ನಂದು ಪಕ್ಕಾ ಲವ್ ಮ್ಯಾರೇಜ್, ಆದರೆ ಗಂಡ ರೊಮ್ಯಾಂಟಿಕ್ ಅಲ್ವೇ ಅಲ್ಲ: ಶ್ರೀರಸ್ತು ಶುಭಮಸ್ತು ಪೂರ್ಣಿ ಕಥೆ

By Suvarna News  |  First Published Jul 6, 2023, 1:33 PM IST

ಅಮೃತಧಾರೆ ಸೀರಿಯಲ್‌ನ (amruthadhare serial) ಚಾಕೊಲೇಟ್ ಬಾಯ್ ಜೀವನ್ ಶ್ರೀರಸ್ತು ಶುಭಮಸ್ತು (shrirastu shubhamastu) ಸೀರಿಯಲ್‌ನ ಪೂರ್ಣಿಯ ರಿಯಲ್‌ ಲೈಫಲ್ಲಿ ಗಂಡ ಹೆಂಡತಿ. ಶಶಿ ಹೆಗಡೆ, ಲಾವಣ್ಯ ಭಾರದ್ವಾಜ್ ಫ್ಯಾಮಿಲಿ ಲೈಫು ಸಖತ್ ಮಜವಾಗಿದೆ.


ಉತ್ತರ ಕನ್ನಡ ಜಿಲ್ಲೆ ಶಿರಸಿಯ ಹುಡುಗ ಬೆಂಗಳೂರಿಗೆ ಬಂದಿದ್ದು ಒಂದು ಕಥೆಯಾದ್ರೆ ಸೀರಿಯಲ್‌ನಲ್ಲಿ ಸಿಕ್ಕ ಕ್ಯೂಟ್ ಹುಡುಗಿಯಿಂದ ಆತನ ಲೈಫೇ ಬದಲಾದದ್ದು ಮತ್ತೊಂದು ಕಥೆ. ಇತ್ತೀಚೆಗೆ ಸಖತ್ ಪಾಪ್ಯುಲರ್ ಆಗ್ತಿರೋ ಅಮೃತಧಾರೆ ಸೀರಿಯಲ್ ನೋಡೋರಿಗೆ ಜೀವನ್ ಪಾತ್ರ ನೆನಪಿದ್ದೇ ಇರುತ್ತೆ.  ಛಾಯಾಸಿಂಗ್ ಮುದ್ದಿನ ತಮ್ಮ ಈ ಜೀವನ್. ಈ ಹುಡುಗ ಸಖತ್ ಕ್ಯೂಟ್ ಆಗಿದ್ದಾನಲ್ಲಾ ಅಂತ ಲೈನ್ ಹೊಡೆಯೋ ಹುಡುಗೀರಿಗೇನೂ ಕಮ್ಮಿ ಇಲ್ಲ. ಆದ್ರೆ ಈ ಹುಡುಗ ಮ್ಯಾರೀಡ್ ಮ್ಯಾನ್ ಅನ್ನೋದು ಅವರಿಗೆಲ್ಲ ನಿರಾಸೆ ತರಿಸಬಹುದು. ಈ ಹುಡುಗನ ಕೈ ಹಿಡಿದ ಹುಡುಗಿಯನ್ನು ನೀವು ನೋಡೇ ಇರ್ತೀರಿ. ಆಕೆ ಶ್ರೀರಸ್ತು ಶುಭಮಸ್ತು ಅನ್ನೋ ಸೀರಿಯಲ್‌ನಲ್ಲಿ ನಾಯಕ ಮಾಧವನ ಮುದ್ದಿನ ಸೊಸೆ ಪೂರ್ಣಿ. 

