ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿ ಮತ್ತು ಚಾರುಲತಾಳ ಮದುವೆಯಲ್ಲಿ ಟ್ವಿಸ್ಟ್. ವಿಲನ್‌ಗಳಿಂದ ರಾಮಾಚಾರಿಯನ್ನು ಕಿಟ್ಟಿ ರಕ್ಷಿಸಿದ್ದು ಹೇಗೆ?
ರಾಮಾಚಾರಿ ಸೀರಿಯಲ್‌ನಲ್ಲಿ ಕಳೆದ ಕೆಲವು ದಿನಗಳಿಂದ ಕಲರ್‌ಫುಲ್ ಎಪಿಸೋಡ್‌ಗಳು ಪ್ರಸಾರ ಆಗ್ತಿದ್ದವು. ಆರಂಭದಿಂದಲೂ ಚಾರು ಚಾರಿಯನ್ನು ದೂರ ಮಾಡಬೇಕೆಂದೇ ಕಾಯುತ್ತಿರುವ ಚಾರು ತಾಯಿ ಮಾನ್ಯತಾ ಹೊಸ ಪ್ಲಾನ್ ಜೊತೆಗೆ ಬಂದಿದ್ದಳು. ಆ ನೆವದಲ್ಲಿ ಚಾರು ಚಾರಿಗೆ ಮದುವೆಯೇ ಆಗಿಲ್ಲ ಅಂತ ನೆರೆ ಹೊರೆಯವರ ಹತ್ರ ಹೇಳಿಸಿದ್ದಳು. ತಾನು ಒಳ್ಳೆಯವಳ ಹಾಗೆ ನಟಿಸಿ ಮಗಳು ಚಾರುಗೂ ರಾಮಾಚಾರಿಗೂ ಮದುವೆ ಮಾಡಲು ಮುಂದಾಗಿದ್ದಳು. ಈ ಮದುವೆಯನ್ನು ನಿಲ್ಲಿಸಿ ಮಗಳು ಚಾರುವನ್ನು ಆಗರ್ಭ ಶ್ರೀಮಂತನಿಗೆ ಮದುವೆ ಮಾಡುವ ಹುನ್ನಾರ ಇದರ ಹಿಂದೆ ಇತ್ತು. ಆದರೆ ಪ್ರತೀ ಹಂತದಲ್ಲೂ ಹೀರೋ ಗೆಲ್ಲಲೇ ಬೇಕಲ್ವಾ? ಇಲ್ಲೂ ಬಹು ದೊಡ್ಡ ಟ್ವಿಸ್ಟ್ ರೆಡಿ ಇತ್ತು. ಚಾರು ಮತ್ತು ಚಾರಿ ನಡುವಿನ ರಿಲೇಶನ್ ಮುಗಿದೇ ಹೋಯ್ತು ಅನ್ನೋ ರೇಂಜಿಗೆ ಬಿಲ್ಡಪ್ ಕೊಟ್ಟು ಅವರಿಬ್ಬರನ್ನೂ ಬೇರೆ ಮಾಡಿ ಆಯ್ತು ಅಂತ ಮಾನ್ಯತಾ, ವೈಶಾಖ ವಿಲನ್ ನಗೆ ನಕ್ಕಿದ್ದೂ ಆಗಿತ್ತು. ಆದರೆ ಕೊನೆಯಲ್ಲಿ ಕಥೆಗೆ ಟ್ವಿಸ್ಟ್ ಸಿಕ್ಕಿದೆ. ರಾಮಾಚಾರಿ 'ಧರ್ಮೋ ರಕ್ಷತಿ ರಕ್ಷಿತಃ' ಅನ್ನೋ ಮಾತು ಹೇಳ್ತಿದ್ದ ಹಾಗೆ ಅಲ್ಲೊಂದು ಪವಾಡವೇ ನಡೆದು ಬಿಟ್ಟಿದೆ. ವಿಲನ್‌ಗಳ ಕೈಗೆ ಸಿಕ್ಕಿದ್ದ ರಾಮಾಚಾರಿ ತಮ್ಮ ಕಿಟ್ಟಿ ಪ್ರತ್ಯಕ್ಷವಾಗಿ ಅಣ್ಣನನ್ನು ಬಚಾವ್ ಮಾಡಿದ್ದಾನೆ.
