Influenza B virus ಸೋಂಕಿಗೆ ಒಳಗಾದ ಖ್ಯಾತ ನಟಿ; ಮಕ್ಕಳಿಂದ ದೂರ ಇರಬೇಕೆಂದು ಅಳಲು ತೋಡಿಕೊಂಡ ಡೆಬಿನಾ

Published : Mar 01, 2023, 02:49 PM IST
Influenza B virus ಸೋಂಕಿಗೆ ಒಳಗಾದ ಖ್ಯಾತ ನಟಿ; ಮಕ್ಕಳಿಂದ ದೂರ ಇರಬೇಕೆಂದು ಅಳಲು ತೋಡಿಕೊಂಡ ಡೆಬಿನಾ

ಸಾರಾಂಶ

ಹಿಂದಿ ಕಿರುತೆರೆಯ ಖ್ಯಾತ ನಟಿ ಡೆಬಿನಾ ಬ್ಯಾನರ್ಜಿ ಇನ್ಫ್ಲುಯೆಂಜಾ ಬಿ ವೈರಸ್ ಸೋಂಕಿಗೆ ಒಳಗಾಗಿರುವುದಾಗಿ ಬಹಿರಂಗ ಪಡಿಸಿದ್ದಾರೆ. 

ಇತ್ತೀಚೆಗಷ್ಟೆ ನಟಿ ಸಮಂತಾ ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ಸ್ಯಾಮ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ, ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಖ್ಯಾತ ನಟಿ ಮಮತಾ ಮೋಹನದಾಸ್ ಕೂಡ ಚರ್ಮ ರೋಗದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಚರ್ಮದ ಮಾಸುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದರು. ಇದೀಗ ಮತ್ತೋರ್ವ ಖ್ಯಾತ ನಟಿ  ಇನ್ಫ್ಲುಯೆಂಜಾ ಬಿ ವೈರಸ್ ಸೋಂಕಿಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದ ಮಕ್ಕಳಿಂದನೂ ದೂರ ಇರುವಂತಾಗಿದೆ ಎಂದು ನಟಿ ಬಹಿರಂಗಪಡಿಸಿದ್ದಾರೆ.  ಅದು ಮತ್ಯಾರು ಅಲ್ಲ ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ ಡೆಬಿನಾ ಬ್ಯಾನರ್ಜಿ. 

ನಟಿ ಡೆಬಿನಾ ಬ್ಯಾನರ್ಜಿ ಇನ್ಫ್ಲುಯೆಂಜಾ ಬಿ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ಸೋಂಕು ಪತ್ತೆಯಾದ ನಂತರ ತನ್ನ ಮಕ್ಕಳಿಂದನೂ ದೂರ ಇರುವಂತೆ ಆಗಿದೆ. ಇತ್ತೀಚೆಗಷ್ಟೆ ಡೆಬಿನಾ ವಿದೇಶಿ ಪ್ರವಾಸಕ್ಕೆ ಹೋಗಿದ್ದ ಫೋಟೋಗಳನ್ನು ಶೇರ್ ಮಾಡಿದ್ದರು. ಇಬ್ಬರೂ ಮುದ್ದು ಮಕ್ಕಳಾದ ಲಿಯಾನಾ ಮತ್ತು ದಿವಿಶಾ ಜೊತೆ ಶ್ರೀಲಂಕಾ ಪ್ರವಾಸ ಎಂಜಾಯ್ ಮಾಡಿದ್ದರು. ಗುರ್ಮಿತ್ ಚೌಧರಿ ಜೊತೆ ವಿದೇಶಕ್ಕೆ ಹಾರಿದ್ದರು. ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಪ್ರೇಮಿಗಳ ದಿನದ ಸಮಯಲ್ಲಿ ಶ್ರೀಲಂಕಾಗೆ ಹೋಗಿದ್ದರು. ಇದೀಗ ಇನ್ಫ್ಲುಯೆಂಜಾ ಬಿ ವೈರಸ್‌ನಿಂದ ಬಳಲುತ್ತಿದ್ದಾರೆ. 

