ಗುಟ್ಟಾಗಿ ನಡೆದೇಹೋಯ್ತಾ ಸತ್ಯ ಸೀರಿಯಲ್​ ಲವರ್ಸ್​ ರೀತು- ರಾಖಿ ಮದ್ವೆ? ವಿಡಿಯೋ ವೈರಲ್​

By Suchethana D  |  First Published Aug 22, 2024, 9:25 PM IST

ಸತ್ಯ ಸೀರಿಯಲ್​ ಲವರ್ಸ್​ ರೀತು ಮತ್ತು ರಾಖಿ ಜೋಡಿಯ ಮದುವೆಗೆ ನಿಜ ಜೀವನದಲ್ಲಿ ನಡೆದೇ ಹೋಯ್ತಾ? ವೈರಲ್​ ವಿಡಿಯೋ ಹೇಳ್ತಿರೋದೇನು?
 


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿದ್ದ ಸತ್ಯ ಸೀರಿಯಲ್​ ಮುಗಿದು ಕೆಲ ವಾರಗಳೇ ಕಳೆದಿವೆ. ಈ ಸೀರಿಯಲ್​ ತರಾತುರಿಯಲ್ಲಿ ಮುಗಿಸದೇ ಎಲ್ಲರಿಗೂ ನ್ಯಾಯ ಒದಗಿಸಿ, ಒಳ್ಳೆಯ ರೀತಿಯಲ್ಲಿ ಮುಗಿಸಿರೋ ಸಮಾಧಾನ ವೀಕ್ಷಕರದ್ದು. ಆದರೆ ಇದರಲ್ಲಿ ಮಿಸ್​ ಆದ ಕೆಲವು ಪಾತ್ರಗಳು ಮಾತ್ರ ಹೈಲೈಟ್​ ಆದವು. ಸತ್ಯಾಳ ಮಾವ, ಊರ್ಮಿಯ ಗಂಡ ಲಕ್ಷ್ಮಣ, ಆತನ ಎರಡನೆಯ ಪತ್ನಿ ಹಾಗೂ ರೀತುವಿನ ಸ್ನೇಹಿತ ರಾಕಿ ಸೇರಿದಂತೆ ಕೆಲವು ಕಲಾವಿದರು ಕೊನೆಯ ಸಂಚಿಕೆಯಲ್ಲಿ ಮಿಸ್​ ಆಗಿದ್ದಾರೆ. ಆದರೆ ವಿಶೇಷವೆಂದರೆ ಈ ಸೀರಿಯಲ್​ನಲ್ಲಿ ಹೈಲೈಟ್​ ಎನಿಸಿದರುವ ಕೀರ್ತನಾ ಪಾತ್ರಧಾರಿ ಬಿಟ್ಟರೆ ಬಹುತೇಕ ಎಲ್ಲರೂ ಮೊದಲಿನಿಂದಲೂ ಅವರೇ ಇರುವುದು. ಕೆಲವು ಸೀರಿಯಲ್​ಗಳಲ್ಲಿ ನಾಯಕ-ನಾಯಕಿಯರೇ ಬದಲಾಗಿ ವೀಕ್ಷಕರ ಬೇಸರಕ್ಕೆ ಕಾರಣವಾಗುವುದು ಇದೆ. ಆದರೆ ಸತ್ಯ ಸೀರಿಯಲ್​ನಲ್ಲಿ ಮೇನ್​ ಕ್ಯಾರೆಕ್ಟರ್​ಗಳು ಅವರೇ ಇರುವುದೇ ಸಮಾಧಾನ ಎನ್ನುತ್ತಿದ್ದಾರೆ ವೀಕ್ಷಕರು. ಜೊತೆಗೆ ಎಲ್ಲರೂ ಒಳ್ಳೆಯವರಾಗಿ ಮಾಡಿ ಸೀರಿಯಲ್​ಮುಗಿಸಿರುವುದಕ್ಕೂ ಸಮಾಧಾನ ತಂದಿದೆ. 

ಆದರೆ ಇಲ್ಲಿ ಮಿಸ್​ ಆದ ರೀತು ಲವರ್​ ರಾಕಿ ಅಂದ್ರೆ ಸತ್ಯ ತಮ್ಮ ಎಂದೇ ಕರೆಯುತ್ತಿದ್ದ ರಾಕಿ ಕೊನೆಗೆ ಎಲ್ಲಿ ಹೋದ ಎನ್ನುವುದು ತಿಳಿಯಲಿಲ್ಲ. ಇದರಿಂದಾಗಿ ನಿಮ್ಮ ಮದುವೆ ಕಥೆ  ಏನಾಯಿತು ಎಂದು ರೀತುಗೆ ಸೋಷಿಯಲ್​ ಮೀಡಿಯಾಗಳಲ್ಲಿ ಪ್ರಶ್ನೆ ಮಾಡುತ್ತಲೇ ಇದ್ದಾರೆ ಅಭಿಮಾನಿಗಳು. ಅವರಿಬ್ಬರ ಮದುವೆಯಾಗುವುದನ್ನು ತೋರಿಸಿಬಿಟ್ಟಿದ್ದರೆ ಸೀರಿಯಲ್​ಗೆ ಒಂದು ಅರ್ಥ ಬರುತ್ತಿತ್ತು. ಅದನ್ನು ಅಪೂರ್ಣ ಮಾಡಲಾಗಿದೆ ಎಂದು ಹೇಳಲಾಯಿತು. ಆದರೆ ಸೀರಿಯಲ್​ನಲ್ಲಿ ಮದುವೆಯಾಗದ ಈ ಜೋಡಿ ನಿಜವಾಗ್ಲೂ ಮದ್ವೆ ಆಗಿಬಿಟ್ರಾ ಎನ್ನುವಂಥ ವಿಡಿಯೋ ಒಂದು ವೈರಲ್​ ಆಗಿದೆ.

