ಇನ್‌ಸ್ಟಾಗ್ರಾಮ್ ಸ್ಟಾರ್ ಕಿಪಿ ಕೀರ್ತಿಯ ಸೌಂದರ್ಯವನ್ನು ಮತ್ತೊಬ್ಬ ರೀಲ್ಸ್ ಸ್ಟಾರ್ ಹಾಡಿ ಹೊಗಳಿದ್ದಾರೆ. ಕೀರ್ತಿ ಜಗತ್ತಿನ ಸುಂದರಿ, ಆಕೆಯ ಮೂಗು, ಕಣ್ಣು, ಕೆನ್ನೆ, ತುಟಿ, ಹಲ್ಲುಗಳು ಅಂದವಾಗಿವೆ ಎಂದು ವರ್ಣಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಾಯ್ ಜನರೇ ಎಂದು ರೀಲ್ಸ್ ಮಾಡುವ ಕಿಪಿ ಕೀರ್ತಿ ಸೌಂದರ್ಯವನ್ನು ಮತ್ತೊಬ್ಬ ರೀಲ್ಸ್ ಸ್ಟಾರ್ ಹಾಡಿ ಹೊಗಳಿದ್ದಾರೆ. ಕಿಪಿ ಕೀರ್ತಿ ಜಗದ್ವಿಖ್ಯಾತ ಸುಂದರಿ. ಆಕೆಯ ಮೂಗು ಸಂಪಿಗೆ, ಕಣ್ಣು ಕಮಲ, ಹಲ್ಲು ದಾಳಿಂಬೆ, ತುಟಿ ತೊಂಡೆ ಹಣ್ಣು, ಕೆನ್ನೆ ಸೇಬು ಎಂದೆಲ್ಲಾ ಹೊಗಳಿದ್ದಾರೆ.
ಕರ್ನಾಟಕದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾರೀ ಫೇಮಸ್ ಆಗಿರುವ ಕೆಲವೇ ವ್ಯಕ್ತಿಗಳ ಪೈಕಿ ಹಾಯ್ ಜನರೇ ಎಂದು ರೀಲ್ಸ್ ಮಾಡುವ ಕಿಪ್ಪಿ ಕೀರ್ತಿ ಕೂಡ ಒಬ್ಬರು. ಇತ್ತೀಚೆಗೆ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ವೇದಿಕೆಗೆ ಬಂದ ನಂತರ ಮತ್ತಷ್ಟು ಖ್ಯಾತಿ ಸಿಕ್ಕಿದೆ. ಇತ್ತೀಚೆಗೆ ಕಿಪಿ ಕೀರ್ತಿಗೆ ಪ್ರೇಮಿಯೂ ಇದ್ದಾನೆ ಎಂಬುದನ್ನು ಅವರೇ ರಿವೀಲ್ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಆಕೆಯ ಬಾಯ್‌ಫ್ರೆಂಡ್ ಕೈ ಕೊಟ್ಟಿದ್ದು, ಲವ್ ಫೇಲ್ಯೂರ್ ಆಗಿದ್ದಕ್ಕೆ ಬೇಸರಗೊಂಡು ವಿಡಿಯೋ ಮಾಡಿದ್ದಳು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬೆನ್ನಲ್ಲಿಯೇ ಮತ್ತೊಬ್ಬ ರೀಲ್ಸ್ ಸ್ಟಾರ್ ಕುಡುಪಲಿ ನಾಗರಾಜ್ ಎನ್ನುವ ವಕೀಲರು ಧೈರ್ಯ ತುಂಬಿ ರೀಲ್ಸ್ ಒಂದನ್ನು ಮಾಡಿದ್ದರು.
ನಾಗರಾಜ್ ಕುಡುಪಲಿ ಅವರು ಮಾಡಿದ ವಿಡಿಯೋದಲ್ಲಿ 'ಕಿಪಿ ಕೀರ್ತಿ ನೀನು ಯಾಕೆ ತುಂಬಾ ತಲೆ ಕೆಡಿಸಿಕೊಳ್ತೀಯ ಬಿಡು, ನಿನ್ನ ಜೀವನದಲ್ಲಿ ಯಾರು ಯಾರು ಗಂಡ ಆಗಬೇಕೋ ಆಗ್ತಾರೆ. ನೀನು ಸ್ಮಾರ್ಟ್ ಇದ್ದೀಯ, ಚೆಂದ ಇದ್ದೀಯ. ನಿನ್ನನ್ನು ಮದುವೆ ಮಾಡಿಕೊಂಡು ಹೋಗದವರು ಯಾರಿದ್ದಾರೆ. ಇಡೀ ಜಗತ್ತಿನಲ್ಲಿ ಅತ್ಯಂತ ಬ್ಯೂಟಿ ಕ್ವೀನ್ ಅಂತಿದ್ರ ನೀನೇ. ಇಡೀ ಜಗತ್ತನಲ್ಲಿ ಬೇಕಾದಂತಹ ಚೆಲುವಿಯನ್ನು ತಂದು ನಿಲ್ಲಿಸಿದರೂ ನೀನೇ ಚಂದ ಕಾಣಿಸುತ್ತೀಯ. ಕಿಪ್ಪಿ ಕೀರ್ತಿ ಬಹಳ ಚೆಂದ ಇದ್ದಾಳೆ, ಬುದ್ದಿವಂತೆ ಇದ್ದಾಳೆ, ಗುಣವಂತೆ ಇದ್ದಾಳೆ. ನಿನ್ನ ಮದುವೆ ಮಾಡಿಕೊಳ್ಳುವವರು ಪುಣ್ಯವಂತರು. ಅವರಿಗೆ ನಿನ್ನ ಮದುವೆ ಮಾಡಿಕೊಳ್ಳುವುದೇ ಲಾಟಿ ಹೊಡೆದಂತೆ.
