ನನಗೆ ಅವಾರ್ಡ್‌ ಕೊಡಬೇಕು ಅದ್ರೆ ಯಾರೂ ಗುರುತಿಸುತ್ತಿಲ್ಲ: ನಿವೇದಿತಾ ಗೌಡ ಮತ್ತೊಂದು ವಿಡಿಯೋ ವೈರಲ್

Published : Feb 07, 2023, 10:43 AM IST
ನನಗೆ ಅವಾರ್ಡ್‌ ಕೊಡಬೇಕು ಅದ್ರೆ ಯಾರೂ ಗುರುತಿಸುತ್ತಿಲ್ಲ: ನಿವೇದಿತಾ ಗೌಡ ಮತ್ತೊಂದು ವಿಡಿಯೋ ವೈರಲ್

ಸಾರಾಂಶ

ಶೂಟಿಂಗ್ ಮುಗಿದ ನಂತರ ರಾತ್ರಿ ದಿನಚರಿ ಹೇಗಿರುತ್ತದೆ ಎಂದು ಹೇಳಲು ಮುಂದಾದ ನಿವೇದಿತಾ ಗೌಡ. ಸ್ಕಿನ್‌ ಕೇರ್‌ ಬದಲು ಗೇಮ್‌ ಸಾಧನೆ ಹಂಚಿಕೊಂಡ ಸುಂದರಿ....

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಸ್ಪರ್ಧಿಸುತ್ತಿದ್ದಾರೆ. ಮೊದಲನೇ ಸೀಸನ್‌ ಗೆದ್ದಿರುವ ಬಾರ್ಬಿ ಡಾಲ್‌ಗೆ ಎರಡನೇ ಸೀಸನ್‌ನಲ್ಲಿ ಕಡಿಮೆ ಡೈಲಾಗ್ ಕೊಡುತ್ತಿದ್ದಾರೆ ಅನ್ನೋ ವಿಚಾರ ವೀಕ್ಷಕರ ಗಮನಕ್ಕೆ ಬಂದಿದ್ದು ಕಾಮೆಂಟ್ಸ್‌ನಲ್ಲಿ ಕೊಂಚ ಬೇಸರ ವ್ಯಕ್ತ ಪಡಿಸಿದ್ದರು. ಹೆಕ್ಟಿಕ್‌ ಶೂಟಿಂಗ್‌ ಶೆಡ್ಯೂಲ್‌ ಮುಗಿಸಿಕೊಂಡು ಮನೆಗೆ ಬಂದಾಗ ನಿವೇದಿತಾ ಗೌಡ ಹೇಗೆ ತ್ವಚ್ಛೆ ಕಾಪಾಡಿಕೊಳ್ಳುತ್ತಾರೆ, ಏನೆಲ್ಲಾ ಕೆಲಸ ಮಾಡುತ್ತಾರೆ ಅನ್ನೋ ಕ್ಯೂರಿಯಾಸಿಟಿ ಯೂಟ್ಯೂಬ್ ಫಾಲೋವರ್ಸ್‌ಗೆ ಇತ್ತು. ಹೀಗಾಗಿ ವಿಡಿಯೋ ಮಾಡುವ ಮೂಲಕ ದಿನಚರಿ ಹಂಚಿಕೊಂಡಿದ್ದಾರೆ.

'ನನ್ನ ಶೂಟಿಂಗ್ ಮುಗಿಯುವುದು ತುಂಬಾನೇ ಲೇಟ್ ಆಗುತ್ತದೆ. ಬೆಳಗ್ಗೆ 6 ಗಂಟೆಗೆ ಸೆಟ್‌ನಲ್ಲಿರುವೆ. ಮೇಕಪ್ ಮತ್ತು ಹೇರ್‌ಸ್ಟೈಲ್ ಮಾಡಿಸಿಕೊಂಡು ಸುಸ್ತು ಆಗಿರುತ್ತದೆ. ಪ್ರಸಾರವಾಗಲಿರುವ ಎಪಿಸೋಡ್‌ನಲ್ಲಿ 5 ಸ್ಕಿಟ್‌ಗಳಲ್ಲಿ ಕಾಣಿಸಿಕೊಳ್ಳುವೆ. ಡೈಲಾಗ್‌ ಇಲ್ಲ ಆದರೆ ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಹೋಗುವುದು ಬರುವುದು ಕಷ್ಟ. ಈ ಬ್ಯುಸಿ ಓಡಾಟದಿಂದ 3 ಕೆಜಿ ತೂಕ ಕಡಿಮೆಯಾಗಿರುವೆ. ತುಂಬಾ ಕಷ್ಟ ಪಟ್ಟು ಕೆಲಸ ಮಾಡುವ ಕಾರಣ ಮನೆಗೆ ಬಂದು ಮೊಬೈಲ್ ನೋಡಿಕೊಂಡು ಟಿವಿ ನೋಡುವುದರಲ್ಲಿ ಸಮಯ ಹೋಗುತ್ತದೆ' ಎಂದು ಹೇಳುವ ಮೂಲಕ ವಿಡಿಯೋ ಆರಂಭಿಸಿರುವ ನಿವೇದಿತಾ ಗೌಡ ತ್ವಚೆ ರಕ್ಷಿಸಲು ಕೊಲಾಜನ್‌ ಇರುವ ಪೌಡರ್‌ನ ಕುಡಿಯುತ್ತಾರಂತೆ. 

