
ಕರ್ನಾಟಕ ಮಂಗಳೂರು ಮೂಲದ ನಟಿ ಜ್ಯೋತಿ ರೈ, ನಿನ್ನೆ ಫೇಸ್‌ಬುಕ್ ಲೈವ್‌ಗೆ ಬಂದು ಕನ್ನಡಿಗರು ನನಗೆ ಹರ್ಟ್ ಮಾಡಿದ್ದಾರೆ, ಕನ್ನಡಿಗರ ಕಾಮೆಂಟ್‌ನಿಂದ ನನಗೆ ತುಂಬಾ ಬೇಸರವಾಗಿ ಅಳಲು ತೋಡಿಕೊಂಡಿದ್ದರು. ಇದೀಗ ಇಂದು, ತಮ್ಮ ಹೊಸದೊಂದು 'ಮಾದಕ ವಾಕಿಂಗ್' ವಿಡೀಯೋ ಹಾಕಿ ಮತ್ತೆ ಸುದ್ದಿಯಾಗುತ್ತಿದ್ದಾರೆ. ನಿನ್ನೆ ತಮ್ಮ ಬಗ್ಗೆ, ಕನ್ನಡಿಗರ ಬಗ್ಗೆ ಬೇಸರವಾಗಿದೆ ಎಂದಿದ್ದವರು, ಇಷ್ಟು ಬೇಗ ಮನಸ್ಸು ಸರಿ ಮಾಡಿಕೊಂಡು ಮಾದಕವಾಗಿ ನಗುತ್ತ ವಾಕಿಂಗ್ ವಿಡಿಯೋ ಹಾಕಿರುವುದು ಹಲವರ ಹುಬ್ಬೇರಿಸಿದೆ.
ಹೌದು, ನಟಿ ಜ್ಯೋತಿ ರೈ ಈಗ ತೆಲುಗು ಸೀರಿಯಲ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ 'ಬಂದೇ ಬರುತಾವ ಕಾಲ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜ್ಯೋತಿ ರೈ, ಬಳಿಕ ಜೋಗುಳ ಸೀರಿಯಲ್ ಮೂಲಕ ಪ್ರಖ್ಯಾತಿ ಪಡೆದವರು. ತೆಲುಗು, ತಮಿಳು ಹಾಗೂ ತುಳು ಭಾಷೆಗಳಲ್ಲಿ 20ಕ್ಕೂ ಹೆಚ್ಚು ಸೀರಿಯಲ್‌ನಲ್ಲಿ ನಟಿಸಿರುವ ಜ್ಯೋತಿ ರೈ, ಇದೀಗ ತೆಲುಗು ಧಾರಾವಾಹಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿರುವ ಜ್ಯೋತಿ ರೈ, ಏನಾದರೊಂದು ಪೋಸ್ಟ್ ,ಮಾಡುತ್ತಲೇ ಇರುತ್ತಾರೆ, ಸುದ್ದಿಯಾಗುತ್ತಲೇ ಇರುತ್ತಾರೆ ಎನ್ನಬಹುದು.
ಅಂದಹಾಗೆ, ನಟಿ ಜ್ಯೋತಿ ರೈ ಕನ್ನಡದ 'ಬಂದೇ ಬರುತಾವ ಕಾಲ' ಸೀರಿಯಲ್ ಮೂಲಕ ನಟನಾವೃತ್ತಿ ಪ್ರಾರಂಭಿಸಿ, ಬಳಿಕ ಜೋಗುಳ ಸೇರಿದಂತೆ ಕನ್ನಡ, ತಮಿಳು, ತೆಲುಗು ಹಾಗೂ ತುಳು ಭಾಷೆಗಳಲ್ಲಿ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ತೆಲುಗಿನ 'ಗುಪ್ಪೆದಂಥ ಮನಸು (Guppedantha Manasu)' ಸೀರಿಯಲ್‌ನಲ್ಲಿ ನಟಿಸುತ್ತಿರುವ ನಟಿ ಜ್ಯೋತಿ ರೈ, ವೆಬ್ ಸೀರೀಸ್‌ನಲ್ಲೂ ನಟಿಸುತ್ತಿದ್ದಾರೆ.
BBK10 ಮನೆ: ರಣಶಕ್ತಿ ತಂಡಕ್ಕೆ 'ಅವಳ ನೆರಳು' ಹೆಸರಿಟ್ಟ ತುಕಾಲಿ ಸಂತು; ಹೂ ಅಂದ್ರಾ ಊಹೂ ಅಂದ್ರಾ ಕಾರ್ತಿಕ್?
ಜತೆಗೆ, ಅಲ್ಲಿಯ ತರುಣ ನಿರ್ದೇಶಕ 'ಪೂರ್ವಜ್ ' ಅವರೊಂದಿಗೆ ಮರುಮದುವೆ (ಈ ಮೊದಲು ಜ್ಯೋತಿ ರೈ ತಮ್ಮ 20ನೇ ವಯಸ್ಸಿನಲ್ಲಿ ಪದ್ಮನಾಭ ಎಂಬವರೊಂದಿಗೆ ವಿವಾಹ ಆಗಿದ್ದರು ಎನ್ನಲಾಗಿದೆ) ಆಗುವ ಪ್ರಯತ್ನದಲ್ಲೂ ಇದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಜ್ಯೋತಿ ರೈ ಮತ್ತೆ ಮತ್ತೆ ಸುದ್ದಿಯಾಗಲು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ ಎನ್ನಬಹುದೇನೋ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.