
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ದಿನದಿಂದ ದಿನಕ್ಕೆ ಇಂಟ್ರೆಸ್ಟಿಂಗ್ ಆಗಿದೆ. ಚಿತ್ರಾನ್ನ ಮಾಡಿ ಅತ್ತೆ ಶಕುಂತಲಾ ದೇವಿ ಮೆಚ್ಚಿಸಿ ಭೂಪತಿ ಮನೆಯಲ್ಲಿ ಉಳಿದುಕೊಂಡಿರುವ ನಕ್ಷತ್ರಾ ವಿರುದ್ಧ ಪ್ಲ್ಯಾನ್ ಮಾಡುತ್ತಿದ್ದ ಶ್ವೇತಾ ಮತ್ತೊಬ್ಬ ವಿಲನ್ ಕೈವಾಡವಿದೆ ಎಂದು ತಿಳಿಯುತ್ತಿದ್ದಂತೆ ಗಾಬರಿ ಆಗಿದ್ದಾರೆ. ಅಸಿಸ್ಟೆಂಟ್ ಮಿಲಿ ಗುಟ್ಟಾಗಿ ನಡೆಸುತ್ತಿರುವ ಗೇಮ್ ತಿಳಿದುಕೊಳ್ಳಲು ಶ್ವೇತಾ ಶುರು ಮಾಡಿದ ನಾಟಕದಲ್ಲಿ ಭಾರ್ಗವಿ ಪಾತ್ರವಿದೆ ಎಂದು ತಿಳಿದು ಗಾಬರಿ ಆಗಿದ್ದಾಳೆ.
ಹೌದು! ಅಸಿಸ್ಟೆಂಟ್ ಮಿಲಿ ಸದಾ ಫೋನ್‌ನಲ್ಲಿ ಯಾರೊಂದಿಗೂ ಮಾತನಾಡಿ ಏನೋ ಪ್ಲ್ಯಾನ್ ಮಾಡುತ್ತಿರುತ್ತಾಳೆ ಎಂದು ತಿಳಿಯುತ್ತಿದ್ದಂತೆ ಶ್ವೇತಾ ಅಲರ್ಟ್ ಆಗುತ್ತಾಳೆ. ಅಲ್ಲಿಂದ ಸಣ್ಣ ಪುಟ್ಟ ವಿಚಾರಗಳನ್ನು ಗಮನಿಸಿಕೊಂಡು ಬರುವ ಶ್ವೇತಾ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿ ಡೆವಿಲ್ ಹಿಡಿಯಲು ಮುಂದಾಗುತ್ತಾಳೆ. ಮಿಲಿ ಬಳಿ ಡೆವಿಲ್ ಬಗ್ಗ ಚರ್ಚೆ ಮಾಡುತ್ತಾಳೆ. ಗಾಬರಿಗೊಂಡ ಮಿಲಿ ತಕ್ಷಣವೇ ಡೆವಿಲ್ ಇದ್ದ ಸ್ಥಳಕ್ಕೆ ಭೇಟಿ ನೀಡುತ್ತಾಳೆ ಏನಾಗುತ್ತಿದೆ ಎಂದು ಚರ್ಚೆ ಮಾಡಿ ಹೊರಡುತ್ತಾಳೆ. ಕಿಟಕಿಯಿಂದ ಸಂಪೂರ್ಣ ಸಂದರ್ಶನ ಕೇಳಿಸಿಕೊಳ್ಳುವ ಶ್ವೇತಾ ಮುಂದೆ ಹೋಗಲು ಧೈರ್ಯ ಮಾಡುವುದಿಲ್ಲ, ಅಷ್ಟರಲ್ಲಿ ಡೆವಿಲ್ ಕಾರಿನ ಬಳಿ ಬರುತ್ತಾಳೆ. ಈ ಸಲ ಎಸ್ಕೇಪ್ ಆದರೆ ಮತ್ತೊಮ್ಮೆ ಸಿಗುವುದಿಲ್ಲ ಎಂದು ಶ್ವೇತಾ ಹಿಡಿಯುವ ಪ್ರಯತ್ನ ಮಾಡುತ್ತಾಳೆ. ಅಷ್ಟರಲ್ಲಿ ಡೆವಿಲ್ ಎಸ್ಕೇಪ್ ಆಗುತ್ತಾಳೆ. ಈ ವೇಳೆ ಶ್ವೇತಾ ಉದ್ದು ಉಂಗುರಿನ ಮಾರ್ಕ್ ಡೆವಿಲ್ ಕೈ ಮೇಲೆ ಬೀಳುತ್ತದೆ.
