Latest Videos

'ಏನು ಇಷ್ಟು ದಪ್ಪ ಆಗಿದೆ..' ಅಂತಾ ಕಾಮೆಂಟ್‌ ಮಾಡೋದು ವಾಕ್‌ ಸ್ವಾತಂತ್ರ್ಯ ಅಲ್ಲ: ಚಂದನ್‌ ಶೆಟ್ಟಿ!

By Santosh NaikFirst Published Jun 20, 2024, 8:55 PM IST
Highlights


ಕೊನೆಗೂ ಚಂದನ್‌ ಶೆಟ್ಟಿ ಮಾತಿಗೆ ಸಿಕ್ಕಿದ್ದಾರೆ. ನಿವೇದಿತಾ ಗೌಡ ಜೊತೆಗಿನ ವಿಚ್ಛೇದನ ಬಳಿಕ ಅವರು ರಾಪಿಡ್‌ ರಶ್ಮಿ ಶೋ ಹಾಗೂ ಕಿರಿಕ್‌ ಕೀರ್ತಿ ಅವರ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
 

ಬೆಂಗಳೂರು (ಜೂ.20): ಸಂಗೀತ ನಿರ್ದೇಶಕ, ರಾಪರ್‌ ಚಂದನ್‌ ಶೆಟ್ಟಿ ಕೊನೆಗೂ ಮಾತಿಗೆ ಸಿಕ್ಕಿದ್ದಾರೆ.  ನಿವೇದಿತಾ ಗೌಡ ಅವರೊಂದಿಗೆ ವಿಚ್ಛೇದನ ಪಡೆದುಕೊಂಡ ಸುದ್ದಿಯ ಬಳಿಕ ಚಂದನ್‌ ಶೆಟ್ಟಿ ತಣ್ಣಗಾಗಿದ್ದರು. ಈ ನಡುವೆ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದೇ ಸುಳ್ಳು ಎನ್ನುವ ಅರ್ಥದಲ್ಲಿ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳು ಬಂದಿದ್ದವು. ಇವೆಲ್ಲದಕ್ಕೂ ಚಂದನ್‌ ಶೆಟ್ಟಿ ಕಿರಿಕ್‌ ಕೀರ್ತಿ ಅವರ ಯೂಟ್ಯೂಬ್‌ ಚಾನೆಲ್‌ ಸ್ಪೀಡ್‌ ಪ್ಲಸ್‌ ಕರ್ನಾಟಕದಲ್ಲಿ ಉತ್ತರ ನೀಡಿದ್ದಾರೆ. ಅದರೊಂದಿಗೆ ಸೋಶಿಯಲ್‌ ಮೀಡಿಯಾದಲ್ಲಿ ನಿವೇದಿತಾಗೆ ಬರುತ್ತಿದ್ದ ಕೆಟ್ಟ ಕಾಮೆಂಟ್‌ಗಳು, ಅಶ್ಲೀಲವಾಗಿ ಕಾಮೆಂಟ್‌ ಮಾಡುವ ವ್ಯಕ್ತಿಗಳ ವಿರುದ್ಧ ಏನನ್ನೂ ಮಾಡಲಾಗದ ಅಸಹಾಯಕತೆಯ ಬಗ್ಗೆ ಚಂದನ್‌ ಮಾತನಾಡಿದ್ದಾರೆ. ಅದಲ್ಲದೆ, ವಿಚ್ಛೇದನದಿಂದ ಮರಳಿ ಮತ್ತೆ ನಿವೇದಿತಾ ಗೌಡ ಜೊತೆಗೆ ಬದುಕೋದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಲೈಫ್‌ಅಲ್ಲಿ ಮುಂದೇನ್‌ ಮಾಡಬೇಕು ಅಂತಾ ಪ್ಲ್ಯಾನ್‌ನಲ್ಲಿದ್ದೀರಿ ಎಂದು ಕಿರಿಕ್‌ ಕೀರ್ತಿ ಕೇಳೋ ಪ್ರಶ್ನೆಗೆ, ಯಾವುದೇ ಟೆನ್ಶನ್‌ ಇಲ್ದೆ ಖುಷಿಯಾಗಿರಬೇಕು ಅಂತಾ ಇದ್ದೇನೆ ಎಂದು ಚಂದನ್‌ ಹೇಳಿದ್ದಾರೆ. ಯಾವೆಲ್ಲಾ ವಿಚಾರಗಳು ನನ್ನ ಏಳಿಗೆಗೆ ಹಾಗೂ ಮಾನಸಿಕ ನೆಮ್ಮದಿಗೆ ಅಡ್ಡಿಯಾಗುತ್ತಿತ್ತು ಅಂತಾ ಅನಿಸಿತ್ತೋ ಆ ಎಲ್ಲಾ ವಿಚಾರಗಳಿಂದ ಸಂಪೂರ್ಣವಾಗಿ ಹೊರಬಂದಿದ್ದೇನೆ. ಟೆನ್ಶನ್‌ ಕೊಡೋ ಯಾವುದೇ ವಿಚಾರವೂ ನನಗೆ ಬೇಡ ಎಂದಿದ್ದಾರೆ.