ಹೆಂಡ್ತಿ ಹಾಕೋ ಬಟ್ಟೆನ ನೀಟಾಗಿ ನೋಡಿ; ಚಂದನ್‌ ಜೊತೆ ಜಗಳ ಮಾಡ್ಕೊಂಡು ಗಿಫ್ಟ್‌ ತೆಗೆಸಿಕೊಂಡ ನಿವೇದಿತಾ ಗೌಡ

'ನನ್ನ ಮೊಬೈಲ್‌ನಲ್ಲಿ ಶಾಪಿಂಗ್ ಮತ್ತು ಗೇಮ್ ಆಪ್‌ಗಳು ತುಂಬಾನೇ ಇದೆ. ಪ್ರಾಜೆಕ್ಟ್‌, ಕ್ರಿಮಿನಲ್ ಕೇಸ್, ಕ್ಯಾಂಟಿ ಕ್ರಶ್ ಮತ್ತು ರಾತ್ರಿ ನಿದ್ರೆ ಬರುವುದಿಲ್ಲ ಅದಿಕ್ಕೆ ಸೂಡೊಕು ಆಯ್ಕೆ ಮಾಡಿಕೊಂಡಿರುವೆ. ಯಾವ ಸಾಲು ಮತ್ತು ಕಾಲಮ್ ನಂಬರ್ ಹಾಕಬೇಕು ಎನ್ನುವಷ್ಟರಲ್ಲಿ ನಿದ್ರೆ ಬರುತ್ತದೆ. ನಾನು ಗೇಮ್‌ಗಳಲ್ಲಿ ವಿಶ್ವಕ್ಕೆ 64ನೇ ಸ್ಥಾನ ಪಡೆದುಕೊಂಡಿರುವ ಹಾಗೂ ಭಾರತದಲ್ಲಿ ಮತ್ತೊಂದು ಲಿಸ್ಟ್‌ನಲ್ಲಿ 9ನೇ ಸ್ಥಾನ ಪಡೆದುಕೊಂಡಿರುವೆ. ನನಗೆ ಅವಾರ್ಡ್‌ ಕೊಡಬೇಕು ಆದರೆ ಯಾರೂ ಗುರುತಿಸುತ್ತಿಲ್ಲ. ದೊಡ್ಡ ಸಾಧನೆ ಮಾಡಿರುವ ರೀತಿ ಹೇಲುತ್ತೀನಿ ಆದರೆ ಈ ರೀತಿ ಯಾರೂ ಮಾಡಿರುವುದಿಲ್ಲ' ಎಂದು ಹೇಳಿದ್ದಾರೆ. 

ತಲೆ ತಿರುಗುತ್ತೆ, ವಾಂತಿಯಾಗ್ತಿದೆ; 2 ತಿಂಗಳ ಗರ್ಭಿಣಿ ಎಂದು ಬಹಿರಂಗ ಪಡಿಸಿದ ನಿವೇದಿತಾ ಗೌಡ

'ನಿದ್ರೆ ಮಾಡೋದು ಅಂದ್ರೆ ನನಗೆ ಇಷ್ಟನೇ ಇಲ್ಲ. ಚಂದನ್ ಬೆಳಗ್ಗೆ ಎದ್ದೇಳುವ ಸಮಯದಲ್ಲಿ ನಾನು ಮಲಗುವುದು. ಚಂದನ್ ರಾತ್ರಿ 10 ಗಂಟೆಗೆ ಮಲಗುವುದು ಆದರೆ ನನಗೆ ರಾತ್ರಿ 10 ಗಂಟೆಗೆ ಅಂದ್ರೆ ಊಟದ ಸಮಯ ಹೀಗಾಗಿ ನಮ್ಮಿಬ್ಬರ ಟೈಮಿಂಗ್ ಮ್ಯಾಚ್ ಆಗುವುದಿಲ್ಲ. ದೆವ್ವ ಭೂತ ಪಿಶಾಚಿ ಓಡಾಡುವ ಸಮಯದಲ್ಲಿ ನಾನು ಎದ್ದಿರುವೆ ಯಾವುದೇ ಸಮಯ ಬಂದರೂ ಇದು ದೆವ್ವದ ಸೌಂಡ್ ಬರುತ್ತಿರುವುದು ಎಂದು ಕ್ರೇಜಿ ಯೋಚನೆಗಳು ಬರುತ್ತದೆ. ಸಮಯ ಇದ್ದಾಗ ಮಮ್ಮಿಗೆ ಕಾಲ್ ಮಾಡುವೆ. ರಾತ್ರಿ ಗೇಮ್ ಆಡುವುದನ್ನು ನಿಲ್ಲಿಸಿ ಬೇಗ ಮಲಗಬೇಕು' ಎಂದಿದ್ದಾರೆ ನಿವಿ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?