ಕೋಳಿಯ ಅಪ್ಪ ಯಾರು? ರಾಮ್‌, ಸಿಹಿಗೆ ಸೀತಾ ಪ್ರಶ್ನೆ- ಉತ್ತರ ಕೇಳಿ ಫ್ಯಾನ್ಸ್‌ ಸುಸ್ತು!

By Suchethana D  |  First Published Jun 20, 2024, 5:49 PM IST

ಸೀತಾರಾಮ ಸೀರಿಯಲ್‌ ಸೀತಾ ಅಂದ್ರೆ ವೈಷ್ಣವಿ ಗೌಡ ಅವರು ಸೀತಾರಾಮ ಟೀಂಗೆ ಪ್ರಶ್ನೆ ಕೇಳಿದ್ದಾರೆ. ಅವರು ಕೇಳಿದ ಪ್ರಶ್ನೆಗೆ ನಿಮ್ಗೆ ಉತ್ತರ ಗೊತ್ತಾ?
 


ಸೀತಾರಾಮ ಸೀರಿಯಲ್​ನಲ್ಲಿ ಒಂದೆಡೆ ಸೀತಾ ಮತ್ತು ರಾಮರ ಎಂಗೇಜ್​ಮೆಂಟ್​ ಆಗಿದ್ದು, ಜೋಡಿ ಮದುವೆಯ ಸಂಭ್ರಮದಲ್ಲಿದೆ. ಸೀತಾ ರಾಮರ ಕಲ್ಯಾಣ ಯಾವುದೇ ಅಡೆತಡೆಗಳು ಇಲ್ಲದೇ ನಡೆಯಲಿ ಎಂದು ಅಭಿಮಾನಿಗಳೂ ಹಾರೈಸುತ್ತಿದ್ದಾರೆ. ಸದ್ಯ ಇಡೀ ಕುಟುಂಬ ಶಾಪಿಂಗ್‌ ಮೂಡ್‌ನಲ್ಲಿದೆ.  ಇನ್ನೇನು ಮದುವೆಯೊಂದೇ ಬಾಕಿ.  ಅದೇ ಸಮಯದಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಹಲವಾರು ವಿಡಿಯೋ ಶೇರ್​ ಮಾಡುತ್ತಾರೆ.  ಟೈಂ ಸಿಕ್ಕಾಗಲೆಲ್ಲಾ  ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ಎಂಜಾಯ್​ ಮಾಡುತ್ತಾರೆ. ಬಿಜಿ ಷೆಡ್ಯೂಲ್​ ನಡುವೆ ಒಂದಿಷ್ಟು ರಿಲ್ಯಾಕ್ಸ್​  ಮೂಡಿಗೆ ಬರುತ್ತದೆ ಟೀಂ. 

ಇದೀಗ ವೈಷ್ಣವಿ ಅವರು  ರಾಮ್​  ಪಾತ್ರಧಾರಿ ಗಗನ್​ ಹಾಗೂ ಸಿಹಿ ಪಾತ್ರಧಾರಿ ರಿತು ಸಿಂಗ್‌ಗೆ ಒಂದು ಪ್ರಶ್ನೆ ಕೇಳಿದ್ದಾರೆ. ಅದೇನೆಂದರೆ, ಕೋಳಿಯ ಅಪ್ಪ ಯಾರು ಎಂದು! ಶೂಟಿಂಗ್‌ಗೆ ಕಾರಿನಲ್ಲಿ ಹೋಗುವ ಸಂದರ್ಭದಲ್ಲಿ ವೈಷ್ಣವಿ ಈ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇದನ್ನು ಕೇಳಿದ ರಾಮ್‌, ಇವೆಲ್ಲಾ ನಿಮಗೆ ಎಲ್ಲಿ ಸಿಗುತ್ತೆ ಎಂದು ಪ್ರಶ್ನಿಸಿದ್ದಾರೆ. ಇವೆಲ್ಲಾ ಜೋಕ್‌ ಎನ್ನುತ್ತಲೇ ವೈಷ್ಣವಿ ಉತ್ತರ ಹೇಳಿ ಅಂದಿದ್ದಾರೆ. ತನಗೆ ಗೊತ್ತಿಲ್ಲ ಎಂದು ರಾಮ್‌ ಹೇಳಿದರೆ, ನಿಮಗೆ ಕೋಳಿಯ ಅಮ್ಮ ಬೇಕೋ, ಅಪ್ಪ ಬೇಕೋ ಎಂದು ಸಿಹಿ ಕೇಳಿದ್ದಾಳೆ. ಒಟ್ಟಿನಲ್ಲಿ ಈ ಪ್ರಶ್ನೆ ಎಲ್ಲರ ತಲೆ ಕೆಡಿಸಿದೆ.

