ಹಿರಿಯರು ಬಂದಾಗ ಕೂತ್ಕೋಳಿ ಎನ್ನೋ ಕನಿಷ್ಠ ಪ್ರಜ್ಞೆ ಯಾರಲ್ಲೂ ಇಲ್ವಾ? ಡೈರೆಕ್ಟರ್​ಗೂ ನೆಟ್ಟಿಗರ ಕ್ಲಾಸ್​

Published : May 21, 2024, 04:19 PM IST
ಹಿರಿಯರು ಬಂದಾಗ ಕೂತ್ಕೋಳಿ ಎನ್ನೋ ಕನಿಷ್ಠ ಪ್ರಜ್ಞೆ ಯಾರಲ್ಲೂ ಇಲ್ವಾ? ಡೈರೆಕ್ಟರ್​ಗೂ ನೆಟ್ಟಿಗರ ಕ್ಲಾಸ್​

ಸಾರಾಂಶ

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಜನಾರ್ದನನ ಹೆಡೆಮುರಿ ಕಟ್ಟಲು ದತ್ತ ಬಂದಿದ್ದಾನೆ. ಆದರೆ ನೆಟ್ಟಿಗರು ಇಲ್ಲಿ ಬೇರೆಯದ್ದೇ ವಿಷಯ ಪ್ರಸ್ತಾಪಿಸಿದ್ದಾರೆ. ಏನದು?  

ಪೂರ್ಣಿಯೇ ತನ್ನ ಮಗಳು ಎಂದು ಜನಾರ್ದನ ಹೇಳಿ, ಆಕೆಯನ್ನೂ ಒಪ್ಪಿಸಿಯಾಗಿದೆ. ಮುಗ್ಧೆ ಪೂರ್ಣಿ ನಿಜವಾಗಿಯೂ ಜನಾರ್ದನನ ಮಗಳೋ ಅಲ್ಲವೋ ಗೊತ್ತಿಲ್ಲ. ಆದರೆ ಜನಾರ್ದನ ಹೇಳಿದ್ದನ್ನು ನಂಬಿದ್ದಾಳೆ. ಅಷ್ಟಕ್ಕೂ ಇವಳೇ ತನ್ನ ಮಗಳು ಎಂದು ಬಿಂಬಿಸೋ ಹಿಂದಿರುವುದು ಮೊದಲ ಮಗಳ ಹೆಸರಿನಲ್ಲಿ ಇರುವ ಆಸ್ತಿ ಎಂದು ಯಾರಿಗೂ ತಿಳಿಯದ ವಿಷಯವಾಗಿದೆ.  ಆಸ್ತಿಗಾಗಿ ಅಪ್ಪ ಜನಾರ್ದನ ಮತ್ತು ಮಗಳು ದೀಪಿಕಾ ಸೇರಿ ಕುತಂತ್ರ ಮಾಡಿದ್ದಾರೆ. ಅನಾಥೆಯಾಗಿದ್ದ ಪೂರ್ಣಿಯನ್ನೇ ತನ್ನ ಹೆತ್ತ ಮಗಳು ಎಂದು ಎಲ್ಲರನ್ನೂ ನಂಬಿಸಿದ್ದಾನೆ ಜನಾರ್ದನ.  ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವ ಹಾಗೆ, ಇಷ್ಟು ದಿನ ಪೂರ್ಣಿಯನ್ನು ಅನಾಥೆ ಎಂದು ಹೀಯಾಳಿಸುತ್ತಿದ್ದ ದೀಪಿಕಾ ಕೂಡ ಅಕ್ಕ ಅಕ್ಕ ಕ್ಷಮಿಸು ಎನ್ನುತ್ತಾ ನಾಟಕವಾಡುತ್ತಿದ್ದಾಳೆ.

ಅದರೆ ಜನಾರ್ದನನ ಮೇಲೆ ಈಗ ಎಲ್ಲರಿಗೂ ಯಾಕೋ ಡೌಟು ಶುರುವಾಗಿದೆ. ಲಾಯರ್​ ಬಂದು ಈಕೆಯೇ ನಿನ್ನ ಮಗಳು ಎಂದು ಸಾಬೀತು ಮಾಡು ಎಂದಾಗ ಈ ವಿಷಯದಲ್ಲಿ ಲಾಯರ್​ ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಆ ಸಮಯದಲ್ಲಿ ಸಂಪೂರ್ಣ ಸತ್ಯ ಅಲ್ಲದಿದ್ದರೂ ಕೆಲವೊಂದಷ್ಟನ್ನು ಜನಾರ್ದನ ಬಾಯಿ ಬಿಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ. ಪೂರ್ಣಿಯ ಅಜ್ಜಿಯ ಒಡವೆ ಪೂರ್ಣಿಗೆ ಸೇರಬೇಕು, ಅದಕ್ಕಾಗಿ ಅವಳೇ ಮಗಳು ಎನ್ನುವುದನ್ನು ಸಾಬೀತು ಮಾಡಬೇಕಿದೆ ಎಂದಿದ್ದಾನೆ. ಇಷ್ಟು ಹೇಳುತ್ತಿದ್ದಂತೆಯೇ ಮಾಧವ, ತುಳಸಿಗೆ ಅನುಮಾನ ಶುರುವಾಗಿದೆ. ಮಾತ್ರವಲ್ಲದೇ ಖುದ್ದುಪತಿಯ ಮೇಲೆ ಪತ್ನಿ ಪಂಕಜಗೂ ಅನುಮಾನ ಬಂದಿದೆ. ಪೂರ್ಣಿ ನಿಜವಾದ ಮಗಳು ಹೌದೋ ಅಥವಾ ಆಸ್ತಿಗಾಗಿ ಗಂಡ ಹೀಗೆಲ್ಲಾ ಮಾಡುತ್ತಿದ್ದಾನೋ ಎನ್ನುವ ಗೊಂದಲದಲ್ಲಿ ಪಂಕಜಾ ಇದ್ದಾಳೆ.

