ಬಿಗ್ಬಾಸ್ ಖ್ಯಾತಿಯ ನಟಿ ಪಾಲಕ್ ಪುರಸ್ವಾನಿ ತಮ್ಮ ಬ್ರೇಕಪ್ ಬಗೆಗಿನ ನೋವು ತೋಡಿಕೊಂಡಿದ್ದು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಪಾಲ್ಕಿ ಎಂದೇ ಫೇಮಸ್ ಆಗಿರೋ ನಟಿ 28 ವರ್ಷದ ಪಾಲಕ್ ಪುರಸ್ವಾನಿ (Palak Purswani). ಮಹಾರಾಷ್ಟ್ರದ ನಾಗ್ಪುರದ ಈ ಬೆಡಗಿ ಫ್ಯಾಷನ್ ವಿನ್ಯಾಸದಲ್ಲಿ ಪದವಿ ಹೊಂದಿ ಯೋಗ, ಕುದುರೆ ಸವಾರಿ, ಪ್ರಯಾಣ, ಶಾಪಿಂಗ್ ಮತ್ತು ನೃತ್ಯ ಪಟುವಾಗಿದ್ದರೂ ಈಕೆ ಸಕತ್ ಫೇಮಸ್ ಆಗಿದ್ದು, ಬಿಗ್ಬಾಸ್ನ ಓಟಿಟಿ ಸೀಸನ್-2ನಲ್ಲಿ ಭಾಗವಹಿಸಿದ್ದಾಗ. ಬಡಿ ದೇವ್ರಾಣಿ, ಬಡೇ ಭೈಯಾ ಕಿ ದುಲ್ಹನಿಯಾ, ನಾಸ್ತಿಕ್, ಮೇರಿ ಹನಿಕಾರಕ್ ಬೀವಿ, ಯೇ ರಿಷ್ತೇ ಹೈ ಪ್ಯಾರ್ ಕೆ ಧಾರಾವಾಹಿಗಳ ಮೂಲಕವೂ ಸಾಕಷ್ಟು ಜನಪ್ರಿಯಗೊಂಡಿರುವ ಕಿರುತೆರೆ ನಟಿ ಪಾಲಕ್, Roohaniyat ವೆಬ್ ಸರಣಿಯೊಂದಿಗೆ ಮನೆ ಮಾತಾದವರು. ಆದರೆ ಇವರು ಸಕತ್ ಹೈಲೈಟ್ ಆಗಿದ್ದು ಬಿಗ್ಬಾಸ್ನಲ್ಲಿ.
ಬಿಗ್ಬಾಸ್ ಮನೆಯಲ್ಲಿ ಹಳೆದ ಬಾಯ್ಫ್ರೆಂಡ್ ಅನ್ನು ಕಂಡು ಹಿಂದಿನ ಕಹಿ ಘಟನೆಗಳನ್ನು ನೆನೆದು ಅತ್ತಿದ್ದಾರೆ ಪಾಲಕ್. ತಮ್ಮ ಮಾಜಿ ಗೆಳೆಯನಾಗಿರುವ ನಟ ಅವಿನಾಶ್ ಸಚ್‌ದೇವ್ (Avinash Sachdev) ತಮಗೆ ತುಂಬಾ ಮೋಸ ಮಾಡಿದ್ದಾರೆ ಎಂದು ಕಣ್ಣೀರಿಟ್ಟ ನಟಿ, ಇದರಿಂದ ತಮ್ಮ ತಂದೆ ಕೂಡ ಹಾರ್ಟ್ ಎಟ್ಯಾಕ್ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ. ತಮ್ಮ ಷೋ ದುರ್ಗಾ-ಮಾತಾ ಕಿ ಛಾಯಾ ಕಾರ್ಯಕ್ರಮದ ಸೆಟ್‌ಗಳಲ್ಲಿ ಈ ಘಟನೆ ಸಂಭವಿಸಿದ್ದು, ತಾವು ಹೇಗೆ ಇದರಿಂದ ಖಿನ್ನತೆ ಎದುರಿಸಬೇಕಾಯಿತು ಎಂದು ನಟಿ ವಿವರಿಸಿದ್ದಾರೆ. ಪಾಲಕ್ ಮತ್ತು ಅವಿನಾಶ್ ಬಿಗ್ ಬಾಸ್ OTT 2 ನಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಕೊನೆಗೆ ನಟಿ ಪಾಲಕ್ ಹೊರಹಾಕಲ್ಪಟ್ಟರು. ಈ ಸಂದರ್ಭದಲ್ಲಿ ಹಿಂದಿನ ದಿನಗಳನ್ನು ನೆನೆದು ನಟಿ ಕಣ್ಣೀರಾಗಿದ್ದಾರೆ.
'ಬಿಗ್ ಬಾಸ್'ನಲ್ಲಿ ಲಿಪ್ಲಾಕ್- ಅಂಗ ಪ್ರದರ್ಶನ: ಮುಸ್ಲಿಂ ರಾಷ್ಟ್ರಗಳ ಬಗ್ಗೆ ಸಲ್ಮಾನ್ ಹೇಳಿದ್ದೇನು?
ಅಂದಹಾಗೆ ಪಾಲಕ್ ಅವರು, ಅವಿನಾಶ್ ಸಚ್‌ದೇವ್ ಅವರೊಂದಿಗೆ ಸುಮಾರು ನಾಲ್ಕ 4 ವರ್ಷಗಳಿಂದ ಸಂಬಂಧದಲ್ಲಿದ್ದರು. ಪರಸ್ಪರ ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ ಈ ಜೋಡಿ, ಲವ್ ಬರ್ಡ್ಸ್ ಎಂದೇ ಫೇಮಸ್ ಆದವರು. ಅಷ್ಟೇ ಅಲ್ಲದೇ ಮದುವೆಗೂ ಯೋಚನೆ ಮಾಡಿದ್ದರು ಇವರು. ಇದೇ ಕಾರಣಕ್ಕೆ ಇಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಆದರೆ ಅದೊಂದು ದಿನ ಏಕಾಏಕಿ ಫ್ಯಾನ್ಸ್ಗೆ ಜೋಡಿ ಶಾಕ್ ಕೊಟ್ಟಿತ್ತು. ತಮ್ಮ ಸಂಬಂಧ ಮುರಿದು ಬಿದ್ದಿರುವುದಾಗಿ ಜೋಡಿ ಹೇಳಿಕೊಂಡಿತ್ತು. ಇವರ ಬ್ರೇಕಪ್ ವಿಚಾರ ಆಗ ಬಹಳ ಸುದ್ದಿಯಾಗಿತ್ತು. ಆದರೆ ಈಗ ಮತ್ತೊಮ್ಮೆ ಅದನ್ನು ನೆನಪು ಮಾಡಿಕೊಳ್ಳಲು ಕಾರಣ, ಬಿಗ್ಬಾಸ್ ಒಟಿಟಿ 2 (Biggboss OTT) ಮೂಲಕ ಒಂದೇ ಕಡೆ ಸೇರುವಂತಾದುದಕ್ಕೆ.
ಪಾಲಕ್ ಅವರು ಬಿಗ್ಬಾಸ್ನಿಂದ ಎಲಿಮಿನೇಟ್ ಆಗುತ್ತಲೇ ಹಿಂದಿನ ದಿನಗಳನ್ನು ನೆನೆದಿದ್ದಾರೆ. ಅವಿನಾಶ್ ತಮಗೆ ಮೋಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿರುವ ನಟಿ ಪಾಲಕ್, ನನ್ನ ತಂದೆ ಕೂಡ ಅವಿನಾಶ್ನನ್ನು ಮಗನಂತೆಯೇ ಕಂಡಿದ್ದರು. ಆದರೆ ಆತ ನನಗೆ ಮೋಸ ಮಾಡಿದ ನಿಶ್ಚಿತಾರ್ಥವೂ ಆಗಿತ್ತು. ಅದು ಕೂಡ ಬ್ರೇಕ್ ಅಪ್ ಆಯಿತು. ಈ ವಿಷಯ ತಿಳಿಯುತ್ತಲೇ ತಂದೆಗೆ ಮೈನರ್ ಹಾರ್ಟ್ ಎಟ್ಯಾಕ್ ಆಯಿತು ಎಂದು ನಟಿ ಹೇಳಿದ್ದಾರೆ. 'ನನ್ನ ತಂದೆ ನಮ್ಮಿಬ್ಬರನ್ನೂ ತುಂಬಾ ಪ್ರೀತಿಸುತ್ತಿದ್ದರು. ಅವಿನಾಶ್ನನ್ನು ಮಗನಂತೆ ತಿಳಿದಿದ್ದರು. ನಮ್ಮ ಬ್ರೇಕ್ ಆದಾಗಲೂ ಅವರ ಕುಟುಂಬದಿಂದ ಯಾರೊಬ್ಬರೂ ಒಂದು ಕಾಲ್ ಕೂಡಾ ಮಾಡಲಿಲ್ಲ. ಇದರಿಂದ ತಂದೆ ತುಂಬಾ ನೊಂದುಕೊಂಡರು' ಎಂದಿದ್ದಾರೆ.
ಈ ಘಟನೆಯ ಬಳಿಕ ನಾನೂ ಡಿಪ್ರೆಷನ್ಗೆ ಹೋಗಿದ್ದೆ. ತಂದೆಯನ್ನು ಹೇಗೋ ಸಮಾಧಾನ ಮಾಡಿದೆ. ಆದರೆ ಆತ ನನಗೆ ಹೀಗೆ ಮೋಸಮಾರಬಾರದಿತ್ತು ಎಂದಿದ್ದಾರೆ. ಅವಿನಾಶ್ ನನಗೆ ಮೋಸ ಮಾಡಿದ ಸಂದರ್ಭ ನಾನು ದುರ್ಗಾ-ಮಾತಾ ಕಿ ಛಾಯಾ ಶೂಟಿಂಗ್ ಸೆಟ್ನಲ್ಲಿದ್ದೆ. ಆಗ ಬ್ರೇಕಪ್ ವಿಷಯ ಬಂತು. ನಾನು ಕುಸಿದು ಕುಳಿತು ಜೋರಾಗಿ ಅಳಲಾರಂಭಿಸಿದೆ. ನನ್ನ ಬಳಿ ಇದ್ದ ನಟಿ ಸಿಮ್ರನ್ ನನಗೆ ಸಮಾಧಾನ ಮಾಡಿದರು. ನಾನು ಡಿಪ್ರೆಷನ್ಗೆ ಹೋಗಿದ್ದೆ. ಅವಳೇ ನನ್ನನ್ನು ಡಿಪ್ರೆಷನ್ನಿಂದ ಹೊರಗೆ ತಂದಳು ಎಂದಿದ್ದಾರೆ ಪಾಲಕ್.
ಬೇಡ ಬೇಡ ಎಂದ್ರೂ ಗಾಯಕನಿಗೆ ಪದೇ ಪದೇ ಕಿಸ್ ಕೊಟ್ಟ ಬಿಗ್ಬಾಸ್ ಸ್ಪರ್ಧಿ: ಉರ್ಫಿ ಹೇಳಿದ್ದೇನು?