ಲಕ್ಷಣ ಸೀರಿಯಲ್‌ನಲ್ಲಿ ನಕ್ಷತ್ರ ಮೇಕಪ್ ಬದಲಾಗಿದ್ದು ಗಮನಿಸಿದ್ರಾ?
ಅದೇ ಕಾರನ್ನು ಫಾಲೋ ಮಾಡಿಕೊಂಡು ಬರುವ ಶ್ವೇತಾಗೆ ಬಿಗ್ ಶಾಕ್ ಕಾದಿರುತ್ತದೆ. ತಂದೆ ಸಿಎಸ್ ಚಂದ್ರಶೇಖರ್ ಮನೆ ಮುಂದೆ ಕಾರು ನಿಂತಿರುತ್ತದೆ. ಧೈರ್ಯ ಮಾಡಿ ಪತ್ತೆ ಮಾಡಬೇಕು ಎಂದು ಮನೆಯೊಳಗೆ ನುಗ್ಗುವ ಪ್ರಯತ್ನ ಮಾಡುತ್ತಾಳೆ. ತಾಯಿ ಅಡ್ಡ ಬಂದರೂ ಕೇರ್ ಮಾಡದೆ ಎಲ್ಲಾ ರೂಮ್‌ಗಳನ್ನು ಚೆಕ್ ಮಾಡುತ್ತಾಳೆ, ಒಂದು ರೂಮ್‌ನಲ್ಲಿ ಅತ್ತೆ ಭಾರ್ಗವಿ ಫೋನ್‌ನಲ್ಲಿ ಮಾತನಾಡುವುದು ಕಿವಿಗೆ ಬೀಳುತ್ತದೆ. ಸಂಪೂರ್ಣ ಮಾತು ಕೇಳಿಸಿಕೊಂಡ ನಂತರ ತಿಳಿಯುತ್ತದೆ ಅತ್ತೆ ಭಾರ್ಗವಿನೇ ಡೆವಿಲ್ ಎಂದು. ಅಲ್ಲದೆ ಶ್ವೇತಾ ಜೀವನ ನರಕ ಮಾಡುವುದಾಗಿ ವಾರ್ನ್ ಮಾಡುತ್ತಿರುವುದು ಕಿವಿಗೆ ಬೀಳುತ್ತದೆ ಅಲ್ಲಿಗೆ ಬಿಡುಗಡೆ ಆಗಿರುವ ಪ್ರೋಮೋ ನಿಲ್ಲುತ್ತದೆ. ಅತ್ತೆ ಭಾರ್ಗವಿನೇ ಡೆವಿಲ್ ಎಂದು ತಿಳಿದ ಮೇಲೆ ಶ್ವೇತಾ ಎನು ಮಾಡುತ್ತಾಳೆ? ಒಳ್ಳೆ ಹುಡುಗಿ ರೀತಿ ನಕ್ಷತ್ರಾ ಪರ ನಿಲ್ಲುತ್ತಾಳ ಅಥವಾ ಅತ್ತೆ ಜೊತೆ ಸೇರಿಕೊಂಡು ಸಿಎಸ್ ಚಂದ್ರಶೇಖರ್ ಆಸ್ತಿ ಹೊಡೆಯುವ ಪ್ಲ್ಯಾನ್ ಮಾಡುತ್ತಾಳ ಎಂದು ಕಾದು ನೋಡಬೇಕಿದೆ.
