ಹುಡುಗಿ ಪಾತ್ರವನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ನೆಗೆಟಿವ್ ಕಾಮೆಂಟ್‌ನ ಪಾಸಿಟಿವ್ ಮಾಡಿ ಜೀವನದಲ್ಲಿ ಹೆಸರು ಮಾಡಿ ತೋರಿಸಿರುವೆ ಎಂದು ರಾಘು....
ಕನ್ನಡ ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು ಸೀಸನ್ 2ರಲ್ಲಿ ಸ್ಪರ್ಧಿಸಿರುವ ರಾಘು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಹುಡುಗನಾಗಿ ಹುಡುಗಿ ಪಾತ್ರ ಮಾಡುವುದು ತುಂಬಾನೇ ಕಷ್ಟ ಹೀಗಿರುವಾಗ ರಾಘು ನಟನೆಯನ್ನು ಕೋಟ್ಯಾಂತರ ಜನರು ಮೆಚ್ಚಿಕೊಂಡಿದ್ದಾರೆ. ಪದೇ ಪದೇ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದಕ್ಕೆ ವೀಕ್ಷಕರು ಏನೆಂದು ಹೇಳುತ್ತಿದ್ದರು ಯಾವ ರೀತಿ ಟ್ರೋಲ್ ಅಗುತ್ತಿದ್ದರು ಎಂದು ರಾಘ ಮೊದಲ ಸಲ ಹಂಚಿಕೊಂಡಿದ್ದಾರೆ.
'ಸ್ಕೂಲ್ ದಿನಗಳಲ್ಲಿ ಅಜ್ಜಿ ಪಾತ್ರ ಮಾಡುತ್ತಿದ್ದರೆ ಆದರೆ ರಿಯಾಲಿಟಿ ಶೋನಲ್ಲಿ ಬೇಡ ಎನ್ನಲು ಮನಸು ಬರುತ್ತಿರಲಿಲ್ಲ ಏಕೆಂದರೆ ಟಿವಿ ಮೇಲೆ ಕಾಣಿಸಿಕೊಳ್ಳುವುದಷ್ಟೇ ಮುಖ್ಯವಾಗಿತ್ತು. ಆರಂಭದಲ್ಲಿ ಬೇಸರ ಆಗಲಿಲ್ಲ ದಿನ ಕಳೆಯುತ್ತಿದ್ದಂತೆ ಕೊಂಚ ಕಿರಿಕಿರಿ ಶುರುವಾಯ್ತು.ಅನೇಕ ಸಲ ನಿರ್ದೇಶಕರ ಬಳಿ ಹೋಗಿ ಮನವಿ ಮಾಡಿಕೊಂಡಿರುವ ಸಾಕು ಹುಡುಗಿ ಪಾತ್ರ ಮಾಡುವುದಿಲ್ಲ ಎಂದು ಏಕೆಂದರೆ ಹೊರಗಡೆ ಹೋದರೆ ಪ್ರತಿಯೊಬ್ಬರು ನನ್ನನ್ನು ಅಣಕಿಸುತ್ತಿದ್ದರು ಏನ್ ಏನೋ ಕೆಟ್ಟ ಮಾತುಗಳನ್ನು ಹೇಳುತ್ತಿದ್ದರು' ಎಂದು ರಾಘು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಒಂದು ಕಾಲಿಗೆ ಸಾಕ್ಸ್ ಹಾಕೋದು ಮರೆತ ನಿವೇದಿತಾ ಗೌಡ; ಚಂದನ್ ಮಡಿಲಿನಲ್ಲಿ ಪತ್ನಿ, ಹಿಗ್ಗಾಮುಗ್ಗಾ ಟ್ರೋಲ್!
