ರಿಯಲ್‌ ಆಗಿ ಆಗಲ್ಲ ಎಂದು ರೀಲ್‌ನಲ್ಲಿ ವೀಕ್ಷಕರ ಆಸೆ ಈಡೇರಿಸಲು ಸಜ್ಜಾದ ʼಮುದ್ದು ಸೊಸೆʼ ಹೀರೋ ತ್ರಿವಿಕ್ರಮ್!‌

Published : Mar 11, 2025, 09:55 AM ISTUpdated : Mar 11, 2025, 10:01 AM IST
ರಿಯಲ್‌ ಆಗಿ ಆಗಲ್ಲ ಎಂದು ರೀಲ್‌ನಲ್ಲಿ ವೀಕ್ಷಕರ ಆಸೆ ಈಡೇರಿಸಲು ಸಜ್ಜಾದ ʼಮುದ್ದು ಸೊಸೆʼ ಹೀರೋ ತ್ರಿವಿಕ್ರಮ್!‌

ಸಾರಾಂಶ

Trivikram Starrer Muddhu Sose Kannada Serail: ಖಾಸಗಿ ವಾಹಿನಿಯಲ್ಲಿ ಮುದ್ದು ಸೊಸೆ ಧಾರಾವಾಹಿ ಪ್ರಸಾರ ಆಗಲಿದೆ. ಈಗಾಗಲೇ ಪ್ರೋಮೋ ರಿಲೀಸ್‌ ಆಗಿದ್ದು, ತ್ರಿವಿಕ್ರಮ್‌, ಪ್ರತಿಮಾ ಹೀರೋ, ಹೀರೋಯಿನ್‌ ಎನ್ನೋದು ಬಹಿರಂಗ ಆಗಿದೆ. ಈಗ ಇನ್ನೊಂದು ಪ್ರೋಮೋ ರಿಲೀಸ್‌ ಆಗಿದ್ದು, ಸಾಕಷ್ಟು ಕುತೂಹಲ ಸೃಷ್ಟಿಮಾಡಿದೆ. 

‘ಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋ ಖ್ಯಾತಿಯ ತ್ರಿವಿಕ್ರಮ್‌ ಈಗಾಗಲೇ ʼಮುದ್ದು ಸೊಸೆʼ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ʼಮುದ್ದು ಸೊಸೆʼ ಧಾರಾವಾಹಿಯ ಇನ್ನೊಂದು ಪೋಮೋ ಈಗ ರಿಲೀಸ್‌ ಆಗಿದ್ದು, ಇನ್ನಷ್ಟು ಕುತೂಹಲ ಸೃಷ್ಟಿಸಿದೆ. ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಭರ್ಜರಿ ಭೋಜನ ಏನಂತೀರಾ?

ಹೊಸ ಪ್ರೋಮೋದಲ್ಲಿ ಏನಿದೆ? 
ʼಮುದ್ದು ಸೊಸೆʼ ಧಾರಾವಾಹಿಯಲ್ಲಿ ಹೀರೋ-ಹೀರೋಯಿನ್‌ ಮದುವೆ ನಡೆಯುತ್ತಿರುತ್ತದೆ. ಇನ್ನೂ ಹತ್ತನೇ ಕ್ಲಾಸ್‌ ಓದುತ್ತಿದ್ದ ನಾಯಕಿ ವಿದ್ಯಾಗೆ ಈಗಲೇ ಮದುವೆ ಆಗೋ ಆಸೆ ಇರೋದಿಲ್ಲ. ಈ ಮದುವೆ ಬೇಡ ಎಂದರೂ ಯಾರೂ ಅವಳ ಮಾತನ್ನು ಕೇಳಲು ರೆಡಿ ಇರೋದಿಲ್ಲ. ಹೀಗಾಗಿ ಅವಳು ಮದುವೆ ದಿನ ಪೊಲೀಸರಿಗೆ ಫೋನ್‌ ಮಾಡಿ, ಬಾಲ್ಯವಿವಾಹ ಆಗುತ್ತಿದೆ ಎಂದು ವಿಷಯ ತಿಳಿಸುತ್ತಾಳೆ. ಇನ್ನೇನು ಹೀರೋ, ವಿದ್ಯಾಗೆ ತಾಳಿ ಕಟ್ತಾನೆ ಎನ್ನುವಷ್ಟರಲ್ಲಿ ಪೊಲೀಸರ ಆಗಮನ ಆಗುತ್ತದೆ.

ಕನ್ನಡದ ಪ್ರಸಿದ್ಧ ಸೀರಿಯಲ್‌ ಲಕ್ಷ್ಮೀ ನಿವಾಸದ ನಿರ್ಮಾಪಕ 'ಆ ದಿನಗಳು' ಸಿನಿಮಾದ ಸ್ಟಾರ್‌ ನಟ!