ಇದನ್ನೂ ಓದಿ: ಕೊನೆಗೂ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದ ಕಿಪಿ ಕೀರ್ತಿ; ಫ್ಯಾಮಿಲಿ ಸಪೋರ್ಟ್ ಇಲ್ಲ ಎಂದು ಬೇಸರ
ನೀನು ಯಾರೋ ಏನೋ ಅಂದ್ರು ಅಂತ, ಡಚ್ಚು ಹಾಗೆ, ಹುಚ್ಚ ಹೀಗೆ ಮಾಡಿದ ಅಂತಾ ನೀನು ನೊಂದುಕೊಳ್ಳಬೇಡ. ನಾನೇ ಮುಂದೆ ನಿಂತಿದ್ದು, ಮದುವೆ ಮಾಡ್ತೀನಿ. ನಿನಗೆ ವರನನ್ನೂ ನಾನೇ ಹುಡುಕ್ತೀನಿ, ನೀನು ಯೋಚನೆ ಮಾಡಬೇಡ. ನಿನ್ನಂತಹ ಚೆಂದ ಈ ಜಗತ್ತಿನಲ್ಲಿ ಬೇರೆ ಯಾವ ಚೆಲುವೆಯೂ ಇಲ್ಲ. ನೀನು ತಲೆ ಕೆಡಿಸಿಕೊಳ್ಳದೇ ನೆಮ್ಮದಿಯಿಂದ ಇರು, ಆರಾಮವಾಗಿ ಇರು. ಅದು ಯಾವನು ನಿಂಗೆ ಮೋಸ ಮಾಡಿದ್ದಾನೋ ಅವ ಮಾಡಿದ್ರ ಮಾಡ್ಕೋತಾನ ಮುಂದೆ ನೋಡೋಣ ಎಂದು ಧೈರ್ಯ ತುಂಬುತ್ತಾರೆ.
ಇದಾದ ನಂತರ ಕೆಲವರು ನೆಟ್ಟಿಗರು ನಾಗರಾಜ್ ಕುಡುಪಲಿ ಅವರಿಗೆ ನೀವೇ ಏಕೆ ಕಿಪಿ ಕೀರ್ತಿ ಲವ್ ಕೇಸ್ ತಗೊಂಡು ಪರಿಹಾರ ಕೊಡಿಸಿ ಎಂದು ಹೇಳಿದ್ದರು. ಈ ಕಾಮೆಂಟ್ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾರೆ. ಇದರಲ್ಲಿ, ಏ..., ಕಿಪಿ ಕೀರ್ತಿ ಮದುವೆಯನ್ನು ನಾನೇ ಮಾಡ್ತೀನಿ ಬಿಡ್ರಿ... ಕಿಪಿ ಕೀರ್ತಿ ಒಳ್ಳೆಯ ಹುಡುಗಿ ಅಕಿ ಮದುವೆ ಮಾಡುವುದಿಲ್ಲ ಎಂತೀನಾ. ಜಗತ್ತಿನಲ್ಲಿ ಕಿಪಿ ಕೀರ್ತಿಯಂತಹ ಸುಂದರಿ ಬೇರೆ ಯಾರೂ ಇಲ್ಲ. ಎಲ್ಲರೂ ತಿಳಿದುಕೊಂಡಿದ್ದಾರೆ, ಅವಳು ಕುರೂಪಿ ಇದ್ದಾಳೆ ಎಂದು. ಅವರ ಮೂಗು ಸಂಪಿಗೆ, ಕಣ್ಣುಗಳು ಕಮಲ, ಕೆನ್ನೆಗಳು ಸೇಬು ಹಣ್ಣು, ತುಟಿ ತೊಂಡೆ ಹಣ್ಣು, ಹಲ್ಲುಗಳು ದಾಳಿಂಬೆ. ಇಂತಹ ಸುವರ್ಣಯುತ ಅಚ್ಚು ಕಟ್ಟಾದ ಎತ್ತರ ಹೊಂದಿದ್ದಾಳೆ. ಆಕೆ ಡಯಟ್ ಮಾಡುವುದು ಬೇಡ ಅಂತಹ ದೇಹ ಸೌಂದರ್ಯವನ್ನು ಹೊಂದಿದ್ದಾಳೆ.
ಇದನ್ನೂ ಓದಿ: ಆಂಕರ್ ಅನುಶ್ರೀ ಕ್ಯಾರೆಕ್ಟರ್ ರಿವೀಲ್ ಮಾಡಿದ ಕಿಪಿ ಕೀರ್ತಿ!