ಕಲ್ಲನ್ನು ಶಿಲೆ ಮಾಡಬೇಕಾದರೆ, ಸಾಕಷ್ಟು ಪೆಟ್ಟು ತಿನ್ನಬೇಕೆಂತೆ, ಅದೇ ರೀತಿ ನಾನೂ ಕೂಡ ಸಾಕಷ್ಟು ಪೆಟ್ಟು ತಿಂದು ಶಿಲೆಯಾಗಿದ್ದೇನೆ. ಇನ್ನು ಪೆಟ್ಟು ಯಾರು ಕೊಟ್ರು ಅಂತಾ ನಾನು ವಿಶೇಷವಾಗಿ ಹೇಳಬೇಕಾಗಿಲ್ಲ. ಒಂದಾ, ಎರಡಾ..? ಯಾರ ಬಗ್ಗೆ ಅಂತಾ ಹೇಳೋದು. ಇನ್ನು ಟೈಮ್‌ ಬರುತ್ತೆ ನಂಗೆ ಟೈಮ್‌ ಬರುತ್ತೆ ಅನ್ನೋ ಸಾಂಗ್‌ ಕೂಡ ಇದೇ ಟೈಮ್‌ನಲ್ಲಿ ಬಂದಿತ್ತು.  ನನಗೆ ಎಲ್ಲಾ ವಿಚಾರಗಳಿಂದ ಹೊರಗೆ ಬರೋಕೆ ಟೈಮ್‌ ಬಂದಿತ್ತು ಅಂತಾ ಕಾಣುತ್ತೆ. ನಾನೀಗ ತುಂಬಾ ಖುಷಿ. ಇನ್ನೂ ಹಳೇ ಚಂದನ್‌ ಶೆಟ್ಟಿ, ಆ ಜೋಶ್‌ ಬರಬೇಕಾದರೆ ಇನ್ನೂ ಕೆಲ ದಿನ ಹೋಗಬೇಕು. ಗಾಯ ಆಗಿದೆ. ಅದು ಗುಣ ಆಗೋಕೆ ಸ್ವಲ್ಪ ಸಮಯ ನೀಡಬೇಕು ಎಂದು ಚಂದನ್‌ ಹೇಳಿದ್ದಾರೆ.