ಮದುವೆ ನಿಲ್ಲುವುದು! 
ಬಾಲ್ಯವಿವಾಹ ಮಾಡಲಾಗುತ್ತಿದೆ ಎಂದು ಪೊಲೀಸರು ಈ ಮದುವೆಯನ್ನು ತಡೆಯಲು ನೋಡ್ತಾರೆ. ಯಾರ್‌ ಮನೆ ಮದುವೆ ಅಂತ ಗೊತ್ತಾ ಅಂತ ಹೀರೋ ತಂದೆ ಪೊಲೀಸರಿಗೆ ಹೊಡೆಯಲು ಮುಂದಾಗುತ್ತಾನೆ. ಅಧಿಕಾರದಲ್ಲಿದ್ದ ಪೊಲೀಸರ ಮೇಲೆ ಕೈ ಎತ್ತಿದ್ದಕ್ಕೆ ಹೀರೋ ತಂದೆಯನ್ನು ವಶಕ್ಕೆ ಪಡೆಯಲಾಗುತ್ತದೆ. ತನ್ನ ತಂದೆಯನ್ನು ಪ್ರೀತಿಸೋ ಹೀರೋಗೆ ಬೇಸರವಾಗುತ್ತದೆ. ಪೊಲೀಸರಿಗೆ ವಿಷಯ ತಿಳಿಸಿ, ನನ್ನ ತಂದೆಗೆ ಅವಮಾನ ಮಾಡಿದೋರನ್ನು ಸುಮ್ಮನೆ ಬಿಡೋದಿಲ್ಲ ಅಂತ ಹೀರೋ ಶಪಥ ಮಾಡ್ತಾನೆ. ವಿದ್ಯಾ ಏನೂ ಗೊತ್ತಿಲ್ಲದವರಂತೆ ಸುಮ್ಮನೆ ನೋಡುತ್ತ ನಿಲ್ಲುತ್ತಾಳೆ. ಅಲ್ಲಿಗೆ ಈ ಮದುವೆ ನಿಲ್ಲುತ್ತದೆ. ವಿದ್ಯಾ ಮುಖ ನೋಡಿ ಈ ಜನ್ಮಕ್ಕೆ ಇವಳೇ ನನ್ನ ಹೆಂಡ್ತಿ ಅಂತ ಹೀರೋ ಹೇಳ್ತಾನೆ.

‌ತ್ರಿವಿಕ್ರಮ್ 'ಮುದ್ದು ಸೊಸೆ' ಧಾರಾವಾಹಿಗೋಸ್ಕರ ಯಾವ ಸೀರಿಯಲ್ ಅಂತ್ಯ ಆಗತ್ತೆ?‌

ಕಥೆ ಹೇಗೆ ಸಾಗಬಹುದು? 
ಪೊಲೀಸರಿಗೆ ಫೋನ್‌ ಮಾಡಿದ್ದು ವಿದ್ಯಾ ಅಂತ ಗೊತ್ತಾದರೆ ಹೀರೋ ಏನ್‌ ಮಾಡ್ತಾನೆ? ಮುಂದೆ ವಿದ್ಯಾ, ಹೀರೋ ಮದುವೆ ಆಗತ್ತಾ ಎನ್ನುವ ಪ್ರಶ್ನೆಯೂ ಇದೆ. ಒಂದುವೇಳೆ ಮದುವೆಯಾದರೆ ವಿದ್ಯಾಗೆ ಏನೆಲ್ಲ ಸಮಸ್ಯೆಗಳು, ಸವಾಲುಗಳು ಬರಬಹುದು? ಓದಬೇಕು ಎಂಬ ವಿದ್ಯಾ ಆಸೆ ಕಮರಿಹೋಗತ್ತಾ ಎಂದು ಕಾದು ನೋಡಬೇಕಿದೆ. 

ಮೇಘಾ ಶೆಟ್ಟಿ ನಿರ್ಮಾಣದ ʼಮುದ್ದು ಸೊಸೆʼ ಧಾರಾವಾಹಿ; Bigg Boss Kannada Runner Up ಹೀರೋ ಆಗ್ತಾರಾ?

