ಇದ್ದಕ್ಕಿದ್ದಂತೆ ಚಂದನ್‌ ಜೊತೆಗಿನ ರೀಲ್ಸ್‌ ಡಿಲೀಟ್?; ಆಹಾ ಚಿಣಿಮಿಣಿ ಚಿಂತಾಮಣಿ ಎಂದು ನಿವಿ ಕಾಲೆಳೆದ ನೆಟ್ಟಿಗರು

By Vaishnavi Chandrashekar  |  First Published Jun 7, 2024, 5:36 PM IST

 ರೀಲ್ಸ್‌ ರಾಣಿ ಬದುಕಿನಲ್ಲಿ ಬಿರುಕು. ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್‌ ಸುದ್ದಿ ಬೆನ್ನಲೆ ಅಕೌಂಟ್ ಸ್ಕ್ಯಾನ್ ಮಾಡಿದ ನೆಟ್ಟಿಗರು.... 


ಕನ್ನಡ ಕಿರುತೆರೆಯ ಬಾರ್ಬಿ ಡಾಲ್, ಬಿಗ್ ಬಾಸ್ ಸುಂದರಿ, ಗಿಚ್ಚಿ ಗಿಲಿಗಿಲಿ ಸ್ಪರ್ಧಿ ನಿವೇದಿತಾ ಹಾಗೂ ಗಾಯಕ ಚಂದನ್ ಶೆಟ್ಟಿ ವಿಚ್ಛೆದನಕ್ಕೆ ಮುಂದಾಗಿದ್ದಾರೆ. ಜೂನ್ 6, 2024ರಂದ ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗುತ್ತಿದ್ದಂತೆ ನಿವೇದಿತಾ ಗೌಡ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿದ್ದ ಸಂಪೂರ್ಣ ವಿಡಿಯೋ ಹಾಗೂ ಫೋಟೋಗಳನ್ನು ನಿಲ್ಲಿಸಿಬಿಟ್ಟಿದ್ದಾರೆ. 

ಯೂಟ್ಯೂಬ್ ಚಾನೆಲ್‌ ಹೊಂದಿರುವ ನಿವೇದಿತಾ ಆಗಾಗ ಏನಾದರೂ ಒಂದು ವಿಡಿಯೋ ಮಾಡಿಕೊಂಡು ಸಖತ್ ಆಕ್ಟಿವ್ ಆಗಿದ್ದರು. ಡಿಫರೆಂಟ್ ಅಡುಗೆಗಳು, ಸಿಂಪಲ್ ರೆಸಿಪಿಗಳು, ಶಾಪಿಂಗ್ ಟಿಪ್ಟ್‌, ರೀಲ್ಸ್‌, ಶೂಟಿಂಗ್ ದಿನಗಳ ಹೀಗೆ ವಿಭಿನ್ನ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಆದರೆ ಕಳೆದು ಎರಡು ಮೂರು ತಿಂಗಳಿನಿಂದ ನಿವಿ ಆಕ್ಟಿವ್ ಆಗಿಲ್ಲ. ಒಂದು ವಿಡಿಯೋ ಕೂಡ ಚಿತ್ರೀಕರಣ ಮಾಡಿಲ್ಲ. ಮದುವೆ ನಂತರ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು ಹೀಗಾಗಿ ಸಖತ್ ಪ್ರೈವೇಟ್ ಲೈಫ್ ಎಂಜಾಯ್ ಮಾಡುತ್ತಿದ್ದರು. 

Tap to resize

Latest Videos

ಚಂದನ್ -ನಿವೇದಿತಾ ವಿಚ್ಛೇದನ: ಮಗು ಮಾಡಿಕೊಳ್ಳೋ ವಿಚಾರಕ್ಕೆ ಇಬ್ಬರ ಮಧ್ಯೆ ಮೂಡಿತಾ ಬಿರುಕು?

ಮದುವೆ ನಂತರ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಸಖತ್ ರೀಲ್ಸ್‌ ಮತ್ತು ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿದ್ದರು. ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ರಾಜಾ ರಾಣಿ ಸೀಸನ್ 1ರಲ್ಲಿ ಸ್ಪರ್ಧಿಸಿದ್ದರು. ಈ ಕಾರ್ಯಕ್ರಮದಿಂದ ಚಂದನ್ ಮತ್ತು ನಿವಿ ಬಾಂಡ್ ಸೂಪರ್ ಆಗಿತ್ತು. ಈ ಸಮಯದಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡುತ್ತಿಲ್ಲ ಸದ್ಯಕ್ಕೆ ಮಕ್ಕಳು ಬೇಡ ಎಂದ ನಿವಿ ಹೇಳಿದ್ದಕ್ಕೆ ಚಂದನ್ ನಗುತ್ತಾ ವೇದಿಕೆ ಮೇಲೆ ನಿಂತಿದ್ದರು.ಗಂಡನ ಜೊತೆ ಚೆನ್ನಾಗಿದ್ದಾಗ ರೀಲ್ಸ್ ಮಾಡಿದ್ದೇನು, ಯೂಟ್ಯೂಬ್‌ನಿಂದ ದುಡ್ಡು ಮಾಡಿದ್ದೇನು ಈಗ ಎಲ್ಲಾ ಬಿಟ್ಟು ಗಂಡನೂ ಬೇಡ ಅಂತಿದ್ದಾಳೆ ಚಿಣಿಮಿಣಿ ಚಿಂತಾಮಣಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಒಟ್ಟಾರೆ ಡಿವೋರ್ಸ್‌ಗೆ ಕಾರಣ ಏನೆಂದು ಒಬ್ಬರೂ ತಿಳಿಸಿಲ್ಲ ಆದರೆ ಈ ನಿರ್ಧಾರದಿಂದ ಅಭಿಮಾನಿಗಳಿಗೆ ಹೆಚ್ಚಿಗೆ ಬೇಸರವಾಗಿದೆ. 

click me!