
ಕನ್ನಡ ಚಿತ್ರರಂಗದ (Sandalwood) ಮನೆ ಮಗಳು ಮೇಘನಾ ರಾಜ್ (Meghana Raj) ಮದರ್‌ವುಡ್ ಎಂಜಾಯ್ ಮಾಡುತ್ತಲೇ, ತಮ್ಮ ವೃತ್ತಿ ಜೀವನಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪದೆ ಪದೇ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಪ್ರಶ್ನೆ ಮಾಡುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪತಿ ಹುಟ್ಟುಹಬ್ಬದ ದಿನ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸಿಹಿ ಸುದ್ದಿ ನೀಡಿದ್ದರು, ಹೊಸ ವರ್ಷಕ್ಕೆ ಹೊಸ ಪ್ರಾಜೆಕ್ಟ್ ಬಗ್ಗೆ ಹಂಚಿಕೊಂಡಿದ್ದಾರೆ.
ಹೌದು! ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಶೀಘ್ರವೇ ಆರಂಭವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮ ಡ್ಯಾನ್ಸಿಂಗ್ ಚಾಂಪಿಯನ್ (Dancing Champions) ಶೋನಲ್ಲಿ ತೀರ್ಪುಗಾರ್ತಿಯಾಗಿ ನಟಿ ಮೇಘನಾ ರಾಜ್ ಆಗಮಿಸಲಿದ್ದಾರೆ. ವಾಹಿನಿ ಮತ್ತು ಮೇಘನಾ ಈ ಬಗ್ಗೆ ಒಂದು ಸಣ್ಣ ವಿಡಿಯೋ ಹಂಚಿಕೊಂಡಿದ್ದಾರೆ. 'ಜೀವನದಲ್ಲಿ ಅನೇಕ ಮೊದಲುಗಳು ಇರುತ್ತವೆ. ಮೊದಲ ಬಾರಿ ಡ್ಯಾನ್ಸ್ ರಿಯಾಲಿಟಿ ಶೋ ಜಡ್ಜ್ ಆಗಿ. ಕಲರ್ಸ್ ಕನ್ನಡ, ಸೃಜನ್ ಲೋಕೇಶ್ (Srujan Lokesh), ಮತ್ತು ಲೋಕೇಶ್ ಪ್ರೊಡಕ್ಷನ್‌ಗೆ ಧನ್ಯವಾದಗಳು. ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ನನ್ನನ್ನು ಸೆಲೆಬ್ರಿಟಿ ಜಡ್ಜ್ ಆಗಿ ಬರ ಮಾಡಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ಪ್ರತಿಯೊಬ್ಬ ಟ್ಯಾಲೆಂಟೆಡ್ ಸ್ಪರ್ಧಿಗೂ ಧನ್ಯವಾದಗಳು. ವಿಜಯ್ ರಾಘವೇಂದ್ರ (Vijay Raghavendra) ಮತ್ತು ಮಯೂರಿ (Mayuri) ಅವರ ಜೊತೆ ಸಮಯ ಕಳೆಯುವುದು ತುಂಬಾನೇ ಸಂತೋಷವಾಗಿದೆ. ನಿರೂಪಕ ಅಕುಲ್ ಬಾಲಾಜಿ, ನೀವು ಕೂಡ ಸೂಪರ್,' ಎಂದು ಮೇಘನಾ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಮೇಘನಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮೊದಲ ದಿನದ ಚಿತ್ರೀಕರಣ ಎಂದು ಸುಳಿವು ನೀಡಿದ್ದರು. ಅದಾದ ನಂತರ ಮೇಕಪ್ ಹಚ್ಚಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಆದರೆ ಯಾವ ಸಿನಿಮಾ? ಯಾವ ಕಾರ್ಯಕ್ರಮ ಎಂದು ರಿವೀಲ್ ಮಾಡಿರಲಿಲ್ಲ. ಹೀಗಾಗಿ ಸಡನ್ ಆಗಿ ಗುಡ್ ನ್ಯೂಸ್ ಕೇಳಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಇಡೀ ಶೋ ಮೇಘನಾ ತೀರ್ಪುಗಾರ್ತಿ ಅಗಿರುತ್ತಾರಾ ಅಥವಾ ಒಂದು ದಿನಕ್ಕೆ ಮಾತ್ರವೇ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಜ್ಯೂನಿಯರ್ ಚಿರು ಆಗಮನದ ನಂತರ ಪೇರೆಂಟಿಂಗ್‌ನಲ್ಲಿ (Parenting) ಬ್ಯುಸಿಯಾಗಿರುವ ಮೇಘನಾ ಯಾವ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದರು. ಹಲವು ಬ್ರ್ಯಾಂಡ್‌ಗಳ (polupar brands) ಜೊತೆ ಕೊಲಾಬೋರೆಟ್ ಮಾಡಿಕೊಂಡು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ವರ್ಕೌಟ್ ಶುರು ಮಾಡಿರುವ ಮೇಘನಾ ರಾಜ್ ಟ್ರ್ಯಾನ್ಸ್‌ಫಾರ್ಮೇಶನ್ ಅನ್ನು ಹಲವರು ಗಮನಿಸಿದ್ದಾರೆ. ಈ ಬಟ್ಟೆ ಎಲ್ಲಿ ತೆಗೆದುಕೊಂಡಿದ್ದು, ಈ ಬ್ಯಾಗ್ ಯಾವ ಬ್ರ್ಯಾಂಡ್ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಾರೆ. ಒಟ್ಟಿನಲ್ಲಿ ಮೇಘನಾ ಎಲ್ಲರೊಟ್ಟಿಗೆ ಮಾತನಾಡುತ್ತಿರುವುದೇ ಸಂತೋಷ ಎಂದಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 17ರಂದು ಚಿರಂಜೀವಿ (Chiranjeevi Sarja) ಸರ್ಜಾ ಹುಟ್ಟುಹಬ್ಬದ ದಿನ ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್ ಬಗ್ಗೆ ಹಂಚಿಕೊಂಡಿದ್ದರು. ಆಪ್ತ ಗೆಳೆಯ ಪನ್ನಗಾಭರಣ (Pannagha Bharana) ನಿರ್ದೇಶಕ ಮಾಡುತ್ತಿರುವ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ವಾಸುಕಿ ವೈಭವ್ (Vasuki Vaibhav) ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚಿರಂಜೀವಿ, ಪ್ರಜ್ವಲ್ ದೇವರಾಜ್ (Prajwal Devaraj) ಮತ್ತು ಪನ್ನಗಾಭರಣ ಒಟ್ಟಾಗಿ ಸಿನಿಮಾ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಚಿರು ಸ್ನೇಹಿತರ ಜೊತೆ ಕೆಲಸ ಮಾಡಬೇಕು ಎಂದು ಕಟ್ಟಿ ಕೊಂಡಿದ್ದ ಕನಸನ್ನು ಮೇಘನಾ ನನಸು ಮಾಡಲು ಮುಂದಾಗಿದ್ದಾರೆ. ಹೀಗಾಗಿ ಕರ್ನಾಟಕದ ಮನೆ ಮಗಳಿಗೆ ಕಮ್‌ಬ್ಯಾಕ್‌ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಕೆಲವು ದಿನಗಳ ಹಿಂದೆ ಮಲಯಾಳಂ ನಟಿ ಆಹಾನ ಕೃಷ್ಣ (Ahaana Krishna) ಕುಟುಂಬದವರು ಬೆಂಗಳೂರಿಗೆ ಆಗಮಿಸಿ, ಮೇಘನಾ ಮತ್ತು ರಾಯನ್ ರಾಜ್ ಸರ್ಜಾ (Raayan Raj Sarja) ಜೊತೆ ಸಮಯ ಕಳೆದಿದ್ದಾರೆ. ಅವರೊಟ್ಟಿಗೆ ಸಮಯ ಕಳೆದ ಕ್ಷಣಗಳು ಅದ್ಭುತವಾಗಿದ್ದವು, ಎಂದು ಮೇಘನಾ ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.