ಗಟ್ಟಿಮೇಳ ಕ್ಲೈಮ್ಯಾಕ್ಸ್​: ಅಂತಿಮ ಸಂಚಿಕೆಯಲ್ಲಿ ವೇದಾಂತ್​ಗೆ ವಿಷ ಹಾಕಿದ ಸುಹಾಸಿನಿ-ಮುಂದೆ?

Published : Jan 05, 2024, 12:48 PM IST
ಗಟ್ಟಿಮೇಳ ಕ್ಲೈಮ್ಯಾಕ್ಸ್​: ಅಂತಿಮ ಸಂಚಿಕೆಯಲ್ಲಿ ವೇದಾಂತ್​ಗೆ ವಿಷ ಹಾಕಿದ ಸುಹಾಸಿನಿ-ಮುಂದೆ?

ಸಾರಾಂಶ

ಗಟ್ಟಿಮೇಳ ಸೀರಿಯಲ್​ ಅಂತಿಮ ಘಟ್ಟ ತಲುಪಿದ್ದು, ಕ್ಲೈಮ್ಯಾಕ್ಸ್​ ಪ್ರೊಮೋ ಬಿಡುಗಡೆಯಾಗಿದೆ. ಇದರಲ್ಲಿ ವೇದಾಂತ್​ಗೆ ವಿಷ ಹಾಕಲಾಗಿದೆ. ಮುಂದೇನು?   

ಕಾಣೆಯಾದ ವೇದಾಂತೂ ಬಂದಾಯ್ತು, ಸತ್ತು ಹೋಗಿದ್ದಾನೆ ಎನ್ನುವ ವಿಕ್ಕಿಯೂ ಬದುಕಿದ್ದಾಯ್ತು... ಇನ್ನೇನು ಗಟ್ಟಿಮೇಳ ಸೀರಿಯಲ್​ ಹ್ಯಾಪ್ಪಿ ಎಂಡಿಂಗ್​ ಆಗುತ್ತದೆ ಎನ್ನುವಷ್ಟರಲ್ಲಿಯೇ ಪ್ರೇಕ್ಷಕರ ಉಸಿರು ಬಿಗಿಹಿಡಿಯುವ ಕ್ಲೈಮ್ಯಾಕ್ಸ್​ ಈ ಸೀರಿಯಲ್​ಗೆ ಸಿಗುತ್ತಿದೆ. ಇಂದು ಅಂದರೆ ಜನವರಿ 5ರಂದು ಗಟ್ಟಿಮೇಳ ಸೀರಿಯಲ್​ ಖುಷಿಖುಷಿಯಾಗಿ ಮುಗಿಯಲಿದೆ ಎನ್ನುವ ಹೊತ್ತಿಗೆ ಸೀರಿಯಲ್​ ಪ್ರಿಯರಿಗೆ ಬರಸಿಡಿಲು ಬಡಿಯುವಂಥ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದೆ. ವೇದಾಂತ್​, ವಿಕ್ಕ ಮತ್ತು ಅಮ್ಮ ವೈದೇಹಿಯ ಮಿಲನ ಆಗಿ ಎಲ್ಲರೂ ಖುಷಿಯಿಂದ ಇರುವ ಹೊತ್ತಿನಲ್ಲಿಯೇ ವೇದಾಂತ್​ಗೆ ವಿಷದ ಊಟ ಇಕ್ಕಿದ್ದಾಳೆ ಚಿಕ್ಕಮ್ಮ ಸುಹಾಸಿನಿ... ವೈದೇಹಿ ಮತ್ತು ಸೂರ್ಯನಾರಾಯಣ ವಶಿಷ್ಠ ದಂಪತಿಯ ಷಷ್ಠಿ ಪೂರ್ತಿ ಕಾರ್ಯ ಇರುವಾಗಲೇ ಸುಹಾನಿಸಿ ಊಟಕ್ಕೆ ವಿಷ ಹಾಕಿದ್ದು, ಅದನ್ನು ವೇದಾಂತ್​ ತಿನ್ನುವಂತೆ ತೋರಿಸಲಾಗಿದೆ. ಹಾಗಿದ್ರೆ ಮುಂದೇನು? 

