ರಾಜನಂದಿನಿ ಯಾರೆಂದು ತಿಳಿದುಕೊಳ್ಳುವ ಸಮಯದಲ್ಲಿ ಆರ್ಯವರ್ಧನ್ ಮತ್ತೊಂದು ಶೇಡ್ ನೋಡಿ ಶಾಕ್ ಆದ ವೀಕ್ಷಕರು.
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jothe Jotheyalli) ಧಾರಾವಾಹಿ ದಿನೆ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಪ್ರತಿ ತಿಂಗಳೂ ಒಂದೊಂದು ಟ್ವಿಸ್ಟ್ ನೀಡುತ್ತಿರುವ ಧಾರಾವಾಹಿ ಈಗಲೂ ಟಿಆರ್‌ಪಿಯಲ್ಲಿ (TRP) ಪ್ರಥಮ ಸ್ಥಾನ ಗಳಿಸುತ್ತಿದೆ. ಆರ್ಯವರ್ಧನ್ ಮತ್ತು ಅನು ಸಿರಿಮನೆ ಜೋಡಿಗೆ ಫಿದಾ ಆದವರು ಒಬ್ರಾ, ಇಬ್ರಾ? ಆದರೆ ಆರ್ಯವರ್ಧನ್ ಮತ್ತೊಂದು ಮುಖ ನೋಡಿ ಅನು ಮಾತ್ರವಲ್ಲ, ವೀಕ್ಷಕರೂ ಕೂಡ ಶಾಕ್ ಆಗಿದ್ದಾರೆ.
ಹೌದು! ಆರ್ಯವರ್ಧನ್ (Aryavardhan) ಮತ್ತು ಅನು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಎಲ್ಲವೂ ಬ್ಯೂಟಿಫುಲ್. ಇನ್ನು ರೊಮ್ಯಾನ್ಸ್ (Romance) ಮಾತ್ರ ಎಂದುಕೊಂಡಿದ್ದ ವೀಕ್ಷಕರಿಗೆ ನಿರ್ದೇಶಕರು ಕೊಂಚ ಮಸಾಲ (Plot Twist) ಸೇರಿಸಿ ಎಂಜಾಯ್ ಎಂದಿದ್ದಾರೆ. ಏಕೆಂದರೆ ರಾಜನಂದಿನಿ (Rajanandini) ಸಂಪೂರ್ಣ ಆಸ್ತಿಯನ್ನು ಸಹೋದರ ಹರ್ಷನ (Harsha) ಹೆಸರಿನಲ್ಲಿ ಬರೆದಿದ್ದಾರೆ. ಸಣ್ಣ ಪಾಲೂ ಆರ್ಯವರ್ಧನ್ ಹೆಸರಿಗಿಲ್ಲ. ಈ ವಿಚಾರ ತಿಳಿಯುತ್ತಿದ್ದಂತೆ, ಕುಟುಂಬಸ್ಥರ ಎದುರು ಸಾಮಾನ್ಯವಾಗಿಯೇ ವರ್ತಿಸುವ ಆರ್ಯ, ಹಣ (Money) ಹೇಗೆ ತನ್ನ ಪಾಲಾಗಬೇಕು ಎಂದು ಪಿಎ ಜೇಂಡೆ (Jende) ಜೊತೆ ಹಿಂದಗಡೆ ಪ್ಲಾನ್ ಮಾಡುತ್ತಿದ್ದಾರೆ.
ಮದುವೆ (Marriage) ನಂತರ ಮತ್ತೆ ಆಫೀಸ್‌ಗೆ ಮರುಳಿರುವ ಅನು ಎಲ್ಲಾ ಡಾಕ್ಯುಮೆಂಟ್‌ಗಳನ್ನು ತೆಗೆದು ನೋಡುತ್ತಿದ್ದಾಳೆ. ಕಂಪನಿಯಲ್ಲಿ (Company) ಸಣ್ಣ ಮೋಸದ ಕೆಲಸ ನಡೆಯುತ್ತಿದೆ. ಅದರಲ್ಲಿ ಕೋಟಿ ಕೋಟಿ ಹಣ ಯಾರದ್ದೋ ಖಾತೆಗೆ ವರ್ಗಾವಣೆ ಆಗುತ್ತಿದೆ, ಎಂಬುದಾಗಿ ತಿಳಿದು ಬಂದಿದೆ. ಹರ್ಷ ಜೊತೆ ಸೇರಿಕೊಂಡು ಇದರ ಹಿಂದಿರುವ ವ್ಯಕ್ತಿಗಳನ್ನು ಬಯಲು ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದರ ಬಗ್ಗೆ ಅರ್ಯವರ್ಧನ್ ಯಾವುದೇ ಇಂಟ್ರೆಸ್ಟ್ ತೋರಿಸುತ್ತಿಲ್ಲ. ಹೀಗಾಗಿ ಅನುಗೆ ಅರ್ಯನ ವರ್ತನೆ ಬಗ್ಗೆ ಸಣ್ಣ ಡೌಟ್ ಶುರುವಾಗಿದೆ.