ಯೆಸ್ ಇದು ಶಿರಸಿ ಹುಡುಗ ಶಶಿ ಹೆಗಡೆ ಹಾಗೂ ಬೆಂಗಳೂರಿನ ಕ್ಯೂಟ್ ಹುಡುಗಿ ಲಾವಣ್ಯ ಭಾರಧ್ವಾಜ್ ಕಥೆ. ಇವರಿಬ್ಬರೂ ತಮ್ಮ ಲೈಫ್‌ ಜರ್ನಿಯನ್ನು ಆಗಾಗ ಯೂಟ್ಯೂಬ್‌ನಲ್ಲಿ ಶೇರ್ ಮಾಡ್ತಿರುತ್ತಾರೆ. ಕಂಟೆಂಟ್ ಕಾರ್ಟ್ ಅನ್ನೋದು ಈ ಜೋಡಿಯ ಯೂಟ್ಯೂಬ್ ಚಾನಲ್ ಹೆಸ್ರು. ಇವರ ಯೂಟ್ಯೂಬ್‌ಗೆ ಸಾಕಷ್ಟು ಜನ ಫಾಲೋವರ್ಸ್ ಇದ್ದಾರೆ. ವೀಡಿಯೋ ಅಪ್‌ಲೋಡ್ ಮಾಡಿದ್ರೆ ಲಕ್ಷಾಂತರ ಜನ ನೋಡಿ ಶಹಭಾಸ್ ಅಂತಾರೆ. ಈ ಜೋಡಿಯ ಲವ್‌ಸ್ಟೋರಿಯೂ ಸಖತ್ ಇಂಟರೆಸ್ಟಿಂಗ್. 

'ರಾಜಾ ರಾಣಿ' ಅನ್ನೋ ಧಾರಾವಾಹಿಯಲ್ಲಿ ಲಾವಣ್ಯಾ ಭಾರದ್ವಾಜ್ ಹಾಗೂ ಶಶಿ ಹೆಗಡೆ ಅವರ ಮೊದಲ ಭೇಟಿ. ಸೀರಿಯಲ್‌ನಲ್ಲಿ ಅಣ್ಣ ತಂಗಿ ಪಾತ್ರ. ಅದೇ ಕಾರಣಕ್ಕೆ ಮುಗ್ಧ ಹುಡುಗಿ ಲಾವಣ್ಯ ಆ ಚಾಕೊಲೇಟ್ ಹೀರೋ ಬ್ರೋ ಅಂತ ಕರೀಬೇಕಾ! ಮನಸ್ಸಲ್ಲೇ ಹುಡುಗಿಗೆ ಕಾಳು ಹಾಕ್ತಿದ್ದ ಹುಡುಗನಿಗೆ ಕಣ್ಣಲ್ಲಿ ನೀರು ಬರೋದೊಂದು ಬಾಕಿ. ಬ್ರೋ ಅಂತ ಕರೀಬೇಡ ಅಂತ ಪರಿಪರಿಯಾಗಿ ರಿಕ್ವೆಸ್ಟ್ ಮಾಡಿದ ಮೇಲೆ ಲಾವಣ್ಯಾ ಬ್ರೋ ಅಂತ ಕರೆಯೋದನ್ನು ನಿಲ್ಲಿಸಿದರು. ಬರುಬರುತ್ತ ಇವರಿಬ್ಬರು ಪರಸ್ಪರ ಅರ್ಥ ಮಾಡಿಕೊಂಡರು, ಸ್ನೇಹಿತರಾದರು.