Tap to resize

Latest Videos

ಮುಂಗಾರು ಮಳೆಯೇ... ಗಾಯಕ ಸೋನು ನಿಗಮ್ ಕನ್ನಡ ಹಾಡು ಕಲಿಯಲು ಎಷ್ಟೆಲ್ಲಾ ಕಷ್ಟ ಪಡ್ತಾರೆ ನೋಡಿ...

ಅಷ್ಟಕ್ಕೂ ಈ ವಿಡಿಯೋ ಶೇರ್​ ಮಾಡಿಕೊಂಡಿರುವುದು ಮತ್ಯಾರೂ ಅಲ್ಲ, ಖುದ್ದು ರೀತು ಪಾತ್ರಧಾರಿಯಾಗಿರೋ ರಕ್ಷಿತಾ ಭಾಸ್ಕರ್​. ರೀತು-ರಾಕಿ ಮದ್ವೆ ಯಾವಾಗ ಎಂದು ಪ್ರಶ್ನೆ ಮಾಡ್ತಿದ್ರಲ್ಲ, ನೋಡಿ ನಮ್ಮ ಮದ್ವೆಯಾಯ್ತು ಎಂದು ರಕ್ಷಿತಾ ವಿಡಿಯೋ ಶೇರ್​  ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಒಂದು ಕ್ಷಣ ಅವಕ್ಕಾಗಿರೋದು ಗ್ಯಾರೆಂಟಿ. ಆದರೆ ಇದೇ ವಿಡಿಯೋದಲ್ಲಿ ಕಲರ್ಸ್​ ಕನ್ನಡ ಎಂದು ಬರೆದಿರುವ ಕಾರಣ, ಇದು ಯಾವುದೇ ಸೀರಿಯಲ್​ ಪಾರ್ಟ್​ದು ಎಂದು ತಿಳಿದಿದೆ. ಅದಕ್ಕಾಗಿ ಹಲವರು ನಟಿಯ ಕಾಲೆಳೆದಿದ್ದಾರೆ. ಜೀ ಟಿವಿಯಲ್ಲಿ ಶುರುವಾದ ಲವ್​, ಕಲರ್ಸ್ ಕನ್ನಡದಲ್ಲಿ ಮದ್ವೆವರೆಗೂ ಬಂತು ಎಂದು ತಮಾಷೆ ಮಾಡುತ್ತಿದ್ದಾರೆ. ಅಂದಹಾಗೆ ಈ ಜೋಡಿ ಹೂಮಳೆ ಸೀರಿಯಲ್​ನಲ್ಲಿ ಕಾಣಿಸಿಕೊಂಡಿದ್ದು, ಈ ಕ್ಯಾರೆಕ್ಟರ್​  ನಮಗೆ ತುಂಬಾ ಇಷ್ಟವಾಗಿದೆ ಎಂದು ಕೆಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ. 

ಅಂದಹಾಗೆ ರಕ್ಷಿತಾ ಅವರು, ಇದಾಗಲೇ ಕೆಲವು ಕಿರುತೆರೆಗಳಲ್ಲಿ ನಟಿಸಿದ್ದಾರೆ.  ʻರಾಜಾ ರಾಣಿʼ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಚಂದನಾ ಅನಂತಕೃಷ್ಣ ಮತ್ತು ರಕ್ಷಿತಾ ಹೂಮಳೆ ಧಾರಾವಾಹಿಯಲ್ಲಿ ಜತೆಯಾಗಿ ನಟಿಸಿದ್ದರು. ಇದಾದ ಬಳಿಕ ಸತ್ಯ ಸೀರಿಯಲ್​ ಇವರಿಗೆ ಅಪಾರ ಕೀರ್ತಿ ತಂದುಕೊಟ್ಟಿದೆ.  ಕ್ಲಾಸಿಕಲ್ ಡ್ಯಾನ್ಸರ್​ ಕೂಡ ಆಗಿರುವ ರಕ್ಷಿತಾ ಇದಾಗಲೇ ಹಲವು ಕಡೆಗಳಲ್ಲಿ ಕಾರ್ಯಕ್ರಮ ಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಇವರ ಈ ಪ್ರತಿಭೆಯನ್ನು ಅವರ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ನೋಡಬಹುದು.  ಡ್ಯಾನ್ಸ್‌ ವಿಡಿಯೋ ಜೊತೆ ಸುಮಧುರ ಹಾಡುಗಳನ್ನು ಅವರು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ರಾಕಿ ಪಾತ್ರಧಾರಿಯ ಹೆಸರು ಅಮೋಘ್​. ಅವರು ಇದಾಗಲೇ ಕೆಲವು ಧಾರಾವಾಹಿಗಳಲ್ಲಿ  ನಟಿಸಿದ್ದು, ಇದೀಗ ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಸುಬ್ಬು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಈಡೇರಲೇ ಇಲ್ಲ ಡಾ.ರಾಜ್‌ ಕೊನೆಯ ಆಸೆ! ಅಂತಿಮ ಕನಸು ಹೇಳಿದ್ದ ವಿಡಿಯೋ ವೈರಲ್‌- ಅದರಲ್ಲೇನಿದೆ?

click me!