ಮುಂದೇನು ಎನ್ನುವುದನ್ನು ಟಿ.ವಿಯಲ್ಲಿ ನೋಡಿಯೇ ತಿಳಿಯಬೇಕು. ಅಷ್ಟಕ್ಕೂ ವೇದಾಂತ್​ ಸಾಯಲು ಸಾಧ್ಯವೇ ಇಲ್ಲ, ಇದನ್ನು ವೀಕ್ಷಕರಿಗೆ  ಹೆದರಿಸಲು ತೋರಿಸಲಾಗುತ್ತಿದೆಯಷ್ಟೇ ಎನ್ನುವುದು ಅಭಿಮಾನಿಗಳ ಮಾತು. ಸುಹಾಸಿನಿ ಜೈಲು ಸೇರಲು ಒಂದು ಕಾರಣ ಬೇಕು, ಅದಕ್ಕಾಗಿಯೇ ಈ ರೀತಿ ತೋರಿಸಲಾಗಿದೆ ಎನ್ನಲಾಗುತ್ತಿದ್ದರೂ ಅಭಿಮಾನಿಗಳು ಪ್ರೊಮೋ ನೋಡಿ ಬೆಚ್ಚಿಬಿದ್ದಿದ್ದಂತೂ ನಿಜ. 

ಮುಖದ ಮೇಲೊಂದು ಮಚ್ಚೆ, ಪ್ರೇಮ ಸ್ಥಾನದಲ್ಲಿ ತೂತು... ಬಿಗ್​ಬಾಸ್​ ನಮ್ರತಾ ಭವಿಷ್ಯ ಹೇಗಿದೆ?

ಅಷ್ಟಕ್ಕೂ ಕೆಲ ತಿಂಗಳು ಸೀರಿಯಲ್​ನಲ್ಲಿ  ವೇದಾಂತ್​ ಮತ್ತು ವಿಕ್ಕಿಯನ್ನು ನೋಡದೇ ಅಭಿಮಾನಿಗಳು ಬೇಸರಿಸಿದ್ದು ಇದೆ. ವೇದಾಂತ್​ ಅಂದರೆ ರಕ್ಷ್ ರಾಮ್ ಅವರು ಇಷ್ಟು ದಿನ ಸೀರಿಯಲ್​ನಲ್ಲಿ ಮಿಸ್​ ಆಗಿರುವ ಹಿಂದೆ ಕಾರಣವೂ ಇದೆ. ಅದೇನೆಂದರೆ ಅವರು ಹಿರಿತೆರೆಗೆ ಕಾಲಿಟ್ಟಿದ್ದಾರೆ.  ಅವರು ‘ಬರ್ಮ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಬಹದ್ದೂರ್’, ‘ಭರ್ಜರಿ’ ನಿರ್ದೇಶಕ ಚೇತನ್ ಕುಮಾರ್ ಅವರು ‘ಬರ್ಮ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.   ಶೂಟಿಂಗ್​ನಲ್ಲಿ ಬಿಜಿಯಾಗಿದ್ದ ಅವರು ಕೊನೆಯ ಎಪಿಸೋಡ್​ನಲ್ಲಿ ಹಾಜರಾಗಿರುವುದು ಪ್ರೇಕ್ಷಕರ ಖುಷಿಗೆ ಕಾರಣವಾಗಿದೆ. ಅದೇ ರೀತಿ,  ವಿಕ್ಕಿ ಇಲ್ಲದೇ ಇದ್ದರೆ ಹೇಗೆ ಎನ್ನುವ ಕೊರಗನ್ನೂ ಇದಾಗಲೇ ನಿರ್ದೇಶಕರು ಬಗೆಹರಿಸಿದ್ದಾರೆ. ಕೊಲೆಯಾಗಿದ್ದಾನೆ ಎನ್ನಲಾಗಿದ್ದ ವಿಕ್ಕಿ ಮತ್ತೆ ಮರಳಿದ್ದಾನೆ. ವಿಕ್ಕಿ ಮತ್ತು ಅಮ್ಮನ ಮಿಲನವೂ ಆಗಿದ್ದು, ಪ್ರೇಕ್ಷಕರಿಗೆ ಡಬಲ್​ ಖುಷಿ ಕೊಟ್ಟಿದೆ.  ಸುಹಾಸಿನಿಯ ಕುತಂತ್ರದಿಂದ ವಿಕ್ಕಿ ಅಪಘಾತದಲ್ಲಿ ಸಾಯುವಂತೆ ತೋರಿಸಲಾಗಿತ್ತು. ಆದರೆ ಹೆಣದ ಮುಖ ತೋರಿಸದ ಕಾರಣ, ವಿಕ್ಕಿ ಸಾಯಲಿಲ್ಲ ಎನ್ನುವುದು ಅಭಿಮಾನಿಗಳ ಅನಿಸಿಕೆಯಾಗಿತ್ತು. ಅಷ್ಟಕ್ಕೂ ವಿಕ್ಕಿಯನ್ನು ಹೀಗೆ ಸಾಯಿಸಿರುವುದಕ್ಕೂ ಕಾರಣವಿದೆ. ಅದೇನೆಂದರೆ, ಅತ್ತ ಸುಹಾಸಿನಿ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿದಂತೆಯೂ ಆಯಿತು, ಇತ್ತ ವಿಕ್ಕಿ ಅಂದರೆ  ಅಭಿಷೇಕ್  ಅವರೂ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದರು. ಇದೇ  ಕಾರಣಕ್ಕೆ   ಅವರ ಕೊಲೆಯಾಗಿದೆ ಎಂದು ತೋರಿಸಲಾಗಿತ್ತು.  ಇದೀಗ ಅವರ ಎಂಟ್ರಿ ಕೂಡ ಆಗಿದೆ.

