ʼಕರ್ಣʼ ಧಾರಾವಾಹಿಯಲ್ಲಿ ಕಿರಣ್ ರಾಜ್‌ಗೆ ಭವ್ಯಾ ಗೌಡ ನಾಯಕಿಯಾಗಿದ್ದಾರೆ. ಪ್ರೋಮೋ ಶೂಟಿಂಗ್‌ನಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ʼಕರ್ಣʼ ಧಾರಾವಾಹಿಯಲ್ಲಿ ನಟ ಕಿರಣ್ ರಾಜ್‌ಗೆ ಯಾರು ಹೀರೋಯಿನ್ ಆಗ್ತಾರೆ ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಕನ್ನಡ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ, ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟನಿಗೆ ಯಾರು ನಾಯಕಿ ಆಗ್ತಾರೆ ಎಂಬ ಕುತೂಹಲ ಹೆಚ್ಚಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ.
ನಾಯಕಿ ಯಾರು?
ʼಕರ್ಣʼ ಧಾರಾವಾಹಿಯ ಪ್ರೋಮೋ ಶೂಟಿಂಗ್ ಆಗಿದ್ದು, ಅದರಲ್ಲಿ ಕಿರಣ್ ರಾಜ್ ಜೊತೆ ಭವ್ಯಾ ಗೌಡ ಇರೋರು ಪಕ್ಕಾ ಆಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹೀಗಾಗಿ ʼಕರ್ಣʼ ಧಾರಾವಾಹಿ ಹೀರೋಯಿನ್ ಭವ್ಯಾ ಗೌಡ ಎನ್ನೋದು ಈಗ ಅಧಿಕೃತವಾದಂತಾಯ್ತು. ಏನಂತೀರಾ?
ರೇಸ್ ಜಾಕಿಯಾದ ಕನ್ನಡತಿ ಖ್ಯಾತಿಯ ಕಿರಣ್ ರಾಜ್: 'ಜಾಕಿ 42' ಟೈಟಲ್ ಪೋಸ್ಟರ್ ರಿಲೀಸ್!
ಕರ್ಣನ ಮನದರಸಿ ಯಾರು?
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಭವ್ಯಾ ಗೌಡ ಅವರು ಫೈನಲ್‌ವರೆಗೂ ತಲುಪಿದ್ದರು. ಅದಾದ ನಂತರದಲ್ಲಿ ಅವರು ಯಾವುದೇ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ಅವರು ʼಕರ್ಣʼ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಬರ್ತಿರೋದು ಪಕ್ಕಾ ಆದಂತಾಯ್ತು. ʼಗೀತಾʼ ಧಾರಾವಾಹಿಯಲ್ಲಿ ನಟಿಸಿದ್ದ ಭವ್ಯಾ ಈಗ ʼಕರ್ಣʼನ ಮನದರಸಿ ಆಗಿದ್ದಾರೆ. ಒಟ್ಟಿನಲ್ಲಿ ಕಿರಣ್ ರಾಜ್, ಭವ್ಯಾ ಗೌಡ ಜೋಡಿ ತೆರೆ ಮೇಲೆ ಹೇಗೆ ಕಾಣಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಪ್ರೋಮೋದಲ್ಲಿ ಏನಿದೆ?
ಕಿರಣ್ ರಾಜ್ ನಟನೆಯ ʼಕರ್ಣʼ ಧಾರಾವಾಹಿ ಪ್ರೋಮೋ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ರೀಚ್ ಆಗಿದೆ. ಒಂದು ದೊಡ್ಡದಾದ, ಭವ್ಯವಾದ ಬಂಗಲೆ, ಅಲ್ಲಿ ಅಪ್ಪ-ಅಮ್ಮ, ಅತ್ತಿಗೆ, ಅಜ್ಜಿ ಹೀಗೆ ಎಲ್ಲರೂ ಇರುತ್ತಾರೆ. ಆ ಮನೆಯಲ್ಲಿ ಎಲ್ಲರೂ ಇದ್ದು, ಎಲ್ಲವೂ ಇದ್ದಯ ಕರ್ಣ ಮಾತ್ರ ಅನಾಥನಾಗಿದ್ದಾನೆ. ಬೆಳಗ್ಗೆಯೇ ಎದ್ದು ಹೆಣ್ಣು ಮಕ್ಕಳ ರೀತಿ ದೇವರಿಗೆ ಪೂಜೆ ಮಾಡಿ, ಅಷ್ಟೇ ಅಲ್ಲದೆ ಅಡುಗೆಯನ್ನೂ ಮಾಡಿ, ವರ್ಕೌಟ್ ಮಾಡ್ತಿರುವ ಅತ್ತಿಗೆಗೆ ಜ್ಯೂಸ್ ಕೊಟ್ಟು, ಅದೂ ಸಾಕಾಗಿಲ್ಲ ಅಂತ ಚಪ್ಪಲಿಯನ್ನು ಹೊಲಿಸಿ ಕೊಡುವ ಕಥೆ ಇಲ್ಲಿದೆ.
ಅಕ್ಷರಸ್ಥರೇ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ: ಎಚ್.ವಿಶ್ವನಾಥ್ ಕಳವಳ
ಈ ಕರ್ಣ ಬರೀ ಮನೆ ಕೆಲಸ ಮಾಡ್ತಿಲ್ಲ, ಬದಲಾಗಿ ಡಾಕ್ಟರ್ ಹೌದು. ಅಷ್ಟೇ ಅಲ್ಲದೆ ಪ್ರಶಸ್ತಿಯನ್ನೂ ಗೆದ್ದಿದ್ದಾನೆ. ಡಾಕ್ಟರ್ ಕರ್ಣನಿಗೆ ಪ್ರಶಸ್ತಿ ಸಿಕ್ಕಿತ್ತು. ಆಗಲೂ ಅವನು ಇದಕ್ಕೆಲ್ಲ ಮನೆಯವೇ ಕಾರಣ ಅಂತ ಕ್ರೆಡಿಟ್ ಕೊಡ್ತಾನೆ.
ಕರ್ಣನನ್ನು ಯಾಕೆ ಅವನ ತಂದೆ ಇಷ್ಟಪಡಲ್ಲ ಎನ್ನೋದು ಈಗ ಇರುವ ಪ್ರಶ್ನೆ. ತಿಪ್ಪೆಗುಂಡಿಯಲ್ಲಿ ಬಿದ್ದಿದ್ದ ಅಂತ ಅವನನ್ನು ಹೀಯಾಳಿಸುತ್ತಾರೆ. ಕರ್ಣ ತಿಪ್ಪೆಗುಂಡಿಯಲ್ಲಿ ಬಿದ್ದಿದ್ದರೆ, ಅವನನ್ನು ತಂದು ಬೆಳೆಸಿದ್ದು ಯಾರು? ಮೆಡಿಕಲ್ ಓದಿಸಿದ್ದು ಯಾರು? ಅವನನ್ನು ಡಾಕ್ಟರ್ ಆಗುವಂತೆ ಮಾಡಿದ್ದು ಯಾರು? ಮಹಿಳಾ ಪ್ರಧಾನ ಧಾರಾವಾಹಿಗಳ ಮಧ್ಯೆ ಕಿರಣ್ ರಾಜ್ ಅವರು ಹೀರೋ ಪ್ರಧಾನ ಕಥೆ ಮಾಡ್ತಿದ್ದಾರೆ. ಒಟ್ಟಿನಲ್ಲಿ ಈ ಧಾರಾವಾಹಿ ಹೇಗೆ ಬರಲಿದೆ ಎಂಬ ಕುತೂಹಲ ಇದೆ.