ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಲಕ್ಷ್ಮೀ ಗರ್ಭಿಣಿಯಾಗಿದ್ದಾಳಾ ಎನ್ನುವ ಪ್ರಶ್ನೆ ಎದುರಾಗಿದೆ. ಈ ರೀತಿ ಪ್ರಶ್ನೆ ಏಳಲು ಕಾರಣವೂ ಇದೆ.
ಜನಪ್ರಿಯ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇನ್ನೇನು ಅಂತ್ಯ ಆಗ್ತಿದೆ. ಹೀಗಿರುವಾಗ ಕ್ಲೈಮ್ಯಾಕ್ಸ್ ಏನಾಗಿರಬಹುದು ಎಂಬ ಕುತೂಹಲ ಶುರುವಾಗಿದೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಲಕ್ಷ್ಮೀ ಸೀಮಂತದ ಫೋಟೋವೊಂದು ವೈರಲ್ ಆಗ್ತಿದೆ.
ಕೀರ್ತಿಗೆ ನೆನಪಿನ ಶಕ್ತಿ ಬಂತು!
ಈಗಾಗಲೇ ಕೀರ್ತಿಗೆ ನೆನಪಿನ ಶಕ್ತಿ ಬಂದಿದ್ದು, ಹಳೆಯದೆಲ್ಲವೂ ನೆನಪಾಗಿದೆ. ತಮಗೆ ಬೇಕಾದಂತೆ ನಮ್ಮ ಜೀವನವನ್ನು ಹಾಳು ಮಾಡಿರೋ ಕಾವೇರಿ ಆಂಟಿಯನ್ನು ಕೊಲ್ತೀನಿ ಅಂತ ಕೀರ್ತಿ ತ್ರಿಶೂಲ ಹಿಡಿದು ಹೊರಟಿದ್ದಳು. ಅದನ್ನು ನೋಡಿ ಲಕ್ಷ್ಮೀ ತಡೆದಿದ್ದಾಳೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ.
ಸೀರಿಯಲ್ ಮುಗಿಯುತ್ತಿದ್ದಂತೆ ದುಬಾರಿ ಕಾರು ಖರೀದಿಸಿದ ಲಕ್ಷ್ಮೀ ಬಾರಮ್ಮ ನಟಿ … ಬೆಲೆ ಎಷ್ಟು ಗೊತ್ತ?
ಲಕ್ಷ್ಮೀ ಗರ್ಭಿಣಿಯೇ?
ಹೀಗಿರುವಾಗ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಲಕ್ಷ್ಮೀ ಗರ್ಭಿಣಿಯಾಗಿದ್ದು, ಸೀಮಂತ ಮಾಡುತ್ತಿರುವ ಹಾಗೆ ಕಾಣ್ತಿದೆ. ಅಂದರೆ ಈ ಧಾರಾವಾಹಿ ಅಂತ್ಯದಲ್ಲಿ ಲಕ್ಷ್ಮೀ ಗರ್ಣಿಣಿಯಾಗಲೂಬಹುದು. ಈ ಮೂಲಕ ರಾಜ್ಯವೇ ಖುಷಿಪಡುವ ಸುದ್ದಿ ಸಿಕ್ಕಿದೆಯಾ?
ಧಾರಾವಾಹಿ ಕೊನೆಯ ಸಂಚಿಕೆಗಳ ಪ್ರಸಾರ ಯಾವಾಗ?
ಕಲರ್ಸ್ ಕನ್ನಡ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿ ಅಂತ್ಯಾ ಆಗುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಏಪ್ರಿಲ್ 14ರಂದು ಈ ಧಾರಾವಾಹಿಯ ಕೊನೆಯ ಎಪಿಸೋಡ್‌ಗಳು ಪ್ರಸಾರ ಆಗಲಿವೆಯಂತೆ. ಧಾರಾವಾಹಿಯ ಟಿಆರ್‌ಪಿ ಚೆನ್ನಾಗಿದ್ದರೂ ಕೂಡ ಈ ಸೀರಿಯಲ್ ಅಂತ್ಯ ಆಗ್ತಿರೋದು ಯಾಕೆ ಎನ್ನೋದು ಮಾತ್ರ ದೊಡ್ಡ ಪ್ರಶ್ನೆಯಾಗಿದೆ.
