು ಡಿಮಾಂಡ್​! ಆಲಿಯಾ ಫುಲ್​ಡ್ರೆಸ್​ ಡೀಪ್​ಫೇಕ್​ ವಿಡಿಯೋಗೆ 2 ಕೋಟಿ ವೀಕ್ಷಣೆ

click me!