ಕಳಪೆ-ಉತ್ತಮ ಯಾರು ಎಂಬ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಏನು ಎಂಬುದರ ಕುರಿತು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ನೀಡಲಾಗಿದೆ. ಕಾರ್ತಿಕ್ ಅವರು ವರ್ತೂರು ಸಂತೋಷ್ ಗೆ ಕಳಪೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ವಾರಾಂತ್ಯ ಸಮೀಪಿಸುತ್ತಿರುವ ಹಾಗೆಯೇ ಕಳಪೆ ಉತ್ತಮ ಅನ್ನೋ ಹಾವು ಏಣಿ ಆಟ ಮತ್ತೆ ಶುರುವಾಗಿದೆ. ಈ ವಾರ ಬಹುಮಾನದ ಮೊತ್ತವನ್ನು ಗಳಿಸುವ ಟಾಸ್ಕ್ ಅನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಿತ್ತು. ಈ ಟಾಸ್ಕ್ ಗಳಲ್ಲಿ ಆಡುವ ಅವಕಾಶಕ್ಕಾಗಿ ಮಾತಿನ ಚಕಮಕಿಗಳೂ ನಡೆದಿದ್ದವು. ಈಗ ಅವೆಲ್ಲ ಮುಗಿದು ಈ ವಾರದ ಕಳಪೆ ಯಾರು? ಉತ್ತಮ ಯಾರು ಎಂಬುದನ್ನು ನಿರ್ಧರಿಸುವ ಹಂತ ಬಂದಿದೆ.
ಕಳಪೆ-ಉತ್ತಮ ಯಾರು ಎಂಬ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಏನು ಎಂಬುದರ ಕುರಿತು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ನೀಡಲಾಗಿದೆ. ಕಾರ್ತಿಕ್ ಅವರು ವರ್ತೂರು ಸಂತೋಷ್ ಗೆ ಕಳಪೆ ನೀಡಿದ್ದರೆ, ತನಿಷಾ, ಮೈಕಲ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಮನೆಯ ಸದಸ್ಯರ ಬಾಯಲ್ಲಿ ಮೈಕಲ್ ಮತ್ತು ವರ್ತೂರು ಸಂತೋಷ್ ಹೆಸರೇ ಹೆಚ್ಚು ಸಲ ಬಂದಂತಿದೆ.
ಪ್ರತಾಪ್‌ಗೆ ಪ್ಯಾನಿಕ್ ಪಟ್ಟ ಕಟ್ಟಿದ ಸಂಗೀತಾ-ನಮ್ರತಾ; ಒಪ್ಪಿಕೊಂಡ ಪ್ರತಾಪ್ ರಿಯಾಕ್ಷನ್ ನೋಡಿ!
ಇದಕ್ಕೆ ಪ್ರತಿಕ್ರಿಯಿಸಿರುವ ವರ್ತೂರು, 'ಐದು ಲಕ್ಷದ ಟಾಸ್ಕ್ ನಲ್ಲಿ ರಿಸ್ಕ್ ತೆಗೆದುಕೊಂಡು ಆಡಿದ್ದೀನಿ.ನಾನೇನೂ ಸ್ಫೋರ್ಟ್ಸ್ ಫೀಲ್ಡಿಂದ ಬಂದವನಲ್ಲ, ಆದರೆ ಎತ್ತು, ದನಗಳನ್ನು ಪರಿಗಣಿಸಿದರೆ ಸ್ಫೋರ್ಟ್ಸ್ ಹುಟ್ಟುಹಾಕಿದ್ದೇ ನಾವು' ಎಂದು ಖಡಕ್ಕಾಗಿ ಹೇಳಿದ್ದಾರೆ. ಒಟ್ಟಾರೆ ಈ ವಾರದ ಕಳಪೆ ಯಾರು ಮತ್ತು ಉತ್ತಮ ಯಾರು ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಅದಕ್ಕೆ ಉತ್ತರ ಸಿಗಲು ಇಂದಿನ ಬಿಗ್ ಬಾಸ್ ಎಪಿಸೋಡ್ ವೀಕ್ಷಿಸಬೇಕು.
ಮದುವೆಯಾಗದ ಅನುಶ್ರೀ ಮಡಿಲಲ್ಲಿ ಪುಟ್ಟ ಮಗು; ಏನ್ರೀ ಇದೂ ಅಂತಿದಾರೆ ಫ್ಯಾನ್ಸ್!
ಅಂದಹಾಗೆ, ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು. ಶನಿವಾರ-ಭಾನುವಾರದ ಸಂಚಿಕೆಗಳನ್ನು ರಾತ್ರಿ 9.00ಕ್ಕೆ ಕಲರ್ಸ್ ಕನ್ನಡದಲ್ಲಿ ನೋಡಬಹುದು.
ಕುಂಟುತ್ತ ರಾಮಾಚಾರಿ ಮನೆಗೆ ಬಂದ ಕಿಟ್ಟಿ; ಚಾರು ಮೈ-ಕೈ ಮುಟ್ಟಲು ಕಿಟ್ಟಿಗೆ ಶಾಕ್!