Tap to resize

Latest Videos

ಆರಂಭದಲ್ಲಿ ಧಾರಾವಾಹಿ ಸೆಟ್‌ನಲ್ಲಿ ನಾಲ್ಕು ಜನರು (ಲಾವಣ್ಯಾ, ಶಶಿ ಹೆಗಡೆ, ಶಿಲ್ಪಾ ಶೆಟ್ಟಿ) ಸ್ನೇಹಿತರಾದರು. ಈ ನಾಲ್ಕು ಜನರು ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು, ಟ್ರಿಪ್‌ಗೆ ಹೋಗುತ್ತಿದ್ದರು. 6 ತಿಂಗಳುಗಳ ಕಾಲ ಲಾವಣ್ಯಾ ಅವರು ಹೇಗೆ? ಏನು? ಅಂತೆಲ್ಲ ತಿಳಿದುಕೊಂಡು ಒಂದು ದಿನ ಶಶಿ ಅವರು ಪ್ರೇಮ ನಿವೇದನೆ ಮಾಡಿದ್ದರು. ಆದರೆ ಲಾವಣ್ಯಾ ಮಾತ್ರ ಏನೂ ಉತ್ತರ ನೀಡಲಿಲ್ಲ. ಆದರೆ ಹುಡುಗಿ ಮನಸ್ಸು ಅರಿತ ಶಶಿ ಲಾವಣ್ಯ ಮನೆಯಲ್ಲೇ ಮಾತಾಡಿದ್ದಾರೆ. ಎರಡೂ ಮನೆಯವರ ಒಪ್ಪಿಗೆ ಪಡೆದು ಇಬ್ಬರೂ ಸಪ್ತಪದಿ ತುಳಿದಿದ್ದಾರೆ. 

ಕುಸುಮ ಬೆಸ್ಟ್ ಅತ್ತೆ ಅಂತಿದ್ರು, ಈಗ ಇಂಥ ಅತ್ತೆ ಯಾರಿಗೂ ಬೇಡಪ್ಪಾ ಅಂತಿರೋದ್ಯಾಕೆ?

ಇದೆಲ್ಲ ಹಳೇ ಕಥೆ. ಈಗ ಇವರಿಬ್ಬರೂ ಹೇಗಿದ್ದಾರೆ ಅಂದರೆ ಅದಕ್ಕುತ್ತರ ಇವರ ಯೂಟ್ಯೂಬ್‌ನಲ್ಲಿ ಸಿಗುತ್ತೆ. 'ನಿಮ್ಮಿಬ್ಬರಲ್ಲಿ ಯಾರು ತುಂಬ ರೊಮ್ಯಾಂಟಿಕ್?' ಅಂತ ಫ್ಯಾನ್ಸ್ ಕೇಳಿದರೆ, ಶಶಿ ಪತ್ನಿ ಲಾವಣ್ಯ ಕಡೆ ಬೆರಳು ತೋರಿಸ್ತಾರೆ. ನನ್ನ ಹುಡುಗಂಗೆ ನಾಚಿಕೆ ಜಾಸ್ತಿ ಅಂತ ಲಾವಣ್ಯ ಅಂದರೆ ಶಶಿ ಅವರು ನಾಚಿಕೊಂಡು, ಇದನ್ನ ಇಲ್ಲಿಗೆ ನಿಲ್ಲಿಸೋಣ, ಆಲ್‌ ರೈಟ್ ಮುಂದಕ್ಕೋಗೋಣ ಅಂತಾರೆ. 

ಲಾವಣ್ಯ ದೇವರ ಪೂಜೆ, ಭಯ ಭಕ್ತಿ ಅಂತಿದ್ರೆ ಶಶಿ ಸ್ವಲ್ಪ ಲಿಬರಲ್. ದೇವರನ್ನು ಅವರು ನೋಡೋ ರೀತಿ ಕೊಂಚ ಬೇರೆ ಥರ. ಆದರೆ ದೇವರನ್ನು ಕಂಡ್ರೆ ಇಬ್ರಿಗೂ ಪ್ರೀತಿ ಇದೆ. ಕ್ಯೂಟ್ ಕ್ಯೂಟಾಗಿ ಇಬ್ಬರೂ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ, ಜೋಶ್‌ನಲ್ಲಿ ಮಾತಾಡ್ತಿದ್ರೆ ಇವರ ಲೈಫು ಸಖತ್ ಖುಷಿಯಿಂದ ಕೂಡಿರುತ್ತೆ ಅನ್ನೋದು ಗೊತ್ತಾಗುತ್ತೆ. 

ಅಮೃತಧಾರೆ : ಎಂಗೇಜ್‌ಮೆಂಟ್‌ನಲ್ಲಿ ಭೂಮಿಕಾಗೆ ಸೀರೆ ಯಾಕೆ ಉಡಿಸಿಲ್ಲ? ವೀಕ್ಷಕರ ದೂರು
 

click me!