ಸಿನಿಮಾಗಿಂತ ಇಸ್ಲಾಂ ಮುಖ್ಯವೆಂದು ಹಿಜಾಬ್‌ ಹಿಂದೆ ಹೋಗಿದ್ದ ಸನಾ ಖಾನ್‌ಗೆ ಗಂಡು ಮಗು

Published : Jul 05, 2023, 05:48 PM ISTUpdated : Jul 05, 2023, 06:02 PM IST
ಸಿನಿಮಾಗಿಂತ ಇಸ್ಲಾಂ ಮುಖ್ಯವೆಂದು ಹಿಜಾಬ್‌ ಹಿಂದೆ ಹೋಗಿದ್ದ ಸನಾ ಖಾನ್‌ಗೆ ಗಂಡು ಮಗು

ಸಾರಾಂಶ

ನಟನೆಗೆ ವಿದಾಯ ಹೇಳಿ ಹಿಜಬ್ ಧರಿಸಲು ನಿರ್ಧರಿಸಿದ್ದ ನಟಿ ಸನಾ ಖಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಮಾಜಿ ನಟಿ ಸನಾ ಖಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಸನಾ ಖಾನ್ ಬಣ್ಣದ ಲೋಕ ತ್ಯಜಿಸಿ ಮೂರು ವರ್ಷಗಳಾಗಿವೆ. ಹಣ, ಖ್ಯಾತಿ, ಗ್ಲಾಮರ್ ಎಲ್ಲವನ್ನು ತೊರೆದು ಹಿಜಬ್ ಆಯ್ಕೆ ಮಾಡಿದ್ದ ನಟಿ ಸನಾ ಖಾನ್ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಮುಫ್ತಿ ಅನಸ್ ಸೈಯದ್  ಜೊತೆ ಸನಾ ಖಾನ್ ದಾಂಪತ್ಯಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಸಲಾ ಖಾನ್  ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಿದರು. ಧರ್ಮದ ಬಗ್ಗೆ ಜ್ಞಾನ ಹರಡಲು ನಿರ್ಧರಿಸಿದರು. ಇತ್ತೀಚೆಗಷ್ಟೆ ಗರ್ಭಿಣಿ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದ ಸನಾ ಖಾನ್ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಸನಾ ಖಾನ್ ಜುಲೈ 5, 2023ರಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಪುಟ್ಟ ವಿಡಿಯೋ ಮೂಲಕ ಮಗ ಜನಿಸಿದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.  ನವಜಾತ ಶಿಶುವಿನ ಪುಟ್ಟ ಕೈಗಳನ್ನು ನೋಡಬಹುದು. ವಿಡಿಯೋದಲ್ಲಿ ಅಲ್ಲಾಗೆ ಧನ್ಯವಾದ ತಿಳಿಸಿದ್ದಾರೆ. ವಿಡಿಯೋ ಶೇರ್ ಮಾಡಿ ಸನಾ ಖಾನ್ ಮತ್ತು ಅನಸ್ ಸೈಯದ್ ದಂಪತಿ ಎಲ್ಲಾನಾ ದಯೇ ಎಂದು ಹೇಳಿದ್ದಾರೆ. 

ಮಾಜಿ ನಟಿ ಸನಾ ಖಾನ್ ಬಾಬಾ ಸಿದ್ದಿಕ್ ಅವರ ಇಫ್ತಾರ್ ಕೂಟದಲ್ಲಿ ಮೊದಲ ಬಾರಿಗೆ ಬೇಬಿ ಬಂಪ್ ಪ್ರದರ್ಶಿಸಿದರು. ನಟನಾ ಪ್ರಪಂಚವನ್ನು ತೊರೆದ ನಂತರ, ಸನಾ ಮೊದಲ ಬಾರಿಗೆ ತನ್ನ ಪತಿ ಅನಾಸ್ ಅವರೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿದರು.

ಸನಾ ಖಾನ್ ಮತ್ತು ಸೂರತ್ ಮೂಲದ ಮುಫ್ತಿ ಅನಸ್ ಸೈಯದ್ ಇಬ್ಬರೂ 2020ರಲ್ಲಿ ಮದುವೆಯಾದರು. 
ಸನಾ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ತನ್ನ ಗಂಡನೊಂದಿಗೆ ಸುಂದರವಾದ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಇಬ್ಬರ ಮದುವೆ ಫೋಟೋಗಳು ವೈರಲ್ ಆಗಿದ್ದವು.

SANA KHAN: ನಟನೆ ಬಿಟ್ಟು ಹಿಜಾಬ್​ ಧರಿಸಿದ ಕನ್ನಡದ 'ಕೂಲ್​' ನಟಿಯೀಗ ಗರ್ಭಿಣಿ

ಸಿನಿಮಾರಂಗ ತೊರೆದ ಬಗ್ಗೆ ಸನಾ ಖಾನ್ ಮಾತು 

ಈ ಹಿಂದೆ ಸನಾ ಖಾನ್ ಸಂದರ್ಶನವೊಂದರಲ್ಲಿ ಮಾತನಾಡಿ, ಹಿಜಾಬ್ ಧರಿಸಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿ ಕಣ್ಣೀರಿಟ್ಟಿದ್ದರು. ಸಮಾಜ ಸೇವೆ ಮಾಡಲು ಮತ್ತು  ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎಂದು ಹೇಳಿದ್ದರು. ಈ ಬಗ್ಗೆ ವಿಡಿಯೋ ಸಂದರ್ಶನ ನೀಡಿದ್ದ ಸನಾ ಖಾನ್ ಆಧ್ಯಾತ್ಮಿಕ ದಾರಿ ಹಿಡಿಯಲು ಹಿಂದಿನ ಕಾರಣವೇನು ಎಂದು ವಿವರಿಸಿದ್ದರು. ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದರು.

'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ, ಯಾಕೆ? ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು' ಎಂದು ಹೇಳಿದ್ದರು. 

ಗರ್ಭಿಣಿ ಸನಾ ಖಾನ್‌ರನ್ನು ಪಾರ್ಟಿಯಿಂದ ಎಳೆದೋಯ್ದ ಪತಿ, ನಟಿ ಸಮರ್ಥಿಸಿಕೊಂಡಿದ್ದು ಹೀಗೆ

'ನಿಮ್ಮ ಕೊನೆಯ ದಿನವು ಹಿಜಾಬ್ ಧರಿಸಿದ ಮೊದಲ ದಿನವಾಗಿರಲು ನೀವು ಬಯಸುವುದಿಲ್ಲ ಎಂದು ಸಂದೇಶದಲ್ಲಿ ಕೇಳಿದೆ. ಅದು ನನ್ನನ್ನು ತುಂಬಾ ಆಳವಾಗಿ ಸ್ಪರ್ಶಿಸಿದ ವಿಷಯ. ಮರುದಿನದಿಂದನೇ ನಾನು ಹಿಜಾಬ್ ಧರಿಸಲು ಪ್ರಾರಂಭಿಸಿದೆ. ಇನ್ನು  ಯಾವುತ್ತು ತೆಗಿಯಲ್ಲ ಎಂದು ನಿರ್ಧಸಿದೆ' ಎಂದು ಹೇಳುತ್ತಾ ಕಣ್ಣೀರಾಕಿದ್ದರು. 
  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?