ಈ ಬಗ್ಗೆ ನಟಿ ಡೆಬಿನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಬ್ಲಡ್ ಟೆಸ್ಟ್ ಮಾಡಿಸಿದ ರಿಪೋರ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿ ನ್ಫ್ಲುಯೆನ್ಸ ಬಿ ವೈರಸ್ ಬಂದಿದೆ. ಇದರಿಂದ ನನ್ನ ಮಕ್ಕಳಿಂದ ದೂರ ಇರಬೇಕಾಗಿದೆ' ಎಂದು ಹೇಳಿದ್ದಾರೆ. ಡೆಬಿನಾ ಬಗ್ಗೆ ಆಕೆಯ ವಕ್ತಾರರು ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. 

ಸದ್ಯ ಡೆಬಿನಾ ಚೇತರಿಸಿಕೊಳ್ಳುತ್ತಿದ್ದಾರೆ. ಉತ್ತಮ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಉತ್ತಮ ಆಹಾರ ಸೇವಿಸುತ್ತಿದ್ದಾರೆ. ಮಕ್ಕಳಿಂದ ದೂರ ಇದ್ದಾರೆ. ಮತ್ತು ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಮತ್ತಷ್ಟು ಬಲಶಾಲಿಯಾಗಿ ಬರಲಿದ್ದಾರೆ'  ಎಂದು ಹೇಳಿದ್ದಾರೆ.  

ಹೊಸ ವರ್ಷಾಚರಣೆ ವೇಳೆ ಪತ್ನಿಯನ್ನು ರಕ್ಷಿಸಲು ಹೋಗಿ ಗಾಯಗೊಂಡ ನಟ ಗುರ್ಮೀತ್ ಚೌಧರಿ; ಸಖತ್ ಟ್ರೋಲ್

ಇನ್ಫ್ಲುಯೆಂಜಾ ಬಿ ವೈರಸ್

ಇನ್ಫ್ಲುಯೆಂಜಾ ಬಿ ವೈರಸ್‌ನ ರೋಗ ಲಕ್ಷಣಗಳು ಎಂದರೆ ವಿಪರೀತ ಜ್ವರ, ತಲೆನೋವು, ಕೆಮ್ಮು, ಸಂಪೂರ್ಣ ದೇಹ ನೋವು, ವಾಂತಿ. ಸಂಪೂರ್ಣವಾಗಿ ಸುಸ್ತಾಗಿರುವ ಈ ವೈರಸ್‌ಗೆ ಸರಿಯಾಗಿ ಚಿಕಿತ್ಸೆ ಪಡೆಯಬೇಕು. ಇಲ್ಲವಾಗಿದರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಕೂಡ ಇರುತ್ತದೆ. 

New Mom Debina Bonnerjee Tips: ಗರ್ಭಧಾರಣೆಗಾಗಿ ಫ್ಲವರ್‌ ಥೆರಪಿ ಟ್ರೈ ಮಾಡ್ಬೋದು

ನಟಿ ಡೆಬಿನಾ 2011ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗರ್ಮೀತ್ ಚೌಧರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರು ಈಗ ಇಬ್ಬರೂ ಮಕ್ಕಳ ಪೋಷಕರಾಗಿದ್ದಾರೆ. ಮೊದಲ ಮಗಳು ದಿವಿಶಾ ಜನಿಸಿ ಎಂಟು ತಿಂಗಳಿಗೆಯೇ ಎರಡನೆ ಮಗುವನ್ನು ಸ್ವಾಗತಿಸಿದರು. ಎರಡನೇ ಮಗಗು ಕೂಡ ಹೆಣ್ಣು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ ಆಶೀರ್ವಾದ ಮಾಡಿ ಎಂದು ಹೇಳಿದ್ದರು. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