Ramachari: ಚಾರುಗೆ ಮಗ ತಾಳಿ ಕಟ್ಟಿರೋ ವಿಷ್ಯ ಕೇಳಿ ರಾಮಾಚಾರಿ ತಾಯಿಗೆ ಹಾರ್ಟ್ ಅಟ್ಯಾಕ್!

By Suvarna News  |  First Published Mar 1, 2023, 1:19 PM IST

ರಾಮಾಚಾರಿ ಸೀರಿಯಲ್‌ ಕುತೂಹಲಕರ ಘಟ್ಟಕ್ಕೆ ಬಂದು ನಿಂತಿದೆ. ಚಾರುಲತಾಗೆ ತಾಳಿ ಕಟ್ಟಿರೋ ರಾಮಾಚಾರಿ ಈ ಸಂಗತಿ ಎಲ್ಲರಿಂದ ಮುಚ್ಚಿಟ್ಟಿದ್ದಾನೆ. ಆದರೆ ಸತ್ಯ ರಿವೀಲ್ ಆಗಿದೆ. ಚಾರುವಿನ ಕಾರಣಕ್ಕೆ ಚಾರಿ ಮನೇಲಿ ಮತ್ತೊಂದು ಸಾವು ಸಂಭವಿಸುತ್ತಾ?


ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಸೀರಿಯಲ್‌. ಈ ಸೀರಿಯಲ್‌ನಲ್ಲೀಗ ರಾಮಾಚಾರಿ ಚಾರುವಿಗೆ ತಾಳಿ ಕಟ್ಟಿರೋ ವಿಚಾರ ತಿಳಿದು ಚಾರಿ ತಾಯಿಗೆ ಹೃದಯಾಘಾತವಾಗಿದೆ. ಇದು ಮುಂದೆ ಯಾವ ತಿರುವಿಗೆ ಕಾರಣ ಆಗಬಹುದು ಅನ್ನೋ ಕುತೂಹಲ ವೀಕ್ಷಕರಲ್ಲಿದೆ. ಈ ಹಿಂದೆ ರಾಮಾಚಾರಿಯಿಂದ ಚಾರುವಿನ ಕಣ್ಣು ಹೋಗಿದೆ. ಬೇರೆ ಕಂಪನಿ ಮಂದಿ ರಾಮಾಚಾರಿ ಕಂಪನಿ ವಿಸಿಟ್ ಗೆ ಬಂದಿದ್ದಾಗ ನಡೆದ ಘಟನೆಯೇ ಚಾರು ಅಂಧೆಯಾಗಲು ಕಾರಣವಾಗಿದೆ. ಅಷ್ಟೊತ್ತಿಗೆ ಚಾರಿ ಮೇಲೆ ಲವ್ವಲ್ಲಿ ಬಿದ್ದಿದ್ದ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಆಗ ಚಾರು ಅಚಾನಕ್ ಆಗಿ ಕೆಮಿಕಲ್ ಬಿದ್ದು ಆಕೆಯ ದೃಷ್ಟಿ ಹೋಗಿರುತ್ತೆ. ಆದರೆ ರಾಮಾಚಾರಿಯ ಸತತ ಪ್ರಯತ್ನದ ಫಲವಾಗಿ ಈಗ ಕಣ್ಣು ಬಂದಿದೆ. ಆದರೆ ಸತ್ಯ ಸಂಗತಿ ತಿಳಿದರೆ ಚಾರಿ ತನ್ನಿಂದ ದೂರಾಗುತ್ತಾನೆ ಅಂತ ತಿಳಿದು ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಇದೀಗ ರಾಮಾಚಾರಿ ಚಾರು ಕೊರಳಿಗೆ ತಾಳಿ ಕಟ್ಟಿರೋ ವಿಷ್ಯ ರಾಮಾಚಾರಿ ಮನೆಯಲ್ಲಿ ಗೊತ್ತಾಗಿದೆ.

ಹಾಗೆ ನೋಡಿದರೆ ರಾಮಾಚಾರಿಗೆ ಆಘಾತದ ಮೇಲೆ ಆಘಾತ ಆಗುತ್ತಲೇ ಇದೆ. ಹಿಂದೆ ಚಾರುಗೆ ಮದುವೆ ಮಾಡಬೇಕು ಎಂದು ಮಾನ್ಯತಾ ಗಂಡು ಹುಡುಕಿದ್ದಾಳೆ. ಆ ಜಾತಕ ನೋಡಲು ರಾಮಾಚಾರಿಯನ್ನಯ ಕರೆಸಿರುತ್ತಾರೆ. ಆಗ ಚಾರು ನೀನೇ ಬಂದಿದ್ದು ಒಳ್ಳೆದಾಯತು ಮನೆಯಲ್ಲಿ ಸುಳ್ಳು ಹೇಳು. ಜಾತಕ ಹೊಂದಲ್ಲ ಎನ್ನು ಎಂದು ಹೇಳಿ ಕೊಟ್ಟಿರುತ್ತಾಳೆ. ಆದ್ರೆ ರಾಮಾಚಾರಿಗೆ ಸುಳ್ಳು ಹೇಳೋಕೆ ಮನಸ್ಸು ಆಗದೇ, ಜಾತಕ ಸರಿ ಇದೆ ಮದುವೆ ಮಾಡಬಹುದು ಎಂದು ಹೇಳ್ತಾನೆ. ಅದನ್ನು ಕೇಳಿ ಚಾರು ಶಾಕ್ ಆಗಿದ್ದಾಳೆ. ರಾಮಾಚಾರಿ ಜಾತಕ ಹೇಳಿ ಹೊರಡುವಾಗ, ಅವನನ್ನು ತಡೆದು ಚಾರು ಪ್ರಶ್ನೆ ಮಾಡ್ತಾ ಇದ್ದಾಳೆ. ಯಾಕೆ ಈ ರೀತಿ ಜಾತಕ ಸರಿ ಹೋಗುತ್ತೆ ಎಂದು ಹೇಳಿದೆ ಎಂದು ಕೇಳ್ತಾಳೆ. ಅದಕ್ಕೆ ರಾಮಾಚಾರಿ ನನಗೆ ಸುಳ್ಳು ಹೇಳಲು ಸಾಧ್ಯವಿಲ್ಲ ಅಂತಾನೆ. ಅದಕ್ಕೆ ಚಾರು ಹಾಗಾದ್ರೆ ನೀನು ಕಟ್ಟಿದ ತಾಳಿಗೆ ಏನು ಅರ್ಥ ಎಂದು ಕೇಳ್ತಾಳೆ. ಅದಕ್ಕೆ ರಾಮಾಚಾರಿ ನಾನು ನಿಮ್ಮನ್ನು ಕೈ ಬಿಡಲ್ಲ ಎಂದು ಮಾತು ಕೊಟ್ಟು ಹೋಗ್ತಾನೆ.