ಇಷ್ಟೆಲ್ಲಾ ಖುಷಿಯ ನಡುವೆ ಸುಹಾಸಿನಿ ಮಾತ್ರ ಇದುವರೆಗೆ ಅರೆಸ್ಟ್ ಆಗಲಿಲ್ಲ, ಆಕೆಯ ವಿರುದ್ಧ ಇನ್ನೂ ಮನೆಯವರು ಸಾಫ್ಟ್​ ಕಾರ್ನರ್​ ತೋರಿಸುತ್ತಿರುವುದು ಸರಿಯಲ್ಲ, ಮನೆಯವರಿಗೆ ಅಷ್ಟೂ ಬುದ್ಧಿ ಬೇಡ್ವಾ, ಕೊಲೆ ಪ್ರಯತ್ನ, ಅಪಹರಣ ಎಲ್ಲಾ ಮಾಡಿಸಿದ್ದರೂ ಮನೆಯವರು ಆಕೆಯ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳದೇ ಇರುವುದು ವಿಚಿತ್ರ ಎನಿಸುತ್ತದೆ ಎಂದೆಲ್ಲಾ ಸೀರಿಯಲ್​ ಪ್ರೇಮಿಗಳು ಕಮೆಂಟ್​  ಮೂಲಕ ಹೇಳುತ್ತಿದ್ದುದುಂಟು. ಇದೀಗ ಕೊನೆಯದಾಗಿ ಮನೆಯ ಮಗನಿಗೇ ವಿಷ ಹಾಕಿದ್ದಾಳೆ. ಮುಂದೇನಾಗುತ್ತದೆ ಎನ್ನುವುದು ಈಗಿರುವ ಕುತೂಹಲ. ಸೀರಿಯಲ್​ ಮುಕ್ತಾಯ ಆಗುತ್ತಿರುವುದಕ್ಕೆ ಹಲವು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದು, ನಮ್ಮ-ನಿಮ್ಮ ಸಂಬಂಧ ಮುಗಿಯಿತು ಎನ್ನುತ್ತಿದ್ದಾರೆ. 

ತಾವೇ ಬೀಸಿದ ಗಾಳಕ್ಕೆ ಬಿದ್ದುಬಿಟ್ಟರಾ ನಟಿ ಜಾಕ್ವೆಲಿನ್​? ಸುಕೇಶ್​ ಜೊತೆಗಿನ ಚಾಟ್​ಗಳು ತನಿಖಾಧಿಕಾರಿಗಳ ಕೈಗೆ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ
ಹೊಸ ವರ್ಷಕ್ಕೆ ಮತ್ತೆ ಜೊತೆಯಾದ Shreerastu Shubhamastu ತಂಡ: ವೈಬ್ಸ್​ ಹೇಗಿದೆ ನೋಡಿ