ಕೀರ್ತಿ - ಲಕ್ಷ್ಮಿ ರುದ್ರತಾಂಡವ, ಡಾನ್ಸ್ ಮೆಚ್ಚಿದ್ರೂ ವೀಕ್ಷಕರ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ
ಧಾರಾವಾಹಿ ಕಥೆ ಏನು?
ಈ ಧಾರಾವಾಹಿಯಲ್ಲಿ ಹೀರೋ ತಾಯಿ ಕಾವೇರಿ ನಿಜಕ್ಕೂ ಸಿಕ್ಕಾಪಟ್ಟೆ ದುಷ್ಟ ತಾಯಿ. ಮಗನ ಮೇಲಿನ ವ್ಯಾಮೋಹದಿಂದ ಅವಳು ಏನು ಬೇಕಿದ್ರೂ ಮಾಡ್ತಾಳೆ. ತನ್ನ ಮಗನಿಗೆ ನಾನು ಮಾತ್ರ ಆದ್ಯತೆ ಆಗಿರಬೇಕು ಅಂತ ಅವಳು ಬಯಸುತ್ತಾಳೆ. ನನ್ನ ಮಗ ನಾನು ಹೇಳಿದಂತೆ ಕೇಳಬೇಕು ಎಂದು ಅವಳು ಅಂದುಕೊಳ್ತಾಳೆ. ಇದಕ್ಕೆ ಏನು ಬೇಕಿದ್ರೂ ಮಾಡ್ತಾಳೆ. ಇದಕ್ಕಾಗಿ ಅವಳು ವೈಷ್ಣವ್ ಪ್ರೀತಿಸಿದ್ದ ಹುಡುಗಿ ಕೀರ್ತಿಯನ್ನು ಅವನಿಂದ ದೂರ ಮಾಡಿದಳು. ಆಮೇಲೆ ಲಕ್ಷ್ಮೀ ಎನ್ನುವ ಹುಡುಗಿ ಜೊತೆ ಮಗನ ಮದುವೆ ಮಾಡಿದಳು. ಲಕ್ಷ್ಮೀ ಹಾಗೂ ವೈಷ್ಣವ್ ಮದುವೆಯಾದಮೇಲೆ ಪ್ರೀತಿಯಲ್ಲಿ ಬಿದ್ದರು. ವೈಷ್ಣವ್ ಹೆಂಡ್ತಿ ತನ್ನ ಮೇಲೆ ಅನುಮಾನ ಪಟ್ಟಳು, ಪ್ರಶ್ನೆ ಮಾಡೋಕೆ ಆರಂಭಿಸಿದಳು ಅಂತ ಸೊಸೆಯನ್ನು ಅವಳು ಮನೆಯಿಂದ ಹೊರಗಡೆ ಹಾಕಿದ್ದಾಳೆ. ಈಗ ಮಗನಿಗೆ ಇನ್ನೊಂದು ಮದುವೆ ಮಾಡೋಕೆ ರೆಡಿಯಾಗಿದ್ದಾಳೆ. ಕಾವೇರಿ ಮಾಡಿದ ಮೋಸಕ್ಕೆ ವೈಷ್ಣವ್- ಕೀರ್ತಿ ದೂರ ಆದರು. ಈಗ ಕೀರ್ತಿ ಏನು ಮಾಡಬೇಕು? ವೈಷ್ಣವ್‌ಗೆ ತಾಯಿ ಬಣ್ಣ ಗೊತ್ತಾಗತ್ತಾ? ಅವನು ಏನು ಮಾಡ್ತಾನೆ? ಕಾವೇರಿಗೆ ಏನು ಶಿಕ್ಷೆ ಆಗತ್ತೆ? ಕ್ಲೈಮ್ಯಾಕ್ಸ್ ಏನಾಗತ್ತೆ ಎಂಬ ಕುತೂಹಲ ಶುರುವಾಗಿದೆ.
ಪಾತ್ರಧಾರಿಗಳು
ವೈಷ್ಣವ್- ನಟ ಶಮಂತ್ ಬ್ರೋ ಗೌಡ
ಲಕ್ಷ್ಮೀ- ನಟಿ ಭೂಮಿಕಾ ರಮೇಶ್
ಕೀರ್ತಿ- ನಟಿ ತನ್ವಿ ರಾವ್
ಕಾವೇರಿ- ನಟಿ ಸುಷ್ಮಾ ನಾಣಯ್ಯ
ಸುಪ್ರೀತಾ - ನಟಿ ರಜನಿ ಪ್ರವೀಣ್