ತುಂಬಾ ಜನ ನಮ್ಮಿಬ್ಬರನ್ನ ಒಂದು ಮಾಡೋಕೆ ಪ್ರಯತ್ನ ಮಾಡ್ತಿದ್ದಾರೆ. ಆದರೆ, ಅದು ಆಗೋದಿಲ್ಲ. ಅಂಥಾ ಪೋಸ್ಟ್‌ಗಳನ್ನ ನೋಡಿದ್ರೆ ನಾಚಿಕೆ ಆಗುತ್ತೆ. ಅಂಥಾ ಪೋಸ್ಟ್‌ಗಳನ್ನ ನಾನು ಫನ್‌ ಆಗಿ ತಗೋತೇನೆ. ನನಗೆ ಅಂತಾ ವಿಚಾರಗಳೇ ಗೊತ್ತಿರೋದಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಬರೋ ಪೋಸ್ಟ್‌ಗಳನ್ನ ನಾನು ನೋಡೋದಿಲ್ಲ. ಆದರೆ, ಅದರ ಸ್ಕ್ರೀನ್‌ ಶಾಟ್‌ ತೆಗೆದು ವಾಟ್ಸ್‌ಆಪ್‌ಅಲ್ಲಿ ಕಳಿಸುವವರೆ ಜಾಸ್ತಿ ಆಗಿದ್ದಾರೆ. ನಾವಿಬ್ಬರೂ ಒಂದಾಗ್ತಿದ್ದೀವಿ ಅಂತಾ ನ್ಯೂಸ್‌ ಚಾನೆಲ್‌ ಅವರು ಕೂಡ ಕಾಲ್‌ ಮಾಡಿದ್ರು. ಅವರಿಗೆ ಇಲ್ಲ ಎಂದು ಉತ್ತರ ನೀಡಿದ್ದೇನೆ ಎಂದಿದ್ದಾರೆ.

ಕಲಾವಿದರ ಜೀವನವನ್ನೇ ಕೆಲವರು ಎಂಟರ್‌ಟೇನ್‌ಮೆಂಟ್‌ ಮಾಡಿಕೊಂಡಿದ್ದಾರೆ. ನಾವೊಂಥರಾ ದುಸ್ಥಿತಿಗೆ ಬಂದು ನಿಂತಿದ್ದೇವೆ. ಅದೆಷ್ಟು ವಿಕೃತಿ, ಎಂಥೆಂತಾ ಕಾಮೆಂಟ್‌ಗಳು, ಅಸಹ್ಯ ಮಾತುಗಳು.. ಇದೆಲ್ಲ ನೋಡಿ ನನಗೆ ಸಾಕಾಗಿ ಹೋಗಿತ್ತು. ಯಾವ ಸೋಶಿಯಲ್‌ ಮೀಡಿಯಾ ಕಾಮೆಂಟ್ಸ್‌ಗಳನ್ನೂ ನಾನು ಓದೋದಿಲ್ಲ. ಆದರೆ, ಕೆಲವರು ನನಗೆ ವಾಟ್ಸ್‌ಆಪ್‌ನಲ್ಲಿ ಅದನ್ನು ಕಳಿಸಿ, ಇಂಥದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ ಅನ್ನೋರು. ಕಾಮೆಂಟ್‌ಗಳನ್ನ ನೋಡೋಕೆ ಹೋಗಬೇಡಿ ಅನ್ನೋರು. ಎಷ್ಟು ಅಶ್ಲೀಲವಾಗಿ ಕಾಮೆಂಟ್‌ ಮಾಡ್ತಾ ಇದ್ರು ಅಂದ್ರೆ ಅದನ್ನ ಹೇಳಿಕೊಳ್ಳೋಕು ಸಾಧ್ಯವಿಲ್ಲ. ನಾಗರೀಕತೆಯೇ ಇಲ್ವಾ, ಇವರಿಗೆಲ್ಲಾ ಶಿಕ್ಷಣ ಕಡಿಮೆ ಆಗಿದ್ಯಾ ಅಂತಾ ನನಗೆ ಅನಿಸೋದು. ನೆಗೆಟಿವ್‌, ಅಸಹ್ಯವಾಗಿ ಕಾಮೆಂಟ್‌ ಮಾಡಿರ್ತಾರೆ. ನಮಗೆ ಹಾಗೆ ಮಾಡೋಕೆ ಬರುತ್ತೆ. ಆದ್ರೆ ನಾವು ಅವರ ಮಟ್ಟಕ್ಕೆ ಇಳಿಯೋಕೆ ಆಗೋದಿಲ್ಲ. ನಮ್ಮಿಬ್ಬರ ವಿಚಾರದಲ್ಲಿ ಸೋಶಿಯಲ್‌ ಮೀಡಿಯಾ ಯಾವುದೇ ಪಾತ್ರ ವಹಿಸಿಲ್ಲ. ವಿಚ್ಛೇದನಕ್ಕೂ ಸೋಶಿಯಲ್‌ ಮೀಡಿಯಾ ಟ್ರೋಲ್‌ಗೂ ಸಂಬಂಧವಿಲ್ಲ ಎಂದಿದ್ದಾರೆ.

