ರಾಮ-ಮೇಘ ಶ್ಯಾಮ ಇಬ್ರೂ ಫ್ರೆಂಡ್ಸ್​! ಸಿಹಿಯ ಅಪ್ಪ ಅವನೇ ಎನ್ನೋ ಹೊತ್ತಲ್ಲಿ ಇದೇನಿದು ಸೀತಾರಾಮ ಟ್ವಿಸ್ಟ್​?

By Suchethana D  |  First Published Aug 22, 2024, 10:40 PM IST

 ರಾಮ ಮತ್ತು ಡಾ. ಮೇಘ ಶ್ಯಾಮ ಇಬ್ರೂ ಸ್ನೇಹಿತರು! ಮೇಘಶ್ಯಾಮ ಸಿಹಿಯ ಅಪ್ಪ ಎನ್ನೋ ಹೊತ್ತಲ್ಲಿ ಸೀತಾರಾಮ ಸೀರಿಯಲ್​ಗೆ ಇದೇನಿದು ಟ್ವಿಸ್ಟ್​? 
 


ಸೀತಾರಾಮ ಸೀರಿಯಲ್​ ಕುತೂಹಲ ಘಟ್ಟ ತಲುಪಿದೆ. ಭಾರ್ಗವಿ ಚಿಕ್ಕಿಯ ಕುತಂತ್ರಕ್ಕೆ ಸಿಹಿ ಬೋರ್ಡಿಂಗ್​ ಸ್ಕೂಲ್​ ಸೇರಿದ್ದಾಳೆ. ಬೋರ್ಡಿಂಗ್​ ಸ್ಕೂಲ್​ ಅಂದ್ರೇನು ಎಂಬುದರ ಅರಿವೂ ಇಲ್ಲದ ಚಿಕ್ಕ ಹುಡುಗಿಯ ತಲೆಗೆ ಅದನ್ನು ತುಂಬಿದವರು ಯಾರು ಎಂಬ ಬಗ್ಗೆ ಸ್ವಲ್ಪವೂ ಯೋಚನೆ ಮಾಡದ ಸೀತಾ ಮತ್ತು ರಾಮ ಆಕೆಯನ್ನು ಬಿಟ್ಟುಕೊಟ್ಟಿದ್ದಾರೆ. ಒಂದಿಷ್ಟು ಎಪಿಸೋಡ್​ಗಳಲ್ಲಿ ಇದೇ ವಿಷಯವಾಗಿ ಚರ್ಚೆ ನಡೆದಂತೆ ತೋರುತ್ತಿದ್ದರೂ ಮಗಳೇ ಸರ್ವಸ್ವ ಎಂದುಕೊಂಡಿರೋ ಸೀತಾ ಮಗಳನ್ನು ಬಿಟ್ಟುಕೊಟ್ಟಿರುವುದು ಪ್ರೇಕ್ಷಕರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಸಿಹಿ ಸೀತಾಳ ಮಗಳು ಹೌದೋ ಅಲ್ವೋ ಗೊತ್ತಿಲ್ಲ. ಆದರೆ ತಾತ ರಾಮನಿಂದ ಒಂದು ಮಗು ಬೇಕು ಎಂದಾಗ ಹೈಡ್ರಾಮಾ ಮಾಡಿದ್ದ ಸೀತಾ ಸಿಹಿಯೇ ಎಲ್ಲಾ ಎಂದಿದ್ದಳು. ಮತ್ತೆ  ಮಗು ಬೇಡ ಅಂದಿದ್ದಳು. ಅದರೆ ಇದೀಗ ಸಿಹಿಯ ಮನಸ್ಸನ್ನು ಬದಲಾಯಿಸಲು ವಿಫಲವಾಗಿದ್ದಾಳೆ. 

ಇಷ್ಟೆಲ್ಲಾ ಬೆಳವಣಿಗೆಯಿಂದಾಗಿ ಸೀತಾರಾಮ ಸೀರಿಯಲ್​ ವಿರುದ್ಧ ಪ್ರೇಕ್ಷಕರು ಅಸಮಾಧಾನ ಹೊರಹಾಕುತ್ತಿದ್ದ ಹೊತ್ತಲ್ಲೇ ಡಾ.ಮೇಘಶ್ಯಾಮ್​ ಎಂಟ್ರಿಯಾಗಿದೆ. ಬೋರ್ಡಿಂಗ್​ ಸ್ಕೂಲ್​ನಲ್ಲಿ ಸಿಹಿ ಮತ್ತು ಮೇಘಶ್ಯಾಮ್​ ಫ್ರೆಂಡ್ಸ್​ ಆಗಿದ್ದಾರೆ. ಈ ಡಾಕ್ಟರ್​ಗೆ ಸಿಹಿಯನ್ನು ಕಂಡರೆ ಅದೇನೋ ಮಮಕಾರ, ಸದಾ ಅವಳದ್ದೇ ಚಿಂತೆ. ಮನೆಗೆ ಹೋದಾಗ ಹೆಂಡತಿಗೂ ಹೊಟ್ಟೆಉರಿ ಆಗುವಷ್ಟರ ಮಟ್ಟಿಗೆ ಸಿಹಿಯ ಚಿಂತೆ ಮಾಡುತ್ತಿದ್ದಾನೆ. ಅವರಿಗೆ ಮಕ್ಕಳಿಲ್ಲ. ಆದ್ದರಿಂದ ಸಿಹಿಯನ್ನೇ ಮಗಳ ರೀತಿ ನೋಡುತ್ತಿದ್ದಾನೆ. ಇಷ್ಟೆಲ್ಲಾ ನೋಡಿದ ಸೀರಿಯಲ್​ ಪ್ರೇಮಿಗಳು ಇವಳು ಮೇಘಶ್ಯಾಮನದ್ದೇ ಮಗಳು ಎನ್ನುತ್ತಿದ್ದಾರೆ. ಹಾಗಿದ್ದರೆ ಸೀತಾ  ಮತ್ತು ಮೇಘಶ್ಯಾಮ್​ ಲವರ್ಸಾ ಎನ್ನುವ ಪ್ರಶ್ನೆ ಕಾಡಿತ್ತು. 

