
ಕನ್ನಡ ಚಿತ್ರರಂಗದ ಅದ್ಭುತ ನಟ, ನಿರ್ದೇಶಕ ಹಾಗೂ ನಿರೂಪಕನಾಗಿರುವ ಮಾಸ್ಟರ್ ಆನಂದ್ 40ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲೂ ಆನಂದ್ ಸಖತ್ ಯಂಗ್ ಆಗಿ ಕಾಣಿಸಿಕೊಳ್ಳುವ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಆನಂದ್ ವಯಸ್ಸನ್ನು ನೆಟ್ಟಿಗರು ಆಗಾಗ ಗೆಸ್ ಮಾಡುತ್ತಾರೆ. ಕಂಪ್ಲೀಟ್ ಆಗಿರುವ ವಯಸ್ಸು ಹೇಳ್ಬೇಕಾ ಅಥವಾ ಈಗ ಬಿದ್ದಿರುವ ವಯಸ್ಸು ಹೇಳ್ಬೇಕಾ ಅನ್ನೋ ಗೊಂದಲ ಕೂಡ ಇದೆ. ಪುತ್ರಿ ವಂಶಿಕಾ ಜೊತೆ ವಿಡಿಯೋ ಮಾಡಿ ಫುಲ್ ಕ್ಲಾರಿಟಿ ಕೊಟ್ಟಿದ್ದಾರೆ.
'ಅಪ್ಪ ಇವತ್ತು ನಿಮ್ಮ ಹುಟ್ಟುಹಬ್ಬ ವಯಸ್ಸು ಎಷ್ಟು?' ಎಂದು ವಂಶಿಕಾ ಪ್ರಶ್ನೆ ಮಾಡುತ್ತಾಳೆ. ನನ್ನ ವಯಸ್ಸು ಹೇಳಬೇಕು ಅಂದ್ರೆ ಮ್ಯಾಥಮೆಟಿಕ್ಸ್ ಮಾಡೋಣ. ಕುಳ್ಳಿ ನಿಂಗೆ ಮ್ಯಾಥ್ಸ್ ಇಷ್ಟ ಅಲ್ವಾ? ಈಗ ವಂಶಿಕಾಗೆ ಎರಡು ಲಿಪ್ಸ್ (ತುಟಿ) ಇದೆ...ಅಪ್ಪಂಗೂ ಎರಡು ಇದೆ. ಒಟ್ಟು ನಾಲ್ಕು ಆಗುತ್ತೆ ಅದು ಡ್ಯಾಡಿ ಹುಟ್ಟಿದ ದಿನಾಂಕ. ಈ ನಾವಿಬ್ಬರೂ ನಾಲ್ಕರ ಮಗ್ಗಿ ಹೇಳಬೇಕು. ಎಲ್ಲರಂತೆ ಮಾಮೂಲಿ ಹೇಳುವುದು ಅಲ್ಲ' ಎಂದು ಮಾತನಾಡುತ್ತಾ ಮಗ್ಗಿಯನ್ನು ವಿಭಿನ್ನ ಶೈಲಿಯಲ್ಲಿ ಆನಂದ್ ಹೇಳುತ್ತಾರೆ.
ಸಾಫ್ಟ್‌ವೇರ್ ಹುಡುಗ ಬೇಕಿತ್ತು, ಇವರೊಟ್ಟಿಗೆ ಹೊಂದಿಕೊಳ್ಳಲು ತುಂಬಾ ಕಷ್ಟ ಆಯ್ತು: ಮಾಸ್ಟರ್ ಆನಂದ್ ಪತ್ನಿ
ಆನಂದ್ ಮತ್ತು ಪುತ್ರಿ ವಂಶಿಕಾ ಮೂಗು ಮತ್ತು ತುಟ್ಟಿ ತಾಗಿಸಿಕೊಂಡು ನಾಲ್ಕರ ಮಗ್ಗಿ ಹೇಳುತ್ತಾರೆ.. 10ಕ್ಕೆ ನಿಲ್ಲಿಸಿದ್ದಾಗ ವಯಸ್ಸು 40 ಎಂದು ವಂಶಿ ಗೆಸ್ ಮಾಡುತ್ತಾರೆ. 'ಈಗಲೂ ನನಗೆ ಕನ್ಫ್ಯೂಷನ್ ಇದೆ. ಡ್ಯಾಡಿ ಹುಟ್ಟಿದ್ದು ____ ಈಗ 2024. ಈಗಷ್ಟೇ 2024ಗೆ ಕಾಲಿಟ್ಟಿರುವುದು ಹೀಗಾಗಿ..ಕಂಪ್ಲೀಟ್ ಆಗಿರುವುದು 39ನೇ ವಯಸ್ಸು, ಶುರುವಾಗುತ್ತಿರುವುದು 40 ವಯಸ್ಸು. ಈಗ ನಿಮ್ಮ ವಯಸ್ಸು ಎಷ್ಟು ಅಂತ ಕೇಳಿದಾಗ ಯಾವುದು ಹೇಳಬೇಕು?' ಎಂದು ಆನಂದ್ ಹೇಳಿದ್ದಾರೆ.
ಇವತ್ತಿದ್ದಂಗೆ ನಾಳೆ ಇರೋಲ್ಲ, ಮದ್ವೆ ಆದ್ಮೇಲೆ ಸೀರಿಯಲ್ ಮಾಡೋಕೆ ಯೋಚಿಸಬೇಕು: ಮಾಸ್ಟರ್ ಆನಂದ್
ಈ ವಿಡಿಯೋವನ್ನು ಆನಂದ್ ಪತ್ನಿ ಯಶಸ್ವಿನಿ ಪೋಸ್ಟ್ ಮಾಡಿದ್ದಾರೆ. 'ಹ್ಯಾಪಿ ಬರ್ತಡೇ. ನಿಮಗೂ ಇದೇ ತರ ಗೊಂದಲ ಇದ್ಯಾ?ನೀವು ನಿಮ್ಮ ಮಗ ಅಥವಾ ಮಗಳ ಜೊತೆ ಇದೇ ತರ ವಿಡಿಯೋ ಮಾಡಿ. ಕನ್ಫ್ಯೂಷನ್‌ನ ಕ್ಲಿಯರ್ ಮಾಡಿ ಓಕೆ' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.