ಸೆಲೆಬ್ರಿಟಿ ಕಪಲ್ ನಡುವೆ ಲವ್ ಹೇಗಿದೆ? ರೊಮ್ಯಾಂಟಿಕ್ ಯಾರು? ಯೂಟ್ಯೂಬ್ ಚಾನೆಲ್‌ನಲ್ಲಿ ಉತ್ತರ ಕೊಟ್ಟ ಇಶಿತಾ ಮುರುಗಾ...
ಕನ್ನಡ ಕಿರುತೆರೆ ಜನಪ್ರಿಯ ನಟಿ ಇಶಿತಾ ಮತ್ತು ಸೆಲೆಬ್ರಿಟಿ ಡಾನ್ಸ್ ಕೋರಿಯೋಗ್ರಾಫರ್ ಮುರುಗಾನಂದ ರಾಜಾ ರಾಣಿ ಸೀಸನ್ 1 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಂತರ ಸೆಲೆಬ್ರಿಟಿ ಕಲಪ್ ಆಗಿದ್ದಾರೆ. ಗಿಚ್ಚಿ ಗಿಲಿಗಿಲಿ ಸೀಸನ್ 2 ರಿಯಾಲಿಟಿ ಶೋನಲ್ಲಿ ಮುರುಗಾ ಸ್ಪರ್ಧಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ನೆಟ್ಟಿಗರು ಕೇಳಿರುವ ಪ್ರಶ್ನೆಗೆ ಯುಟ್ಯೂಬ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.
- ಗುಡ್ ನ್ಯೂಸ್ ಯಾವಾಗ?
ಸಮಯ ಕೊಟ್ಟು ನಮ್ಮ ಬಗ್ಗೆ ಯೋಚನೆ ಮಾಡುತ್ತಿರುವುದಕ್ಕೆ ಥ್ಯಾಂಕ್ಸ್. ತುಂಬಾ ಕೆಲಸಗಳಿದೆ ಹೀಗಾಗಿ ಒಂದೆರಡು ವರ್ಷ ಆದ್ಮೇಲೆ ಪ್ಲ್ಯಾನ್ ಮಾಡ್ತೀವಿ.
- ಯಾರಿಗೆ ತುಂಬಾ ಕೋಪ ಬರುತ್ತೆ ಯಾರು ಫಸ್ಟ್ ಕಾಂಪ್ರಮೈಸ್ ಆಗುವುದು?
ಇಶಿಯಾ ಕೋಪ ಮಾಡಿಕೊಳ್ಳುವುದು ಮೊದಲು ಸಾರಿ ಕೇಳುವುದು ಮುರುಗಾನಂದ. (ನಾನು ಜಗಳ ಮಾಡುವುದಿಲ್ಲ ಕೋಪ ಮಾಡಿಕೊಳ್ಳುವುದಿಲ್ಲ ಎಂದು ವಿಡಿಯೋದಲ್ಲೂ ಜಗಳ ಮಾಡುತ್ತಿದ್ದರು)
- ಜೀವನದ ಬೆಸ್ಟ್ ಕ್ಷಣ?
ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಸ್ಪರ್ಧಿಸಿದ ಕ್ಷಣ ತುಂಬಾ ಚೆನ್ನಾಗಿತ್ತು. ಮೂರು ನಾಲ್ಕು ತಿಂಗಳುಗಳ ಕಾಲ ಒಟ್ಟಿಗೆ ಇರುತ್ತಿದ್ದೆವು. ಇಬ್ಬರ ಟೈಂ ಕ್ಲಾಶ್ ಆಗುತ್ತಿತ್ತು ಆದರೆ ಶೋಯಿಂದ ಒಂದಾದೆವು.
ಡಬ್ಬದಲ್ಲಿ ಆ್ಯಪಲ್ ಹಣ್ಣು ಇಟ್ಟು ಪತಿಗೆ ಐಫೋನ್ 13 ಪ್ರೋ ಗಿಫ್ಟ್ ಕೊಟ್ಟ ಇಶಿತಾ ವರ್ಷ!
- ಯಾರು ಡಾಮಿನೇಟ್ ಮಾಡುತ್ತಾರೆ, ಹೇಗೆ ಹ್ಯಾಂಡಲ್ ಮಾಡುತ್ತೀರಾ?
ಡಾಮಿನೇಟ್ ಮಾಡುವುದು ಇಶಿತಾ ಅವರೇ ಅದನ್ನು ಹ್ಯಾಂಡಲ್ ಮಾಡುವುದು ಮುರುಗಾ. ಮುರುಗಾ ತಪ್ಪು ಮಾಡುತ್ತಾರೆ ಅದನ್ನು ತಪ್ಪು ಎಂದು ಹೇಳಿದಾಗ ನಾನು ಡಾಮಿನೇಟ್ ಎನ್ನುತ್ತಾರೆ ಇಶಿ.
