ಕಿರುತೆರೆ ಪ್ರೇಕ್ಷಕರಿಗೆ ಸಂತಸದ ಸುದ್ದಿ; ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ನಮ್ಮ ಲಚ್ಚಿ'

Published : Feb 10, 2023, 11:49 AM IST
ಕಿರುತೆರೆ ಪ್ರೇಕ್ಷಕರಿಗೆ ಸಂತಸದ ಸುದ್ದಿ; ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ನಮ್ಮ ಲಚ್ಚಿ'

ಸಾರಾಂಶ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ನಮ್ಮ ಲಚ್ಚಿ ಹೊಸ ಧಾರಾವಾಹಿ. ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. 

ಕನ್ನಡಿಗರಿಗೆ ಹೊಸತನದೊಂದಿಗೆ ವಿಭಿನ್ನ ರೀತಿಯ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ಮತ್ತೊಂದು ಹೊಸ ಕಥೆಯೊಂದು ಶುರುವಾಗುತ್ತಿದೆ ಅದೇ "ನಮ್ಮ ಲಚ್ಚಿ". ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾ ನೀನೇ, ಕಥೆಯೊಂದು ಶುರುವಾಗಿದೆ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಜೇನುಗೂಡು ಹಾಗೂ ಹೊಂಗನಸು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮನೆಯ ಮಾತಾಗಿದೆ. ಈ ಸಾಲಿಗೆ ಇದೀಗ 'ನಮ್ಮ ಲಚ್ಚಿ' ಎಂಬ ಹೊಸ ಕಥೆಯೊಂದು ಸೇರ್ಪಡೆಯಾಗಿದೆ.

ಹಳ್ಳಿಯಲ್ಲಿ ಬೆಳೆದಿರೋ ಪುಟ್ಟ ಮಗುವಿಗೆ ಸಂಗೀತ ಅಂದ್ರೆ  ಪಂಚ ಪ್ರಾಣ, ಆದರೆ ತಾಯಿ ಅದನ್ನು ವಿರೋಧಿಸುತ್ತಾಳೆ. ತಂದೆ ಯಾರೆಂದು ತಿಳಿಯದ ಈ  ಮಗುವಿಗೆ ಅಪ್ಪನನ್ನು ಹುಡುಕುವ ಹಂಬಲ. ಹಿಂದೆ ನಡೆದಿರುವ ಕೆಲವೊಂದು ಘಟನೆಗಳಿಂದ ಈ ಮಗುವಿನ ತಂದೆ ತಾಯಿ ದೂರವಾಗಿರುತ್ತಾರೆ. ಹೆತ್ತ ತಂದೆ ದೂರವಾಗಿದ್ರು ಆತನ ಗಾಯನ ಕಲೆ ರಕ್ತಗತವಾಗಿ ಬಂದಿರುತ್ತೆ ಈ ಮರಿ ಕೋಗಿಲೆಗೆ. ಸಂಗೀತ ಮಾಂತ್ರಿಕ ಸಂಗಮ್ ಸಾತ್ನೂರ್ ನ ಅತೀ ದೊಡ್ಡ ಅಭಿಮಾನಿಯಾಗಿರುವ ಈ ಮರಿ ಕೋಗಿಲೆಗೆ, ಆತನೇ ತನ್ನ ತಂದೆ ಎಂಬ ಕಟು ಸತ್ಯ ಹೇಗೆ ತಿಳಿಯುತ್ತೆ ಎಂಬುದೇ 'ನಮ್ಮ ಲಚ್ಚಿ' ಧಾರಾವಾಹಿಯ ಕಥಾ ಹಂದರ.

ಇನ್ನು ಈ ಧಾರಾವಾಹಿಯು ಒಂದು ಸುಂದರವಾದ ತಾರಾಬಳಗವನ್ನು ಹೊಂದಿದ್ದು ವಿಜಯ್ ಸೂರ್ಯ, ನೇಹಾ ಗೌಡ, ಹಾಗು ಲಚ್ಚಿಯಾಗಿ ಸಂಘವಿ, ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ಹೊಚ್ಚ ಹೊಸ ಧಾರಾವಾಹಿ 'ನಮ್ಮ ಲಚ್ಚಿ'  ಇದೇ ಫೆಬ್ರವರಿ 6 ರಿಂದ ಪ್ರಸಾರ ಆರಂಭಿಸಿದೆ. ರಾತ್ರಿ 8 ಗಂಟೆಗೆ  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ತಪ್ಪದೇ ವೀಕ್ಷಿಸಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?