ಜೋಡಿ ಬಗ್ಗೆ ಅಸಮಾಧಾನ! 
ʼಮುದ್ದು ಸೊಸೆʼ ಧಾರಾವಾಹಿಯಲ್ಲಿ ಬಾಲ್ಯ ವಿವಾಹದ ಕಥೆ ಇದೆ. ʼಪುಟ್ಟಗೌರಿ ಮದುವೆʼ ರೀತಿ ಈ ಸೀರಿಯಲ್‌ ಇರಬಹುದಾ ಎಂದು ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದರು. ಇನ್ನು ಈ ಧಾರಾವಾಹಿಯ ಹೀರೋ ತ್ರಿವಿಕ್ರಮ್‌ಗೂ, ಹೀರೋಯಿನ್‌ ಪ್ರತಿಮಾಗೂ ಸಿಕ್ಕಾಪಟ್ಟೆ ವಯಸ್ಸಿನ ಅಂತರ ಇದೆ. ಹೀಗಾಗಿ ಇವರಿಬ್ಬರು ಜೋಡಿ ಆಗೋದು ಬೇಡ ಎಂದು ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಕೂಡ ಮಾಡಿದ್ದರು. ಧಾರಾವಾಹಿ ಕಥೆಯೇ ಹೀಗಿದ್ದಾಗ ಜೋಡಿ ಮಾಡೋದು ಸಹಜ ಅಲ್ಲವೇ? ಈಗಾಗಲೇ ಬಾಲ್ಯ ವಿವಾಹ ಕುರಿತ ಕಥೆಗಳು ಸಾಕಷ್ಟು ತೆರೆಕಂಡಿವೆ. ಈ ಸೀರಿಯಲ್‌ ಎಷ್ಟು ವಿಭಿನ್ನವಾಗಿ ಬರಲಿದೆ ಎಂದು ಕಾದು ನೋಡಬೇಕಿದೆ. 

ಅಂದಹಾಗೆ ನಟಿ ಭವ್ಯಾ ಗೌಡ ಅವರನ್ನು ತ್ರಿವಿಕ್ರಮ್‌ ಪ್ರೀತಿ ಮಾಡ್ತಿದ್ದಾರಾ ಎಂಬ ಪ್ರಶ್ನೆ ಬಂದಿತ್ತು. ಅದಕ್ಕೆ ಉತ್ತರ ಕೊಟ್ಟಿದ್ದ ತ್ರಿವಿಕ್ರಮ್‌, "ಇಲ್ಲ, ಭವ್ಯಾ ಗೌಡ ಚಿಕ್ಕವಳು, ನಾನು ಅವಳನ್ನು ಮದುವೆ ಆಗೋದಿಲ್ಲ" ಎಂದು ಕಡ್ಡಿ ತುಂಡಾದಂತೆ ತ್ರಿವಿಕ್ರಮ್‌ ಹೇಳಿದ್ದರು. ರಿಯಲ್‌ ಆಗಿ ಚಿಕ್ಕ ಹುಡುಗಿ ಮದುವೆ ಆಗೋದಿಲ್ಲ ಎಂದು ಹೇಳಿ ರೀಲ್‌ ಅಲ್ಲಿ ಚಿಕ್ಕ ಹುಡುಗಿ ಮದುವೆ ಆಗ್ತಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್‌ ಮೀಡಿಯಾದಲ್ಲಿ ʼಬಿಗ್‌ ಬಾಸ್ʼ‌ ರನ್ನರ್‌ ಅಪ್‌ ಕಾಲೆಳೆದಿದ್ದಾರೆ. 

ಕನ್ನಡ ಕಿರುತೆರೆಗೆ ಹೊಸ ಹೊಸ ಧಾರಾವಾಹಿಗಳು ಎಂಟ್ರಿ ಕೊಡುತ್ತಿವೆ. ಕಲರ್ಸ್‌ ಕನ್ನಡದಲ್ಲಿ ಇತ್ತೀಚೆಗೆ ʼಯಜಮಾನʼ, ʼವಧುʼ, ʼನೂರು ಜನ್ಮಕೂʼ ಧಾರಾವಾಹಿಗಳು ಪ್ರಸಾರ ಆಗಿತ್ತು. ಅವುಗಳ ಸಾಲಿಗೆ ಈಗ ʼಮುದ್ದು ಸೊಸೆʼ ಕೂಡ ಸೇರ್ಪಡೆಯಾಗಲಿದೆ. ಇನ್ನು ಈ ಹೊಸ ಧಾರಾವಾಹಿ ಪ್ರಯುಕ್ತ ಯಾವ ಧಾರಾವಾಹಿ ಅಂತ್ಯ ಆಗಲಿದೆ ಎಂದು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಯಾವ ಸೀರಿಯಲ್‌ ಯಾಕೆ ಅಂತ್ಯ ಆಗಬೇಕು ಎಂದು ಹೇಳ್ತೀರಾ? ಕಾಮೆಂಟ್‌ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?