Latest Videos

ಗಿಚ್ಚಿ ಗಿಲಿಗಿಲಿ ಜಗಪ್ಪ- ಸುಶ್ಮಿತಾ ಮದುವೆ?; ರಚಿತಾ ರಾಮ್ ಗಂಟಾಕೋಕೆ ಹೋಗಿದ್ದು ನಿಜವೇ?

By Vaishnavi ChandrashekarFirst Published Jul 6, 2023, 3:31 PM IST
Highlights

ಆನ್‌ ಸ್ಕ್ರೀನ್ ಜೋಡಿ ರಿಯಲ್ ಲೈಫ್‌ನಲ್ಲೂ ಜೋಡಿ ಎಂದು ಕೇಳುತ್ತಿರುವ ನೆಟ್ಟಿಗರಿಗೆ ಉತ್ತರ ಕೊಟ್ಟ ಸುಶ್ಮಿತಾ ಮತ್ತು ಜಗಪ್ಪ.... 

ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿರುವ ಸುಶ್ಮಿತಾ ಮತ್ತು ಜಗಪ್ಪ ಮದುವೆಯಾಗುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಚಾರ ಬಗ್ಗೆ ಸುಶ್ಮಿತಾ ಸ್ಪಷ್ಟನೆ ಕೊಟ್ಟಿದ್ದಾರೆ.

'ಅಯ್ಯೋ ಏನಿದು ಹರಿದಾಡುತ್ತಿರುವುದು. ಇದೆಲ್ಲಾ ಸುಳ್ಳು ಸುದ್ದಿ. ಮೊದಲನೇ ಸೀಸನ್‌ನಿಂದಲೂ ಜನರು ನಮ್ಮನ್ನು ತುಂಬಾ ಜೋಡಿಯಾಗಿ ನೋಡಿದ್ದಾರೆ ಅದಿಕ್ಕೆ ರಿಯಲ್ ಜೀವನದಲ್ಲೂ ಜೋಡಿ ಅಂದುಕೊಂಡಿದ್ದಾರೆ' ಎಂದು ಸುವರ್ಣ ನ್ಯೂಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

'ರಚಿತಾ ರಾಮ್ ಮೇಡಂ ಲವ್ ಮದ್ವೆ ಮಾಡಿಸುತ್ತಾರೆ ಅನ್ನೋ ವಿಚಾರ ಇತ್ತು ಪಾಪ ಅವರು ಅಡ್ಡ ಬಂದಿಲ್ಲ ಅವರಿಂದ ನಾವು ಒಳ್ಳೆ ಒಳ್ಳೆ ಸ್ಕಿಟ್‌ಗಳನ್ನು ಮಾಡಿದ್ದೀವಿ. ರಚ್ಚು ಸ್ವೀಟ್ ಹಾರ್ಟ್‌ ಯಾವಾಗಲೂ ಮಾತನಾಡಿಸುತ್ತಿರುತ್ತಾರೆ ಬರ್ತಡೇಗೆ ಹೋಗಿ ವಿಶ್ ಮಾಡಿದ್ದೀವಿ ಅವರು ಯಾವ ರೀತಿನೂ ಅಡ್ಡ ಬಂದಿಲ್ಲ ಆದರೆ ಒಂದು ಮಾಡಲು ತುಂಬಾ ಪ್ರಯತ್ನ ಪಟ್ಟರು ನಾವೇ ಬೇರೆ ಬೇರೆ ಆಗ್ಬಿಟ್ವಿ. ಎಂದು ಸುಶ್ಮಿತಾ ಹೇಳಿದ್ದಾರೆ. 

