ಚಂದನ್ ಶೆಟ್ಟಿ - ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದಾರೆ, ಪೋಷಕರಾಗೋ ವಿಚಾರಕ್ಕೆ ಮಧ್ಯೆ ಮೂಡಿತಾ ಬಿರುಕು? ಎಂದು ಪ್ರಶ್ನೆ ಉದ್ಭವಿಸಿದೆ.
ಕಿರುತೆರೆಯ ಸ್ಟಾರ್ ಜೋಡಿ, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನಕ್ಕೆ ಮುಂದಾಗಿದ್ದು, ಕೋರ್ಟ್ ಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಒಂದೇ ದಿನದಲ್ಲಿ ವಿಚ್ಚೇದನ ಕೂಡ ಸಿಕ್ಕಿದ್ದು, ಈ ಮೂಲಕ ಬಿಗ್‌ಬಾಸ್ ಜೋಡಿ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.
ಇದೀಗ ಪೋಷಕರಾಗೋ ವಿಚಾರಕ್ಕೆ ನಿವೇದಿತಾ ಚಂದನ್ ಮಧ್ಯೆ ಮೂಡಿತಾ ಬಿರುಕು? ಎಂದು ಪ್ರಶ್ನೆ ಉದ್ಭವಿಸಿದೆ. ಮಗು ಪಡೆಯೋ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದ ಚಂದನ್. ಆದ್ರೆ ನಿವೇದಿತಾಗೆ ತಾಯಿ ಆಗೋ ಆಸೆ ಇರಲಿಲ್ಲ. ಬಣ್ಣದ ಜಗತ್ತಿಗೆ ಬರೋ ಆಸಕ್ತಿ ಹೆಚ್ಚಿಸಿಕೊಂಡಿದ್ದ ನಿವೇದಿತಾ. ಮಗು ಬೇಡ ಎಂದು ಚಂದನ್ ಜೊತೆ ಮಾತನಾಡಿದ್ದ ನಿವೇದಿತಾ. ಮಗು ಆದ್ರೆ ಸಿನಿಮಾ ಕರಿಯರ್ ಕಟ್ಟಿಕೊಳ್ಳೋದು ಕಷ್ಟ ಅನ್ನೋ ಕಾರಣಕ್ಕೆ ಇಬ್ಬರು ದೂರಾದ್ರಾ?
ಮೈಸೂರು ಯುವ ದಸರಾದಲ್ಲಿ ಚಂದನ್- ನಿವೇದಿತಾ ಪ್ರಪೋಸ್, ಅಂದಿನ ಸಚಿವರ ಶಾಪ ತಟ್ಟಿತೇ!?
ಇತ್ತೀಚೆಗೆ ನಟಿ ನಿವೇದಿತಾಗೆ ಹೆಚ್ಚು ಸಿನಿಮಾ ಆಫರ್ ಗಳು ಬರುತ್ತಿವೆ. ಚಂದನ್ ಶೆಟ್ಟಿಯೂ ಮೂರು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಕಳೆದ ನಾಲ್ಕು ದಿನದವರೆಗೂ ಇಬ್ಬರು ಒಟ್ಟಿಗೆ ಒಂದೇ ಮನೆಯಲ್ಲೇ ಇದ್ರು ಅನ್ನೋ ಮಾಹಿತಿ ಇದೆ. ಯಾವುದೇ ಕಿತ್ತಾಟ ಇಲ್ಲದೆ ಇಬ್ಬರು ಒಪ್ಪಿಕೊಂಡು ವಿಚ್ಛೇಧನಕ್ಕೆ ಮುಂದಾಗಿದ್ದಾರೆ ಅನ್ನೋ ಮಾಹಿತಿ ಇದೆ. ಆದರೆ ಈ ಬಗ್ಗೆ ಚಂದನ್ ಆಗಲಿ. ನಿವೇದಿತಾ ಆಗಲಿ ಕಾರಣ ನೀಡಿಲ್ಲ.
ಬಿಗ್ ಬಾಸ್ ಟು ಡಿವೋರ್ಸ್..'ಬೊಂಬೆ..' ಬಾಳಿನಲ್ಲಿ ವಿಲನ್ ಆಗಿದ್ಯಾರು?
ಒಂದೇ ದಿನದಲ್ಲಿ ವಿಚ್ಚೇದನ ಪಡೆದ ದಂಪತಿ!: ಮಿಡಿಯೇಷನ್ ನಲ್ಲಿ ವಿಚ್ಚೇದನಕ್ಕೆ ಇಬ್ಬರೂ ಪರಸ್ಪರ ಒಪ್ಫಿಗೆ ಸೂಚಿಸಿದ್ದು, ಚಂದನ್ ಶೆಟ್ಟಿ ಹಾಗೂ ನಿವೇದಿತಾ 2 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿದ್ದರು. 13b of family court act ಅಡಿ ಒಪ್ಪಿಗೆ ಸೂಚಿಸಿದ್ದು, ಯಾರೊಬ್ಬರ ಮೇಲೂ ಯಾವುದೇ ಆರೋಪ ಮಾಡದೇ ಒಪ್ಪಿಗೆ ಮೇರೆಗೆ ಸಂಧಾನಕಾರರು ಅಗ್ರಿಮೆಂಟ್ ಮಾಡಿದ್ದಾರೆ.
ಅಗ್ರಿಮೆಂಟ್ ಸಮೇತ ಇಬ್ಬರೂ ಕೂಡ ಕೋರ್ಟ್ ಮುಂದೆ ಬಂದಿದ್ದು, ಅಗ್ರಿಮೆಂಟ್ ಆಧರಿಸಿ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಇಬ್ಬರೂ ಅಗ್ರಿಮೆಂಟ್ ಪ್ರಕಾರ ಕೋರ್ಟ್ ಮುಂದೆ ಹೇಳಿಕೆ ನೀಡಿ ವಿಚ್ಚೇದನ ಮಂಜೂರಾಗಿದೆ.