ಇದಕ್ಕೂ ಮೊದಲು ಮದುವೆ ಮನೆಯ ಡ್ರಾಮಾ ಸಖತ್ ಕ್ಲಿಕ್ ಆಗಿತ್ತು. ರಾಮಾಚಾರಿ - ಚಾರುಲತಾಳನ್ನ ಬೇರೆ ಮಾಡಲು ಮಾನ್ಯತಾ ಸಂಚು ರೂಪಿಸಿದ್ದಳು. ಮಾನ್ಯತಾ ಪ್ಲಾನ್ ಪ್ರಕಾರ ಎಲ್ಲವೂ ಎಕ್ಸಿಕ್ಯೂಟ್ ಆಗಿದೆ. ಇನ್ಸ್‌ಪೆಕ್ಟರ್ ದೇವ್ ಮದುವೆ ಮನೆಗೆ ನುಗ್ಗಿ, ‘’ಇವನು ರಾಮಾಚಾರಿ ಅಲ್ಲ ಕೃಷ್ಣ’’ ಅಂತ ಎಲ್ಲರನ್ನೂ ನಂಬಿಸಿ, ರಾಮಾಚಾರಿಯನ್ನ ಅರೆಸ್ಟ್ ಮಾಡಿಕೊಂಡು ಕರೆದುಕೊಂಡು ಹೋಗುತ್ತಾನೆ.
ರಾಮ-ಮೇಘ ಶ್ಯಾಮ ಇಬ್ರೂ ಫ್ರೆಂಡ್ಸ್! ಸಿಹಿಯ ಅಪ್ಪ ಅವನೇ ಎನ್ನೋ ಹೊತ್ತಲ್ಲಿ ಇದೇನಿದು ಸೀತಾರಾಮ ಟ್ವಿಸ್ಟ್?
ದಾರಿ ಮಧ್ಯೆ ರಾಮಾಚಾರಿಯನ್ನ ಎನ್‌ಕೌಂಟರ್ ಮಾಡಲು ದೇವ್ ಮುಂದಾಗಿದ್ದಾನೆ. ಪೊಲೀಸರನ್ನ ಬಗ್ಗುಬಡಿಯಲು ರಾಮಾಚಾರಿ ಸಜ್ಜಾಗಿದ್ದ. ಈ ಕಡೆ ಮದುವೆ ಮನೆಯಲ್ಲಿ ಬೇರೆಯದ್ದೇ ಡ್ರಾಮಾ ನಡೆದಿದೆ. ನಾರಾಯಣಾಚಾರ್ ಫ್ಯಾಮಿಲಿ ಶಾಕ್‌ನಿಂದಾಗಿ ಕಣ್ಣೀರು ಸುರಿಸುತ್ತಿದ್ದಾಗಲೇ, 'ಚಾರುಲತಾಗೆ ಈ ಮುಹೂರ್ತ ಬಿಟ್ಟರೆ ಕಂಕಣ ಬಲ ಇಲ್ಲ’' ಅಂತೆಲ್ಲಾ ಹೇಳಿ ದಿಗಂತ್ - ಚಾರುಲತಾ ಮದುವೆ ಪ್ರಸ್ತಾಪವನ್ನ ಮಾನ್ಯತಾ ಮುಂದಿಟ್ಟಿದ್ದಾಳೆ. ಮಂಪರು ಪುಡಿ ಮಿಕ್ಸ್ ಆಗಿರುವ ನೀರು ಕುಡಿದಿರುವ ಪರಿಣಾಮ, ಚಾರುಲತಾ ಏನೂ ಮಾತನಾಡುವ ಸ್ಥಿತಿಯಲ್ಲಿ ಇರೋದಿಲ್ಲ. ಯಾವುದನ್ನೂ ನಿರೀಕ್ಷಿಸದ ಚಾರು ತಂದೆ ಜೈಶಂಕರ್‌ಗೆ ದೊಡ್ಡ ಶಾಕ್ ಆಗಿದೆ. ಹೀಗಾಗಿ, ದಿಗಂತ್ - ಚಾರುಲತಾ ಮದುವೆ ಪ್ರಸ್ತಾಪ ಮುಂದಿಟ್ಟಾಗಲೂ ಜೈಶಂಕರ್ ಏನ್ನನ್ನೂ ಮಾತನಾಡುವುದಿಲ್ಲ.