ಅಡುಗೆ ಟಾಸ್ಕ್:
ಶ್ವೇತಾ ಅಥವಾ ನಕ್ಷತ್ರಾ, ಇಬ್ಬರಲ್ಲಿ ಭೂಪತಿನ ಮದುವೆ ಆಗುವುದು ಯಾರು? ಶಕುಂತಲಾ ದೇವಿ ಮನೆಯಲ್ಲಿ ಉಳಿದುಕೊಳ್ಳುವುದು ಯಾರೆಂದು ಪರೀಕ್ಷೆ ಮಾಡುವಾ ನಕ್ಷತ್ರಾ ಚಿತ್ರಾನ್ನ ಮಾಡಿ ಬಡಿಸುತ್ತಾಳೆ.
'ಅರ್ಧಕರ್ಧ ಬೆಂಗಳೂರು, ಮೈಸೂರು ನಡೀತಿರೋದೆ ಚಿತ್ರಾನ್ನದಿಂದ. ಬೆಂಗಳೂರಿಗೆ ವಾರಕ್ಕೆ ನಾಲ್ಕು ದಿನ ಚಿತ್ರಾನ್ನ ಮಾಡಿ ತಿಂದಿಲ್ಲಾಂದ್ರೆ ಸಮಾಧಾನನೇ ಇರಲ್ಲ. ಚಿತ್ರಾನ್ನದ ಮಧ್ಯೆ ಸಿಗೋ ಕಡಲೇಬೀಜ (Groundnut), ಹುಳಿ-ಖಾರ ಟೇಸ್ಟ್ ಜೊತೆಗೆ ಬಿಸಿ ಬಿಸಿ ಕಾಫಿಯಿದ್ದರೆ ಸ್ವರ್ಗಾನೇ. ಚಿತ್ರಾನ್ನಕ್ಕೆ ಇನ್ನೊಂದು ವಿಶೇಷತೆಯಿದೆ. ಇದು ತಿಂಡಿನೂ ಹೌದು, ಊಟಾನೂ ಹೌದು. ಬಾಂಡ್ಲಿಯಿಂದ ಇಳಿಸಿಕೊಂಡು ಬಿಸಿಬಿಸಿಯಾಗಿಯೂ ತಿನ್ಬೋದು, ಹಾಗೆಯೇ ಡಬ್ಬಿಗೆ ತುಂಬಿಕೊಂಡು ತಣ್ಣಗೆ ಕೂಡಾ ತಿನ್ಬೋದು' ಎಂದು ತಿಳಿಸುತ್ತಾರೆ.
Lakshana: ನಾನು ನಕ್ಷತ್ರನ್ನ ಕೊಂದು ಸಾಧಿಸೋದಾದ್ರೂ ಏನು! ಕರಗಿ ಹೋಯ್ತು ಮೌರ್ಯನ ಸೇಡು
ಅಷ್ಟೇ ಅಲ್ಲ, ದೋಸೆಗೆ ಚಟ್ನಿ ಬೇಕು, ಇಡ್ಲಿಗೆ ಸಾಂಬಾರ್ ಬೇಕು, ಪೂರಿಗೆ ಸಾಗು ಬೇಕು, ಪಲಾವ್‌ಗೆ ರಾಯ್ತಾ ಬೇಕು. ಆದ್ರೆ ಚಿತ್ರಾನ್ನವನ್ನು ನೆಂಚಿಕೊಳ್ಳೋಕೆ ಏನಿಲ್ಲಾಂದ್ರೂ ತಿನ್ಬೋದು. ಚಿತ್ರಾನ್ನಕ್ಕೆ ಬಡವರು, ಶ್ರೀಮಂತರು ಅಂತ ಏನೂ ಇಲ್ಲ. ಟೈಂ ಇಲ್ಲದಿದ್ದಾಗ, ಅನ್ನ ಮಿಕ್ಕಿದಾಗ, ಟ್ರಿಪ್ ಹೋಗುವಾಗ ಚಿತ್ರಾನ್ನಕ್ಕಿಂತ ಒಳ್ಳೆ ಫ್ರೆಂಡ್ ಯಾವುದೂ ಇಲ್ಲ' ಎಂದು ಹೇಳುತ್ತಾರೆ. ಸೀರಿಯಲ್‌ನಲ್ಲಿ ಚಿತ್ರಾನ್ನದ ಮಹತ್ವದ ಬಗ್ಗೆ ವಿವರಿಸಿರೋದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.