ಸೆಕೆಂಡ್​ಹ್ಯಾಂಡ್​ ಬಟ್ಟೆ ಹಾಕೋ ಅಕ್ಷಯ್​ ಪುತ್ರ: ಆರವ್​ ಜೀವನದ ಇಂಟರೆಸ್ಟಿಂಗ್​ ವಿಷ್ಯ ಬಿಚ್ಚಿಟ್ಟ ನಟ

ಇದೇ ವೇಳೆ ಜನಾರ್ದನನ್ನು ಜರಾಸಂಧ ಎಂದೇ ಕರೆಯುತ್ತ ತಾತ ದತ್ತನ ಎಂಟ್ರಿಯಾಗಿದೆ. ಅಷ್ಟಕ್ಕೂ ಈತನನ್ನು ಕರೆದುಕೊಂಡು ಬಂದಿದ್ದು ವಕೀಲರು. ಜನಾರ್ದನನ ಬಣ್ಣ ದತ್ತನಿಗೆ ಇದಾಗಲೇ ಚೆನ್ನಾಗಿ ಅರಿವಾಗಿದೆ. ಅದಕ್ಕಾಗಿಯೇ ಸತ್ಯ ತಿಳಿದುಕೊಳ್ಳಲು ಪ್ಲ್ಯಾನ್​ ಮಾಡಿದ್ದಾನೆ. ದತ್ತನ ಎಂಟ್ರಿ ಆಗುತ್ತಿದ್ದಂತೆಯೇ ಜನಾರ್ದನನಿಗೆ ಶಾಕ್​ ಆಗಿದೆ. ತನ್ನ ಬಣ್ಣ ಎಲ್ಲಿ ಬಯಲಾಗುವುದೋ ಎನ್ನುವುದು ಅವನಿಗೆ ಇರುವ ಆತಂಕ.  ಆದರೆ ಸತ್ಯ ಈಗ ಹೊರಬರುತ್ತದೆ ಎಂದು ತುಳಸಿಗೆ ಖುಷಿಯಾಗಿದೆ.

ಆದರೆ ಇದರ ಮಧ್ಯೆಯೇ, ನೆಟ್ಟಿಗರು ಕ್ಲಾಸ್​  ತೆಗೆದುಕೊಳ್ತಿದ್ದಾರೆ. ಅದಕ್ಕೆ ಕಾರಣ, ಮನೆಯಲ್ಲಿ ಎಲ್ಲರೂ ಕುಳಿತುಕೊಂಡಿದ್ದಾರೆ. ಆದರೆ ವಯಸ್ಸಿನಲ್ಲಿ ತುಂಬಾ ಹಿರಿಯನಾಗಿರುವ ದತ್ತ ನಿಂತುಕೊಂಡೇ ಇದ್ದಾರೆ. ಒಬ್ಬರೂ ಕುಳಿತುಕೊಳ್ಳಿ ಎಂದು ಹೇಳಲಿಲ್ಲ. ಕೊನೆಯ ಪಕ್ಷ ತುಳಸಿ ಕೂಡ ಹೇಳದೇ ಇರುವುದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ದೊಡ್ಡವರು ಬಂದಾಗ ಕುಳಿತುಕೊಳ್ಳಿ ಎಂದು ಹೇಳುವ ಕನಿಷ್ಠ ಪ್ರಜ್ಞೆಯೂ ಯಾರಲ್ಲೂ ಇಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಇದೇ ವೇಳೆ ನಿರ್ದೇಶಕರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸುತ್ತಿರುವ ಶ್ರೀರಸ್ತು ಶುಭಮಸ್ತು ಫ್ಯಾನ್ಸ್​, ಈ ರೀತಿ ಹಿರಿಯರ ಬಗ್ಗೆ ಅಗೌರವ ತೋರುವುದು ಸರಿಯಲ್ಲ. ಅವರು ನಿಂತುಕೊಂಡೇ ಮಾತನಾಡುತ್ತಿದ್ದರೂ ಎಲ್ಲರೂ ಆರಾಮದಲ್ಲಿ ಕುಳಿತುಕೊಂಡಿರುವುದು ಸರಿಯಲ್ಲ ಎನ್ನುತ್ತಿದ್ದಾರೆ. 

ಮುತ್ತು ಕೊಡೋದು ಹೇಗೆ ಅಂತನೇ ಗೊತ್ತಿರ್ಲಿಲ್ಲ... ಪುಟ್ಟಗೌರಿ ಮದ್ವೆಯಲ್ಲಿ ಕಿಸ್​ ಮಾಡಿ ಅಂದಾಗ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?