ಆದರೆ ಫೈನಲೀ ಚಾಣಾಕ್ಷ ಕೃಷ್ಣನ ಎಂಟ್ರಿ ಆಗಿದೆ. ಆತ ಪೋಲೀಸಪ್ಪನಿಗೇ ತಿರುಮಂತ್ರ ಹಾಕಿ ಆತನ ತಪ್ಪನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಆತನೇ ಅರೆಸ್ಟ್ ಆಗುವಂತೆ ಮಾಡಿದ್ದಾನೆ. ಹಸಮಣೆಯಲ್ಲಿ ಇನ್ನೇನು ಚಾರು, ದಿಗಂತ್ ಹಾರ ಬದಲಾಯಿಸಬೇಕು ಅನ್ನುವಷ್ಟರಲ್ಲಿ ರಾಮಾಚಾರಿ ಮರು ಎಂಟ್ರಿ ಆಗಿದೆ. ಚಾರು ಬಂದು ಚಾರಿಯನ್ನು ತಬ್ಬಿಕೊಂಡಾಗ ಎಲ್ಲವೂ ಸದ್ಯಕ್ಕೆ ಸುಖಾಂತ್ಯ ಕಂಡಿದೆ. ಆ ಕಡೆಯಿಂದ ಇದನ್ನೆಲ್ಲ ನೋಡಿ ವೈಶಾಖ, ಮಾನ್ಯತಾಗೆ ಮೈ ಕೈ ಪರಚಿಕೊಳ್ಳೋ ಹಾಗಾಗಿದೆ. ಅನಧಿಕೃತ ಅಂತ ಕರೆಸಿಕೊಂಡಿದ್ದ ಚಾರು ಚಾರಿ ಮದುವೆಯನ್ನು ಅವರೇ ಕೈಯಾರೆ ಮಾಡುವ ಸ್ಥಿತಿ ಎದುರಾಗಿದೆ.
Puttakkana Makkalu: ಪುಟ್ಟಕ್ಕನ ಮಕ್ಕಳಿಗೆ ಸಂಕಷ್ಟ: ಸಮಯ ಬದಲಾವಣೆಯ ಪರಿಣಾಮವೇ?
'ರಾಮಾಚಾರಿ’ ಸೀರಿಯಲ್‌ನಲ್ಲಿ ರಾಮಾಚಾರಿ / ಕೃಷ್ಣ ಆಗಿ ರಿತ್ವಿಕ್ ಕೃಪಾಕರ್, ಚಾರುಲತಾ ಆಗಿ ನಟಿ ಮೌನಾ ಗುಡ್ಡೇಮನೆ, ಮಾನ್ಯತಾ ಆಗಿ ನಟಿ ಝಾನ್ಸಿ ಸುಬ್ಬಯ್ಯ, ವೈಶಾಖ ಆಗಿ ನಟಿ ಐಶ್ವರ್ಯಾ ಸಾಲಿಮಠ, ಜಾನಕಿ ಆಗಿ ಅಂಜಲಿ ಸುಧಾಕರ್, ಜೈಶಂಕರ್ ಆಗಿ ಚಿ ಗುರುದತ್, ಕೋದಂಡ ಆಗಿ ಹರೀಶ್ ಭಟ್ ನೀನಾಸಂ, ನಾರಾಯಣಾಚಾರ್ ಆಗಿ ಶಂಕರ್ ಅಶ್ವತ್ಥ್ ಅಭಿನಯಿಸುತ್ತಿದ್ದಾರೆ.