Tap to resize

Latest Videos

ಗಿಡ ಬೆಳಿಯದೇ ಇರುವ ಕಾಡು ಯಾವುದು ಎಂದು ಪ್ರಶ್ನಿಸಿ ಟ್ರೋಲಾದ ಸೀತಾರಾಮ ಸೀತಾ!

ಹಿಂದಿನಿಂದ ಮೊಟ್ಟೆ ಎನ್ನುವ ಉತ್ತರ ಬಂದಿದೆ. ಆದರೆ ಅದ್ಯಾವುದೂ ಸರಿಯಲ್ಲ ಎಂದು ವೈಷ್ಣವಿ ಹೇಳಿದ್ದಾರೆ. ಕೊನೆಗೆ ಎಲ್ಲರೂ ಗೊತ್ತಿಲ್ಲ ಎಂದಿದ್ದಾರೆ. ಈ ಮಧ್ಯೆಯೇ ಪ್ರಶ್ನೆ ಆಲಿಸುತ್ತಿದ್ದ ನೆಟ್ಟಿಗರು ಏನೇನೋ ಉತ್ತರ ಕಂಡುಕೊಂಡಿದ್ದರು. ಆದರೆ ಕೊನೆಯಲ್ಲಿ ವೈಷ್ಣವಿ,  ಕೋಳಿಯ ಅಪ್ಪ ಚಿಕನ್‌ ಕಾ ಬಾಪ್‌ ಎಂದಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಸುಸ್ತಾಗಿ ಹೋಗಿದ್ದಾರೆ. ಇದೇನು ಉತ್ತರನಾ? ಅರ್ಥವೇ ಇಲ್ಲ ಎಂದು ಕೆಲವರು ಹೇಳಿದರೆ, ಚೆನ್ನಾಗಿದೆ ಉತ್ತರ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. 

ಈ ಹಿಂದೆಯೇ ವೈಷ್ಣವಿ ಪ್ರಶ್ನೆ ಕೇಳಿ ಟ್ರೋಲ್​ಗೆ ಒಳಗಾಗಿದ್ದರು.  ಇದಕ್ಕೆ ಕಾರಣ, ಪ್ರಶ್ನೆಗೂ ಉತ್ತರಕ್ಕೂ ತಾಳಮೇಳ ಇಲ್ಲ ಎನ್ನುವುದು.  ಅಷ್ಟಕ್ಕೂ ಸೀತಾ ಅರ್ಥಾತ್‌ ವೈಷ್ಣವಿ ಅವರು ರಾಮ್‌ ಅಂದರೆ ಗಗನ್‌ ಅವರಿಗೆ ಕೇಳಿದ ಪ್ರಶ್ನೆ ಏನೆಂದರೆ, ಗಿಡ ಬೆಳೆಯದ ಕಾಡು ಯಾವುದು ಎನ್ನುವುದು. ಇದಕ್ಕೆ ತಲೆ ಕೆಡಿಸಿಕೊಂಡ ರಾಮ್‌ ಬಾಲ್ಕನಿ ಸೇರಿದಂತೆ ಕೆಲವು ಉತ್ತರ ಕೊಟ್ಟಿದ್ದರು. ಅಲ್ಲಿದ್ದ ಸೀತಾರಾಮ ಸಿಬ್ಬಂದಿ ಕೂಡ ಇದಕ್ಕೆ ಉತ್ತರ ಹೇಳುವಲ್ಲಿ ವಿಫಲರಾಗಿದ್ದರು. ಕೊನೆಗೆ ಇದಕ್ಕೆ ಉತ್ತರ ಹೇಳಿದ ಸೀತಾ, ಅದು ಸಿಮ್‌ ಕಾರ್ಡ್‌ ಎಂದಿದ್ದರು. ಇದಕ್ಕೇ ಸಕತ್‌ ಟ್ರೋಲ್‌ ಆದರು. ಉತ್ತರ ಏನೆಂದು ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳು ಉತ್ತರ ಕೇಳಿ ಥೂ ಎಂದಿದ್ದರು. ಕಾಡಿಗೂ ಕಾರ್ಡಿಗೂ ವ್ಯತ್ಯಾಸ ಇಲ್ವಾ ಎನ್ನುವುದು ನೆಟ್ಟಿಗರ ಪ್ರಶ್ನೆಯಾಗಿತ್ತು. ಈಗಲೂ ಈ ಪ್ರಶ್ನೆಗೆ ಅರ್ಥವಿಲ್ಲದ ಉತ್ತರ ಎಂದು ಹೇಳುತ್ತಿದ್ದಾರೆ. 

ನಿವೇದಿತಾ ಮತ್ತೆ ಪ್ರತ್ಯಕ್ಷ! ಏನಾದ್ರೂ ಮಾಡ್ಕೋ ತಾಯಿ... ಶೆಡ್‌ ಸಹವಾಸ ಬೇಡಪ್ಪಾ ಅನ್ನೋದಾ ನೆಟ್ಟಿಗರು?
 

click me!