Tap to resize

Latest Videos

ಮುಂಗಾರು ಮಳೆಯೇ... ಗಾಯಕ ಸೋನು ನಿಗಮ್ ಕನ್ನಡ ಹಾಡು ಕಲಿಯಲು ಎಷ್ಟೆಲ್ಲಾ ಕಷ್ಟ ಪಡ್ತಾರೆ ನೋಡಿ...

ಅದೇ ಇನ್ನೊಂದೆಡೆ ಮೇಘಶ್ಯಾಮ್​ ಹೆಸರು ಕೇಳಿ ಸೀತಾ ಕೂಡ ಶಾಕ್​ ಆಗಿದ್ದಳು. ಫೋನ್​ನಲ್ಲಿ ಸಿಹಿ ಅವನ ಹೆಸ್ರು ಹೇಳ್ತಿದ್ದಂತೆಯೇ ಸೀತಾಳಿಗೆ ಶಾಕ್​ ಆಗಿತ್ತು. ಆದರೆ ಇದೀಗ ಮತ್ತೊಂದು ಕುತೂಹಲ ಘಟ್ಟ ತಲುಪಿದೆ. ಅದೇನೆಂದರೆ, ಸೀತಾ ಮತ್ತು ರಾಮ ಸಿಹಿಯನ್ನು ನೋಡಲು ಬೋರ್ಡಿಂಗ್​ ಸ್ಕೂಲ್​ಗೆ ಬಂದಿದ್ದಾರೆ. ಅಲ್ಲಿ ಶ್ಯಾಮ್​  ಅಂದ್ರೆ ಡಾ.ಮೇಘಶ್ಯಾಮ್​ ರಾಮ್​ಗೆ ಸಿಕ್ಕಿದ್ದಾನೆ. ಇಬ್ಬರೂ ನೋಡಿ ಖುಷಿಯಲ್ಲಿ ಅಪ್ಪಿಕೊಂಡಿದ್ದಾರೆ. ಇಬ್ಬರಿಗೂ ಪರಸ್ಪರ ಒಬ್ಬರಿಗೊಬ್ಬರು ಗೊತ್ತು. ಇಬ್ಬರೂ ಫ್ರೆಂಡ್ಸ್​. ಇದನ್ನು ನೋಡಿ ಸೀತಾಳಿಗೂ ಅಚ್ಚರಿಯಾಗಿದೆ. ಆದರೆ ಮೇಘಶ್ಯಾಮ್​ ಹೆಸರು ಕೇಳಿದ್ರೆ ಶಾಕ್​  ಆಗಿದ್ದ ಸೀತಾ ಆತನನ್ನು ನೋಡಿ ಯಾವುದೇ  ರಿಯಾಕ್ಷನ್​ ತೋರದೇ ಇರುವುದನ್ನು ನೋಡಿದರೆ ಆಕೆಗೆ ಆತ ಪರಿಚಯ ಇದ್ದಂತೆ ಕಾಣುತ್ತಿಲ್ಲ. 

ಹಾಗಿದ್ದರೆ ಈ ಮೇಘಶ್ಯಾಮ್​ ಯಾರು? ಸೀತಾ ಗಂಡನೂ ಅಲ್ಲ, ಲವರೂ ಅಲ್ಲ ಅನ್ನೋದು ಕನ್​ಫರ್ಮ್​  ಆಗಿದೆ. ಹಾಗಿದ್ದರೆ ಸಿಹಿಯ ಅಪ್ಪ ಆಗಿರಬಹುದು ಎನ್ನುವ ಗುಮಾನಿ ವೀಕ್ಷಕರದ್ದು. ಸಿಹಿಯ ಅಪ್ಪ ಆಗಿದ್ದರೂ ಸೀತಾಳಿಗೆ ಆ ಬಗ್ಗೆ ಗೊತ್ತಿಲ್ಲದೇ ಇರಬಹುದು. ಸಿಹಿ ಅಂತೂ ಸೀಳಾ ಹೆತ್ತ ಮಗಳು ಅಲ್ಲ ಎನ್ನುವುದು ದಿಟ. ಹಾಗಿದ್ದರೆ ಈ ಮೇಘಶ್ಯಾಮ್​ ಹಿಂದಿನ ರಹಸ್ಯವೇನು? ರಾಮ್​ ಮತ್ತು ಶ್ಯಾಮ್​ ಹೇಗೆ ಸ್ನೇಹಿತರು ಎಂಬೆಲ್ಲಾ ಪ್ರಶ್ನೆ ಹುಟ್ಟುಹಾಕಿರೋ ಸೀತಾರಾಮ ಮತ್ತೆ ವೀಕ್ಷಕರ ಕುತೂಹಲ ಕೆರಳಿಸುತ್ತಿದೆ.

ಈಡೇರಲೇ ಇಲ್ಲ ಡಾ.ರಾಜ್‌ ಕೊನೆಯ ಆಸೆ! ಅಂತಿಮ ಕನಸು ಹೇಳಿದ್ದ ವಿಡಿಯೋ ವೈರಲ್‌- ಅದರಲ್ಲೇನಿದೆ? 

click me!