ಒಂದೇ ದಿನದಲ್ಲಿ ವಿಚ್ಛೇದನ ಪಡೆದ ಚಂದನ್‌-ನಿವೇದಿತಾ, ನಾಲ್ಕು ವರ್ಷದ ದಾಂಪತ್ಯಕ್ಕೆ ಕೊನೆ!

Published : Jun 07, 2024, 05:41 PM IST
ಒಂದೇ ದಿನದಲ್ಲಿ ವಿಚ್ಛೇದನ ಪಡೆದ ಚಂದನ್‌-ನಿವೇದಿತಾ, ನಾಲ್ಕು ವರ್ಷದ ದಾಂಪತ್ಯಕ್ಕೆ ಕೊನೆ!

ಸಾರಾಂಶ

Chandan Shetty and Niveditha Gowda Divorce reason ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಗೆ ಒಂದೇ ದಿನದಲ್ಲಿ ವಿಚ್ಛೇದನ ಮಂಜೂರಾಗಿದೆ. ಇವರ ಮದುವೆಯೂ ಸಡನ್‌ ಆಗಿ ಘೋಷಣೆಯಾಗಿದ್ದರೆ ವಿಚ್ಛೇದನ ಕೂಡ ಒಂದೇ ದಿನದಲ್ಲಿ ಸಿಕ್ಕಿಬಿಟ್ಟಿದೆ.

ಬೆಂಗಳೂರು (ಜೂ.7): ಸ್ಯಾಂಡಲ್‌ವುಡ್‌ ಮ್ಯೂಸಿಕ್‌ ಡೈರೆಕ್ಟರ್‌ ಹಾಗೂ ರಾಪರ್‌ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಗೆ ಒಂದೇ ದಿನದಲ್ಲಿ ವಿಚ್ಛೇದನ ಸಿಕ್ಕಿದೆ. 2020ರ ಫೆಬ್ರವರಿ 26 ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದ ಈ ಜೋಡಿ, ಈಗ ವಿಚ್ಛೇದನವನ್ನೂ ಕೂಡ ಅಷ್ಟೇ ಶಾಕಿಂಗ್‌ ರೀತಿಯಲ್ಲಿ ಪಡೆದುಕೊಂಡಿದೆ. ಇವರ ಪ್ರೀತಿ ವಿಚಾರ ಕೂಡ ಸಡನ್‌ ಆಗಿ ಯುವ ದಸರಾದಲ್ಲಿ ಚಂದನ್‌ ಶೆಟ್ಟಿ ಸಡನ್‌ ಆಗಿ ಪ್ರಪೋಸ್‌ ಮಾಡಿದಾಗಲೇ ಜಗಜ್ಜಾಹೀರಾಗಿತ್ತು. ಗುರುವಾರ ಫ್ಯಾಮಿಲಿ ಕೋರ್ಟ್‌ಗೆ ದಂಪತಿಗಳು ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇವರಿಗೆ ಕೇಸ್ ನಂಬರ್-Mc 3388-/2024 ನೀಡಲಾಗಿತ್ತು. ಶುಕ್ರವಾರ ಇದರ ವಿಚಾರಣೆಗೆ ದಂಪತಿಗಳು ಒಟ್ಟಿಗೆ ಆಗಮಿಸಿದ್ದರು. ಮಿಡಿಯೇಷನ್ ಕೋಣೆಯಲ್ಲಿ ವಿಚ್ಚೇದನಕ್ಕೆ ಇಬ್ಬರೂ ಪರಸ್ಪರ ಒಪ್ಫಿಗೆ ನೀಡಿದ ಬೆನ್ನಲ್ಲಿಯೇ ಈ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಸುದ್ದಿಯಾಗಿತ್ತು.

13b of family court act ಅಡಿಯಲ್ಲಿ ಇವರಿಬ್ಬರಿಗೆ ವಿಚ್ಛೇದನ ನೀಡಲು ಒಪ್ಪಿಗೆ ನೀಡಲಾಗಿತ್ತು. ಈ ಹಂತದಲ್ಲಿ ಯಾರೊಬ್ಬರ ಮೇಲೂ ಯಾವುದೇ ಆರೋಪ ಮಾಡದೇ ಇವರು ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ್ದಾರೆ. ಒಪ್ಪಿಗೆ ಮೇರೆಗೆ ಸಂಧಾನಕಾರರು ಇಬ್ಬರ ಕುರಿತು ಅಗ್ರಿಮೆಂಟ್ ಮಾಡಿದ್ದರು. ಆ ಬಳಿ ಈ ಅಗ್ರಿಮೆಂಟ್‌ನೊಂದಿಗೆ ಇಬ್ಬರೂ ಕೋರ್ಟ್‌ನ ಎದುರು ಬಂದಿದ್ದರು. ಅಗ್ರಿಮೆಂಟ್ ಆಧರಿಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗಿತ್ತು. ಇಬ್ಬರೂ ಅಗ್ರಿಮೆಂಟ್ ಪ್ರಕಾರ ಕೋರ್ಟ್ ‌ಮುಂದೆ ಹೇಳಿಕೆ ನೀಡಿದ್ರೆ ವಿಚ್ಚೇದನ ಮಂಜೂರು ಸಿಗಲಿದೆ ಎಂದು ಸುದ್ದಿಯಾಗಿತ್ತು.