Tap to resize

Latest Videos

ವೃತ್ತಿ ಧರ್ಮ ಎತ್ತಿ ಹಿಡಿದ ರಾಮಾಚಾರಿ, ಚಾರು ಮದ್ವೆಗೂ ಪೌರೋಹಿತ್ಯ ಮಾಡಿಸ್ತಾನಾ ಚಾರಿ?

ಇದೀಗ ಮತ್ತೊಂದು ಅವಾಂತರ ಆಗಿದೆ. ಅಜ್ಜಿಗೆ ರಾಮಾಚಾರಿ ತಾಳಿ ಕಟ್ಟಿರೋ ವಿಷಯ ಗೊತ್ತಾಗಿದೆ. ಹೀಗೆಲ್ಲ ಮಾಡೋದರ ಬದಲು ನಮಗೆಲ್ಲ ಒಂದು ತೊಟ್ಟು ವಿಷ ಕೊಡು ಅಂತ ಅಜ್ಜಿ ರಂಪ ಮಾಡಿದ್ದಾಳೆ. ಅದನ್ನು ಕೇಳಿ ರಾಮಾಚಾರಿಗೆ ಶಾಕ್ ಆಗಿದೆ. ಇದೆಲ್ಲಾ ಇವರಿಗೆ ಹೇಗೆ ಗೊತ್ತಾಯ್ತು ಎಂದು ಆತಂಕಗೊಂಡಿದ್ದಾನೆ. ಒಂದು ಕಡೆ ಅಜ್ಜಿ ಕೇಳಿದ ಪ್ರಶ್ನೆಗಳಿಗೆ ರಾಮಾಚಾರಿ ತತ್ತರಿಸಿ ಹೋದರೆ ಇನ್ನೊಂದು ಕಡೆ ಮನೆಯವರ ಪರಿಸ್ಥಿತಿ ಕಂಗಾಲಾಗುವಂತಿದೆ. ಸುಳ್ಳು ಹೇಳದ ರಾಮಾಚಾರಿ ಸತ್ಯ ಒಪ್ಪಿಕೊಳ್ಳುತ್ತಾನೆ. ತಾನು ಚಾರು ಮೇಡಂಗೆ ತಾಳಿ ಕಟ್ಟಿರೋದು ನಿಜ, ಯಾವುದೋ ಒತ್ತಡಕ್ಕೆ ಸಿಲುಕಿ ತಾಳಿ ಕಟ್ಟಬೇಕಾದ ಪರಿಸ್ಥಿತಿ ಬಂತು ಅಂತ ರಾಮಾಚಾರಿ ಹೇಳಿದ್ದಾನೆ. ಅದನ್ನು ಕೇಳಿ ರಾಮಾಚಾರಿ ತಾಯಿಗೆ ಹೃದಯಾಘಾತವಾಗಿದೆ. ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಹೆತ್ತಮ್ಮನನ್ನು ಆ ಸ್ಥಿತಿಯಲ್ಲಿ ನೋಡಿ ರಾಮಾಚಾರಿ ಭಯಪಟ್ಟಿದ್ದಾನೆ.

ಒಂದು ವೇಳೆ ರಾಮಾಚಾರಿ ತಾಯಿ ತೀರಿಕೊಂಡರೆ ಚಾರು ಕಾರಣಕ್ಕೆ ಚಾರಿ ಮನೆಯಲ್ಲಿ ಇದು ಎರಡನೇ ಸಾವು. ಮೊದಲು ಅತ್ತಿಗೆ ಅಪರ್ಣ ಚಿಕಿತ್ಸೆಗೆ ಹಣ ಸಿಗದೇ ತೀರಿಕೊಂಡಿದ್ದಳು. ಆ ಹಣ ಚಾರುವಿನಿಂದಾಗಿ ಚಾರಿ ಕೈತಪ್ಪಿತ್ತು. ಆ ಸಿಟ್ಟು ಚಾರಿ ಮನೆಯವರಿಗೆ ಇದೆ. ಇದೀಗ ಚಾರಿ ತಾಯಿಗೂ ಹೀಗಾದರೆ ಮುಂದೆ ಚಾರು ಚಾರಿ ಲೈಫು ಹೇಗೆ ಅನ್ನೋ ಪ್ರಶ್ನೆ ಎಲ್ಲರಲ್ಲಿದೆ.

22 ವರ್ಷದ ಮಗಳಿರೋ ಈ ನಟಿಯನ್ನ ನೋಡಿದ್ರೆ ಈಗ್ಲೂ ಜನ ಫಿದಾ ಆಗೋದು ಗ್ಯಾರಂಟಿ

click me!