ವಿಡಿಯೋ ಮಾಡಿ ಬಿಕ್ಕಿಬಿಕ್ಕಿ ಅತ್ತ ಸೀತಾರಾಮ ಸೀರಿಯಲ್​ ಪ್ರಿಯಾ: ಧೈರ್ಯವಾಗಿರಿ ಮೇಡಂ ಅಂದ ಫ್ಯಾನ್ಸ್​

Published : Oct 22, 2023, 04:51 PM IST
ವಿಡಿಯೋ ಮಾಡಿ ಬಿಕ್ಕಿಬಿಕ್ಕಿ ಅತ್ತ ಸೀತಾರಾಮ ಸೀರಿಯಲ್​ ಪ್ರಿಯಾ: ಧೈರ್ಯವಾಗಿರಿ ಮೇಡಂ ಅಂದ ಫ್ಯಾನ್ಸ್​

ಸಾರಾಂಶ

ವಿಡಿಯೋ ಮಾಡಿ ಬಿಕ್ಕಿಬಿಕ್ಕಿ ಅತ್ತ ಸೀತಾರಾಮ ಸೀರಿಯಲ್​ ಪ್ರಿಯಾ. ಅಷ್ಟಕ್ಕೂ ಆಗಿದ್ದೇನು?  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಸ್ವಲ್ಪ ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಸಿಂಗಲ್​ ಪೇರೆಂಟ್​ ಆಗಿರುವ ಸೀತಾ, ತನ್ನ ಕಾಯಿಲೆ ಪೀಡಿತ ಮಗಳನ್ನು ಸಾಕುವುದು ಒಂದೆಡೆಯಾದರೆ, ಈಕೆಗೆ ತನ್ನದೇ ಕಂಪೆನಿಯಲ್ಲಿ ಕೆಲಸ ಮಾಡುವ ರಾಮನ​ ಜೊತೆ  ಸ್ನೇಹವಿರುತ್ತದೆ. ರಾಮನಿಗೂ ಸೀತಾಳ ಮಗಳು ಸಿಹಿ ಎಂದರೆ ಅಪಾರ ಪ್ರೀತಿ. ಆದರೆ ರಾಮ ಬಿಲೇನಿಯರ್​ ಎನ್ನುವ ಸತ್ಯ ಸೀತಾಗೆ ತಿಳಿದಿಲ್ಲ. ಒಟ್ಟಿನಲ್ಲಿ ಸೀತಾ-ರಾಮ ಮತ್ತು ಸೀತಾಳ ಮಗಳು ಸಿಹಿಯ ನಡುವೆ ಸುತ್ತುವ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ.  ನಾಯಕಿ ಸೀತಾ ಹಾಗೂ ನಾಯಕ ರಾಮ್ ಜೊತೆಗೆ ಮುದ್ದು ಪುಟಾಣಿ ಸಿಹಿಯೂ ಕೂಡಾ ಕಿರುತೆರೆ ವೀಕ್ಷಕರ ಮನಸ್ಸು ಕದ್ದು ಬಿಟ್ಟಿದ್ದರೆ,    ಸೀತಾಳ ಬೆಸ್ಟ್ ಫ್ರೆಂಡ್ ಆಗಿರುವ ಪ್ರಿಯಾ ಅವರ ಅಭಿನಯಕ್ಕೂ ಫ್ಯಾನ್ಸ್​ ಮನಸೋತಿದ್ದಾರೆ.

ಮುದ್ದುಮೊಗದ ಪ್ರಿಯಾ ಅವರ ಅಸಲಿ ಹೆಸರು ಮೇಘನಾ ಶಂಕರಪ್ಪ.  ಸೀತಾಳ ಜೊತೆಗೆ ರಾಮ್‌ನ ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರಿಯಾಗೆ ಕೋಟ್ಯಧೀಶೆ ಆಗುವ ಕನಸು. ಇದರಿಂದ ಕೋಟ್ಯಧಿಪತಿ ಹುಡುಗನ ಹುಡುಕಾಟದಲ್ಲಿದ್ದಾಳೆ. ತಾನು ಬಿಲೇನಿಯರ್​ ಎಂದು ಹೇಳಿಕೊಳ್ಳದ ರಾಮ್​ ತನ್ನ ಸ್ನೇಹಿತನನ್ನೇ ಬಾಸ್​ ಮಾಡಿದ್ದಾನೆ. ಆ ಬಾಸ್​ನ ಪ್ರೀತಿಗೆ ಬಿದ್ದಿದ್ದಾಳೆ ಪ್ರಿಯಾ. ಈ ಪಾತ್ರಕ್ಕೆ ಬಹಳ ಜೀವ ತುಂಬುತ್ತಿದ್ದಾರೆ ನಟಿ.  ಒಳ್ಳೆಯ ಬದುಕು ಕಟ್ಟಿಕೊಳ್ಳುವ ಬಯಕೆಯಿರುವ ಈ ಬೆಡಗಿ ಹಿಂದೆ ಮುಂದೆ ಆಲೋಚನೆ ಮಾಡದೇ ಮಾತಾಡಿ ಫಜೀತಿಗೂ ಸಾಕಷ್ಟು ಬಾರಿ ಒಳಗಾಗುತ್ತಾಳೆ. ಇಂಥ ಪ್ರಿಯಾ ಈಗ ಒಂದು ವಿಡಿಯೋ ಮಾಡಿದ್ದು, ಫ್ಯಾನ್ಸ್​ಗಳಿಂದ ಥಹರೇವಾರಿ ಕಮೆಂಟ್​ ಬರುತ್ತಿವೆ.