ಕೆಲ ಹೊತ್ತಿನ ಬಳಿಕ ಕೋರ್ಟ್‌ ಹಾಲ್‌ಗೆ ಕರೆದ ನ್ಯಾಯಾಧೀಶರ ಎದುರು, 'ಪರಸ್ಪರ ಒಪ್ಪಿ ಬೇರೆ ಆಗಲು ನಿರ್ಧರಿಸಿದ್ದೇವೆ' ಎಂದು ತಿಳಿಸಿದರು. ಈ ವೇಳೆ ಜಡ್ಜ್‌ ಯಾವ ಕಾರಣಕ್ಕೆ ಬೇರೆ ಬೇರೆಯಾಗಲು ನಿರ್ಧರಿಸಿದ್ದೀರಿ ಎಂದು ಕೇಳಿದರು. ಇದಕ್ಕೆ ಉತ್ತರ ನೀಡಿದ ಜೋಡಿ, 'ಸ್ವಲ್ಪ ಭಿನ್ನಾಭಿಪ್ರಾಯ ಇದೆ. ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ. ಹೀಗಾಗಿ ಖುಷಿಯಾಗಿಯೇ ವಿಚ್ಛೇದನಕ್ಕೆ ಒಪ್ಪಿದ್ದೇವೆ' ಎಂದು ಹೇಳಿದರು. ಇಬ್ಬರ ಹೇಳಿಕೆಯನ್ನೂ ಆಲಿಸಿದ ನ್ಯಾಯಾಧೀಶರು ಕೆಲ ಸಮಯ ಕಾಯುವಂತೆ ಇವರಿಗೆ ಸೂಚನೆ ನೀಡಿದರು. ಹಾಲ್‌ನಿಂದ ಹೊರಬಂದ ಇವರು, ಅಕ್ಕಪಕ್ಕವೇ ಕುಳಿತಿದ್ದರು.

ಬಿಗ್‌ ಬಾಸ್‌ ಟು ಡಿವೋರ್ಸ್‌..'ಬೊಂಬೆ..' ಬಾಳಿನಲ್ಲಿ ವಿಲನ್‌ ಆಗಿದ್ಯಾರು?

ಕೆಲ ಸಮಯದ ಬಳಿಕ,  ವಿಚ್ಚೇದನ ಪಡೆಯಲು ಕೋರ್ಟ್‌ ಮುಂದೆ ನಿವೇದಿತಾ- ಚಂದನ್ ಶೆಟ್ಟಿ ಒಪ್ಪಿಗೆಯನ್ನೂ ಸೂಚಿಸಿದರು. ಒಪ್ಪಿಗೆ ಪತ್ರಕ್ಕೆ ಸಹಿಮಾಡಿ ಅವರು ಕೋರ್ಟ್‌ ಹಾಲ್‌ನಿಂದ ಹೊರಬಂದಿದ್ದರು. ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿದ ಹಿನ್ನಲೆ ವಿಚ್ಛೇದನವನ್ನು ತಕ್ಷಣವೇ ತಿಳಿಸಲಾಯಿತು. 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ತನ್ನ ಆದೇಶದಲ್ಲಿ ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡುವ ನಿರ್ಧಾರ ತಿಳಿಸಿತು. ಆ ಬಳಿಕ ಕೈಕೈ ಹಿಡಿದುಕೊಂಡೇ ಇವರು ಕೋರ್ಟ್‌ಹಾಲ್‌ನಿಂದ ಕೆಳಗೆ ಇಳಿದಿದ್ದರು. ಬಳಿಕ ಮಾಧ್ಯಮಗಳ ಕಣ್ಣು ತಪ್ಪಿಸಿ ಚಂದನ್ ಶೆಟ್ಟಿ- ನಿವೇದಿತಾ ಎಸ್ಕೇಪ್‌ ಆಗಿದ್ದಾರೆ. ವಿಚಾರಣೆ ಮುಗಿದು ಆದೇಶ ಸಿಗುತ್ತಿದ್ದಂತೆ ಕೋರ್ಟ್‌ನ ಹಿಂಬಾಗಿಲ ಗೇಟ್‌ನಿಂದ ಜೋಡಿ ಎಸ್ಕೇಪ್‌ ಆಗಿದೆ.

ನಿವೇದಿತಾ ಗೌಡ-ಚಂದನ್‌ ಶೆಟ್ಟಿ ವಿಚ್ಛೇದನ, ಕ್ಯೂಟ್‌ ಜೋಡಿಗೆ ಮನವಿ ಮಾಡಿದ ಒಳ್ಳೆ ಹುಡುಗ ಪ್ರಥಮ್‌!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?
Bigg Boss ಗಿಲ್ಲಿ ನಟನಿಗೆ ಶಾಕ್​: ಒಂದ್​ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್​ ಭಾಷೆ ಬರತ್ತೆ!