ಚಂದನ್‌ ಶೆಟ್ಟಿ-ನಿವೇದಿತಾಗೆ ಸಿಕ್ತು ಒಂದೇ ದಿನದಲ್ಲಿ ಡಿವೋರ್ಸ್‌, ಏನಿದು ಫ್ಯಾಮಿಲಿ ಕೋರ್ಟ್‌ 13ಬಿ ಸೆಕ್ಷನ್‌?

ಸೋಶಿಯಲ್‌ ಮೀಡಿಯಾದಲ್ಲಿ ನಿವೇದಿತಾಗೆ ಬರ್ತಿದ್ದ ಕಾಮೆಂಟ್‌ ನೋಡಿ ನಾನು ಅವಳನ್ನು ದೂರ ಮಾಡಿದೆ ಅನ್ನೋದು ಸತ್ಯವಲ್ಲ. ನಾನು ತಲೆ ಕೆಡಿಸಿಕೊಂಡಿಲ್ಲ. ಸೋಶಿಯಲ್‌ ಮೀಡಿಯಾ ಕ್ರಿಮಿ, ಕೀಟಾಣು ತರ ಆಗಿ ಹೋಗಿದೆ. ಅಲ್ಲಿ ಬರೋ ನೆಗೆಟಿವ್‌ ಕಾಮೆಂಟ್‌ ಹಾಗೆ ಇರುತ್ತೆ. ಅಂಥವುಗಳನ್ನು ನೋಡಿದರೆ, ವಾಕ್‌ ಸ್ವಾತಂತ್ರ್ಯಕ್ಕೆ ಅರ್ಥ ಏನಾದ್ರೂ ಇದ್ಯಾ? ಇದನ್ನ ಕಂಟ್ರೋಲ್‌ ಮಾಡೋರು ಯಾರೂ ಇಲ್ವಾ? ನೆಗೆಟಿವ್‌ ಕಾಮೆಂಟ್‌ನ ನಾನು ಒಪ್ಕೋತೇನೆ. ಆದರೆ, ಅಶ್ಲೀಲ ಕಾಮೆಂಟ್‌ನ ಒಪ್ಪೋದಿಲ್ಲ. ** ಮಗ, ** ಮಗ ಅಂತಾ ಕಾಮೆಂಟ್‌ ಮಾಡೋದು, ಹುಡುಗೀರ ಪ್ರೈವೇಟ್‌ ಪಾರ್ಟ್‌ ಬಗ್ಗೆ ಓಪನ್‌ ಆಗಿ ಬರೀತಾರೆ. ಅಂಥವರನ್ನೆಲ್ಲಾ ನೋಡಿದ್ರೆ ಅಸಹ್ಯ ಅನಿಸುತ್ತೆ. ಸಮಾಜ ಬೇರೆ ದಿಕ್ಕಲ್ಲೇ ಹೋಗ್ತಾ ಇದೆ. ಹುಡುಗೀರ ಪ್ರೈವೇಟ್‌ ಪಾರ್ಟ್‌ನ ಗುರಿ ಮಾಡ್ಕೊಂಡು, ನಿಂದು ಹಾಗಿದೆ, ಇಂದು ಅಷ್ಟು ದಪ್ಪ ಆಗಿದೆ ಅನ್ನೋದು ಮಾತುಗಳಲ್ಲ. ಇದನ್ನ ಸರಿಪಡಿಸೋದು ಹೇಗೆ ಅಂತಾನೇ ಗೊತ್ತಾಗ್ತಾ ಇಲ್ಲ ಎಂದು ಚಂದನ್‌ ಬೇಸರದಿಂದ ಮಾತನಾಡಿದ್ದಾರೆ.

ವಿಚ್ಛೇದನದ ಬಳಿಕ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಮೊದಲ ಪೋಸ್ಟ್‌, ಏನಂದ್ರು ಕ್ಯೂಟ್‌ ಕಪಲ್ಸ್!

click me!