- ಮುರುಗನ ಮೇಲಿದ್ದ ಫಸ್ಟ್ ಇಂಪ್ರೆಶನ್?
ಮುರುಗನ ಮೇಲೆ ಓಕ್ ಓಕೆ ಇಂಪ್ರೆಶನ್ ಇತ್ತು ಏಕೆಂದರೆ ಇಬ್ಬರ ನಡುವೆ ಆಗ ಜಾಸ್ತಿ ಜಗಳ ಇತ್ತು. ಸ್ಟುಡಿಯೋದಲ್ಲಿ ನನ್ನನ್ನು ತುಂಬಾ ಬೈಯುತ್ತಿದ್ದರು. ನಾನು ಪುಟ್ಟ ಹುಡುಗಿ ಮುರುಗಾ ಮಾಸ್ಟರ್ ಆಗಿದ್ದರು ಅದಿಕ್ಕೆ ಸುಮ್ಮನಿದ್ದೆ.
- ಮುರುಗಾ ಜೊತೆ ಅನುಪಮಾ ಕ್ಲೋಸ್ ಇರುವುದಕ್ಕೆ ಜಗಳು ಆಡುತ್ತೀರಾ?
ಖಂಡಿತಾ ನನಗೆ ಅಸೂಯೆ ಇಲ್ಲ ಏಕೆಂದರೆ ನಾವು ಮೂವರು ಒಳ್ಳೆ ಫ್ರೆಂಡ್ಸ್ ಎಂದು ಇಶಿತಾ ಹೇಳಿದ್ದಾರೆ. ನಾನು ಅನು ಹಲವು ವರ್ಷಗಳಿಂದ ತುಂಬಾ ಕ್ಲೋಸ್ ನಾವು ಹೇಗೆ ಅನ್ನೋದು ಇಶಿತಾಗೆ ಗೊತ್ತಿದೆ ಎಂದಿದ್ದಾರೆ ಮುರುಗಾ.
ಇಶಿತಾಗೆ ಎಷ್ಟು ಹುಡುಗರು ಮೆಸೇಜ್ ಮಾಡಿದ್ದಾರೆಂದು ಮೊಬೈಲ್ ಚೆಕ್ ಮಾಡಿದ ಪತಿ ಮುರುಗಾ
- ಮುರುಗಾ ಅವರಿಂದ ಪಡೆದ ಬೆಸ್ಟ್ ಗಿಫ್ಟ್?
ನನಗೆ ಸಿಕ್ಕಿರುವ ಬೆಸ್ಟ್ ಗಿಫ್ಟ್ ಅಂದರೆ ಮುರುಗಾ ಮೊದಲ ಸಲ ನನಗೆ ಕೇರಳಾ ಸೀರೆಯನ್ನು ಗಿಫ್ಟ್ ಕೊಟ್ಟರು ಅದನ್ನು ಮರೆಯುವುದಿಲ್ಲ.
- ಅತಿ ಹೆಚ್ಚು ಕೇರ್ ಮಾಡುವುದು ಯಾರು?
ಕೇರಿಂಗ್ ವಿಚಾರದಲ್ಲಿ ನಾವಿಬ್ಬರು ಸೇಮ್. ಇಬ್ಬರು ಹೆಚ್ಚಿಗೆ ಕೇರ್ ಮಾಡುತ್ತೀವಿ.
- ನಿಮ್ಮ ಸಂಬಂಧ ಚೆನ್ನಾಗಿರಲು ಬೆಸ್ಟ್ ಸೀಕ್ರೆಟ್ ಏನು ಹಾಗೂ ಇಬ್ಬರ ನಡುವೆ ಮನಸ್ತಾಪ ಬಂದ್ರೆ ಹೇಗೆ ಹ್ಯಾಂಡಲ್ ಮಾಡುತ್ತೀರಾ?
ನನ್ನ ವೃತ್ತಿ ಜೀವನನ್ನು ಆಫೀಸ್‌ಗೆ ತೆಗೆದುಕೊಂಡು ಬರಬಾರದು. ಅಲ್ಲಿನ ಟೆನ್ಶನ್ ತೆಗೆದುಕೊಂಡು ಮನೆಯಲ್ಲಿ ಹಾಕಿದರೆ ದೊಡ್ಡ ಸಮಸ್ಯೆ ಆಗುತ್ತದೆ ಹೀಗಾಗಿ ನಾವು ಕೆಲಸ ಬಗ್ಗೆ ಮನೆಯಲ್ಲಿ ಚರ್ಚೆ ಮಾಡುವುದಿಲ್ಲ. ಮತ್ತೊಬ್ಬರ ಪರ್ಸನಲ್ ಸ್ಪೇಸ್ ಅರ್ಥ ಮಾಡಿಕೊಳ್ಳಬೇಕು.
- ರೊಮ್ಯಾಂಟಿಕ್ ಯಾರು?
ಮುರುಗಾ ಅವರೇ ರೊಮ್ಯಾಂಟಿಕ್.