'ಸೀತಾರಾಮ' ಸೀರಿಯಲ್​ ಸೀತಾ ದಿನವಿಡೀ ಏನ್​ ತಿಂತಾರೆ? ಸೆಟ್​ನಲ್ಲಿ ರಾಮ್​ ತಿನ್ನೋದೇನು? ವಿಡಿಯೋದಲ್ಲಿವೆ ಡಿಟೇಲ್ಸ್​

ಈ ವಿಡಿಯೋದಲ್ಲಿ ಸೀತಾ ಬಿಕ್ಕಿಬಿಕ್ಕಿ ಅಳುವುದನ್ನು ನೋಡಬಹುದು. ಅಷ್ಟಕ್ಕೂ ಅಳಲು ಕಾರಣ ಏನು ಎಂದು ಕೇಳಿದಾಗ ಸೀತಾ ನನ್ನ ಬಳಿ ಮಾತನಾಡ್ತಿಲ್ಲ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಅಲ್ಲಿದ್ದವರೂ ಅಯ್ಯೋ ಪಾಪ ಎಂದಿದ್ದಾರೆ. ಇದು ತಮಾಷೆಯ ವಿಡಿಯೋವಾದ್ದರಿಂದ ಫ್ಯಾನ್ಸ್​ ತಮಾಷೆಯಾಗಿಯೇ ಕಮೆಂಟ್​ ಮಾಡುತ್ತಿದ್ದಾರೆ. ಧೈರ್ಯದಿಂದಿರಿ ಮೇಡಂ, ನಿಮ್ಮ ಜೊತೆ ನಾವಿದ್ದೇವೆ ಎಂದು ಹಲವರು ಹೇಳಿದರೆ, ಅತ್ತರೆ ಮೇಕಪ್​ ಹಾಳಾಗತ್ತೆ ಎಂದು ಕೆಲವರು ಕಾಲೆಳೆದಿದ್ದಾರೆ. ಬಾಸ್​ ಇರುವಾಗ ಸೀತಾ ಯಾಕೆ ನಿಮಗೆ ಎಂದು ಕೆಲವರು ಪ್ರಶ್ನಿಸಿದರೆ, ನಿಮ್ಮ ನಟನೆ ಸೂಪರ್​ ಎಂದು ಇನ್ನು ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

ಇನ್ನು ಮೇಘನಾ ಅವರ ಕುರಿತು ಹೇಳುವುದಾದರೆ, ಇವರು ಇದಕ್ಕೂ ಮುನ್ನ  'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿಯಲ್ಲಿ ವಿಲನ್​  ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು.  ನಿರೂಪಕಿಯಾಗಿಯೂ ಇವರು ಫೇಮಸ್​. ಮೊದಲು ನಿರೂಪಕಿಯಾಗಿದ್ದ ಇವರು,  'ಕಿನ್ನರಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.  'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನ್ಯಾಷನಲ್​ ಕ್ರಷ್ ರಶ್ಮಿಕಾ​ಗೆ ಇದೇನಾಯ್ತು? ಇದು ವಿಚಿತ್ರ ಲವ್​ಸ್ಟೋರಿ ಅನ್ನುತ್ತಲೇ ನೀರಿಗೆ ಮುಳುಗಿಬಿಟ್ರಲ್ಲಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತಾಳಿ ಕಟ್ಟಲು ಒಪ್ಪದ ತೇಜಸ್; ಇತ್ತ ನಿತ್ಯಾ ಮಾತುಗಳನ್ನು ದಿಗಿಲುಬಿದ್ದ ಕೇಳಿ ಕರ್ಣ-ನಿಧಿ
BBK 12: 'ವಿನ್ನರ್' ಎಂದ ಸ್ಪರ್ಧಿಗೆ ಮಧ್ಯರಾತ್ರಿಯ ಮಿಡ್‌ವೀಕ್ ಎಲಿಮಿನೇಷನ್ ಶಾಕ್!