'ಏನೋ ಸಾಧನೆ ಮಾಡಬೇಕು ಎಂದು ಬಂದವನು ಏನೋ ಆಗುತ್ತಿದೆ ಎಂದು ಜನರು ಮತ್ತು ಆಪ್ತರನ್ನು ಪ್ರಶ್ನೆ ಮಾಡಿದಾಗ ನೀವು ಚೆನ್ನಾಗಿ ಆಕ್ಟಿಂಗ್ ಮಾಡುತ್ತಿರುವಾಗ ಯಾಕೆ ಹುಡುಗಿ ಪಾತ್ರ ಬೇಡ ಎನ್ನುವ ಎನ್ನುತ್ತಿದ್ದರು. ನಮ್ಮವರು ಮಾತ್ರ ಸಪೋರ್ಟ್ ಮಾಡುತ್ತಿದ್ದರು ಹೊರಗಡೆ ಜನರು ಪ್ರಶ್ನೆ ಮಾಡುತ್ತಿದ್ದರು ಮುಂದೆ ಏನು? ಈಗ ಹುಡುಗಿ ರೀತಿ ಆಕ್ಟಿಂಗ್ ಓಕೆ ಮಜಾ ಭಾರತ ಮುಗಿದ ಮೇಲೆ ಏನು ಮಾಡುವೆ ಎಂದು ನಿನ್ನ ಜೀವನ ಮುಗಿಯಿತ್ತು ಸಿನಿಮಾ ಮಾಡುವುದಕ್ಕೆ ಕರೆಯುವುದಿಲ್ಲ ಎಂಬ ಪ್ರಶ್ನೆಗಳು ಬಂತು. ಬಣ್ಣದ ಪ್ರಪಂಚಕ್ಕೆ ಬರುಬೇಕು ಎಂದು ನನ್ನ ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟಿರುವ ಈಗ ಏನು ಮಾಡಬೇಕು ಅನ್ನೋ ಯೋಚನೆ ನನಗೆ ಶುರುವಾಯ್ತು.ಜನರು ಹೇಗೆ ಅಂದ್ರೆ ತುಂಬಾ ಚೆನ್ನಾಗಿರುವುದರ ಕಡೆ ಕಣ್ಣು ಹಾಕುತ್ತಾರೆ ಇಲ್ಲ ಅಂದ್ರೆ ಕೆಟ್ಟದಾಗಿರುವ ಕಡೆ ನೋಡುತ್ತಾರೆ ಆ ಸಮಯದಲ್ಲಿ ನನ್ನ ಕೆಲಸ ನನ್ನ ಆಕ್ಟಿಂಗ್ ಚೆನ್ನಾಗಿ ನಡೆಯುತ್ತಿತ್ತು ಅದ್ಭುತ ನಟನೆ ಮಾಡಿದರೆ ಕಿರಿಟ ಸಿಕ್ಕಿತ್ತು ಒಟ್ಟು 10 ಕಿರಿಟ ಪಡೆದುಕೊಂಡೆ ಇದನ್ನು ನೋಡಿ ಜನರು ಮಾತನಾಡುತ್ತಾರೆ' ಎಂದು ರಾಘು ಹೇಳಿದ್ದಾರೆ.
ಪದೇ ಪದೇ ಹುಡ್ಗಿ ಗೆಟಪ್ ಹಾಕೋದು ಯಾಕೆ?; ನೆಟ್ಟಿಗರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಗಿಚ್ಚಿ ಗಿಲಿಗಿಲಿ ಧನರಾಜ್
'ಜನರು ನಮ್ಮ ಬಗ್ಗೆ ಯಾವ ಪಾಯಿಂಟ್ ಹಿಡಿದುಕೊಂಡು ನೆಗೆಟಿವ್ ಮಾತನಾಡುತ್ತಾರೆ ಅದನ್ನು ಪಾಸಿಟಿವ್ ಮಾಡಿ ತೋರಿಸಬೇಕು. ಹುಡುಗಿ ಹುಡುಗಿ ಎಂದು ರೇಗಿಸುತ್ತಾರೆ ಜನರು ಆಗ ಮಾಲಾಶ್ರೀ ಉಮಾಶ್ರೀ ತಾರಾ ಮತ್ತು ಶ್ರುತಿ ಮೇಡಂ ನಟನೆ ನೋಡಿಕೊಂಡು ಪ್ರತಿಯೊಂದನ್ನು ಕಲಿತಿರುವೆ. ಹುಡುಗಿ ಪಾತ್ರ ಹೇಗೆ ನನಗೆ ಸೂಕ್ತವಾಯ್ತು ಎಂದು ಗೊತ್ತಾಗುವುದಿಲ್ಲ ನಾರ್ಮಲ್ ಬಟ್ಟೆ ಹಾಕಿಕೊಂಡರೆ ಸರ್ ಎನ್ನುತ್ತಾರೆ ಹುಡುಗಿ ರೀತಿ ಅಲಂಕಾರ ಮಾಡಿಕೊಂಡರೆ ಮೇಡಂ ಎನ್ನುತ್ತಾರೆ. ಸಾಮಾನ್ಯವಾಗಿ ಹುಡುಗನನ್ನು ಹುಡುಗಿ ರೀತಿ ನೋಡಲು ಜನರು ಒಪ್ಪಿಕೊಳ್ಳುವುದಿಲ್ಲ ಹೀಗಿರುವಾಗ ನಮ್ಮ ಕನ್ನಡಿಗರು ನನಗೆ ಸಪೋರ್ಟ್ ಮಾಡಿ ಸ್ವೀಕರಿಸಿದ್ದಾರೆ ಅಂದ್ರೆ ಖುಷಿ ಪಡಬೇಕು ವಂದನೆ ಹೇಳಬೇಕು. ಇಷ್ಟು ವರ್ಷದಲ್ಲಿ ಬಂದಿರುವುದು ಕೆಟ್ಟ ಕಾಮೆಂಟ್‌ಗಳು ಆದರೆ ಯಾವುದು ನೆನಪಿಲ್ಲ ಏಕೆಂದರೆ ನನಗೆ ನೆನಪಿನ ಶಕ್ತಿ ಕಡಿಮೆ ಬೇಗ ಮರೆತು ಮುಂದೆ ನಡೆಯುವೆ' ಎಂದಿದ್ದಾರೆ ರಾಘು.