ಜೊತೆ ಜೊತೆಯಲಿ' ಮಾನ್ಸಿ ಪಾತ್ರಕ್ಕೆ ನಯನಾ ಎಂಟ್ರಿ!ಅರ್ಯವರ್ಧನ್ ಮಾಡುತ್ತಿರುವ ಪ್ಲ್ಯಾನ್ ಬಗ್ಗೆ ಜೇಂಡೆಗೆ ತಿಳಿದಿದೆ. ಆದರೆ ಅನುಗೆ ಯಾವ ಸುಳಿವೂ ನೀಡುತ್ತಿಲ್ಲ. ಎಲ್ಲರ ಎದುರು ನಾರ್ಮಲ್ ಆಗಿ ವರ್ತಿಸಿ. ಸೈಡ್‌ನಲ್ಲಿ ಆರ್ಯ ಮತ್ತೊಂದು ಶೇಡ್ ರಿವೀಲ್ ಮಾಡುತ್ತಿರುವ ಕಾರಣ ಅದ್ಭುತವಾಗಿ ನಟಿಸುತ್ತಿದ್ದಾರೆ. ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಅರ್ಯವರ್ಧನ್ ಅವರಗಿರುವ ಪ್ರತಿಭೆಗೆ ತಕ್ಕ ಪಾತ್ರವಿದು. ಅವರು ಎಲ್ಲಾ ರೀತಿ ಪಾತ್ರವನ್ನು ಅದ್ಭುತವಾಗಿ ಮಾಡುತ್ತಾರೆಂದು ದಾದಾ ಅಭಿಮಾನಿಗಳು ಕೂಡ ಕಾಮೆಂಟ್ ಮಾಡಿದ್ದಾರೆ.
ಮಕ್ಕಳ ಜೊತೆ ಜಮ್ಮು- ಕಾಶ್ಮೀರದ ವೈಷ್ಣೋ ದೇವಿ ದರ್ಶನ ಪಡೆದ ನಟ ಅನಿರುದ್ಧಅತ್ತೆ ಕೊಟ್ಟ ಮುತ್ತಿನ ಹಾರವನ್ನು (Pearl Necklace) ಸಂತೋಷದಿಂದ ಸ್ವೀಕರಿಸಿದ ಅನು ಅದನ್ನು ಧರಿಸಿಕೊಂಡು ಆರ್ಯವರ್ಧನ್ ಜೊತೆ ಮಾತನಾಡಲು ಬರುತ್ತಾಳೆ. ಆರ್ಯ ಅದನ್ನು ಗಮನಿಸಿ ಬೇಸರ ಮಾಡಿಕೊಳ್ಳುತ್ತಾರೆ. ಇದು ರಾಜನಂದಿನಿ ಸರ. ನೀನು ಯಾಕೆ ಧರಿಸಿರುವೆ ಎಂದು ಪ್ರಶ್ನೆ ಮಾಡುತ್ತಾನೆ. ಇಲ್ಲ ಅಮ್ಮ ಕೊಟ್ಟಿದ್ದು. ಇದು ರಾಜನಂದಿನಿ ಅವರದ್ದು ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರೂ ಆರ್ಯ ಮಾತು ಕೇಳುವುದಿಲ್ಲ. ನಾನು ನಿನ್ನನ್ನು ಅನು ಆಗಿ ನೋಡಲು ಇಷ್ಟ ಪಡುವೆ. ದಯವಿಟ್ಟು ನೀನು ರಾಜನಂದಿನಿ ರೀತಿ ಬದಲಾಗಬೇಡ, ಎಂದು ಮನವಿ ಮಾಡಿಕೊಳ್ಳುತ್ತಾನೆ.
ಹೊಸ ವರ್ಷಕ್ಕೆ ಧಾರಾವಾಹಿಯಲ್ಲಿ ಆಗುತ್ತಿರುವ ಬದಲಾವಣೆ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಮದುವೆ ಆದ ನಂತರ ರಾಜನಂದಿನಿ ಯಾರು ಎಂದು ರಿವೀಲ್ ಮಾಡುತ್ತಾರೆ ಎಂದುಕೊಂಡಿದ್ದರು. ಆದರೆ ಅಷ್ಟರಲ್ಲಿಯೇ ಆರ್ಯವರ್ಧನ್ ನಿಜಕ್ಕೂ ಯಾರು ಎಂದು ತಿಳಿದುಕೊಳ್ಳುವ ಸಮಯ ಹತ್ತಿರ ಬಂದಿದೆ. ಬೇರೆ ಭಾಷೆಗಳಲ್ಲಿ ಬರುತ್ತಿರುವ ಧಾರಾವಾಹಿಯನ್ನು ಜೊತೆ ಜೊತೆಯಲಿಗೆ ಹೊಲಿಸಬೇಡಿ, ಎಂದು ಈ ಹಿಂದೆ ನಿರ್ದೇಶಕರು ಹೇಳಿದ್ದರು. ಅದು ನಿಜನೇ. ಏಕೆಂದರೆ ಕನ್ನಡದಲ್ಲಿ ಬರುತ್ತಿರುವುದು ತುಂಬಾನೇ ವಿಭಿನ್ನವಾಗಿದೆ. ಅಲ್ಲದೆ ಆರ್ಯವರ್ಧನ್ ಅಭಿನಯದಲ್ಲಿ ಅದೆಷ್ಟೋ ಸಿನಿ ರಸಿಕರು ದಾದಾ ಡಾ.ವಿಷ್ಣುವರ್ಧನ್ (Dr Vishnuvardhan) ಅವರನ್ನು ಕಾಣುತ್ತಿದ್ದಾರೆ.