Bigg Boss Kannada ಹೆಸರಲ್ಲೇ ಧನ ಇಟ್ಕೊಂಡಿದೀರಾ, ವಾಟ್ ಅಬೌಟ್ ಧನಲಕ್ಷ್ಮೀ ಸರ್: ಧನಂಜಯ್ ಕಾಲೆಳೆದ ಸುದೀಪ್

Published : Oct 22, 2023, 07:09 PM ISTUpdated : Oct 22, 2023, 07:12 PM IST
 Bigg Boss Kannada ಹೆಸರಲ್ಲೇ ಧನ ಇಟ್ಕೊಂಡಿದೀರಾ, ವಾಟ್ ಅಬೌಟ್ ಧನಲಕ್ಷ್ಮೀ ಸರ್: ಧನಂಜಯ್ ಕಾಲೆಳೆದ ಸುದೀಪ್

ಸಾರಾಂಶ

ಇಂದು (22 ಅಕ್ಟೋಬರ್ 2023) ಎರಡನೇ ವಾರದ ಬಿಗ್ ಬಾಸ್ 'ಸೂಪರ್ ಸಂಡೇ ವಿತ್ ಸುದೀಪ' ಪ್ರಸಾರ ಕಾಣಲಿದೆ.  ಈ ಸಂಚಿಕೆಯಲ್ಲಿ ಈ ವಾರದ ಎಲಿಮಿನೇಶನ್ ಕೂಡ ಆಗಲಿದ್ದು, ಒಬ್ಬರು ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಬೀಳಲಿದ್ದಾರೆ. ಅದು ಯಾರು ಎಂಬುದನ್ನು ಸಂಚಿಕೆ ನೋಡಿಯೇ ಕನ್ಫರ್ಮ್ ಮಾಡಿಕೊಳ್ಳಬೇಕಿದೆ. 

ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಗೆ ಡಾಲಿ ಖ್ಯಾತಿಯ ನಟ ಧನಂಜಯ್ ಆಗಮಿಸಿದ್ದರು. ಅಲ್ಲಿ ಸ್ಪರ್ಧಿಗಳು ಹಾಗೂ ನಟ ಸುದೀಪ್ ಜತೆ ಮಾತನಾಡಿದ ದನಂಜಯ್, ಅಲ್ಲಿ ಕೆಲವು ರಸನಿಮಿಷಗಳನ್ನು ಕಳೆದರು. ಧನಂಜಯ್ ಜತೆ ಸಂಗೀತ ನಿರ್ದೇಶಕ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಕೂಡ ಅಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಹಾಗೂ ವಾಸುಕಿ ವೈಭವ್ ರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿ ಅಲ್ಲಿರುವ ಸ್ಪರ್ಧಿಗಳು ಪುಳಕಿತರಾಗಿದ್ದಾರೆ. 

ಹೌದು, ಇಂದು (22 ಅಕ್ಟೋಬರ್ 2023) ಎರಡನೇ ವಾರದ ಬಿಗ್ ಬಾಸ್ 'ಸೂಪರ್ ಸಂಡೇ ವಿತ್ ಸುದೀಪ' ಪ್ರಸಾರ ಕಾಣಲಿದೆ.  ಈ ಸಂಚಿಕೆಯಲ್ಲಿ ಈ ವಾರದ ಎಲಿಮಿನೇಶನ್ ಕೂಡ ಆಗಲಿದ್ದು, ಒಬ್ಬರು ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಬೀಳಲಿದ್ದಾರೆ. ಅದು ಯಾರು ಎಂಬುದನ್ನು ಸಂಚಿಕೆ ನೋಡಿಯೇ ಕನ್ಫರ್ಮ್ ಮಾಡಿಕೊಳ್ಳಬೇಕಿದೆ. ಸೋಷಿಯಲ್ ಮೀಡಿಯಾ ಸುದ್ದಿಯ ಪ್ರಕಾರ ಅದು ಗೌರೀಶ್ ಅಕ್ಕಿ ಅಥವಾ ಭಾಗ್ಯಶ್ರೀ ಎಂದು ಹೇಳಲಾಗಿದ್ದರೂ ಅದು ಪಕ್ಕಾ ಸುದ್ದಿಯಲ್ಲ, ಸಂಚಿಕೆ ನೋಡಲೇಬೇಕು ಯಾರೆಂದು ತಿಳಿದುಕೊಳ್ಳಲು. 

BBK10 ಮನೆ: ರಣಶಕ್ತಿ ತಂಡಕ್ಕೆ 'ಅವಳ ನೆರಳು' ಹೆಸರಿಟ್ಟ ತುಕಾಲಿ ಸಂತು; ಹೂ ಅಂದ್ರಾ ಊಹೂ ಅಂದ್ರಾ ಕಾರ್ತಿಕ್?

ಇಂದಿನ ಸಂಚಿಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಕಾರಣ, ಕಳೆದ ಸೂಪರ್ ಸಂಡೆ ವಿತ್ ಸುದೀಪ್ ಸಂಚಿಕೆಯಲ್ಲಿ ಸ್ನೇಕ್ ಶ್ಯಾಮ್ ಎಲಿಮಿನೇಟ್ ಆದಂತೆ ಇವತ್ತು ಇನ್ನೊಬ್ಬರು ಆಗುವುದಂತೂ ಪಕ್ಕಾ. ಆದರೆ, ಯಾರು ಎನ್ನುವುದು ಸದ್ಯಕ್ಕೆ ಡೌಟ್. ಎಲಿಮಿನೇಶನ್ ಮಾತ್ರವಲ್ಲ, ಸುದೀಪ್ ಮಾತು ಕೇಳಲು, ಸ್ಪರ್ಧಿಗಳ ಕಿಚ್ಚ ಸುದೀಪ್ ಮಾತುಕತೆ ನೋಡಲು ಬಿಗ್ ಬಾಸ್ ಪ್ರಿಯರು ತುದಿಗಾಲಲ್ಲಿ ನಿಂತಿರುತ್ತಾರೆ. ಜತೆಗೆ, ಇಂದಿನ ಸಂಚಿಕೆಯಲ್ಲಿ ನಟ ಧನಂಜಯ್ 'ದರ್ಶನ' ಕೂಡ ಆಗಲಿದೆ. 

ಬಿಗ್ ಬಾಸ್‌ನಿಂದ ಗೌರೀಶ್ ಅಕ್ಕಿ , ಭಾಗ್ಯಶ್ರೀ ಹೊರಕ್ಕೆ: ಎಪಿಸೋಡ್ ಪ್ರಸಾರಕ್ಕೂ ಮುನ್ನ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತಿದೆ ಎಂದು ತಿಳಿಯಬೇಕಾದರೆ 'JioCinema'ದಲ್ಲಿ ಬಿಗ್‌ಬಾಸ್‌ ಕನ್ನಡ ನೇರಪ್ರಸಾರ ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?