ಸಮಯ ಸಂದರ್ಭ ಹಣೆ ಬರಹ ಏನಿದೆಯೋ; ಮದುವೆ ಬಗ್ಗೆ ಜಗಪ್ಪ ಕ್ಲಾರಿಟಿ

'ಟಿವಿಯಲ್ಲಿ ಸ್ಕಿಟ್‌ಗೆ ನಮ್ಮನ್ನು ಪದೇ ಪದೇ ಜೋಡಿ ಮಾಡಿ ಮಾಡಿ ನನಗೆ ಹುಡುಗ ಸಿಗುತ್ತಿಲ್ಲ ಜಗಪ್ಪನಿಗೆ ಹುಡುಕಿ ಸಿಗುತ್ತಿಲ್ಲ. ಜನರೇ ನಮ್ಮ ಜೀವನ ನಮ್ಮ ಸಂಗಾತಿ ಬಗ್ಗೆ ಫಿಕ್ಸ್‌ ಆಗಿ ಬಿಟ್ಟಿದ್ದಾರೆ.ಆನ್‌ಸ್ಕ್ರೀನ್‌ ಜೋಡಿ ಸಾಮಾನ್ಯವಾಗಿ ಜನರಿಗೆ ಇಷ್ಟ ಆಗುವುದು ಕಡಿಮೆನೇ ಅದರಲ್ಲೂ ನಮ್ಮ ಜುಗಲ್ ಬಂದಿ ಇಷ್ಟ ಪಡುತ್ತಾರೆ ಅಂದ್ರೆ ಇನ್ನೂ ಖುಷಿ ಆಗುತ್ತೆ ಆರಂಭದಿಂದ ಈ ಕ್ಷಣದವರೆಗೂ ನಮ್ಮ ಕಾಂಬಿನೇಷನ್‌ ಸ್ಕಿಟ್‌ನ ಜನರು ಇಷ್ಟ ಪಡುತ್ತಿದ್ದಾರೆ. ರಚಿತಾ ರಾಮ್ ಅವರನ್ನು ಸದಾ ನೆನಪಿಸಿಕೊಳ್ಳಬೇಕು ಅವರ ಸಪೋರ್ಟ್‌ನಿಂದ ನಾವು ಇಷ್ಟು ಹೆಸರು ಮತ್ತು ಜನಪ್ರಿಯತೆ ಗಳಿಸಿರುವುದು ತಾಳಿ ಕಟ್ಟಿ ಯಜಮಾನ್ರು ಎನ್ನುತ್ತಿದ್ದರು' ಎಂದಿದ್ದಾರೆ ಸುಶ್ಮಿತಾ..  

ಆಂಟಿ ತುಂಬಾ ಕ್ಯೂಟ್; ಮಗಳನ್ನೇ ಮೀರಿಸ್ತಾರೆ ನಿವೇದಿತಾ ಗೌಡ ತಾಯಿ!

'ಕಲಾವಿದೆ ಆಗಬೇಕು ನಟನೆ ಮಾಡಬೇಕು ಅನ್ನೋ ಆಸೆ ತುಂಬಾ ವರ್ಷಗಳಿಂದ ಇತ್ತು ಆದರೆ ಇಷ್ಟು ದೂರ ಜರ್ನಿ ಕರೆದುಕೊಂಡು ಬರುತ್ತೆ ಬದುಕು ಎಂದು ಗೊತ್ತಿರಲಿಲ್ಲ. ಮಜಾ ಭಾರತ ವೇದಿಕೆ ಸಿಗುತ್ತೆ ಅನ್ನೋ ಕಲ್ಪನೆ ಇರಲಿಲ್ಲ. ನಾಟನ ಕ್ಷೇತ್ರದಲ್ಲಿ ಯಾವ ಆಸೆನೂ ಇಲ್ಲದೆ ಕೆಲಸ ಬಂದಾಗ ಕೆಲಸ ಮಾಡುತ್ತಿದ್ದೆ' ಎಂದು ಸುಶ್ಮಿತಾ ಹೇಳಿದ್ದಾರೆ.

ಈ ಹಿಂದೆ ಜಗಪ್ಪ ಕೂಡ ಒಂದು ಸಂದರ್ಶನದಲ್ಲಿ ರಚಿತಾ ರಾಮ್‌ ನಮ್ಮ ಹೆಸರು ಮಾಡಲು ಸಹಾಯ ಮಾಡಿದರು ಹೀಗಾಗಿ ರಚ್ಚು ನನಗೆ ಒಂದು ಕಣ್ಣು ಸುಶ್ಮಿತಾ ಮತ್ತೊಂದು ಕಣ್ಣು ಇದ್ದಂತೆ ಎಂದು ಹೇಳಿದ್ದರು. 

click me!